For Quick Alerts
ALLOW NOTIFICATIONS  
For Daily Alerts

ಹೃದಯ ಜೋರಾಗಿ ಬಡಿದುಕೊಳ್ಳುವುದು ಒಳ್ಳೆಯದಲ್ಲ

|

ಹೃದಯ ಬಡಿತ ಹೆಚ್ಚಾದರೆ ಅಪಾಯವಿದೆಯೇ? ಹೌದು ಅನ್ನುತ್ತದೆ ವೈದ್ಯಕೀಯ ಮೂಲಗಳು. ನಾವು ಒತ್ತಡಕ್ಕೆ ಒಳಗಾದಾಗ, ದೈಹಿಕ ಶ್ರಮ , ಓಡಿದಾಗ ಹೃದಯದ ಬಡಿತ ಹೆಚ್ಚುವುದು ಸಹಜ. ಆದರೆ ನಿಮ್ಮ ಹೃದಯ ಸಾಮಾನ್ಯವಾಗಿಯೇ ವೇಗವಾಗಿ ಬಡಿಕೊಳ್ಳುತ್ತಿದ್ದರೆ ವೈದ್ಯರನ್ನು ಕಾಣುವುದು ಒಳ್ಳೆಯದು.

ಸಾಮಾನ್ಯವಾದ ಬಡಿತವೆಂದರೆ ಪ್ರತೀ ನಿಮಿಷಕ್ಕೆ 60-100 ಬಾರಿ ಬಡೆದುಕೊಳ್ಳುತ್ತದೆ. ಇದಕ್ಕಿಂತ ಹೆಚ್ಚಾಗಿ ನಿಮ್ಮ ಹೃದಯ ಬಡೆದುಕೊಂಡರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಸಾಮಾನ್ಯ ಸ್ಥಿತಿಯಲ್ಲೂ ನಿಮ್ಮ ಹೃದಯ ವೇಗವಾಗಿ ಬಡಿಕೊಳ್ಳುತ್ತಿದ್ದರೆ ಹೃದಯಾಘಾತ, ಪಾರ್ಶ್ವವಾಯು ಬರಬಹುದು. ಆದ್ದರಿಂದ ತೀವ್ರ ಹೃದಯ ಬಡಿತವನ್ನು ನಿಯಂತ್ರಣದಲ್ಲಿಡಬೇಕು.

ಪ್ರತಿನಿತ್ಯ ವ್ಯಾಯಾಮ ಮಾಡಿದರೆ ನಿಮ್ಮ ಹೃದಯದ ಬಡಿತವನ್ನು ಸಮತೋಲನದಲ್ಲಿಡಬಹುದು ಹಾಗೂ ಈ ಕೆಳಗಿನ ಆಹಾರಗಳು ಕೂಡ ತೀವ್ರ ಹೃದಯ ಬಡಿತವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

 ಟೋಫು

ಟೋಫು

ಟೋಫು ತೀವ್ರ ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ ಹಾಗೂ ತೆಳ್ಳಗಾಗಲು ಡಯಟ್ ಮಾಡುವವರು ಇದನ್ನು ತಿನ್ನುವುದು ಒಳ್ಳೆಯದು.

ಬಾಳೆ ಹಣ್ಣು

ಬಾಳೆ ಹಣ್ಣು

ಬಾಳೆ ಹಣ್ಣಿನಲ್ಲಿ ಪೊಟಾಷ್ಯಿಯಂ ಇದ್ದು ಇದು ಎದೆ ಉರಿ, ತೀವ್ರವಾದ ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ.

ದ್ರಾಕ್ಷಿ

ದ್ರಾಕ್ಷಿ

ಒಣದ್ರಾಕ್ಷಿಯಲ್ಲಿ ಪೊಟಾಷ್ಯಿಯಂ ಹಾಗೂ ಸೋಡಿಯಂ ಅಧಿಕವಿರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಪಾಲಾಕ್

ಪಾಲಾಕ್

ಪಾಲಾಕ್ ನಲ್ಲಿ ಮ್ಯಾಗ್ನಿಷಿಯಂ ಅಂಶ ಅಧಿಕವಿರುತ್ತದೆ. ನಮ್ಮ ದೇಹದಲ್ಲಿ ಮ್ಯಾಗ್ನಿಷಿಯಂ ಅಂಶ ಕಡಿಮೆಯಾದರೆ ಕೂಡ ಹೃದಯ ತೀವ್ರವಾಗಿ ಬಡೆದುಕೊಳ್ಳುವುದು.

 ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ antioxidants ಹಾಗೂ ವಿಟಮಿನ್ ಅಧಿಕವಿರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಹಾಲು

ಹಾಲು

ಕ್ಯಾಲ್ಸಿಯಂ ಕಮ್ಮಿಯಾದರೆ ಮೂಳೆ ಸಂಬಂಧಿ ತೊಂದರೆಗಳು ಮಾತ್ರವಲ್ಲ ಹೃದಯದ ಆರೋಗ್ಯ ಕೂಡ ಹಾಳಾಗುವುದು.

 ಸಿಹಿ ಕುಂಬಳಕಾಯಿ

ಸಿಹಿ ಕುಂಬಳಕಾಯಿ

ಮ್ಯಾಗ್ನಿಷಿಯಂ ಕೊರತೆಯಿಂದ ಹೃದಯದ ಬಡೆತ ಹೆಚ್ಚಾದರೆ ಸಿಹಿ ಕುಂಬಳಕಾಯಿ ತಿನ್ನುವುದು ಒಳ್ಳೆಯದು. ಇದರಿಂದ ದೇಹಕ್ಕೆ ಅಗತ್ಯವಿರುವ ಮ್ಯಾಗ್ನಿಷಿಯಂ ದೊರೆಯು ಹೃದಯ ಸಾಧಾರಣವಾಗಿ ಬಡೆದುಕೊಳ್ಳುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ದೇಹದಲ್ಲಿ ಶಕ್ತಿ ಉತ್ಪತ್ತಿಯಾಗಲು ಪೊಟಾಷ್ಯಿಯಂ ಅವಶ್ಯಕ. ಬೆಣ್ಣೆ ಹಣ್ಣಿನಲ್ಲಿ ತುಂಬಾ ಪೊಟಾಷ್ಯಿಯಂ ಇದೆ.

 ಟೊಮೆಟೊ

ಟೊಮೆಟೊ

ಟೊಮೆಟೊ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯಬಹುದೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಎಲ್ಲಾ ರೀತಿಯಲ್ಲೂ ಆರೋಗ್ಯಕರ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ರಕ್ತ ನಾಳದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

English summary

Foods To Lower Heart Rate Naturally | Tips For health | ತೀವ್ರ ಹೃದಯ ಬಡೆತವನ್ನು ಕಡಿಮೆ ಮಾಡವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Include these foods in your diet to lower high heart rate. Also, workout regularly to bring down rapid heartbeat. It not only increases blood circulation but also helps shed fat deposits in the body that can be harmful for the heart.
X
Desktop Bottom Promotion