For Quick Alerts
ALLOW NOTIFICATIONS  
For Daily Alerts

ಕೆಲಸದ ಮೂಡ್ ಉತ್ತಮಗೊಳಿಸುವ ಆಹಾರಗಳು

|

ನಿಮಗೆ ಗೊತ್ತೆ ಆಹಾರಗಳು ಮೂಡ್ ಬದಲಾಯಿಸುತ್ತವೆ. ನಿಮ್ಮ ಋಣಾತ್ಮಕವಾಗಿದ್ದ ಮನಸ್ಥಿತಿಯನ್ನು ಧನಾತ್ಮಕವಾಗಿ ಬದಲಾಯಿಸಿಬಿಡುವ ಆಹಾರಗಳ ಶಕ್ತಿ ಅಚ್ಚರಿಗೊಳಿಸುವಂಥದ್ದು. ಯಾವುದೇ ಸಮಯವಿರಲಿ ಎಂಥದೇ ಸಂದರ್ಭವಿರಲಿ ಆಹಾರಗಳು ನಿಮ್ಮ ಮೂಡಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಂತು ಸತ್ಯ.

ಪರಿಣತರು ಪ್ರಕಾರ ಆಸಿಡ್, ರುಚಿ ಮತ್ತು ಆಹಾರದಲ್ಲಿನ ಸಾಮಗ್ರಿಗಳು ಇದಕ್ಕೆ ಕಾರಣ. ಕೆಳಗೆ ಕೊಟ್ಟಿರುವ ಆಹಾರಗಳು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇವು ನಿಮ್ಮ ಕೆಲಸದ ಮೂಡನ್ನು ಉತ್ತಮವಾಗಿ ಬದಲಾಯಿಸುತ್ತದೆ.

ಕೆಲಸದ ಮೂಡ್ ಉತ್ತಮಗೊಳಿಸುವ ಆಹಾರಗಳು

ರಸ್ಕ್

ರಸ್ಕ್

ಒಣಗಿಸಿದ ಬ್ರೆಡ್ ಅನ್ನು ರಸ್ಕ್ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಕೆಲಸದ ಉತ್ತಮಗೊಳಿಸುವಂತಹ ಆಹಾರ. ಇದರಲ್ಲಿ ಕಡಿಮೆ ಕ್ಯಾಲೊರಿಗಳಿದ್ದು ಹೆಚ್ಚು ಪ್ರೊಟೀನ್ ಇರುತ್ತದೆ. ಇದು ಚೈತನ್ಯವನ್ನು ಉತ್ತಮಗೊಳಿಸುತ್ತದೆ.

ಕಾಫಿ

ಕಾಫಿ

ಒಂದು ಕಪ್ ಕಾಫಿಯಿಂದ ಹಲವು ಅದ್ಭುತಗಳನ್ನು ಸಾಧಿಸಬಹುದು. ಆದರೆ ಒಂದಕ್ಕಿಂತ ಹೆಚ್ಚು ಕಪ್ ಕಾಫಿ ಕುಡಿಯದಂತೆ ಎಚ್ಚರ ವಹಿಸಿ.

ಗ್ರೀನ್ ಟೀ

ಗ್ರೀನ್ ಟೀ

ಹಾಲಿನ ಟೀಗಿಂತ ಗ್ರೀನ್ ಟೀ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಗ್ರೀನ್ ಟೀಯಿಂದ ನಿಮ್ಮ ಮೂಡ್ ಹೆಚ್ಚು ಉತ್ತಮಗೊಳ್ಳುತ್ತದೆ.

ಚಾಕೊಲೆಟ್

ಚಾಕೊಲೆಟ್

ಹೆಂಗಸರಿಗೆ ಚಾಕೊಲೆಟ್ ಹೆಚ್ಚು ಪ್ರಿಯವಾದದ್ದು. ನಿಮಗೆ ಚಾಕೊಲೆಟ್ ಹೆಚ್ಚು ಪ್ರಿಯವಾಗಿದ್ದಲ್ಲಿ ಊಟದ ನಂತರ ಅದನ್ನು ಸೇವಿಸಿ. ಇದು ನಿಮ್ಮ ಎನರ್ಜಿಯನ್ನು ಹೆಚ್ಚಿಸುತ್ತದೆ.

ನೀರು

ನೀರು

ದೇಹದಲ್ಲಿ ನೀರಿನಂಶ ಅಗತ್ಯ ಪ್ರಮಾಣದಲ್ಲಿದ್ದರೆ ನಿಮ್ಮ ಮೂಡು ಮತ್ತು ಶಕ್ತಿ ಎರಡೂ ಚೆನ್ನಾಗಿರುತ್ತದೆ. ಹೆಚ್ಚು ನೀರು ಕುಡಿದಷ್ಟು ಆರೋಗ್ಯಕ್ಕೆ ಒಳ್ಳೆಯದು.

ಸ್ಯಾಂಡ್ ವಿಚ್

ಸ್ಯಾಂಡ್ ವಿಚ್

ವೆಜಿಟೆರಿಯನ್ ಸ್ಯಾಂಡ್ ವಿಚ್ ನಿಮ್ಮ ಕೆಲಸದ ಮೂಡನ್ನು ಉತ್ತಮಗೊಳಿಸುವ ಆಹಾರಗಳಲ್ಲಿ ಒಂದು. ಇದೊಂದು ಆರೋಗ್ಯಕರ ಮತ್ತು ಬೇಗ ತಿನ್ನಬಹುದಾದ ತಿಂಡಿ.

