For Quick Alerts
ALLOW NOTIFICATIONS  
For Daily Alerts

ಹಣ್ಣುಗಳನ್ನು ಊಟಕ್ಕೆ ಮುಂಚೆ ತಿಂದರೆ ಹೆಚ್ಚು ಆರೋಗ್ಯಕರ

|

ಹಣ್ಣುಗಳನ್ನು ಊಟ ಆದ ನಂತರ ತಿನ್ನುವಿರಾ? ಊಟಕ್ಕಿಂತ ಮೊದಲು ತಿನ್ನುವಿರಾ? ಹೆಚ್ಚಿನವರು ಊಟ ಆದ ನಂತರ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಹಣ್ಣಗಳನ್ನು ಊಟಕ್ಕಿಂತ ಮೊದಲು ತಿಂದರೆ ಒಳ್ಳೆಯದು .

ಊಟಕ್ಕೆ ಮೊದಲೇ ಹಣ್ಣನಬ್ನು ಏಕೆ ತಿನ್ನಬೇಕು? ಊಟದ ನಂತರ ತಿಂದರೆ ಏನಾಗುತ್ತದೆ ಎಂದು ತಿಳಿಯಲು ಮುಂದೆ ಓದಿ:

Eat Fruits Before Meals For Better Health

1. ಊಟಕ್ಕೆ ಅರ್ಧ ಗಂಟೆ ಮೊದಲು ಹಣ್ಣಗಳನ್ನು ತಿನ್ನಿ. ಹೊಟ್ಟೆ ಹಸಿದಾಗ ಹಣ್ಣು ತಿಂದರೆ ನಮ್ಮ ದೇಹವು ಹಣ್ಣಿನಲ್ಲಿರುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಊಟದ ನಂತರ ತಿನ್ನುವುದಾರೆ 1 ಗಂಟೆಯ ಬಳಿಕ ತಿನ್ನಿ. ಊಟದ ಜೊತೆ ಅಥವಾ ಊಟ ಮಾಡಿದ ತಕ್ಷಣ ಹಣ್ಣು ತಿಂದರೆ ದೇಹದ ತೂಕ ಹೆಚ್ಚಾಗುವುದು.

2. ಬೆಳಗ್ಗೆ ಒಂದು ಲೋಟ ಫ್ರೂಟ್ ಜ್ಯೂಸ್ ಕುಡಿಯುವುದು ಅಥವಾ ಹಣ್ಣು ತಿನ್ನುವುದು ಒಳ್ಳೆಯದು. ಹಣ್ಣುಗಳನ್ನು ಬೆಳಗ್ಗೆ ತಿಂದರೆ ದೇಹಕ್ಕೆ ಶಕ್ತಿ ಹೆಚ್ಚು ದೊರೆಯುವುದರಿಂದ ದಿನವಿಡೀ ಚಟುವಟಿಕೆಯಿಂದ ಕೆಲಸ ಮಾಡಬಹುದು.

3. ಹಣ್ಣುಗಳನ್ನು ಕತ್ತರಿಸಿ ಐಸ್ ಕ್ರೀಮ್ ನಲ್ಲಿ ಹಾಕಿ ತಿಂದರೆ ದೇಹದ ತೂಕ ಹೆಚ್ಚಾಗುವುದು. ಹಣ್ಣುಗಳ ಸಂಪೂರ್ಣ ಗುಣವನ್ನು ಪಡೆಯಲು ಹಾಗೇ ತಿನ್ನಿ ಅಥವಾ ಜ್ಯೂಸ್ ಮಾಡಿ ಕುಡಿಯಿರಿ.

4. ಶೀತಲೀಕರಣ ಮಾಡಿಟ್ಟ ಹಣ್ಣುಗಳನ್ನು ತಿನ್ನಬೇಡಿ. ಶೀತಲೀಕರಣ ಮಾಡಿದ ಹಣ್ಣುಗಳಲ್ಲಿ ಸಕ್ಕರೆಯಂಶ ಅಧಿಕವಿರುತ್ತದೆ.

5. ಬೆಳಗ್ಗೆ ಖಾಲೀ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿಂದರೆ ನಮ್ಮ ದೇಹವು ಆ ಹಣ್ಣುಗಳಲ್ಲಿರುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ.

English summary

Eat Fruits Before Meals For Better Health | Tips For Health | ಊಟಕ್ಕೆ ಮೊದಲು ಹಣ್ಣುಗಳನ್ನು ತಿನ್ನಬೇಕು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Many of us fail to understand that fruits are not meant to be eaten after the meal as it causes digestive problems. Here are some of the main reasons as to why fruits should be eaten before the meal.
X
Desktop Bottom Promotion