For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ಅನ್ನು ಬೇಗನೆ ಕಮ್ಮಿ ಮಾಡುವ ಆಹಾರಗಳು

|

ವಯಸ್ಸು 40 ದಾಟಿದರ ಸಾಕು, ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಿನವರನ್ನು ಕಾಡಲಾರಂಭಿಸುತ್ತದೆ. ಕೊಲೆಸ್ಟ್ರಾಲ್ ಅಪಾಯಕಾರಿಯಾದ ಕಾಯಿಲೆ ಅಲ್ಲದಿದ್ದರೆ, ಅದನ್ನು ಕಮ್ಮಿ ಮಾಡದೆ ಹಾಗೇ ಬೆಳೆಯಲು ಬಿಟ್ಟರೆ ಮಾತ್ರ ಪ್ರಾಣಕ್ಕೆ ಸಂಚಕಾರ ತರುವುದು.

ಕೊಲೆಸ್ಟ್ರಾಲ್ ಬರದಿರುವಂತೆ ಎಚ್ಚರವಹಿಸಬೇಕು, ಈಗಾಗಲೇ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಕೆಲವೊಂದು ಆಹಾರಗಳಿವೆ, ಅವುಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಕೊಲೆಸ್ಟ್ರಾಲ್ ಇರುವವರು ಔಷಧಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಈ ಕೆಳಗಿನ ಆಹಾರಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.

ಬಾರ್ಲಿ

ಬಾರ್ಲಿ

ಬಾರ್ಲಿಯಲ್ಲಿ ನಾರಿನಂಶ ಅತ್ಯಧಿಕವಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೇಗನೆ ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ.

ಬದನೆಕಾಯಿ

ಬದನೆಕಾಯಿ

ಕೊಲೆಸ್ಟ್ರಾಲ್ ಇರುವವರು ತಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಬದನೆಕಾಯಿಯ ಸಾರು ತಿನ್ನುವುದು ಒಳ್ಳೆಯದು( ಪಲ್ಯ ತಿನ್ನಬೇಡಿ).

ಮೀನು

ಮೀನು

ಮೀನಿನಲ್ಲಿ ಒಳ್ಳೆಯ ಕೊಬ್ಬಿನಂಶವಿದ್ದು, ಇದನ್ನು ತಿಂದಾಗ ದೇಹದಲ್ಲಿ ಒಳ್ಳೆಯ ಕೊಬ್ಬಿನಂಶ ಹೆಚ್ಚಾಗಿ ಕೆಟ್ಟ ಕೊಬ್ಬಿನಂಶ ಕಡಿಮೆಯಾಗುವುದು.

ಸೇಬು

ಸೇಬು

ಸೇಬಿನಲ್ಲಿ ಪೆಕ್ಟಿನ್ ಎಂಬ ಅಂಶವಿದ್ದು ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ನಟ್ಸ್

ನಟ್ಸ್

ಆರೋಗ್ಯಕರ ಸ್ನ್ಯಾಕ್ಸ್ ತಿನ್ನಬೇಕು, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮುಟ್ಟಲೇಬಾರದು. ನಟ್ಸ್, ಬಾದಾಮಿ ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸಬಹುದು.

ಟೀ

ಟೀ

ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಹಾಲು ಹಾಕಿದ ಟೀ ಬದಲು ಬ್ಲ್ಯಾಕ್ ಟೀ ಕುಡಿಯವುದು ಒಳ್ಳೆಯದು.

 ಈರುಳ್ಳಿ

ಈರುಳ್ಳಿ

ಈರುಳ್ಳಿಯನ್ನು ಹೆಚ್ಚಾಗಿಯೇ ತಿನ್ನಿ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಓಟ್ಸ್

ಓಟ್ಸ್

ಓಟ್ಸ್ ಕೇವಲ ಸ್ಲಿಮ್ ಫಿಗರ್ ನೀಡುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ರಾಗಿ ತುಂಬಾ ಒಳ್ಳೆಯದು

ರಾಗಿ ತುಂಬಾ ಒಳ್ಳೆಯದು

ಕೊಲೆಸ್ಟ್ರಾಲ್ ಕಡಿಮೆ ಮಾಡಲು ರಾಗಿಯಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು. ಇದು ದೇಹಕ್ಕೆ ಶಕ್ತಿಯನ್ನು ತುಂಬಿ, ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಇರುವ ಹಣ್ಣುಗಳು ಒಟ್ಟು ಮೊತ್ತ ಆರೋಗ್ಯದ ರಕ್ಷಣೆಗೆ ಅವಶ್ಯಕ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿ.

