For Quick Alerts
ALLOW NOTIFICATIONS  
For Daily Alerts

ಮಿದುಳಿಗೆ ಅತ್ಯಾವಶ್ಯಕ ಈ 4 ವಿಟಮಿನ್ಸ್

|
Essential Vitamins To Boost Brain Function
ಪೋಷಕಾಂಶಗಳ ಕೊರತೆ ಉಂಟಾದರೆ ಮಿದುಳಿನ ಸಾಮರ್ಥ್ಯ ಕಡಿಮೆಯಾಗುತ್ತಾ ಬರುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಸಲು ಮಿದುಳಿಗೆ ಕೆಲಸ ಕೊಡುವ ಜೊತೆಗೆ, ಮಿದುಳು ಸಮರ್ಥವಾಗಿ ಕೆಲಸ ಮಾಡಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬೇಕು.

ಇಲ್ಲಿ ನಾವು ಮಿದುಳು ಚುರುಕಾಗಿರಲು ಅವಶ್ಯಕವಾದ ವಿಟಮಿನ್ ಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

1. ವಿಟಮಿನ್ ಇ: ವಿಟಮಿನ್ ಇ ಮಾತ್ರೆಗಳು ಇರುತ್ತದೆ. ಬಾದಾಮಿ, ಸೊಪ್ಪು, ಸೂರ್ಯಕಾಂತಿ ಬೀಜ ಇವುಗಳಲ್ಲಿ ವಿಟಮಿನ್ ಇ ಅಧಿಕವಿರುತ್ತದೆ.

2. ವಿಟಮಿನ್ ಬಿ: ಮಕ್ಕಳ ಮಿದುಳಿನ ಬೆಳವಣಿಗೆಗೆ ವಿಟಮಿನ್ ಬಿ ತುಂಬಾ ಅವಶ್ಯಕ. ಮಕ್ಕಳ ಬುದ್ಧಿಮತಿ ಚುರುಕಾಗಲು, ದೊಡ್ಡವರಲ್ಲಿ ಜ್ಞಾಪಕ ಶಕ್ತಿಗೆ ವಿಟಮಿನ್ ಬಿ ಅವಶ್ಯಕ. ಮೊಟ್ಟೆ, ಮಾಂಸ, ಪಾಲಾಕ್, ಅಣಬೆ ಇವುಗಳಲ್ಲಿ ವಿಟಮಿನ್ ಇರುತ್ತದೆ.

3. ವಿಟಮಿನ್ ಬಿ12: ಇದರ ಕೊರತೆ ಉಂಟಾದರೆ ಮಿದುಳಿನ ನರಕ್ಕೆ ಹಾನಿಯುಂಟಾಗಿ ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು. ಈ ವಿಟಮಿನ್ ಬಿ ಅಣಬೆ, ಮಾಂಸ, ಮೀನುಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ.

4. ವಿಟಮಿನ್ ಬಿ6: ವಿಟಮಿನ್ ಬಿ6 ಕಡಿಮೆಯಾದರೆ ತಾತ್ಕಲಿಕವಾಗಿ ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು (short time memory loss). ಬೀನ್ಸ್, ಕ್ಯಾರೆಟ್, ಧಾನ್ಯ ಹಾಗೂ ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಬಿ6 ಅಧಿಕವಾಗಿದೆ.

English summary

Essential Vitamins To Boost Brain Function | Tips For Health | ಮೆದುಳಿಗೆ ಅವಶ್ಯಕ ಈ 4ವಿಟಮಿನ್ಸ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Proper nutrition is extremely essential for the brain to function in a right way. If there is a lack of nutritious in our diet , it not only effects our health system but also reduces the function of our brain.
X
Desktop Bottom Promotion