For Quick Alerts
ALLOW NOTIFICATIONS  
For Daily Alerts

ತೂಕ ಹೆಚ್ಚಿಸುವ ದೈನಂದಿನ ಅಭ್ಯಾಸಗಳು

By Super
|

ಕೆಲವರಿಗೆ ಬೇಕೆಂದರೂ ತೂಕ ಹೆಚ್ಚಿಸಿಕೊಳ್ಳಲು ಆಗಲ್ಲ, ಮತ್ತೆ ಕೆಲವರಿಗೆ ಬೇಡವೆಂದರೂ ದೇಹ ಭಾರವಾಗುತ್ತಾ ಹೋಗುತ್ತದೆ. ಏನೇ ಮಾಡಿದರೂ ಈ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ಹಂತದಲ್ಲಿ ದೇಹದ ತೂಕ ನಿಯಂತ್ರಣಕ್ಕೆ ಬಂದರೂ ಮತ್ತೆ ಕೆಲವೇ ದಿನಗಳಲ್ಲಿ ಅದು ಹಿಂದಿನ ಸ್ಥಿತಿಗೇ ತಲುಪುತ್ತದೆ. ಮನಸ್ಸಿನಲ್ಲಿ ತೂಕ ಕಡಿಮೆಯಾಗಬೇಕೆಂಬ ಆಸೆ ಬೆಟ್ಟದಷ್ಟಿದ್ದರೂ ತೂಕವನ್ನು ಸಮತೋಲನದಲ್ಲಿಡಲು ಸಾಧ್ಯವಾಗುವುದಿಲ್ಲ. ಆಧುನಿಕ ಜಗತ್ತಿನ ಜೀವನ ಶೈಲಿ ಹಾಗೂ ಕೆಲವೊಂದು ಆಹಾರ ಕ್ರಮಗಳು ಇದಕ್ಕೆ ಪ್ರಮುಖ ಕಾರಣವಾಗಿದೆ.

ಅತಿಯಾದ ತೂಕ ಹೊಂದಿರುವ ಕೆಲವರಿಗೆ ಏನು ಮಾಡಬೇಕೆಂದು ತೋಚದೆ ದಿಕ್ಕೆಟ್ಟು ಹೋಗುತ್ತಾರೆ. ದೇಹದ ತೂಕ ಕಡಿಮೆ ಮಾಡಲು ಶ್ರಮಪಟ್ಟು ಕಂಗೆಟ್ಟಿರುವವರು ಅನಾವಶ್ಯಕವಾಗಿ ಪರದಾಡುವ ಬದಲು ಕೆಲವೊಂದು ಕ್ರಮಗಳನ್ನು ಅನುಸರಿಸಿಕೊಂಡು ಹೋದರೆ ದೇಹಭಾರವನ್ನು ಕಡಿಮೆ ಮಾಡಿ ಸಮತೋಲನ ಕಾಪಾಡಿಕೊಳ್ಳಬಹುದು. ಇಂತಹ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಪಾಲಿಸಿಕೊಂಡು ಹೋಗಿ. ಮುಂದೆ ನೀವೇ ನಿಮ್ಮ ತೂಕದ ಬಗ್ಗೆ ಅಚ್ಚರಿ ಪಡಬಹುದು.

1. ಸರಿಯಾಗಿ ನಿದ್ದೆ ಮಾಡದಿರುವುದು

1. ಸರಿಯಾಗಿ ನಿದ್ದೆ ಮಾಡದಿರುವುದು

ನಿದ್ದೆಹೀನತೆಯಿಂದ ಬಳಲುತ್ತಿದ್ದರೆ ಅಥವಾ ಸರಿಯಾಗಿ ನಿದ್ದೆ ಮಾಡದಿದ್ದರೆ ತೂಕ ಹೆಚ್ಚಾಗುವ ಸಾಧ್ಯತೆಯಿದೆ. ಸರಿಯಾಗಿ ನಿದ್ದೆ ಮಾಡದ ವ್ಯಕ್ತಿಗಳಲ್ಲಿ ಹಸಿವು ಹೆಚ್ಚಾಗುತ್ತದೆ.

