For Quick Alerts
ALLOW NOTIFICATIONS  
For Daily Alerts

ಮಳೆಗಾಲ ಬಂತು, ನಿಮ್ಮ ಆಹಾರಕ್ರಮದ ಬಗ್ಗೆ ತಿಳಿದಿರಿ

|

ಜೂನ್ ಅಂದರೆ ಮಾನ್ಸೂನ್ ಕಾಲ. ಈ ಸಮಯದಲ್ಲಿ ಮಳೆ ತುಂತುರು-ತುಂತುರಾಗಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಧೋ...ಎಂದು ಸುರಿಯುತ್ತಿರುವ ಮಳೆ ನೋಡುವಾಗ ಆಷಾಢ ಮಾಸ ನೆನೆಪಿಗೆ ಬರುತ್ತಿದೆ. ಏನೇ ಆಗಲಿ ನೀರು ಇಲ್ಲದೆ ಬೆಳೆಗೆ ಮತ್ತು ಕುಡಿಯುವ ನೀರಿಗೆ ಕಷ್ಟಪಡುವಂತಾದಾಗ ಈ ರೀತಿ ಮಳೆ ಸುರಿದಿರುವುದು ವರದಾನವಾಗಿದೆ.

ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರಕ್ರಮವನ್ನು ಕೂಡ ಬದಲಾಯಿಸಬೇಕು. ಕಳೆದ ತಿಂಗಳಿನಲ್ಲಿ ಕೋಲ್ಡ್ ಕಾಫಿ ಕುಡಿಯಬೇಕೆಂದು ಅನಿಸುತ್ತಿತ್ತು, ಆದರೆ ಈಗ ನೋಡಿ ಬಿಸಿ ಬಿಸಿಯಾದ ಕಾಫಿ ಕುಡಿಯಬೇಕೆಂದು ಅನಿಸುತ್ತಿದೆ ಅಲ್ಲವೇ? ಕಾಲ ಬದಲಾದಂತೆ ನಮ್ಮ ಬಾಯಿ ರುಚಿಯೂ ಬದಲಾಗುತ್ತದೆ.

ಬಾಯಿ ರುಚಿಗೆ ಯಾವ ಆಹಾರ ಕೆಟ್ಟದು, ಯಾವ ಆಹಾರ ಒಳ್ಳೆಯದು ಎಂದು ಗೊತ್ತಿರುವುದಿಲ್ಲ. ಅದು ರುಚಿ-ರುಚಿಯಾದ ಆಹಾರವನ್ನು ಮಾತ್ರ ಬಯಸುತ್ತದೆ. ಆದ್ದರಿಂದ ನಾಲಗೆಯ ರುಚಿಗಿಂತ ಆರೋಗ್ಯಕರ ಆಹಾರ ಮುಖ್ಯ ಅನ್ನುವುದು ನೆನಪಿರಲಿ.

ಇಲ್ಲಿ ನಾವು ಮಾನ್ಸೂನ್ ನಲ್ಲಿ ಯಾವ ಆಹಾರ ತಿಂದರೆ ಒಳ್ಳೆಯದು, ಯಾವ ಆಹಾರವನ್ನು ದೂರವಿಡಬೇಕೆಂದು ಹೇಳಿದ್ದೇವೆ ನೋಡಿ:
ಮೊದಲಿಗೆ ಮಾನ್ಯೂನ್ ನಲ್ಲಿ ಯಾವ ಆಹಾರಗಳನ್ನು ತಿಂದರೆ ಒಳ್ಳೆಯದು ಎಂದು ನೋಡೋಣ:

