For Quick Alerts
ALLOW NOTIFICATIONS  
For Daily Alerts

ತುರ್ತು ಚಿಕಿತ್ಸೆ ವಿಧಾನಗಳು ನಿಮಗೆ ತಿಳಿದಿರಲಿ

|

ಪ್ರತಿಯೊಬ್ಬರು ಡಾಕ್ಟರು ಆಗಲು ಸಾಧ್ಯವಿಲ್ಲ, ಆದರೆ ಪ್ರತಿಯೊಬ್ಬರು ಕೆಲವೊಂದು ತುರ್ತು ಚಿಕಿತ್ಸೆಯ ವಿಧಾನಗಳನ್ನು ಕಲಿತರೆ ಕೆಲವೊಮ್ಮೆ ವ್ಯಕ್ತಿಯ ಪ್ರಾಣ ಉಳಿಸಲು ಸಾಧ್ಯವಾಗಬಹುದು. ಅದರಲ್ಲೂ ಹೃದಯಾಘಾತ, ಸ್ಟ್ರೋಕ್ ಗೆ ಒಳಗಾದ ವ್ಯಕ್ತಿಗಳ ಪ್ರಾಣವನ್ನು ಉಳಿಸುವಲ್ಲಿ ನಾವು ಕಲಿತ ತುರ್ತು ಚಿಕಿತ್ಸೆ ನೆರವಿಗೆ ಬರುತ್ತದೆ.

ಆದ್ದರಿಂದಲೇ ತುರ್ತು ಚಿಕಿತ್ಸೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲಿ ನಾವು ಪ್ರತಿಯೊಬ್ಬರು ಅವಶ್ಯಕವಾಗಿ ಯಾವೆಲ್ಲಾ ಬಗೆಯ ತುರ್ತು ಚಿಕಿತ್ಸೆ ವಿಧಾನಗಳನ್ನು ಕಲಿತರೆ ಒಳ್ಳೆಯದು ಎಂದು ಹೇಳಿದ್ದೇವೆ ನೋಡಿ:

 ಸಿ ಪಿ ಆರ್ (Cardiopulmonary Resuscitation)

ಸಿ ಪಿ ಆರ್ (Cardiopulmonary Resuscitation)

ಯಾವಾಗ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೇ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರೆ, ಅವರಿಗೆ ಹೃದಯಾಘಾತವಾಗಿರುತ್ತದೆ. ಹೀಗೆ ಉಂಟಾದಾಗ ವೈದ್ಯರ ಬಳಿ ಕೊಂಡೊಯ್ಯುವಷ್ಟರಲ್ಲಿ ಅಪಾಯ ಉಂಟಾಗಬಹುದು. ಅದನ್ನು ತುರ್ತು ಚಿಕಿತ್ಸೆ ವಿಧಾನದಿಂದ ತಡೆಯಬಹುದು. ಹೃದಯಾಘಾತವಾದರೆ ಹೃದಯ ತನ್ನ ಕೆಲಸವನ್ನು ಕ್ಷಣ ಕಾಲ ನಿಲ್ಲಿಸಿ ಬಿಡುತ್ತದೆ. ಈ ಸಂದರ್ಭದಲ್ಲಿ ಅವರ ಹೃದಯವನ್ನು ಬಲವಾಗಿ ಪ್ರೆಸ್ ಮಾಡಬೇಕು, ಈ ರೀತಿ ಮಾಡಿದಾಗ ಹೃದಯ ತನ್ನ ಕೆಲಸ ಪ್ರಾರಂಭಿಸುತ್ತದೆ. ನಂತರ ಹೃದಯಾಘಾತವಾದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಿರಿ.