2. ಅಲ್ಕೋಹಾಲ್ ಸೇವನೆ

2. ಅಲ್ಕೋಹಾಲ್ ಸೇವನೆ

ದಿನದ ಕಠಿಣ ಕೆಲಸದ ಬಳಿಕ ಹೆಚ್ಚಿನವರು ಸ್ವಲ್ಪ ಮದ್ಯಪಾನ ಮಾಡುತ್ತಾರೆ ಅಥವಾ ಪಬ್ ಗೆ ಹೋಗುತ್ತಾರೆ. ಇದು ಸ್ವಲ್ಪ ಸಮಯಕ್ಕೆ ಒತ್ತಡ ಕಡಿಮೆ ಮಾಡಿ, ದಣಿವು ಹೋಗಲಾಡಿಸಬಹುದಾದರೂ ಅಲ್ಕೋಹಾಲ್ ಸೇವನೆಯಿಂದ ಹಸಿವು ಹೆಚ್ಚಾಗುತ್ತದೆ.

3. ಬೆಳಗ್ಗಿನ ಉಪಾಹಾರ ಮಾಡದಿರುವುದು:

3. ಬೆಳಗ್ಗಿನ ಉಪಾಹಾರ ಮಾಡದಿರುವುದು:

ಬೆಳಗ್ಗಿನ ಉಪಾಹಾರ ದಿನದ ಅತೀ ಪ್ರಮುಖ ಆಹಾರ. ರಾತ್ರಿಯ ನಿದ್ದೆಯ ಬಳಿಕ ಬೆಳಗಿನ ಉಪಾಹಾರ ದೇಹಕ್ಕೆ ಬೇಕಾಗಿರುವ ಶಕ್ತಿ ತುಂಬುತ್ತದೆ. ಏನೂ ತಿನ್ನದಿದ್ದರೆ ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

4. ಮಿತಿಮೀರಿ ತಿನ್ನುವುದು

4. ಮಿತಿಮೀರಿ ತಿನ್ನುವುದು

ಗುಣಮಟ್ಟದ ಆಹಾರದೊಂದಿಗೆ ಅದರ ಪ್ರಮಾಣವೂ ತುಂಬಾ ಮುಖ್ಯ. ಟೇಬಲ್ ಮೇಲೆ ನಿಮಗಾಗಿ ಇಟ್ಟಿರುವ ಊಟದಲ್ಲಿ ಎಲ್ಲವನ್ನೂ ತಿನ್ನಬೇಕೆಂದಿಲ್ಲ.

5. ಜಿಮ್ ಹೋಗಿಯೇ ವ್ಯಾಯಾಮ ಮಾಡಬೇಕಾಗಿಲ್ಲ

5. ಜಿಮ್ ಹೋಗಿಯೇ ವ್ಯಾಯಾಮ ಮಾಡಬೇಕಾಗಿಲ್ಲ

ಇದು ಪ್ರತಿಯೊಬ್ಬರಿಗೂ ತಿಳಿದದ್ದೇ. ಸದಾ ಟಿವಿ ಮುಂದೆ ಕುಳಿತುಕೊಳ್ಳಬೇಡಿ, ವ್ಯಾಯಾಮ ಮಾಡಿ. ಯಾವುದಾದರೂ ಆಟವಾಡಿ ಅಥವಾ ಮನೆಯಲ್ಲಿಯೇ ವ್ಯಾಯಾಮ ಮಾಡಿದರೂ ಸಾಕು. ಇದರಿಂದ ಹೆಚ್ಚುವರಿ ಕ್ಯಾಲೋರಿ ನಷ್ಟವಾಗುತ್ತದೆ ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವೂ ಮೂಡುತ್ತದೆ.