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಜೋಳ, ಬಾರ್ಲಿ, ಗೋಧಿ ಇವುಗಳಿಂದ ಮಾಡಿದ ಪದಾರ್ಥಗಳನ್ನು ಈ ಸಮಯದಲ್ಲಿ ತಿನ್ನಬೇಕು.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಈ ಸಮಯದಲ್ಲಿ ಸೋಂಕು ನಿವಾರಕ (anti-infection) ಆಹಾರಗಳನ್ನು ಹೆಚ್ಚಾಗಿ ತಿನ್ನಿ. ಉದಾಹರಣೆಗೆ ಬೀನ್ಸ್, ಹಾಗಾಲಕಾಯಿ, ಅರಿಶಿಣ, ಮೆಂತೆ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮೊಟ್ಟೆ ಅದರಲ್ಲೂ ಮೊಟ್ಟೆಯ ಹಳದಿಯನ್ನು ಈ ಸಮಯದಲ್ಲಿ ತಿನ್ನುವುದು ಒಳ್ಳೆಯದು.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮೊಸರು ಬೇಸಿಗೆಯಲ್ಲಿ ತಿನ್ನಲು ಹಿತ, ಆದರೆ ಮಳೆಗಾಲದಲ್ಲೂ ಬಳಸಿ, ಏಕೆಂದರೆ ಮೊಸರು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ಪದಾರ್ಥಗಳಿಗೆ ಶುಂಠಿ ಹಾಕಲು ಮರೆಯಬೇಡಿ, ಶುಂಠಿ ಟೀ ಕೂಡ ಮಾಡಿ ಕುಡಿಯಿರಿ. ಶುಂಠಿ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಮೈಯನ್ನೂ ಬೆಚ್ಚಗಿಡುತ್ತದೆ, ಶೀತ, ಕೆಮ್ಮು ಇವುಗಳ ವಿರುದ್ಧ ಹೋರಾಡುತ್ತದೆ.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಕೂಡ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಅಣಬೆಯನ್ನು ತಿನ್ನುವವರಾದರೆ ಅದನ್ನು ವಾರಕ್ಕೊಮ್ಮೆಯಾದರೂ ತಿನ್ನುವುದು ಒಳ್ಳೆಯದು.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಕಿತ್ತಳೆ ಮತ್ತು ನಿಂಬೆ ರಸ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ಮತ್ತೊಂದು ಆರೋಗ್ಯಕರವಾದ ಆಹಾರವೆಂದರೆ ಜೇನು.

 ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಪಪ್ಪಾಯಿ, ಸೀಬೆಕಾಯಿ, ಪ್ಲಮ್ ಇವುಗಳನ್ನು ಈ ಸಮಯದಲ್ಲಿ ತಿನ್ನಿ. ಕೆಲವರು ಸೀಬೆಕಾಯಿ ತಿಂದರೆ ಶೀತವಾಗುವುದು ಎಂದು ಮಳೆಗಾಲದಲ್ಲಿ ತಿನ್ನುವುದಿಲ್ಲ, ಆದರೆ ಸೀಬೆಕಾಯಿ ಮಳೆಗಾಲದಲ್ಲಿ ತಿನ್ನಲು ಸೂಕ್ತವಾದ ಆಹಾರಗಳಲ್ಲಿ ಒಂದಾಗಿದೆ.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಸೊಪ್ಪನ್ನು ತಿನ್ನಿ, ಆದರೆ ಅದನ್ನು ಶುಚಿ ಮಾಡುವಾಗ ತುಂಬಾ ಕೇರ್ ಫುಲ್ ಆಗಿರಬೇಕು. ಮಳೆಗಾಲದಲ್ಲಿ ಸೊಪ್ಪಿನ ಮೇಲೆ ಕೀಟಾಣುಗಳು ದಾಳಿ ಮಾಡುವುದು ಅಧಿಕ. ಆದ್ದರಿಂದ ತಾಜಾ ಸೊಪ್ಪನ್ನು ತಿನ್ನಿ.

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಮಳೆಗಾಲದಲ್ಲಿ ತಿನ್ನಬೇಕಾದ ಆಹಾರಗಳು

ಅವೆಲ್ಲಕ್ಕಿಂತ ಮುಖ್ಯ ಶುದ್ಧವಾದ ನೀರನ್ನು ಕುಡಿಯಿರಿ. ಅನೇಕ ಕಾಯಿಲೆಗಳು ನೀರಿನ ಮುಖಾಂತರ ಬರುತ್ತದೆ, ಆದ್ದರಿಂದ ನೀರನ್ನು ಕುದಿಸಿದ ಬಳಿಕ ಕುಡಿಯುವುದು ಹೆಚ್ಚು ಸುರಕ್ಷಿತ.