ಅವರ ಬಾಯಿ ಮೇಲೆ ನಿಮ್ಮ ಬಾಯಿ ಇಟ್ಟು ಉಸಿರಾಟಕ್ಕೆ ಸಹಯ ಮಾಡುವುದು

ಅವರ ಬಾಯಿ ಮೇಲೆ ನಿಮ್ಮ ಬಾಯಿ ಇಟ್ಟು ಉಸಿರಾಟಕ್ಕೆ ಸಹಯ ಮಾಡುವುದು

ವ್ಯಕ್ತಿ ಕುಸಿದು ಬಿದ್ದಾಗ ಅಥವಾ ಅಸ್ತಮಾ ಅಟ್ಯಾಕ್ ಆದಾಗ ಅವರಿಗೆ ಉಸಿರಾಟಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಯ ಬಾಯಿಗೆ ನಮ್ಮ ಬಾಯಿ ಇಟ್ಟು ಗಾಳಿ ಊದಬೇಕು. ಹೀಗೆ ಮಾಡಿದರೆ ಅವರು ಉಸಿರಾಡಲು ಪ್ರಾರಂಭಿಸುತ್ತಾರೆ.

ಬೆಂಕಿ ಅಪಘಾತವಾದಾಗ

ಬೆಂಕಿ ಅಪಘಾತವಾದಾಗ

ಯಾವುದಾದರೂ ವ್ಯಕ್ತಿ ಬೆಂಕಿ ಅಪಘಾತದಲ್ಲಿ ಸಿಲುಕಿದರೆ ಆ ವ್ಯಕ್ತಿಯನ್ನು ಕಂಬಳಿಯಿಂದ ಸುತ್ತಿ ಬೆಂಕಿ ನಂದಿಸಿ. ಅವರು ಧರಿಸಿದ ಬಟ್ಟೆ ಎಳೆಯಲು ಹೋಗಬೇಡಿ, ಚರ್ಮ ಜೊತೆಯೇ ಕಿತ್ತು ಬರುವುದು. ನಂತರ ಕೋಲ್ಡ್ ಕಂಪ್ರೆಶನ್ ಅಥವಾ ತಣ್ಣೀರನ್ನು ಅವರ ಮೇಲೆ ಹರಿಸಿ. ತುಂಬಾ ಸುಟ್ಟ ಗಾಯವಾಗಿದ್ದರೆ ಅವರನ್ನು ಬಾಳೆ ಎಲೆಯಲ್ಲಿ ಸುತ್ತಿ.

ದೊಡ್ಡ ಗಾಯವಾಗಿ ರಕ್ತ ಸುರಿಯಲು ಪ್ರಾರಂಭಿಸಿದಾಗ

ದೊಡ್ಡ ಗಾಯವಾಗಿ ರಕ್ತ ಸುರಿಯಲು ಪ್ರಾರಂಭಿಸಿದಾಗ

ತುಂಬಾ ಗಾಯವಾದಾಗ ಆ ಗಾಯವನ್ನು ಶುಚಿಗೊಳಿಸಿ, ಆಂಟಿ ಸೆಪ್ಟಿಕ್ (anti septic) ಹಚ್ಚಿ ರಕ್ತ ಹರಿಯದಿರಲು ಗಾಯದ ಸ್ವಲ್ಪ ಮೇಲ್ಭಾಗಕ್ಕೆ ಬಿಗಿ ಗಂಟು ಹಾಕಿದರೆ ರಕ್ತ ಹೆಚ್ಚಾಗಿ ಹರಿಯುವುದಿಲ್ಲ.