6. ರಾತ್ರಿ ಊಟದ ಬಳಿಕ ಸಿಹಿ ತಿನ್ನಬೇಡಿ

6. ರಾತ್ರಿ ಊಟದ ಬಳಿಕ ಸಿಹಿ ತಿನ್ನಬೇಡಿ

ರಾತ್ರಿ ಊಟದ ಬಳಿಕ ಸಿಹಿ ತಿನ್ನುವ ಅಭ್ಯಾಸ ಕೆಲವರಲ್ಲಿರುತ್ತದೆ. ಆದರೆ ಇದಕ್ಕೆ ಬದಲು ಒಂದು ಕಪ್ ಟೀ, ಬಿಸಿ ನೀರು ಕುಡಿಯಿರಿ ಅಥವಾ ಕ್ಯಾಲೋರಿ ರಹಿತವಾಗಿರುವ ಏನಾದರೂ ತಿನ್ನಿ. ರಾತ್ರಿ ಊಟದ ಬಳಿಕ ಏನೂ ತಿನ್ನದಿದ್ದರೆ ಮತ್ತಷ್ಟು ಒಳ್ಳೆಯದು.

7. ಹಸಿವಿರುವಾಗ ಶಾಪಿಂಗ್

7. ಹಸಿವಿರುವಾಗ ಶಾಪಿಂಗ್

ಶಾಪಿಂಗ್ ಮತ್ತು ಹಸಿವನ್ನು ಮಿಕ್ಸ್ ಮಾಡಬಾರದು. ನೀವು ಮೊದಲು ಬೇಕಿರುವ ವಸ್ತುಗಳನ್ನು ಬೇಗನೆ ಖರೀದಿಸಬೇಕು. ಇದರ ಬಳಿಕ ಏನಾದರೂ ತಿನ್ನಬೇಕು. ಶಾಪಿಂಗ್ ಗೆ ಹೋಗುವಾಗ ಒಂದು ಸ್ಯಾಂಡ್ ವಿಚ್ ತೆಗೆದುಕೊಂಡು ಹೋಗಿ. ಇದರಿಂದ ಹಸಿವು ತಡೆದುಕೊಂಡು ಶಾಪಿಂಗ್ ಮಾಡಬೇಕೆಂದಿಲ್ಲ.

8. ನೋಡಿದ್ದನ್ನ ತಿನ್ನುವುದು

8. ನೋಡಿದ್ದನ್ನ ತಿನ್ನುವುದು

ಕಚೇರಿ, ವಿಮಾನ ನಿಲ್ದಾಣ ಅಥವಾ ಇನ್ಯಾವುದೋ ಕಡೆಗಳಲ್ಲಿ ನಿಮಗೆ ಹಸಿವಾದರೆ ತಕ್ಷಣ ಕಾಣಿಸುವುದು ಜಂಕ್ ಫುಡ್. ಇದಕ್ಕೆ ಬದಲು ಮನೆಯಲ್ಲೇ ಮಾಡಿದ ಸ್ಯಾಂಡ್ ವಿಚ್, ಹಣ್ಣುಹಂಪಲುಗಳನ್ನು ಜತೆಯಲ್ಲಿಟ್ಟುಕೊಂಡರೆ ಒಳ್ಳೆಯದು.

9. ಹೆಚ್ಚಿನ ಆಹಾರ ಸೇವನೆ

9. ಹೆಚ್ಚಿನ ಆಹಾರ ಸೇವನೆ

ಮನೆಯಲ್ಲಾಗಲಿ ಅಥವಾ ಹೊರಗಡೆಯಾಗಿರಲಿ ನಮಗೆ ಕೊಟ್ಟದ್ದನ್ನೆಲ್ಲಾ ತಿನ್ನುತ್ತೇವೆ. ಸಾಮಾನ್ಯವಾಗಿ ಎಷ್ಟು ತಿನ್ನಬೇಕು ಎನ್ನುವುದನ್ನು ಅರಿತುಕೊಂಡು ಅದನ್ನೇ ಪಾಲಿಸಿ.

