For Quick Alerts
ALLOW NOTIFICATIONS  
For Daily Alerts

ಕಣ್ಣಿಗೆ ಕನ್ನಡಕ ಒಳ್ಳೆಯದಾ? ಲೆನ್ಸ್ ಒಳ್ಳೆಯದಾ?

|

ಕಣ್ಣಿನ ದೋಷಕ್ಕೆ ಪರಿಹಾರವಾಗಿ ಕನ್ನಡಕ ಅಥವಾ ಲೆನ್ಸ್ ಬಳಸುವುದು ಸಹಜ. ಕನ್ನಡಕ ಹಾಕಿದರೆ ಎಲ್ಲಿ ಫ್ರೆಂಡ್ಸ್ ಸೋಡಾಬುಡ್ಡಿ ಎನ್ನಿಸಿಕೊಳ್ಳಲು ಇಷ್ಟವಿಲ್ಲದೆ ಲೆನ್ಸ್ ಬಳಸಲು ಇಷ್ಟ ಪಡುತ್ತಾರೆ. ಲೆನ್ಸ್ ಹಾಕಿದರೆ ನಮ್ಮ ಸೌಂದರ್ಯಕ್ಕೆ ಯಾವುದೇ ದೋಷ ತರುವುದಿಲ್ಲ ಅನ್ನುವುದೇ ಲೆನ್ಸ್ ಮೇಲೆ ಹೆಚ್ಚಿನ ಒಲವು ಮೂಡಲು ಕಾರಣವಾಗಿದೆ.

ಕಣ್ಣಿಗೆ ಲೆನ್ಸ್ ಹಾಕಿ, ಆರಾಮವಾಗಿ ಓಡಾಡಿಕೊಂಡು ಇರಬಹುದು, ಕನ್ನಡಕದಂತೆ ಮೂಗಿನ ತುದಿಯವರೆಗೆ ಜಾರಿ ಕಿರಿಕಿರಿ ಉಂಟು ಮಾಡುವುದಿಲ್ಲ. ಆದರೂ ತುಂಬಾ ನೇತ್ರ ತಜ್ಞರು ಲೆನ್ಸ್ ಬದಲು ಕನ್ನಡಕ ಧರಿಸುವುದೇ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಎರಡರಲ್ಲೂ ಒಳಿತು, ಕೆಡುಕುಗಳಿವೆ. ನಿಮಗೆ ಲೆನ್ಸ್ ಬೇಕೆ? ಕನ್ನಡಕ ಬೇಕೆ ಅನ್ನುವುದನ್ನು ನಿರ್ಧರಿಸುವ ಮುನ್ನ ಈ ಕೆಳಗಿನ ಸಲಹೆಗಳನ್ನು ಓದುವುದು ಒಳ್ಳೆಯದು:

Contact Lens Or Glasses: Healthier Choice?

* ಕಣ್ಣಿಗೆ ಲೆನ್ಸ್ ಹಾಕಿದರೆ ಅದು ನಿಮ್ಮ ಕಣ್ಣಿನ ಅಕ್ಷಿಪಟಲವನ್ನು ಮುಚ್ಚಿ ಬಿಡುತ್ತದೆ. ಕನ್ನಡಕ ಒಳ್ಳೆಯದು, ಆದರೆ ದೃಷ್ಟಿ ದೋಷವನ್ನು ಕಡಿಮೆ ಮಾಡುವಲ್ಲಿ ಲೆನ್ಸ್ ಹೆಚ್ಚು ಪ್ರಯೋಜನಕಾರಿಯಾಗಿದೆ.

* ಲೆನ್ಸ್ ಗಿಂತ ಕನ್ನಡಕಕ್ಕೆ ಸೂರ್ಯನ ಕಿರಣಗಳಿಂದ ಕಣ್ಣನ್ನು ಸಂರಕ್ಷಿಸುವ ಸಾಮರ್ಥ್ಯ ಅಧಿಕವಿದೆ.

