For Quick Alerts
ALLOW NOTIFICATIONS  
For Daily Alerts

ಎಚ್ ಐವಿಯ ಆರಂಭಿಕ ಲಕ್ಷಣಗಳು

By Hemanth Amin
|

ಇಮ್ಯುನೋ ಡಿಫಿಶಿಯನನ್ಸಿ ವೈರಸ್ ಎಂದು ಕರೆಯಲ್ಪಡುವ ಎಚ್ ಐವಿ ಒಂದು ಸಾಂಕ್ರಾಮಿಕ ರೋಗ, ಇದು ಪ್ರತಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬೀರುತ್ತದೆ. ಈ ಮಾರಣಾಂತಿಕ ಸೋಂಕಿನ ಆರಂಭಿಕ ಲಕ್ಷಣಗಳನ್ನು ತಿಳಿದುಕೊಂಡರೆ ಆಗ ಅದಕ್ಕೆ ಚಿಕಿತ್ಸೆ ಮಾಡಬಹುದು. ಸೋಂಕು ಕೆಲವೊಂದು ಆರಂಭಿಕ ಲಕ್ಷಣಗಳನ್ನು ತೋರಿಸುತ್ತದೆ ಮತ್ತು ಇದು ರೋಗ ಪತ್ತೆಹಚ್ಚವುದು ಸುಲಭ. ಎಚ್ ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಜುಗರ ಹಾಗೂ ಕಠಿಣ. ಆದಾಗ್ಯೂ ಇಂದಿನ ದಿನಗಳಲ್ಲಿ ಅದನ್ನು ಪರೀಕ್ಷಿಸಲು ಹಲವಾರು ವಿಧಾನಗಳಿವೆ.

ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಇಂದು ಎಚ್ ಐವಿ ಪತ್ತೆಗೆ ಸೂಕ್ತ ಸೌಲಭ್ಯಗಳಿವೆ ಮತ್ತು ಅವುಗಳು ರೋಗಿಗಳ ರಹಸ್ಯ ಕಾಪಾಡುತ್ತದೆ. ಸೋಂಕು ಮುಂದುವರಿದು ಏಡ್ಸ್ ತೀವ್ರತೆ ಪಡೆಯುವ ಮೊದಲು ಇದಕ್ಕೆ ಆರಂಭಿಕ ಚಿಕಿತ್ಸೆ ಅನಿವಾರ್ಯ. ಎಚ್ ಐವಿ ಚಿಹ್ನೆಗಳು ರೋಗದ ಹಂತ ಮತ್ತು ಅದರ ತೀವ್ರತೆಯನ್ನು ಅವಲಂಬಿಸಿರುತ್ತದೆ. ಸೋಂಕಿತ ವ್ಯಕಿಯ ದೇಹದ ದ್ರವಗಳ ವಿನಿಮಯದಿಂದ ಇತರರಿಗೂ ಸೋಂಕು ಹರಡುವ ಅಪಾಯವಿರುವ ಕಾರಣ ಇದಕ್ಕೆ ಚಿಕಿತ್ಸೆ ಪಡೆಯುವುದು ತುಂಬಾ ಮುಖ್ಯ.

ಎಚ್ ಐವಿ ಚಿಹ್ನೆಗಳು ಹಲವು ವರ್ಷಗಳ ಕಾಲ ನಿಷ್ಕ್ರೀಯವಾಗಿರಬಹುದು ಮತ್ತು ಒಮ್ಮೆಲೆ ಹೊರಬರಬಹುದು. ನಿಮಗೆ ಎಚ್ ಐವಿ ಇದೆಯಾ ಎನ್ನುವ ಸಂಶಯ ಕಾಡುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ. ಎಚ್ ಐವಿ, ಅದರ ಚಿಕಿತ್ಸೆ ಮತ್ತು ಕಾರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಎಚ್ ಐವಿಯ ಕೆಲವೊಂದು ಚಿಹ್ನೆಗಳನ್ನು ನೀವು ಗುರುತಿಸಬಹುದು.

HIV

1. ತೂಕ ಕಳಕೊಂಡರೆ

ನಿಮ್ಮ ತೂಕದಲ್ಲಿ ಹಠಾತ್ ಬದಲಾವಣೆಯಾಗುವುದನ್ನು ನೀವು ಗಮನಿಸಿದರೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ತೂಕ ಕಳಕೊಂಡರೆ, ಎಚ್ಚರಿಕೆ ವಹಿಸಿ. ಇದು ಎಚ್ ಐವಿಯ ಚಿಹ್ನೆಯಾಗಿರಬಹುದು. ತೂಕ ಕಳಕೊಳ್ಳುವುದು ಮುಂಬರುವ ಅನಾರೋಗ್ಯದ ಲಕ್ಷಣವೆಂದು ಪರಿಗಣಿಸಲಾಗಿದೆ. ನಿಮ್ಮ ಪ್ರತಿರೋಧಕ ವ್ಯವಸ್ಥೆಯು ತುಂಬಾ ಕೆಟ್ಟಿದೆ ಎಂದು ಇದರರ್ಥ.

2. ಯಾವಾಗಲೂ ಕೆಮ್ಮುತ್ತಿದ್ದರೆ

ಒಣ ಕೆಮ್ಮು ಎಚ್ ಐವಿಯ ಒಂದು ಚಿಹ್ನೆ. ನೀವು ಇದನ್ನು ಧೂಳಿನ ಅಲರ್ಜಿಯಿಂದ ಬಂದಿರಬಹುದೆಂದು ಕಡೆಗಣಿಸುವ ಸಾಧ್ಯತೆ ಹೆಚ್ಚು. ಆದಾಗ್ಯೂ, ಸಮಯ ಹೋದಂತೆ ಇದು ತುಂಬಾ ಕೆಟ್ಟ ಮಟ್ಟಕ್ಕೆ ತಲುಪಬಹುದು.