10. ಗೊಂದಲಕ್ಕೊಳಗಾಗಬೇಡಿ

10. ಗೊಂದಲಕ್ಕೊಳಗಾಗಬೇಡಿ

ಫ್ಯಾಟ್ ಫ್ರೀ ಮತ್ತು ಕ್ಯಾಲೋರಿ ಫ್ರೀ ಮಧ್ಯೆ ಗೊಂದಲಕ್ಕೀಡಾಗಬೇಡಿ. ಕ್ಯಾಲೋರಿಗಳು ಯಾವತ್ತಿಗೂ ಕ್ಯಾಲೋರಿಗಳೇ. ಸರಿಯಾಗಿ ಪಟ್ಟಿಯನ್ನು ಓದಿ.

11. ಸ್ಯಾಂಡ್ ವಿಚ್ ಗೆ ಮೊಟ್ಟೆ ಹಾಕಿ ತಯಾರಿಸಿದ ಮಸಾಲೆ ಬಳಸಬೇಡಿ

11. ಸ್ಯಾಂಡ್ ವಿಚ್ ಗೆ ಮೊಟ್ಟೆ ಹಾಕಿ ತಯಾರಿಸಿದ ಮಸಾಲೆ ಬಳಸಬೇಡಿ

ದ್ವಿದಳ ಧಾನ್ಯಗಳನ್ನು ಬಳಸಿದ ಮಸಾಲೆ ಬಳಸಿ. ಇದರಿಂದ ಹೆಚ್ಚಿನ ಕ್ಯಾಲೋರಿ ತಿನ್ನುವುದನ್ನು ತಪ್ಪಿಸಬಹುದು. ಹಸಿಹಸಿ ತರಕಾರಿಗಳನ್ನು ಬಳಸಿ ಸ್ಯಾಂಡ್ ವಿಚ್ ರುಚಿಯನ್ನು ಹೆಚ್ಚಿಸಿ.

12. ವಾರಾಂತ್ಯದಲ್ಲಿ ಅತಿಯಾಗಿ ತಿನ್ನುವುದು

12. ವಾರಾಂತ್ಯದಲ್ಲಿ ಅತಿಯಾಗಿ ತಿನ್ನುವುದು

ವಾರಪೂರ್ತಿ ಆಹಾರ ಪಥ್ಯ ಮಾಡಿ ವಾರಾಂತ್ಯದಲ್ಲಿ ನಿಮ್ಮ ಆಹಾರದ ಶಿಸ್ತನ್ನು ಮುರಿದರೆ ಅದು ನೀರಿನ ಮೇಲಿಟ್ಟ ಹೋಮದಂತಾಗುತ್ತದೆ. ಇದರಿಂದ ಪ್ರತೀ ದಿನ ಇಂತಿಷ್ಟೇ ಆಹಾರವನ್ನು ತಿನ್ನುವ ಅಭ್ಯಾಸ ಮಾಡಿ. ಇದರಿಂದ ವಾರಾಂತ್ಯದಲ್ಲಿ ಹೆಚ್ಚು ತಿನ್ನಬೇಕೆಂದಿಲ್ಲ.

13. ಕೃತಕ ಸಿಹಿ

13. ಕೃತಕ ಸಿಹಿ

ಸ್ವಾಭಾವಿಕ ಸಕ್ಕರೆಗಿಂತ ಕೃತಕ ಸಿಹಿ 7 ಸಾವಿರ ಪಟ್ಟು ಸಿಹಿಯಾಗಿರುತ್ತದೆ. ಅಂಗಡಿಗಳಲ್ಲಿ ಮಾರಾಟವಾಗುವ ಏಕದಳ, ವಿಟಮಿನ್ ಮತ್ತು ಸಾಸ್ ಗಳಲ್ಲಿ ಇದನ್ನು ಬಳಸಿರುತ್ತಾರೆ. ಆದರೆ ಇದರ ಬಗ್ಗೆ ಅದರಲ್ಲಿ ಉಲ್ಲೇಖಿಸಿರುವುದಿಲ್ಲ. ನೀವು ಖರೀದಿಸಿದ ತಿಂಡಿಯ ಪೊಟ್ಟಣದಲ್ಲಿ ಸಕ್ರೀನ್, ಆಸ್ಟರ್ಟಮೆ, ಸರ್ಕ್ಲೊಸ್, ನೆಯೊಟಾಮೆಯಂತಹ ಕೃತಕ ಸಹಿಯನ್ನು ಬಳಸಿದ್ದಾರೆಯಾ ಎಂದು ಗಮನಿಸಿ.

