For Quick Alerts
ALLOW NOTIFICATIONS  
For Daily Alerts

ಸಕ್ಕರೆ ತಿನ್ನದವರಿಗೂ, ಬರಬಹುದು ಸಕ್ಕರೆ ಕಾಯಿಲೆ!

|

ವಿಶ್ವದಲ್ಲಿ 1/3 ಭಾಗದಷ್ಟು ಜನರು ಮಧುಮೇಹ ರೋಗದಿಂದ ನರಳುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಮಗೂ ಮಧುಮೇಹ ಬರಬಹುದೇ ಎಂಬ ಆತಂಕ ಹೆಚ್ಚಿನವರಲ್ಲಿದೆ. ನಮ್ಮ ಆಧುನಿಕ ಜೀವನ ಶೈಲಿ ಮಧುಮೇಹ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಅಲ್ಲದೆ ಇದರ ಬಗ್ಗೆ ನಮ್ಮಲ್ಲಿರುವ ಅನೇಕ ತಪ್ಪು ಕಲ್ಪನೆಗಳು ಕೂಡ ಮಧುಮೇಹ ಹೆಚ್ಚಾಗುತ್ತಿರಲು ಒಂದು ಕಾರಣವೆಂದು ಹೇಳಬಹುದು. ಈ ತಪ್ಪುಕಲ್ಪನೆಯಿಂದ ಹೊರಬರದೆ ಮಧುಮೇಹ ಬರದಂತೆ ಮುನ್ನೆಚ್ಚರಿಕೆಯಿಂದ ಇರಲು ಸಾಧ್ಯವಿಲ್ಲ.

ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಕೆಳಗಿನ ತಪ್ಪು ಕಲ್ಪನೆಯಿಂದ ದೂರವಿದ್ದರೆ ಮಾತ್ರ ಸಾಧ್ಯ.

ನಾನು ಸಿಹಿ ತಿನ್ನುವುದಿಲ್ಲ, ಆದ್ದರಿಂದ ಮಧುಮೇಹವಿರಲಿಲ್ಲ

ನಾನು ಸಿಹಿ ತಿನ್ನುವುದಿಲ್ಲ, ಆದ್ದರಿಂದ ಮಧುಮೇಹವಿರಲಿಲ್ಲ

ಮಧುಮೇಹ ಜೀವನ ಶೈಲಿಯಿಂದ ಬರುವ ಕಲೆಯಾಗಿದೆ. ಸಕ್ಕರೆ ತಿನ್ನುವುದಕ್ಕೆ, ಮಧುಮೇಹಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಮಧುಮೇಹ ಬಂದ ಮೇಲೆ ಸಕ್ಕರೆ ತಿನ್ನಬಾರದಷ್ಟೇ. ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಆಹಾರಗಳಿಂದ ದೂರವಿರಬೇಕು.

ಡಾಕ್ಟರ್ ಇನ್ಸುಲಿನ್ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ, ಮಧುಮೇಹದ ಕೊನೆಯ ಹಂತದಲ್ಲಿದ್ದೇನೆ

ಡಾಕ್ಟರ್ ಇನ್ಸುಲಿನ್ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ, ಮಧುಮೇಹದ ಕೊನೆಯ ಹಂತದಲ್ಲಿದ್ದೇನೆ

ಮಧುಮೇಹಕ್ಕೆ ಕ್ಯಾನ್ಸರ್ ಗೆ ಇರುವಂತೆ ಮೊದಲು ಹಂತ, ಕೊನೆಯ ಹಂತ ಅಂತ ಇರುವುದಿಲ್ಲ. ದೇಹದಲ್ಲಿರುವ ಸಕ್ಕರೆಯಂಶದಲ್ಲಿ ಮಾತ್ರ ಹೆಚ್ಚು, ಕಡಿಮೆಯಾಗುವ ಸಾಧ್ಯತೆ ಇದೆ. ಇನ್ಸುಲಿನ್ ತೆಗದುಕೊಂಡರೆ ಇತರರಂತೆ ಆರೋಗ್ಯವಂತರಾಗಿ ಇರಬಹುದು.

