For Quick Alerts
ALLOW NOTIFICATIONS  
For Daily Alerts

ಒಮೆಗಾ 3 ಇರುವ ಆಹಾರಗಳನ್ನು ತಿನ್ನಲೇಬೇಕು, ಏಕೆ?

|

ಪೋಷಕಾಂಶಗಳ ಕುರಿತು ನಾವು ಬರೆಯುತ್ತಿರುವ ಪ್ರತಿಯೊಂದು ಲೇಖನದಲ್ಲೂ ಒಮೆಗಾ 3 ಕೊಬ್ಬಿನಂಶ ತಿನ್ನಿ ಎಂದು ಹೇಳುವುದನ್ನು ನೀವು ಗಮನಿಸಿರಬಹುದು. ಈ ಕೊಬ್ಬಿನಂಶ ಎಲ್ಲಿ ದೊರೆಯುತ್ತದೆ? ಇದರ ಅಂಶ ಕಮ್ಮಿಯಾದರೆ ಏನಾಗುತ್ತದೆ ಎಂಬ ಸಂದೇಹ ನಿಮ್ಮಲ್ಲಿ ಮೂಡಿರಲೂ ಬಹುದು. ಇಲ್ಲಿ ನಾವು ಒಮೆಗಾ 3 ಕೊಬ್ಬಿನಂಶ ಎಂದರೇನು? ಅದು ಏಕೆ ಬೇಕು? ಯಾವ ಆಹಾರದಲ್ಲಿ ಇರುತ್ತದೆ ಅನ್ನುವುದನ್ನು ಈ ಲೇಖನದಲ್ಲಿ ಹೇಳಿದ್ದೇವೆ ನೋಡಿ:

ನಮ್ಮ ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ 2 ರೀತಿಯ ಕೊಲೆಸ್ಟ್ರಾಲ್ ಇರುತ್ತದೆ. ಒಮೆಗಾ 3 ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು ನಮ್ಮ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಈ ಕೊಲೆಸ್ಟ್ರಾಲ್ ಅವಶ್ಯಕ. ಅದೇ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ದೇಹದ ಅಂಗಾಂಗಗಳ ಕಾರ್ಯಕ್ಕೆ ಅಡಚಣೆ ಉಂಟು ಮಾಡಿ ಕಾಯಿಲೆಗಳು ಬರುವುದು. ಒಳ್ಳೆಯ ಕೊಲೆಸ್ಟ್ರಾಲ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ.

ಒಮೆಗಾ 3 ಕೊಬ್ಬಿನಂಶ ಕೆಲವೊಂದು ವೆಜ್ ಮತ್ತು ನಾನ್ ವೆಜ್ ಆಹಾರಗಳಿದ್ದು ಅವುಗಳ ಬಗ್ಗೆ ಮಾಹಿತಿಯನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

ಸಲಹೆ: ವೆಜ್ ತಿನ್ನುವವರು ಈ ಒಮೆಗಾ 3 ಇರುವ ವೆಜ್ ಆಹಾರಗಳನ್ನು ಕಡ್ಡಾಯವಾಗಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಲು ಮರೆಯದಿರಿ.

 ಆಲೀವ್ ಎಣ್ಣೆ

ಆಲೀವ್ ಎಣ್ಣೆ

ಆಲೀವ್ ಎಣ್ಣೆಯಲ್ಲಿ ಒಮೆಗಾ 3 ಕೊಬ್ಬಿನಂಶವಿದೆ. ಅದರಲ್ಲೂ ಸಂಸ್ಕರಿಸದ ಆಲೀವ್ ಎಣ್ಣೆಯಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ.

 ವಾಲ್ ನಟ್ಸ್

ವಾಲ್ ನಟ್ಸ್

ವಾಲ್ ನಟ್ಸ್ ನಲ್ಲಿ 2 ಪ್ರಮುಖ ಪೋಷಕಾಂಶಗಳಿವೆ. 1. ಒಮೆಗಾ 3 ಕೊಬ್ಬಿನಂಶ 2. ವಿಟಮಿನ್ ಇ.