ಹಾವು ಕಚ್ಚಿದಾಗ

ಹಾವು ಕಚ್ಚಿದಾಗ

ಹಾವು ಕಚ್ಚಿದರೆ ಒಂದೋ ಆ ಗಾಯವನ್ನು ಕಚ್ಚಿ ರಕ್ತವನ್ನು ಹೀರಿ ಉಗಿಯಬೇಕು. ಈ ರೀತಿ ಮಾಡುವಾಗ ಎಚ್ಚರ, ವಿಷ ತೆಗೆಯುವ ವ್ಯಕ್ತಿಯ ಬಾಯಿಯಲ್ಲಿ ಯಾವುದೇ ಗಾಯಗಳಿರಬಾರದು. ಇಲ್ಲದಿದ್ದರೆ ಹಾವು ಕಚ್ಚಿದ ಗಾಯದ ಮೇಲ್ಭಾಗಕ್ಕೆ ಬಿಗಿಯಾದ ಗಂಟು ಹಾಕಬೇಕು (ರಕ್ತ ಸಂಚಾರವಾಗದಂತೆ). ಆಗ ವಿಷ ದೇಹವನ್ನು ಸುಲಭವಾಗಿ ದೇಹದಲ್ಲಿ ಹರಡುವುದಿಲ್ಲ. ನಂತರ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯದ್ದರೆ ವ್ಯಕ್ತಿಯನ್ನು ಬದುಕಿಸಬಹುದು.

ಜೇನು ನೊಣ ಕಚ್ಚಿದರೆ

ಜೇನು ನೊಣ ಕಚ್ಚಿದರೆ

ಜೇನು ನೊಣಗಳು ಆಕ್ರಮಣ ಮಾಡಿದರೆ ಪ್ರಾಣಕ್ಕೆ ಅಪಾಯ ಉಂಟಾಗುವುದು. ಅದನ್ನು ತಡೆಯಲು ತುರ್ತು ಚಿಕಿತ್ಸೆ ಅವಶ್ಯಕ. ಹೀಗೆ ಹಚ್ಚಿದಾಗ ಮೊದಲು ಕೀಯನ್ನು ಕಚ್ಚಿದ ಭಾಗಕ್ಕೆ ಉಜ್ಜಿ, ನಂತರ ಕೀಯನ್ನು ಸ್ವಲ್ಪ ಬಿಸಿ ಮಾಡಿ ಕಚ್ಚಿದ ಭಾಗಕ್ಕೆ ಇಡಬೇಕು.

 ಗಂಟಲಿನಲ್ಲಿ ಏನಾದರೂ ಸಿಕ್ಕಿ ಹಾಕಿ ಕೊಂಡರೆ

ಗಂಟಲಿನಲ್ಲಿ ಏನಾದರೂ ಸಿಕ್ಕಿ ಹಾಕಿ ಕೊಂಡರೆ

ಕೆಲವೊಮ್ಮೆ ಏನಾದರೂ ನುಂಗಿ ಅದು ಗಂಟಲಿನಲ್ಲಿ ಸಿಕ್ಕಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಆ ವ್ಯಕ್ತಿಯ ಬೆನ್ನಿನ ಮೇಲೆ ತಟ್ಟಿ. ಇದರಿಂದ ಆ ವ್ಯಕ್ತಿ ಉಸಿರಾಡುವಂತಾಗುವುದು.

ತಲೆಸುತ್ತಿದಾಗ

ತಲೆಸುತ್ತಿದಾಗ

ತಲೆ ಸುತ್ತಿದ ವ್ಯಕ್ತಿಗಳನ್ನು ತಕ್ಷಣ ನೇರವಾಗಿ ಮಲಗಿಸಿ. ಒಂದು ವೇಳೆ ತಲೆಸುತ್ತಿ ಬಿದ್ದರೆ ಅವರನ್ನು ಎತ್ತಿ ಕೂರಿಸುವ ಪ್ರಯತ್ನ ಮಾಡಬೇಡಿ, ಅದರ ಬದಲು ತಲೆ ನೆಲ ಅಥವಾ ಬೆಂಚಿಗೆ ತಾಗುವಂತೆ ಮಲಗಿಸಿ. ಈ ರೀತಿ ಮಾಡಿದರೆ ಸ್ವಲ್ಪ ಹೊತ್ತಿಗೆ ಅವರಿಗೆ ಪ್ರಜ್ಞೆ ಮರುಕಳಿಸುವುದು.

English summary

Essential First Aid Tips

First aid tips are essential knowledge for everyone. We need to know how to give first aid for our own sake and also of the others. Sometimes, first aid is what makes the difference between life and death.
Story first published: Wednesday, September 11, 2013, 12:12 [IST]
X
Desktop Bottom Promotion