For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನು ಮುಟ್ಟಬೇಡಿ!

|

ಮುಟ್ಟು ಹತ್ತಿರವಾಗುತ್ತಿದ್ದಂತೆ ಮಹಿಳೆಯರ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯಾಗುವುದು ಸಹಜ. ಕೆಲವರಿಗಂತೂ ಆ ಸಮಯದಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ತುಂಬಾ ಕೋಪ ಬರುತ್ತದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಕಾಲಿನ ಸೆಳೆತ, ಕೆಲವರಲ್ಲಿ ತಲೆ ಸುತ್ತು, ವಾಂತಿ ಈ ರೀತಿಯ ಸಮಸ್ಯೆಗಳು ಕಂಡು ಬರುವುದರಿಂದ ಈ ಸಮಸ್ಯೆಗಳು ಮಹಿಳೆಯರ ಮೂಡ್ ನ ಮೇಲೂ ತುಂಬಾ ಪರಿಣಾಮ ಬೀರುತ್ತದೆ.

ಮುಟ್ಟಿನ ಸಮಯದಲ್ಲಿ ಕಾಡುವ ಈ ರೀತಿಯ ಮಾನಸಿಕ ಒತ್ತಡ ಮತ್ತು ದೈಹಿಕ ನೋವನ್ನು ತಡೆಯಬೇಕೆಂದು ಬಯಸುವುದಾದರೆ ಆಹಾರಕ್ರಮದ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಇಲ್ಲಿ ನಾವು ಮುಟ್ಟಿನ ಸಮಯದಲ್ಲಿ ನಿಮ್ಮ ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ನೀವು ಮುಟ್ಟಬಾರದ ಆಹಾರಗಳಾವುವು ಎಂಬ ಮಾಹಿತಿಯನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

 ಕಾಫಿ

ಕಾಫಿ

ಮುಟ್ಟಿನ ಸಮಯದಲ್ಲಿ ಕೆಫೀನ್ ಇರುವ ವಸ್ತುಗಳನ್ನು ತಿನ್ನಲು ಹೋಗಬೇಡಿ. ಕೆಫೀನ್ ಅಂಶ ರಕ್ತನಾಳಗಳನ್ನು ಕಿರಿದಾಗಿಸಿ, ರಕ್ತ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತದೆ ಹಾಗೂ ನಿರ್ಜಲೀಕರಣ ಉಂಟಾಗುವುದು,. ಇದರಿಂದ ತಲೆನೋವು ಕಂಡು ಬರುವುದು. ಆದ್ದರಿಂದ ಕೆಫೀನ್ ಇರುವ ಪಾನೀಯಗಳನ್ನು ಈ ಸಮಯದಲ್ಲಿ ಕುಡಿಯಬೇಡಿ.

ಹೆಚ್ಚಿನ ಸಕ್ಕರೆಯಂಶ ಇರುವ ಆಹಾರ ತಿನ್ನಬೇಡಿ

ಹೆಚ್ಚಿನ ಸಕ್ಕರೆಯಂಶ ಇರುವ ಆಹಾರ ತಿನ್ನಬೇಡಿ

ಮುಟ್ಟಿನ ಸಮಯದಲ್ಲಿ ಅಧಿಕ ಸಕ್ಕರೆಯಂಶವಿರುವ ಸೋಡಾ, ಸಿಹಿ ತಿಂಡಿಗಳು ಇವುಗಳನ್ನು ತಿನ್ನಬೇಡಿ. ಸಕ್ಕರೆಯಂಶವನ್ನು ಅಧಿಕ ತಿಂದರೆ ರಕ್ತಸ್ರಾವ ಸ್ವಲ್ಪ ಅಧಿಕವೇ ಆಗುವುದರಿಂದ ತುಂಬಾ ಕಿರಿಕಿರಿಯಾಗುವುದು. ಆದ್ದರಿಂದ ಸಕ್ಕರೆಯಂಶವಿರುವ ಆಹಾರವನ್ನು ಮಿತಿಯಲ್ಲಿ ತಿನ್ನಿ.

ಬೇಕರಿ ಫುಡ್ಸ್

ಬೇಕರಿ ಫುಡ್ಸ್

ಟ್ರಾನ್ಸ್ ಫ್ಯಾಟ್ ಇರುವ ಬೇಕರಿ ಆಹಾರಗಳನ್ನು ತಿಂದರೆ ಇದು ಈಸ್ಟ್ರೊಜೆನ್ ಪ್ರಮಾಣವನ್ನು ಹೆಚ್ಚು ಮಾಡುವುದರಿಂದ ಇದ್ದಕ್ಕಿದ್ದಂತೆ ಯೂಟ್ರಸ್ ನಲ್ಲಿ ನೋವು ಕಂಡು ಬರುವುದು. ಕಿಬ್ಬೊಟ್ಟೆ ನೋವು ಬರದಂತೆ ತಡೆಯಲು ಈ ರೀತಿಯ ಆಹಾರಗಳನ್ನು ದೂರವಿಡಿ.

ಸಂಗ್ರಹಿಸಿಟ್ಟ ಆಹಾರಗಳು

ಸಂಗ್ರಹಿಸಿಟ್ಟ ಆಹಾರಗಳು

ಸಂಗ್ರಹಿಸಿಟ್ಟ ಆಹಾರಗಳನ್ನು ಮುಟ್ಟಿನ ಸಮಯದಲ್ಲಿ ತಿನ್ನಿಬೇಡಿ. ಏನಿದ್ದರೂ ತಾಜಾ ಆಹಾರಗಳನ್ನು ಮಾತ್ರ ತಿನ್ನಿ. ಏಕೆಂದರೆ ಸಂಗ್ರಹಿಸಿಟ್ಟ ಆಹಾರಗಳಲ್ಲಿ ಸೋಡಿಯಂ ಅಂಶ ಅಧಿಕವಿರುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ಊದಿಕೊಳ್ಳುವುದು. ಆದ್ದರಿಂದ ಈ ಸಮಯದಲ್ಲಿ ಚೀಸ್, ಸಾಸ್ ಈ ರೀತಿಯ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು.

ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಆಹಾರಗಳಲ್ಲಿ ನಾರಿನಂಶ ಇರುವುದಿಲ್ಲ, ಆದ್ದರಿಂದ ನೂಡಲ್ಸ್, ಪಾಸ್ತಾ ಈ ರೀತಿಯ ಆಹಾರಗಳನ್ನು ತಿಂದರೆ ದೇಹದಲ್ಲಿ ಸಕ್ಕರೆಯಂಶ ಅಧಿಕವಾಗಿ, ಸ್ನಾಯು ಸೆಳೆತ, ಹೊಟ್ಟೆ ನೋವು ಈ ರೀತಿಯ ಸಮಸ್ಯೆ ಕಂಡು ಬರುವುದು.

 ಫ್ರೈ ಮಾಡಿದ ಆಹಾರಗಳು

ಫ್ರೈ ಮಾಡಿದ ಆಹಾರಗಳು

ಮುಟ್ಟಿನ ಸಮಯದಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನದಿದ್ದರೆ ಈಸ್ಟ್ರೋಜನ್ ಪ್ರಮಾಣವನ್ನು ಸಮತೋಲನದಲ್ಲಿ ಇಡಬಹುದು.

English summary

Foods To Avoid During Menstruation

Menstruation pain can be reduce by giving special focus to nutritious food and avoiding those kinds of food that will adversely affect your menstruation. Here are some of the foods to avoid during menstruation and stay happy when you are down.
X
Desktop Bottom Promotion