ಕ್ಯಾನೋಲ ಎಣ್ಣೆ

ಕ್ಯಾನೋಲ ಎಣ್ಣೆ

ಈ ಎಣ್ಣೆಯಲ್ಲೂ ಕೂಡ ಅಧಿಕ ಒಳ್ಳೆಯ ಕೊಲೆಸ್ಟ್ರಾಲ್ ಅಂಶವಿರುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಈ ಹಣ್ಣಿನಲ್ಲಿ ಅನೇಕ ಆರೋಗ್ಯವರ್ಧಕ ಗುಣವಿದೆ, ಒಂದು ಬೆಣ್ಣೆ ಹಣ್ಣಿನಲ್ಲಿ 250mg ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜ

ಕುಂಬಳ ಕಾಯಿ ಬೀಜದಲ್ಲೂ ಒಮೆಗಾ 3 ಕೊಬ್ಬಿಣಂಶವಿರುವುದರಿಂದ ವೆಜ್ ಮಾತ್ರ ತಿನ್ನುವವರು ಕುಂಬಳಕಾಯಿ ಬೀಜ ತಿಂದು ಪ್ರಯೋಜನ ಪಡೆಯಲು ಮರೆಯಬಾರದು.

ಅಗಸೆದ ಬೀಜ

ಅಗಸೆದ ಬೀಜ

ಅಗಸೆದ ಬೀಜ ಮತ್ತು ಎಣ್ಣೆಯಲ್ಲಿ ಒಮೆಗಾ 3 ಅಧಿಕವಿದ್ದು ಸಸ್ಯಾಹಾರಿಗಳು ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಮೊಟ್ಟೆ

ಮೊಟ್ಟೆ

ಮೊಟ್ಟೆಯ ಹಳದಿಯಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಮೀನು

ಮೀನು

ಸಾಮಾನ್ಯವಾಗಿ ಎಲ್ಲಾ ಬಗೆಯ ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶವಿರುತ್ತದೆ. ಅದರಲ್ಲೂ ಕೊಬ್ಬಿನಂಶ ಅಧಿಕವಿರುವ ಮೀನಿನಲ್ಲಿ ಉದಾಹರಣೆಗೆ ಅಂಜಲಿ ಇವುಗಳಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಿರುತ್ತದೆ.

ಇತರ ಸಮುದ್ರಾಹಾರ

ಇತರ ಸಮುದ್ರಾಹಾರ

ಮೀನನ್ನು ಹೊರತು ಪಡಿಸಿ ಏಡಿ, ಮೃದ್ವಂಗಿಗಳು ಈ ರೀತಿಯ ಸಮುದ್ರಾಹಾರಗಳಲ್ಲೂ ಒಮೆಗಾ 3 ಕೊಬ್ಬಿನಂಶ ದೊರೆಯುತ್ತದೆ.

 ಸಸ್ಯಾಹಾರಿ ಪ್ರಾಣಿಗಳ ಮಾಂಸದಲ್ಲಿ

ಸಸ್ಯಾಹಾರಿ ಪ್ರಾಣಿಗಳ ಮಾಂಸದಲ್ಲಿ

ಆಡು, ಕುರಿ ಇವೆಲ್ಲಾ ಬರೀ ಹುಲ್ಲು, ಸೊಪ್ಪು ತಿಂದು ಬದುಕುತ್ತವೆ. ಇಂತಹ ಪ್ರಾಣಿಗಳ ಮಾಂಸದಲ್ಲೂ ಒಮೆಗಾ 3 ಕೊಬ್ಬಿನಂಶವಿರುತ್ತದೆ.

English summary

Foods Rich In Omega-3 Fatty Acids | Health Tips

There are two types or fats, good and bad. Bad cholesterol or fat accumulates in the arteries and good cholesterol helps keep your heart healthy. Foods rich in omega-3 fatty acids contains good cholesterol.
X
Desktop Bottom Promotion