ಸೊಪ್ಪು

ಸೊಪ್ಪು

ಸೊಪ್ಪನ್ನು ಹೆಚ್ಚಾಗಿ ತಿನ್ನಿ. ಸೊಪ್ಪು ದೇಹದಲ್ಲಿ ಕಬ್ಬಿಣದಂಶ ಹೆಚ್ಚು ರಕ್ತ ಕಣಗಳ ಉತ್ಪತ್ತಿಯನ್ನು ಮಾಡುತ್ತದೆ ಹಾಗೂ ಕೊಲೆಸ್ಟ್ರಾಲ್ ಅನ್ನೂ ಕಡಿಮೆ ಮಾಡುತ್ತದೆ.

ಸೋಯಾ ಪ್ರಾಡಕ್ಟ್ಸ್

ಸೋಯಾ ಪ್ರಾಡಕ್ಟ್ಸ್

ಹಾಲಿನ ಬದಲು ಸೋಯಾ ಹಾಲು ಕುಡಿಯುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬೇಡದ ಕೊಬ್ಬಿನಂಶವನ್ನು ಬೇಗನೆ ಕರಗಿಸುತ್ತದೆ. ದಿನಾ ಬೆಳಗ್ಗೆ ಒಂದು ಎಸಳು ಬೆಳ್ಳುಳ್ಳಿ ತಿನ್ನಿ, ಒಳ್ಳೆಯದು.

ಬೆಂಡೆಕಾಯಿ

ಬೆಂಡೆಕಾಯಿ

ಮಧುಮೇಹಿಗಳು ಮತ್ತು ಕೊಲೆಸ್ಟ್ರಾಲ್ ಇರುವವರು ಬೆಂಡೆಕಾಯಿಯನ್ನು ತಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ಕಾಯಿಲೆ ಹೆಚ್ಚಾಗದಂತೆ ತಡೆಯಬಹುದು.

 ರೆಡ್ ವೈನ್

ರೆಡ್ ವೈನ್

ರೆಡ್ ವೈನ್ ದೇಹದಲ್ಲಿ ಕೆಟ್ಟ ಕೊಬ್ಬಿನಂಶ ಸಂಗ್ರಹವಾಗುವುದನ್ನು ತಡೆಯುತ್ತದೆ ಎಮದು ಸಂಶೋಧನೆಯಿಂದ ತಿಳಿದುಬಂದಿದೆ.

ಚಾಕಲೇಟ್

ಚಾಕಲೇಟ್

ಡಾರ್ಕ್ ಚಾಕಲೇಟ್ ಕೂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

ಬೀನ್ಸ್

ಬೀನ್ಸ್

ಬೀನ್ಸ್ ನಲ್ಲಿ ನಾರಿನಂಶ ಅಧಿಕವಿರುವುದರಿಂದ ಇದನ್ನು ಬೇಯಿಸಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೇಗನೆ ಕಡಿಮೆ ಮಾಡಬಹುದು.

ಕರಿ ಮೆಣಸು

ಕರಿ ಮೆಣಸು

ಕರಿ ಮೆಣಸು ಕೂಡ ಬೆಳ್ಳುಳ್ಳಿಯಷ್ಟೇ ಪ್ರಯೋಜನಕಾರಿ.

ಮಾರ್ಗ್ರೈನ್

ಮಾರ್ಗ್ರೈನ್

ಮಾರ್ಗ್ರೈನ್ ಕ್ಯಾಲೋರಿ ಕಡಿಮೆ ಇದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತ ಪರಿಚಲನೆ ಸರಿಯಾಗಿ ನಡೆಯಲು ಇದನ್ನು ತಿನ್ನುವುದು ಒಳ್ಳೆಯದು.

English summary

Foods That Lower Cholesterol Fast!

The best way to improve heart health is to reduce cholesterol naturally. There is no replacement for systematic eating and natural healing. So here are some foods to lower cholesterol that work fast and effectively too.
X
Desktop Bottom Promotion