ಮಳೆಗಾಲದಲ್ಲಿ ಈ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು

ಮಳೆಗಾಲದಲ್ಲಿ ಈ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು

ಉಪ್ಪಿನಂಶ ಅಧಿಕವಿರುವ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು, ಕರಿದ ಮತ್ತು ಅಧಿಕ ಬೇಯಿಸಿ ಆಹಾರಗಳು ಕೂಡ ಆರೋಗ್ಯಕರವಲ್ಲ. ಎಳ್ಳೆಣ್ಣೆ, ಸಾಸಿವೆಯೆಣ್ಣೆ ಬಳಸುವುದನ್ನು ಕಮ್ಮಿ ಮಾಡಿ, ಕಾರ್ನ್ ಆಯಿಲ್, ಆಲೀವ್ ಆಯಿಲ್ ಬಳಸುವುದು ಒಳ್ಳೆಯದು, ಉಳಿದಂತೆ ಸೂರ್ಯಕಾಂತಿ ಎಣ್ಣೆ, ತೆಂಗಿನೆಣ್ಣೆ ಇವು ಕೂಡ ಆರೋಗ್ಯಕರ.

ಈ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು

ಈ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು

ಬೀದಿ ಬದಿಯ ಆಹಾರಗಳಿಗೆ ನೋ ನೋ: ಬೀದಿ ಬದಿಯ ಆಹಾರಗಳಿಗೆ ಈ ಸಮಯದಲ್ಲಿ ನೋ ಹೇಳುವುದು ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ಬೀದಿ ಬದಿಯ ಆಹಾರಗಳನ್ನು ತಿಂದರೆ ಫುಡ್ ಪಾಯಿಸನ್ , ವಾಂತಿ, ಬೇಧಿ ಮುಂತಾದ ತೊಂದರೆಗಳು ಕಂಡು ಬರಬಹುದು. ಆದರೆ ನಾಲಗೆ ಈ ರೀತಿಯ ಆಹಾರದ ರುಚಿಯನ್ನು ಬಯಸುತ್ತದೆ. ಆದ್ದರಿಂದ ಅವುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.

ಈ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು

ಈ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು

ಆಹಾರಗಳನ್ನು ಬೇಯಿಸಿ ಅದರ ಮುಚ್ಚಳ ತೆಗೆದು ಇಡಬೇಡಿ, ಆಹಾರ ಉಳಿದರೆ ಅದನ್ನು ಫ್ರಿಜ್ ನಲ್ಲಿಟ್ಟು ಮತ್ತೆ ತಿನ್ನುವಾಗ ಬಿಸಿ ಮಾಡಿ ತಿನ್ನಿ. ಹೂಕೋಸು, ಬೆಂಡೆಕಾಯಿ, ಬಟಾಣಿ, ಮೊಳಕೆ ಬರಿಸಿದ ಕಾಳುಗಳು, ಆಲೂಗಡ್ಡೆ ಇವುಗಳನ್ನು ಮಿತಿಯಲ್ಲಿ ತಿನ್ನಿ. ಏಕೆಂದರೆ ಈ ಆಹಾರಗಳು ಅಜೀರ್ಣ ಸಮಸ್ಯೆಯನ್ನು ತರಬಹುದು.

ಈ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು

ಈ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು

ನಾನ್ ವೆಜ್- ಮೀನು, ಮಾಂಸ ತಿನ್ನುವುದನ್ನು ಕಮ್ಮಿ ಮಾಡಿ. ತಿನ್ನುವುದಾದರೆ ತಾಜಾ ಮೀನು ಮತ್ತು ಮಾಂಸವನ್ನು ತಂದು ಅಡುಗೆ ಮಾಡಿ ತಿನ್ನಿ. ಶೀತಲೀಕರಣ ಮಾಡಿದ ಆಹಾರಗಳನ್ನು ದೂರವಿಡಿ.

ಮನೆ ಶುಚಿತ್ವ

ಮನೆ ಶುಚಿತ್ವ

ಮನೆಯಲ್ಲಿರುವ ಹೂಗುಚ್ಛವನ್ನು ಶುಚಿ ಮಾಡಿ, ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ. ತರಕಾರಿಗಳನ್ನು ಬಿಸಿ ನೀರಿನಲ್ಲಿ ತೊಳೆದು ಅಡುಗೆಗೆ ಬಳಸಿ.

English summary

Foods to be eaten and avoided during the rain

Healthy food and a proper diet can protect you from health problems and seasonal diseases in the rainy days. Given below is the list of healthy foods which are important to keep you fit and healthy. Check out the best healthy foods for rainy season.
X
Desktop Bottom Promotion