3. ಉಗುರುಗಳು ಹೇಳುತ್ತದೆ

ಎಚ್ ಐವಿ ಸೋಂಕಿನಿಂದ ನಿಮ್ಮ ಉಗುರುಗಳ ಮೇಲೆ ಪರಿಣಾಮ ಬೀರಬಹುದು. ಎಚ್ ಐವಿ ಚಿಹ್ನೆಗಳು ವಿಲಕ್ಷಣವಾಗಿರಬಹುದಾದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಉಗುರುಗಳು ವಿಭಜನೆಯಾಗಬಹುದು ಅಥವಾ ಬಣ್ಣ ಕಳಕೊಳ್ಳಬಹುದು. ಇಂತಹ ಯಾವುದೇ ಚಿಹ್ನೆ ಕಾಣಿಸಿದರೆ ಆರಂಭದಲ್ಲೇ ಪತ್ತೆ ಹಚ್ಚಿ.

4. ಆಗಾಗ ನಿಮಗೆ ದಣಿವಾದರೆ

ದಿನಪೂರ್ತಿ ನಿಮಗೆ ಆಯಾಸ ಮತ್ತು ದಣಿವಾಗುತ್ತಿದ್ದರೆ ಇದರ ಬಗ್ಗೆ ಎಚ್ಚರ ವಹಿಸಿ, ಇದು ಎಚ್ ಐವಿ ಚಿಹ್ನೆಯಾಗಿರಬಹುದು. ದಣಿವು ಎಚ್ ಐವಿಯ ಆರಂಭಿಕ ಅಥವಾ ಕೊನೇ ಹಂತದ ಚಿಹ್ನೆಯಾಗಿರಬಹುದು.

5. ಓ ನನ್ನ ದೇವರೇ

ಸ್ನಾಯು ಮತ್ತು ಕೀಲು ನೋವಿನಿಂದಾಗಿ ನೀವು ಈ ರೀತಿ ಕಿರುಚಾಡುತ್ತಿದ್ದರೆ ತಕ್ಷಣ ಹೋಗಿ ಎಚ್ ಐವಿ ಪರೀಕ್ಷೆ ಮಾಡಿಸಿಕೊಳ್ಳಿ. ಇದು ಎಚ್ ಐವಿಯ ಚಿಹ್ನೆಗಳಲ್ಲಿ ಒಂದಾಗಿರಬಹುದು. ಪ್ರತೀ ವರ್ಷ ವಿಶ್ವ ಏಡ್ಸ್ ದಿನ ಎಚ್ ಐವಿ ಬಾಧಿತರ ವಸ್ತುಸ್ಥಿತಿ ಮತ್ತು ಅಂಕಿಅಂಶಗಳನ್ನು ನೀಡುತ್ತದೆ.

6. ತಲೆನೋವು

ತಲೆನೋವು ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದರೆ ಆಗ ಅದು ಎಚ್ ಐವಿ ಚಿಹ್ನೆಯಾಗಿರಬಹುದೆಂದು ಗಮನಿಸಿ. ಇದು ಆರಂಭಿಕ ಚಿಹ್ನೆಯಾಗಿರಬಹುದು ಮತ್ತು ಇದನ್ನು ಎಆರ್ ಎಸ್ ಎಂದು ಕರೆಯಲಾಗುತ್ತದೆ.

7. ನಿಮ್ಮ ತ್ವಚೆ ಕಡೆ ಗಮನಹರಿಸಿ

ಚರ್ಮ ತುರಿಕೆ ಸಾಮಾನ್ಯ ಮತ್ತು ರೋಗದ ಆರಂಭಿಕ ಅಥವಾ ಅಂತ್ಯದ ಘಟ್ಟಗಳಲ್ಲಿ ಇದು ಕಾಣಿಸಬಹುದು. ಚರ್ಮದಲ್ಲಿ ಗುಳ್ಳೆ ಅಥವಾ ನವೆ ಕಾಣಿಸಿಕೊಳ್ಳಬಹುದು. ಇದರಿಂದ ನಿಮ್ಮ ಚರ್ಮದ ಕಡೆ ಹೆಚ್ಚಿನ ಗಮನಹರಿಸಿ.

ಪ್ರತೀ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. 2013ರ ವಿಶ್ವ ಏಡ್ಸ್ ದಿನದ ಘೋಷಣೆಯೆಂದರೆ ಪಡೆಯುವುದು ಶೂನ್ಯ: ಎಚ್ ಐವಿ ಸೋಂಕಿಗೆ ಶೂನ್ಯ. ಪ್ರತೀ ವರ್ಷ ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಕೈಗೊಳ್ಳಲಾಗುತ್ತದೆ. ಎಚ್ ಐವಿ ಸೋಂಕಿನ ವಿರುದ್ಧದ ಅಭಿಯಾನವು ಹೆಚ್ಚು ಪರಿಣಾಮಕಾರಿಯಾಗಲು ಕೆಲವೊಂದು ಸಾಧನ ಮತ್ತು ತಾಂತ್ರಿಕ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ. ಎಚ್ ಐವಿ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಿ ಮತ್ತು ಚಿಕಿತ್ಸೆ ಪಡೆಯುವುದಕ್ಕಿಂತ ಬಾರದಂತೆ ತಡೆಯುವುದು ಉತ್ತಮ.

Story first published: Saturday, November 30, 2013, 15:58 [IST]
X
Desktop Bottom Promotion