ಬೀಟ್ರೂಟ್

ಬೀಟ್ರೂಟ್

ಹಸಿ ಬೀಟ್ರೂಟ್ ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆ ದೂರವಾಗುತ್ತದೆ. ಜೊತೆಗೆ ನಿಮ್ಮ ಮೂಡು ಕೂಡ ಉತ್ತಮವಾಗಿರುತ್ತದೆ. ಹಸಿ ಬೀಟ್ರೂಟಿಗೆ ಬೇಕಿದ್ದರೆ ಉಪ್ಪು ಮತ್ತು ಮೆಣಸನ್ನು ಸೇರಿಸಿ ತಿನ್ನಬಹುದು. ಇದು ಕೂಡ ಒಳ್ಳೆಯದು.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ಗಳು ಆರೋಗ್ಯಕ್ಕೆ ಉತ್ತಮವಾದದ್ದು. ಇವುಗಳಲ್ಲಿ ಬೀಟಾ ಕ್ಯಾರೊಟೆನೆ ಹೆಚ್ಚಿದ್ದು ಇದು ನಿಮ್ಮ ಎನರ್ಜಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮೆದುಳಿಗೆ ಇದು ಉತ್ತಮ ಆಹಾರ.

ನಿಂಬೆ ಹಣ್ಣಿನ ಜ್ಯೂಸ್

ನಿಂಬೆ ಹಣ್ಣಿನ ಜ್ಯೂಸ್

ಒಂದು ಕಪ್ ನಿಂಬೆ ಹಣ್ಣಿನ ಜ್ಯೂಸ್ ದೇಹಕ್ಕೆ ಚೈತನ್ಯವನ್ನು ತಂದುಕೊಡುತ್ತದೆ. ಇದು ನಿಮ್ಮ ಮೂಡನ್ನು ಕೂಡ ಬದಲಾಯಿಸಿಬಿಡುತ್ತದೆ.

ಒಣಹಣ್ಣುಗಳು

ಒಣಹಣ್ಣುಗಳು

ಒಣ ದ್ರಾಕ್ಷಿಹಣ್ಣುಗಳನ್ನು ಯಾವಾಗಲು ನಿಮ್ಮ ಹತ್ತಿರ ಇಟ್ಟುಕೊಳ್ಳುವುದು ಒಳ್ಳೆಯದು. ಇದು ನಿಮ್ಮ ಮೂಡನ್ನು ಉತ್ತಮಗೊಳಿಸಲು ಸಹಕಾರಿ.

ನಟ್ಸ್

ನಟ್ಸ್

ಬಾದಾಮಿಯಲ್ಲಿ ವಿಟಮಿನ್ ಹೆಚ್ಚಿರುತ್ತದೆ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಕೂಡ. ಒಂದು ಹಿಡಿ ಬಾದಾಮಿ ನಿಮ್ಮ ಕೆಲಸದ ಮೂಡನ್ನು ಬಹುಮಟ್ಟಿಗೆ ಸುಧಾರಿಸಿಬಿಡುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಮತ್ತು ಪ್ರೋಟಿನ್ ಹೆಚ್ಚಿರುತ್ತದೆ. ಇವೆರಡೂ ನಿಮ್ಮಲ್ಲಿ ಧನಾತ್ಮಕ ಮನಸ್ಥಿತಿಯನ್ನು ಮೂಡಿಸಲು ಸಹಕಾರಿ. ಬಾಳೆಹಣ್ಣಿನ ಸಲಾಡ್ ತಿನ್ನುವುದು ಬಹಳ ಒಳ್ಳೆಯದು.

ಕಾಳುಗಳು

ಕಾಳುಗಳು

ಹೆಸರುಬೇಳೆ ಎಲ್ಲರಿಗೂ ಇಷ್ಟವಾದದ್ದೆ. ಹುರಿದ ಹೆಸರುಬೇಳೆ ಆರೋಗ್ಯಕ್ಕೂ ಒಳ್ಳೆಯದು. ಇದು ಕೂಡ ನಿಮ್ಮ ಮೂಡು ಉತ್ತಮಗೊಳ್ಳಲು ಸಹಕಾರಿ.

ಕ್ರಾಕರ್ಸ್

ಕ್ರಾಕರ್ಸ್

ಗರಿಗರಿಯಾದದ್ದನ್ನು ತಿನ್ನಲು ಇಷ್ಟಪಡುವಿರಾ? ಹಾಗಿದ್ದರಿ ಕ್ರಾಕರ್ಸ್ ತಿನ್ನುವುದು ಉತ್ತಮ ಆಯ್ಕೆ.

ಚಿಪ್ಸ್

ಚಿಪ್ಸ್

ಚಿಪ್ಸ್ ತಿನ್ನುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಡಿ! ಒಂದು ಹಿಡಿ ಉಪ್ಪಿನ ಅಥವ ಖಾರದ ಚಿಪ್ಸ್ ತಿನ್ನುವುದರಿಂದ ನಿಮ್ಮ ಮೂಡ್ ಉತ್ತಮಗೊಳ್ಳುತ್ತದೆ. ಆದರೆ ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.

English summary

Foods To Boost Your Mood At Work

Did you know that foods can actually boost your mood, no matter where you are and at any given moment. It is amazing to see how some foods can actually build your mood swings and create that negative thoughts into positive ones.
Story first published: Wednesday, December 11, 2013, 9:53 [IST]
X
Desktop Bottom Promotion