For Quick Alerts
ALLOW NOTIFICATIONS  
For Daily Alerts

ಮಲಗಿದ ತಕ್ಷಣ ನಿದ್ದೆ ಬರಬೇಕೆ? ಈ ಆಹಾರಗಳನ್ನು ತಿನ್ನಿ

|

ತುಂಬಾ ನಿದ್ದೆ ಬರ್ತಾ ಇರುತ್ತದೆ, ಆದರೆ ಹೋಗಿ ಮಲಗಿದರೆ ನಿದ್ದೆ ಬರುವುದಿಲ್ಲ, ಕೆಲವರು ರಾತ್ರಿ ಇಡೀ ನಿದ್ದೆ ಬರದೆ ಒದ್ದಾಡಿ, ನಂತರ ಮುಂಜಾನೆ ಸ್ವಲ್ಪ ಹೊತ್ತು ನಿದ್ದೆ ಹೋಗುತ್ತಾರೆ. ಈ ರೀತಿಯ ಸಮಸ್ಯೆಯನ್ನು ಹೆಚ್ಚಿನವರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದು ನಿರ್ಲಕ್ಷ್ಯ ಮಾಡುವಂತಹ ವಿಷಯವಲ್ಲ, ನಿದ್ರಾಹೀನತೆ ಅನೇಕ ಭಯಾನಕ ಕಾಯಿಲೆಗಳನ್ನು ತರುತ್ತದೆ. ನಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ನಿದ್ದೆ ಸರಿಯಾಗಿ ಮಾಡದಿದ್ದರೆ ಖಿನ್ನತೆ ಸಮಸ್ಯೆ ಕಾಡಲಾರಂಭಿಸುತ್ತದೆ.

ಈ ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸಲು ಮಾತ್ರೆ ತೆಗೆದುಕೊಳ್ಳುವ ಬದಲು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಕೆಲವೊಂದು ಸುವಾಸನೆ ಭರಿತ ಎಣ್ಣೆ ಮಸಾಜ್ ನಿಂದ ಹಾಗೂ ಆಹಾರಕ್ರಮದಿಂದ ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸಬಹುದು. ಈ ಕೆಳಗಿನ ಆಹಾರಗಳು ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ:

ಮೀನು

ಮೀನು

ಮೀನಿನಲ್ಲಿ ವಿಟಮಿನ್ ಬಿ6 ಮತ್ತು ಒಮೆಗಾ 3 ಕೊಬ್ಬಿನಂಶ ಇರುವುದರಿಂದ ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ಮೆಗ್ನಿಷ್ಯಿಯಂ ಇದ್ದು ಇದು ನಿಮಗೆ ವಿಶ್ರಾಂತಿಯ ಅನುಭವ ನೀಡುವುದರ ಜೊತೆಗೆ ಮಲಗಿದ ತಕ್ಷಣ ನಿದ್ದೆ ಬರುವಂತೆ ಮಾಡುತ್ತದೆ.

 ಟೀ

ಟೀ

ಟೀ ಕುಡಿದರೆ ನಿದ್ದೆ ಬರಲ್ಲ ಅಂತಾರೆ, ಇದೇನಪ್ಪಾ ಇವರು ಟೀ ಕುಡಿದರೆ ನಿದ್ದೆ ಬರುತ್ತದೆ ಎಂದು ಹೇಳುತ್ತಿದ್ದಾರಲ್ಲ ಎಂದು ಆಶ್ಚರ್ಯಪಡಬೇಡಿ. ಕ್ಯಮೊಮೈಲ್ ಟೀ ಅಥವಾ ಗ್ರೀನ್ ಟೀ ನಿಮ್ಮ ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಮೆಗ್ನಿಷ್ಯಿಯಂ ಮತ್ತು ಪೊಟಾಷ್ಯಿಯಂ ಅಧಿಕವಿದ್ದು ಇವು ನಿದ್ದೆ ತರುವಂತಹ ಹಾರ್ಮೋನ್ ಗಳ ಬಿಡುಗಡೆಗೆ ಸಹಾಯ ಮಾಡುತ್ತದೆ.

ಮೊಸರು

ಮೊಸರು

ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಬೇಗನೆ ನಿದ್ದೆ ತರುತ್ತದೆ. ಮಲಗುವ 10 ನಿಮಿಷ ಮೊದಲು ಮೊಸರು ತಿಂದು ಮಲಗಿದರೆ ಬೇಗನೆ ನಿದ್ದೆ ಬರುವುದು.

ಓಟ್ ಮೀಲ್ಸ್

ಓಟ್ ಮೀಲ್ಸ್

ಓಟ್ ಮೀಲ್ಸ್ ನಲ್ ರಂಜಕ ಮತ್ತು ಸಿಲಿಕಾನ್, ಪೊಟಾಷ್ಯಿಯಂ ಅಂಶ ಅಧಿಕವಾಗಿರುತ್ತದೆ. ಆದ್ದರಿಂದ ಇವು ಕೂಡ ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.

ಬೇಯಿಸಿದ ಮೊಟ್ಟೆ

ಬೇಯಿಸಿದ ಮೊಟ್ಟೆ

ನಿದ್ದೆ ಬೇಗನೆ ಬರಲು ಮಲಗುವ ಮುಂಚೆ ಬೇಯಿಸಿದ ಒಂದು ಮೊಟ್ಟೆ ಬೇಕಾದರೆ ತಿನ್ನಬಹುದು.

ಅನ್ನ

ಅನ್ನ

ಅನ್ನ ಅದರಲ್ಲೂ ಮೊಸರನ್ನ ನಿದ್ದೆ ಬರುವಂತೆ ಮಾಡುತ್ತದೆ. ರಾತ್ರಿ ಡಿನ್ನರ್ ಜೊತೆ ಸ್ವಲ್ಪ ಮೊಸರನ್ನ ತಿನ್ನಿ, ಆಗ ಮಲಗಿದ ತಕ್ಷಣ ನಿದ್ದೆ ಬರುವುದು

English summary

Foods For Better Sleep

Not getting proper or enough sleep is a problem which most of us face.ing are some of the common causes for insomnia. Of these the eating habits are under your control. Eating healthy helps you to enjoy a good night's rest.
X
Desktop Bottom Promotion