 ನಾನು ಮಧುಮೇಹಿ, ಆದ್ದರಿಂದ ಕಾರ್ಬೋಹೈಟ್ರೇಟ್ ಇರುವ ಆಹಾರ ತಿನ್ನಲೇಬಾರದು

ನಾನು ಮಧುಮೇಹಿ, ಆದ್ದರಿಂದ ಕಾರ್ಬೋಹೈಟ್ರೇಟ್ ಇರುವ ಆಹಾರ ತಿನ್ನಲೇಬಾರದು

ಕಾರ್ಬೋಹೈಡ್ರೇಟ್ ನಮ್ಮ ದೇಹಕ್ಕೆ ಅವಶ್ಯಕವಾದ ಇಂಧನ. ಸ್ವಲ್ಪ ಕಾರ್ಬೋಹೈಟ್ರೇಟ್ ಇರುವ ಆಹಾರ ತಿನ್ನಬೇಕು. ವ್ಯಾಯಾಮ, ಯೋಗ ಮಾಡಿದರೆ ಸಾಕು ಆರೋಗ್ಯವಾಗಿಯೇ ಇರಬಹುದು.

ಸಿಹಿ ಇರುವ ಎಲ್ಲಾ ಆಹಾರಗಳಿಂದ ದೂರವಿರಬೇಕು

ಸಿಹಿ ಇರುವ ಎಲ್ಲಾ ಆಹಾರಗಳಿಂದ ದೂರವಿರಬೇಕು

ಮಧುಮೇಹ ಇರುವವರು ಎಲ್ಲಾ ಸಿಹಿ ಆಹಾರಗಳಿಂದ ದೂರವಿರಬೇಕಾಗಿಲ್ಲ. ಸಿಹಿ ಕುಂಬಳಕಾಯಿ,ದ್ರಾಕ್ಷಿ, ದಾಳಿಂಬೆ, ಸ್ಟ್ರಾಬೆರಿ, ಸಿಹಿ ಗೆಣಸು ಈ ರೀತಿಯ ಆಹಾರಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಇವುಗಳನ್ನು ತಿನ್ನಬಹುದು.

ಮಧುಮೇಹಿಗಳು ಪಥ್ಯ ಊಟ ಮಾಡಬೇಕು

ಮಧುಮೇಹಿಗಳು ಪಥ್ಯ ಊಟ ಮಾಡಬೇಕು

ಹಾಗೇನು ಇಲ್ಲ, ನೈಸರ್ಗಿಕವಾದ ಸಿಹಿ ಪದಾರ್ಥಗಳನ್ನು, ಜೇನನ್ನು ಆಹಾರದಲ್ಲಿ ಸೇರಿಸಿ ಬಾಯಿ ರುಚಿಯನ್ನು ಹೆಚ್ಚಿಸಬಹುದು.

ನನ್ನ ಕುಟುಂಬದಲ್ಲಿ ಯಾರಿಗೂ ಮಧುಮೇಹವಿಲ್ಲ, ಆದ್ದರಿಂದ ನಾನು ಸುರಕ್ಷಿತ

ನನ್ನ ಕುಟುಂಬದಲ್ಲಿ ಯಾರಿಗೂ ಮಧುಮೇಹವಿಲ್ಲ, ಆದ್ದರಿಂದ ನಾನು ಸುರಕ್ಷಿತ

ಮಧುಮೇಹ ವಂಶಪಾರಂಪರ್ಯವಾಗಿ ಬರುವ ಕಾಯಿಲೆಯಾಗಿದ್ದರೂ , ಮನೆಯಲ್ಲಿ ಯಾರಿಗೆ ಇಲ್ಲದಿದ್ದರೆ ನಿಮಗೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿನಿತ್ಯ ವ್ಯಾಯಾಮ ಮಾಡದಿದ್ದರೆ, ಒತ್ತಡದ ಜೀವನ ನಡೆಸುತ್ತಿದ್ದರೆ, ಅನಾರೋಗ್ಯಕರ ಜೀವನ ಶೈಲಿ ಇವುಗಳಿಂದ ಕೂಡ ಮಧುಮೇಹ ಬರಬಹುದು.

