For Quick Alerts
ALLOW NOTIFICATIONS  
For Daily Alerts

ಸ್ಕಿನ್ ಕ್ಯಾನ್ಸರ್ ನ ಪ್ರಾರಂಭಿಕ ಲಕ್ಷಣಗಳು

|

ಸ್ಕಿನ್ ಕ್ಯಾನ್ಸರ್ ಅನ್ನು ಅದರ ಮೊದಲನೇ ಹಂತದಲ್ಲಿಯೇ ಗುರುತಿಸಬಹುದು. ಸ್ಕಿನ್ ಕ್ಯಾನ್ಸರ್ ಉಂಟಾದರೆ ನಮ್ಮ ದೇಹದಲ್ಲಿ ಅಂದರೆ ತ್ವಚೆಯಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರುತ್ತದೆ.

ಸ್ಕಿನ್ ಕ್ಯಾನ್ಸರ್ ಬಂದಾಗ ತ್ವಚೆಯ ಬಣ್ಣ ಬದಲಾಗುತ್ತದೆ, ಉರಿ ಕಂಡು ಬರುವುದು, ಕಪ್ಪು ಕಲೆಗಳು ಕಂಡು ಬರುವುದು. ಸ್ಕಿನ್ ಕ್ಯಾನ್ಸರ್ ನಲ್ಲಿ 2 ವಿಧ. 1. ಮೆಲನೊಮ(melanoma) 2. ನಾನ್ ಮೆಲನೊಮ(non-melaoma). ಸೂರ್ಯನ ನೇರಳಾತೀತ ಕಿರಣಗಳು ತ್ವಚೆ ಕ್ಯಾನ್ಸರ್ ಬರಲು ಪ್ರಮುಖ ಕಾರಣ. ಅದರಲ್ಲೂ non-melaoma ಕ್ಯಾನ್ಸರ್ ಸುಲಭದಲ್ಲಿ ಗುಣವಾಗುವುದಿಲ್ಲ. ತ್ವಚೆ ಕ್ಯಾನ್ಸರ್ ಅನ್ನು ಮೊದಲನೇ ಹಂತದಲ್ಲಿ ಕಂಡು ಹಿಡಿದರೆ ಸುಲಭವಾಗಿ ಗುಣ ಪಡಿಸಬಹುದು.

ತ್ವಚೆ ಕ್ಯಾನ್ಸರ್ ಬಂದರೆ ಮೊದಲಿಗೆ ದೇಹದಲ್ಲಿ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತದೆ:

ಗುಳ್ಳೆ(Spot)

ಗುಳ್ಳೆ(Spot)

ತ್ವಚೆಯಲ್ಲಿ ಗುಳ್ಳೆಗಳು ಕಂಡು ಬಂದು 4 ವಾರಗಳಾದರೂ ಗುಣವಾಗಿಲ್ಲವೇ , ಅದನ್ನು ಕಡೆಗಣಿಸಬೇಡಿ. ಅದು ತ್ವಚೆ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಈ ಗುಳ್ಳೆಗಳು ನೋವಿನಿಂದ ಕೂಡಿರುತ್ತದೆ ಮತ್ತು ಅದರಿಂದ ರಕ್ತ ಕೂಡ ಸೋರಬಹುದು.

ಇಸಬು, ಚರ್ಮದ ಉರಿಯೂತ(Eczema)

ಇಸಬು, ಚರ್ಮದ ಉರಿಯೂತ(Eczema)

ಇದು ಕೂಡ ತ್ವಚೆ ಕ್ಯಾನ್ಸರ್ ನ ಒಂದು ಲಕ್ಷಣವಾಗಿದೆ. ಹಾಗಂತ ಚರ್ಮದ ಉರಿಯೂತ ಕಾಣಿಸಿಕೊಂಡ ತಕ್ಷಣ ಕ್ಯಾನ್ಸರ್ ಇರಬಹುದೆಂದು ಭಯ ಬೀಳಬೇಡಿ. ವೈದ್ಯರನ್ನು ಕಾಣಿ. ಅಂಗೈ, ಮೊಣಕೈ, ಮಣಿಗಂಟು ಇವುಗಳಲ್ಲಿ ಉರಿಯೂತ ಕಂಡು ಬರುವುದು.

ಕೆಂಪು ಗುಳ್ಳೆಗಳು(Rosacea)

ಕೆಂಪು ಗುಳ್ಳೆಗಳು(Rosacea)

ಮೂಗು, ಕೆನ್ನೆ, ಗಲ್ಲ, ಹಣೆ, ಕಣ್ಣು ಕೆಂಪಾಗುವುದು, ಗುಳ್ಳೆ ಬಂದು ಕೀವು ಕೂಡ ಕಂಡು ಬರುವುದು.

ಮಚ್ಚೆ

ಮಚ್ಚೆ

ಮಚ್ಚೆ ಬಂದ ತಕ್ಷಣ ಹೆದರಬೇಕಾಗಿಲ್ಲ, ಆದರೆ ಆ ಮಚ್ಚೆ ದೊಡ್ಡದಾದರೆ ಮಾತ್ರ ಚಿಂತಿಸಬೇಕು. ಅದರಲ್ಲೂ ಮಚ್ಚೆಯ ಸುತ್ತಲಿನ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ರೀತಿ ಕಂಡು ಬಂದರೆ ನಿರ್ಲಕ್ಷ್ಯ ತೋರಬೇಡಿ.

 ಊದಿಕೊಳ್ಳುವುದು

ಊದಿಕೊಳ್ಳುವುದು

ಮೈಯಲ್ಲಿ ಎದ್ದ ಗುಳ್ಳೆಗಳು ನೀರು ತುಂಬಿಕೊಂಡು, ಕೀವು ತುಂಬಿದರೆ ತ್ವಚೆ ಕ್ಯಾನ್ಸರ್ ಉಂಟಾಗುವುದು.

ಅಲರ್ಜಿ

ಅಲರ್ಜಿ

ಕೆಲವೊಮ್ಮೆ ಬೇರೆಯದೆ ಕಾರಣಗಳಿಂದ ತ್ವಚೆ ಅಲರ್ಜಿ ಉಂಟಾಗಬಹುದು. ಆದರೆ ಅಲರ್ಜಿ ಬಂದು ಕಮ್ಮಿಯಾಗದಿದ್ದರೆ ವೈದ್ಯರನ್ನು ಕಂಡು ಅಲರ್ಜಿ ಏಕೆ ಬಂತು ಎಂದು ತಿಳಿದುಕೊಳ್ಳಿ.

English summary

Early Signs Of Skin Cancer

Skin colour change, rashes, discoloration, inflammation and dark spots can be one of the major signs or skin cancer. If you keep a track of your skin, you can easily find the slight changes that start occurring due to this cancer.
X
Desktop Bottom Promotion