For Quick Alerts
ALLOW NOTIFICATIONS  
For Daily Alerts

ಮೈಕೈ ನೋವಿನಿಂದಾಗಿ ನಿದ್ದೆ ಹಾಳಾಗುತ್ತಿದೆಯೇ?

|

ಕೆಲವರಿಗೆ ಹಗಲು ಇಡೀ ಏನೂ ಸಮಸ್ಯೆ ಇರುವುದಿಲ್ಲ, ರಾತ್ರಿಯಾಗುತ್ತಿದ್ದಂತೆ ಮೈ ಕೈ ನೋವು, ಕಾಲುಗಳಲ್ಲಿ ಸೆಳೆತ ಮುಂತಾದ ಸಮಸ್ಯೆ ಕಂಡು ಬರುವುದು. ಇದರ ಪರಿಣಾಮ ರಾತ್ರಿಯಲ್ಲಿ ನಿದ್ದೆಯಿಲ್ಲದಿರುವುದು. ಈ ರೀತಿಯ ಸಮಸ್ಯೆ ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತದೆ.

ನಾನಾ ಕಾರಣಗಳಿಂದ ಈ ಸಮಸ್ಯೆ ಕಂಡು ಬರುವುದು, ಕೆಲಸದ ಒತ್ತಡ, ಪ್ರಯಾಣ, ಮಾನಸಿಕ ಒತ್ತಡ, ಪೋಷಕಾಂಶದ ಕೊರತೆ ಇವೆಲ್ಲಾ ಮೈಕೈ ನೋವು ಬರಲು ಪ್ರಮುಖ ಕಾರಣಗಳು.

ಈ ರೀತಿಯ ಸಮಸ್ಯೆ ಇರುವವರು ಈ ಕೆಳಗಿನ ಸಲಹೆಯನ್ನು ಪಾಲಿಸಿ ನೋಡಿ, ಮೈಕೈ ನೋವು ಇಲ್ಲದೆ ಸುಖವಾಗಿ ನಿದ್ದೆ ಬರಲು ಸಹಾಯವಾಗುವುದು:

ಚೆರ್ರಿ ರಸ

ಚೆರ್ರಿ ರಸ

2 ಚಮಚ ಮಂದವಾದ ಚೆರ್ರಿ ಜ್ಯೂಸ್ ಕುಡಿದರೆ ಮೈಕೈ ನೋವು ಕಡಿಮೆಯಾಗುವುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ, ಟ್ರೈ ಮಾಡಿ ನೋಡಿ.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳಲ್ಲಿ ನೋವು ನಿವಾರಕ ಸಾಮರ್ಥ್ಯ ಇದೆ. ಸಂಜೆ ಹೊತ್ತು ಬೆರ್ರಿ ಹಣ್ಣು ತಿನ್ನಿ, ರಾತ್ರಿಗೆ ಮೈಕೈ ನೋವು ಕಾಣಿಸಿಕೊಳ್ಳುವುದಿಲ್ಲ.

ಸೆಲರಿ ಸೊಪ್ಪು

ಸೆಲರಿ ಸೊಪ್ಪು

ಸೆಲರಿ ಸೊಪ್ಪನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಇದರಲ್ಲಿ 20 ಅಧಿಕ anti-inflammatory ಅಂಶವಿದೆ. ಇದನ್ನು ತಿಂದು ನೋಡಿ, ಆ ದಿನ ನಿಮಗೆ ಮೈಕೈ ನೋವು ಮೈಲಿ ದೂರದಲ್ಲಿ ನಿಲ್ಲುತ್ತದೆ.

ಕಪ್ಪು ದ್ರಾಕ್ಷಿ/ಹುಳಿ ದ್ರಾಕ್ಷಿ

ಕಪ್ಪು ದ್ರಾಕ್ಷಿ/ಹುಳಿ ದ್ರಾಕ್ಷಿ

ಕಪ್ಪು ದ್ರಾಕ್ಷಿ ನರಗಳಿಗೆ ಹಾನಿ ಮಾಡಿ ನೋವನ್ನು ತರುವ ಎಂಜೈಮ್ಸ್ ತಡೆಗಟ್ಟುವುದರಿಂದ ಮೈ ಕೈ ನೋವು ಉಂಟಾಗುವುದಿಲ್ಲ.

ಶುಂಠಿ ಪುಡಿ

ಶುಂಠಿ ಪುಡಿ

ಶುಂಠಿ ಪುಡಿಯನ್ನು ಹಾಲಿನಲ್ಲಿ ಹಾಕಿ ಕುಡಿಯಿರಿ, ಮೈ ಕೈ ನೋವನ್ನು ಹೋಗಲಾಡಿಸಲು ಮನೆ ಮದ್ದಾಗಿ ಇದನ್ನು ಬಳಸಬಹುದು.

ಸೋಯಾವನ್ನು ಆಹಾರದಲ್ಲಿ ಸೇರಿಸಿ

ಸೋಯಾವನ್ನು ಆಹಾರದಲ್ಲಿ ಸೇರಿಸಿ

ಸೋಯಾ ಮತ್ತು ಸೋಯಾ ಹಾಲಿನಲ್ಲಿ ಪ್ರೊಟೀನ್ ಅಧಿಕವಿದೆ ಹಾಗೂ anti inflammatory ಅಂಶ ಕೂಡ ಇದೆ. ಆದ್ದರಿಂದ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಒಳ್ಳೆಯದು.

1 ಕಪ್ ಕಾಫಿ

1 ಕಪ್ ಕಾಫಿ

ಮಲಗುವಾಗ ಕಾಫಿ ಕುಡಿಯುವುದು ಒಳ್ಳೆಯದಲ್ಲ, ಆದರೆ ಮೈಕೈ ನೋವು ಕಾಣಿಸಿಕೊಂಡರೆ 1 ಕಪ್ ಕಾಫಿ ಕುಡಿದರೆ ನೋವು ಕಡಿಮೆಯಾಗುವುದು!

 ಒಮೆಗಾ 3 ಇರುವ ಕೊಬ್ಬಿನಂಶ

ಒಮೆಗಾ 3 ಇರುವ ಕೊಬ್ಬಿನಂಶ

ಒಮೆಗಾ 3 ಕೊಬ್ಬಿನಂಶದ ಕೊರತೆ ಉಂಟಾದರೆ ಮೈಕೈ ನೋವು, ಪಾದಗಳಲ್ಲಿ ಉರಿ ಕಂಡು ಬಂದು ನಿದ್ದೆ ಹತ್ತಿರಕ್ಕೆ ಸುಳಿಯುವುದೇ ಇಲ್ಲ. ಇಂಥವರು ಒಮೆಗಾ 3 ಕೊಬ್ಬಿನಂಶವಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಒಮೆಗಾ 3 ಕೊಬ್ಬಿನಂಶ ಸರಿಯಾದ ಪ್ರಮಾಣದಲ್ಲಿದ್ದರೆ ಈ ರೀತಿಯ ಸಮಸ್ಯೆ ಕಂಡು ಬರುವುದಿಲ್ಲ.

English summary

Foods To Cure Night Time Body Aches

By evening when you return home after a hectic day at work, the body seems to shut down. And most of you would agree with me that it is really difficult to sleep with stress, tightness, and inflammation.Here is a glimpse of some of the best foods to cure night time body aches.
X
Desktop Bottom Promotion