14. ತಟ್ಟೆಗೆ ಹಾಕಿ ತಿನ್ನಿ

14. ತಟ್ಟೆಗೆ ಹಾಕಿ ತಿನ್ನಿ

ನೇರವಾಗಿ ಪೊಟ್ಟಣದಿಂದ ತಿನ್ನುವುದರಿಂದ ಎಷ್ಟು ತಿಂದಿದ್ದೇವೆ ಎಂದು ತಿಳಿಯುವುದಿಲ್ಲ. ಪೊಟ್ಟಣದಲ್ಲಿದ್ದ ತಿಂಡಿಯನ್ನು ತಟ್ಟೆಗೆ ಹಾಕಿ ತಿನ್ನಿ. ಆಗ ಆಹಾರದ ಪ್ರಮಾಣ ತಿಳಿಯುತ್ತದೆ.

15. ಗುಂಪಿನಲ್ಲಿ ತಿನ್ನುವುದು

15. ಗುಂಪಿನಲ್ಲಿ ತಿನ್ನುವುದು

ಇತರರೊಂದಿಗೆ ಊಟ ಮಾಡುವಾಗ ನೀವು ಎಷ್ಟು ತಿನ್ನುತ್ತೀರಿ ಎನ್ನುವ ಬಗ್ಗೆ ಲೆಕ್ಕವೇ ಇರಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ನಿಮ್ಮೊಂದಿಗೆ ಊಟ ಮಾಡುವಾಗ ಮತ್ತೊಬ್ಬ ವ್ಯಕ್ತಿಯಿದ್ದರೆ ನೀವು ಸಾಮಾನ್ಯವಾಗಿ ತಿನ್ನುವುದಕ್ಕಿಂತ ಶೇ. 35ರಷ್ಟು ಹೆಚ್ಚು ತಿನ್ನುತ್ತೀರಿ. ನಾಲ್ಕು ಮಂದಿಯೊಂದಿಗೆ ಊಟ ಮಾಡುತ್ತಿದ್ದರೆ ನೀವು ಶೇ. 75ರಷ್ಟು ಹೆಚ್ಚಿಗೆ ತಿನ್ನುತ್ತೀರಿ. ಏಳು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳೊಂದಿಗೆ ತಿಂದರೆ ಶೇ. 96ರಷ್ಟು ಹೆಚ್ಚು ತಿನ್ನುತ್ತೀರಿ.

ಸಾಮಾನ್ಯವಾಗಿ ವ್ಯಕ್ತಿಯೊಬ್ಬ ವಾರದಲ್ಲಿ ಮೂರು ಸಲ ಯಾರೊಂದಿಗಾದರೂ ಊಟ ಮಾಡುತ್ತಾನೆ. ಇದರ ಪ್ರಕಾರ ವರ್ಷದಲ್ಲಿ 72 ಸಾವಿರ ಕ್ಯಾಲೋರಿ ನಿಮ್ಮ ದೇಹ ಸೇರಿರುತ್ತದೆ. ಇದು ನಿಮ್ಮ ದೇಹದ ತೂಕವನ್ನು ಹತ್ತು ಕೆ.ಜಿಯಷ್ಟು ಹೆಚ್ಚಿಸುತ್ತದೆ.

ಇದನ್ನೆಲ್ಲಾ ಸರಿಯಾಗಿ ಅರಿತುಕೊಂಡರೆ ನಿಮ್ಮ ತೂಕ ಕಡಿಮೆ ಮಾಡಲು ಶ್ರಮ ಪಡಬೇಕೆಂದಿಲ್ಲ.

English summary

Everyday habits that adds to your weight

These are normal, everyday stuff that we do quite unawares that it is having an impact on our metabolism. Read on to find out what it is that you need to be careful of to avoid the unwanted weight gain.
X
Desktop Bottom Promotion