For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ತಡೆಗಟ್ಟುವ ಡಯಟ್ ಪಾಲಿಸಲು ಬಯಸುವಿರಾ?

By ಲೇಖಕ
|

ಕ್ಯಾನ್ಸರ್ ಕಾಯಿಲೆ ಅಪಾಯಕಾರಿಯಾದ ಕಾಯಿಲೆಯಾಗಿದ್ದರೂ ಈ ಕಾಯಿಲೆಗೆ ಮದ್ದು ಇದೆ. ಆದರೆ ಕ್ಯಾನ್ಸರ್ ಬಂದ ನಂತರ ಚಿಕಿತ್ಸೆ ತಗೆದುಕೊಂಡರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ತಗುಲುವ ವೆಚ್ಚ ಕೂಡ ಅಧಿಕ. ಆದರೆ ಈ ಕ್ಯಾನ್ಸರ್ ಕಾಯಿಲೆಯನ್ನು ಕೆಲವೊಂದು ವಿಧಾನಗಳ ಮುಖಾಂತರ ಬರದಂತೆ ತಡೆಯಬಹುದು. ಕ್ಯಾನ್ಸರ್ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗದಂತ ಮಾಡುವ ಸಾಮರ್ಥ್ಯ ಕೂಡಾ ನಮ್ಮಲ್ಲಿಯೇ ಇದೆ. ಅದಕ್ಕಾಗಿ ಏನು ಮಾಡಬೇಕೆಂದು ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

1. ಕಡಿಮೆ ಕೊಬ್ಬಿನಂಶವಿರುವ ಆಹಾರಕ್ರಮ

1. ಕಡಿಮೆ ಕೊಬ್ಬಿನಂಶವಿರುವ ಆಹಾರಕ್ರಮ

ಕ್ಯಾನ್ಸರ್ ಅನ್ನೂ ಒಳಗೊಂಡಂತೆ, ಸ್ಥೂಲಕಾಯತೆ ಅಥವಾ ಬೊಜ್ಜು ಎಂಬುದು ಅನೇಕ ಗಂಭೀರವಾದ ರೋಗಗಳಿಗೆ ಮೂಲಕಾರಣ ಎಂಬುದು ಸರ್ವವಿಧಿತ. ಬೆಣ್ಣೆ ಮತ್ತು ಗಿಣ್ಣಿನoತಹ ಕೊಬ್ಬಿನ ಪದಾರ್ಥಗಳನ್ನು ಕಡಿಮೆ ಸೇವಿಸುವುದರ ಮೂಲಕ ನೀವು ಪ್ರತಿದಿನ ತೆಗೆದುಕೊಳ್ಳುವ ಕ್ಯಾಲರಿಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಹಾಗೂ ತನ್ಮೂಲಕ ಇದು "ಆರೋಗ್ಯಯುತರಾದ ನಿಮ್ಮನ್ನು" ರೂಪಿಸುವಲ್ಲಿ ತನ್ನ ಕಾಣಿಕೆಯನ್ನು ಸಲ್ಲಿಸುತ್ತದೆ.

3 . ಮಾಂಸವನ್ನು ವರ್ಜಿಸಿರಿ

3 . ಮಾಂಸವನ್ನು ವರ್ಜಿಸಿರಿ

ಹಸಿರು ಸಸ್ಯಾಹಾರ ಪದ್ಧತಿಯನ್ನು ನಿಮ್ಮದಾಗಿಸಿಕೊಂಡು, ಮಾಂಸಾಹಾರವನ್ನು, ಅದರಲ್ಲೂ ವಿಶೇಷವಾಗಿ ಸಂಸ್ಕರಿಸಿದ ಮಾಂಸಾಹಾರವನ್ನು ತ್ಯಜಿಸಿವುದು, ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಕಾರಿಯಾಗುವ ಆಹಾರಪದ್ಧತಿಯನ್ನು ನಿಮ್ಮದಾಗಿಸಿಕೊಳ್ಳುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಮಾಂಸಾಹಾರದ ಸೇವನೆಯು ಕರುಳಿನ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ.

5. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ

5. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ

ನಿಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ಪದಾರ್ಥಗಳ ಸೇವನೆಯು ನೀವು ಕ್ಯಾನ್ಸರ್ ಅನ್ನೂ ಒಳಗೊಂಡಂತೆ ಯಾವುದೇ ರೋಗಗಳ ವಿರುದ್ಧ ಹೋರಾಡಲು ನಿಮಗೆ ಸಹಕರಿಸುತ್ತದೆ. ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾದ ಸೇಬುಗಳoತಹ ವಸ್ತುಗಳನ್ನು ನಿಮ್ಮ ಆಹಾರಕ್ರಮದ ಭಾಗವಾಗಿಸಿಕೊಳ್ಳಿರಿ, ಯಥೇಚ್ಚವಾಗಿ ನೀರನ್ನು ಕುಡಿಯಿರಿ. ಶುoಠಿ, ಬೆಳ್ಳುಳ್ಳಿಯಂತಹ ಖಾರವಾದ ವಸ್ತುಗಳು, ರೋಗಗಳಿಂದ ನಿಮ್ಮ ಶರೀರವನ್ನು ರಕ್ಷಿಸುವುದಕ್ಕಾಗಿ, ನಿಮ್ಮ ಆಹಾರಕ್ರಮದಲ್ಲಿ ಅವಶ್ಯ ಸೇರಿಸಲ್ಪಡಬೇಕು.

7. ಆಲ್ಕೋಹಾಲ್ ಬಳಕೆಯನ್ನು ನಿಯಂತ್ರಿಸಿರಿ

7. ಆಲ್ಕೋಹಾಲ್ ಬಳಕೆಯನ್ನು ನಿಯಂತ್ರಿಸಿರಿ

ಸಾಮಾನ್ಯವಾಗಿ ಯಾವುದನ್ನೇ ಆಗಲಿ, ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಧಕ್ಕೆಯಾಗುವುದೇ ಹೆಚ್ಚು (ಹೆಚ್ಚಾದರೆ ಅಮೃತವೂ ವಿಷ ಎಂಬ ಗಾದೆಯಂತೆ). ಆಲ್ಕೋಹಾಲ್ ಕೂಡ ಇದರಿಂದ ಹೊರತಾಗಿಲ್ಲ. ಅಳತೆಮೀರಿದ ಆಲ್ಕೋಹಾಲ್ ಸೇವನೆಯು ಕ್ಯಾನ್ಸರ್ ನ ಅಪಾಯವನ್ನು, ನಿರ್ಧಿಷ್ಟವಾಗಿ ಕರುಳು ಮತ್ತು ಗುದದ್ವಾರದ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ.

8 . ಸೋಯಾ ಮತ್ತು ಕ್ಯಾಲ್ಸಿಯಂ ನಿಂದ ಸಮೃದ್ಧವಾದ ಉತ್ಪನ್ನಗಳನ್ನು ಬಳಸಿರಿ

8 . ಸೋಯಾ ಮತ್ತು ಕ್ಯಾಲ್ಸಿಯಂ ನಿಂದ ಸಮೃದ್ಧವಾದ ಉತ್ಪನ್ನಗಳನ್ನು ಬಳಸಿರಿ

ಕ್ಯಾಲ್ಸಿಯಂ ಭರಿತ ಆಹಾರವಸ್ತುಗಳು, ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುವ ಆಹಾರಪದಾರ್ಥಗಳೆಂದು ಗುರುತಿಸಲ್ಪಟ್ಟಿವೆ. ಸೋಯಾ ಪ್ರೋಟೀನ್ ನ ಒಂದು ಸಮೃದ್ಧ ಅಗರವಾಗಿದ್ದು, ಇದು ಮಾರುಕಟ್ಟೆಯಲ್ಲಿ ಸ್ವಾದಭರಿತ ಸೋಯಾ ಹಾಲು, ಸೋಯ ತಿನಿಸುಗಳು ಮೊದಲಾದ ವಿವಿಧ ಪ್ರಕಾರಗಳಲ್ಲಿ ಲಭ್ಯವಿವೆ. ರೋಗವನ್ನು ತಡೆಗಟ್ಟಲು ಸಹಕಾರಿಯಾಗುವಂತೆ ನೀವು ನಿಮ್ಮ ಆಹಾರಕ್ರಮದಲ್ಲಿ yogurt, ಹಾಲು, ಬಾಳೆಹಣ್ಣುಗಳು, ಮತ್ತು ಇತರ ಕ್ಯಾಲ್ಸಿಯಂ ಭರಿತ ಆಹಾರಪದಾರ್ಥಗಳನ್ನು ಸೇರಿಸಿಕೊಳ್ಳಲೇಬೇಕು.

X
Desktop Bottom Promotion