ನನಗೆ ಒಬೆಸಿಟಿ ಇಲ್ಲ, ಆದ್ದರಿಂದ ಒಬೆಸಿಟಿ ಬರುವುದಿಲ್ಲ

ನನಗೆ ಒಬೆಸಿಟಿ ಇಲ್ಲ, ಆದ್ದರಿಂದ ಒಬೆಸಿಟಿ ಬರುವುದಿಲ್ಲ

ಒಬೆಸಿಟಿ ಇರುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು, ಹಾಗಂತ ಒಬೆಸಿಟಿ ಬರುವುದೇ ಇಲ್ಲ ಅಂತ ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಮಧುಮೇಹ ಬಂದರೆ ತುಂಬಾ ತೆಳ್ಳಗಾಗುವಿರಿ. ಆದ್ದರಿಂದ ಆರೋಗ್ಯದ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ಮಕ್ಕಳಿಗೆ ಟೈಪ್ 2 ಮಧುಮೇಹಬರುವುದಿಲ್ಲ

ಮಕ್ಕಳಿಗೆ ಟೈಪ್ 2 ಮಧುಮೇಹಬರುವುದಿಲ್ಲ

ಚಿಕ್ಕಮಕ್ಕಳಿಗೆ ಟೈಪ್ 1 ಮಧುಮೇಹ ಬರಬಹುದು, ಆದರೆ ಟೈಪ್ 2 ಮಧುಮೇಹ ಒಬೆಸಿಟಿ ಹಾಗೂ ಅಧಿಕ ಕುರುಕಲು ತಿಂಡಿ ತಿನ್ನುವ ಮಕ್ಕಳಿಗೆ ಬರಬಹುದು.

ಗರ್ಭಿಣಿಯಲ್ಲಿ ಮಧುಮೇಹ ಬಂದರೆ ತಾತ್ಕಲಿಕವಷ್ಟೇ

ಗರ್ಭಿಣಿಯಲ್ಲಿ ಮಧುಮೇಹ ಬಂದರೆ ತಾತ್ಕಲಿಕವಷ್ಟೇ

ಗರ್ಭಿಣಿಯಲ್ಲಿ ಮಧುಮೇಹ ಬಂದರೆ ಹೆರಿಗೆಯ ನಂತರ ಹೋಗುತ್ತದೆ ಅನ್ನುವುದು ನಿಜ. ಆದರೆ ಇದರಿಂದ ಹೆರಿಗೆಯ ಸಮಯದಲ್ಲಿ ತೊಂದರೆ ಉಂಟಾಗಬಹುದು. ಇಂತಹವರಿಗೆ ಟೈಪ್ 2 ಮಧುಮೇಹ ಬರಬಹುದು ಎಚ್ಚರಿಕೆವಹಿಸುವುದು ಒಳ್ಳೆಯದು.

 ನಾನು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ, ಆದ್ದರಿಂದ ಏನು ಬೇಕಾದರೂ ತಿನ್ನಬಹುದು

ನಾನು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ, ಆದ್ದರಿಂದ ಏನು ಬೇಕಾದರೂ ತಿನ್ನಬಹುದು

ಇನ್ಸುಲಿನ್ ತೆಗೆದುಕೊಂಡರೂ ಆಹಾರಕ್ರಮದ ಬಗ್ಗೆ ಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆ ಇನ್ಸುಲಿನ್ ತೆಗೆದಿದ್ದಕ್ಕೆ ಪ್ರಯೋಜನ ದೊರೆಯುವುದಿಲ್ಲ.

English summary

Gross Myths About Diabetes Busted | Tips For Health | ಮಧುಮೇಹದ ಬಗ್ಗೆ ನಮ್ಮಲ್ಲಿರುವ ತಪ್ಪು ತಿಳುವಳಿಕೆಗಳು | ಆರೋಗ್ಯಕ್ಕಾಗಿ ಕೆಲ ಸಲಹೆ

It is impossible to control diabetes without busting some basic myths. That is why, Boldsky is busting the worst myths about diabetes today. These are some of the most dangerous myths about diabetes that needs to be busted.
X
Desktop Bottom Promotion