* ಲೆನ್ಸ್ ಹಾಕಿದರೆ ಕಣ್ಣಿನಲ್ಲಿರುವ ತೇವಾಂಶ ಕಡಿಮೆಯಾಗಿ ಕಣ್ಣು ಡ್ರೈಯಾಗುತ್ತದೆ. ಇದರಿಂದ ಕಣ್ಣಿನಲ್ಲಿ ತುರಿಕೆ ಕಂಡು ಬರಬಹುದು.

* ಲೆನ್ಸ್ ಹಾಕಿದರೆ 360 ಡಿಗ್ರಿ ಕೋನದಲ್ಲಿ ವಸ್ತುಗಳನ್ನು ನೋಡಬಹುದು. ಆದರೆ ಕನ್ನಡಕ ಧರಿಸಿದರೆ ಈ ರೀತಿ ನೋಡಲು ಸಾಧ್ಯವಿಲ್ಲ.

* ಕನ್ನಕ ಹಾಕಿಕೊಂಡು ಪ್ರಯಾಣ ಮಾಡಿದರೆ ಯಾವುದೇ ಅಪಾಯವಿಲ್ಲ. ಆದರೆ ಲೆನ್ಸ್ ಹಾಕಿಕೊಂಡು ಪ್ರಯಾಣ ಮಾಡುವುದು ಸ್ವಲ್ಪ ರಿಸ್ಕ್ ನ ವಿಷಯ. ಲೆನ್ಸ್ ಹಾಕಿ ಮಳೆ ನೆನೆದರೆ ಲೆನ್ಸ್ ತನ್ನ ದೃಷ್ಟಿ ಸಾಮರ್ಥ್ಯವನ್ನು ಕಳೆದುಕೊಂಡು ನಿಮಗೆ ವಸ್ತುಗಳು ಸರಿಯಾಗಿ ಕಾಣಿಸುವುದಿಲ್ಲ.

* ಲೆನ್ಸ್ ಹಾಕಿ ಪ್ರಯಾಣ ಮಾಡುವಾಗ ನಿದ್ದೆ ಬಂದರೆ ಲೆನ್ಸ್ ಹಾಕಿ ಕಣ್ಣುಮುಚ್ಚಬಾರದು. ಆದರೆ ಕನ್ನಡಕ್ಕೆ ಹಾಕಿ ನಿದ್ದೆ ಮಾಡಿದರೆ ಕಣ್ಣಿಗೆ ಅಪಾಯವಿಲ್ಲ, ಬಿದ್ದು ಹೋದರೆ ಮಾತ್ರ ಕನ್ನಡಕ ಹಾಳಾಗುತ್ತದೆ.

* ಲೆನ್ಸ್ ಗಿಂತ ಕನ್ನಡಕವನ್ನು ಧರಿಸುವುದು ಸುಲಭ.

* ಕನ್ನಡಕವನ್ನು ಕನ್ನಡಕ ಬಾಕ್ಸ್ ನಲ್ಲಿಯೇ ಹಾಕಬೇಕಂತಿಲ್ಲ ಟೇಬಲ್ ಮೇಲೆಯೂ ಇಡಬಹುದು, ಆದರೆ ಲೆನ್ಸ್ ಅನ್ನು ಎಲ್ಲಿಂದರಲ್ಲಿ ಇಡಲು ಸಾಧ್ಯವಿಲ್ಲ.

* ಕನ್ನಡ ಕೆಲವರ ಮುಖಕ್ಕೆ ಅಷ್ಟು ಚೆಂದ ಕಾಣುವುದಿಲ್ಲ, ಆದರೆ ಲೆನ್ಸ್ ನಿಮ್ಮ ನೈಸರ್ಗಿಕ ಕಣ್ಣಿನ ಬಣ್ಣದ್ದೇ ಆಗಿದ್ದರೆ ನಿಮ್ಮ ಮುಖದಲ್ಲಿ ವ್ಯತ್ಯಾಸ ಗೋಚರಿಸುವುದಿಲ್ಲ.

English summary

Contact Lens Or Glasses: Healthier Choice? | ಕನ್ನಡಕ ಮತ್ತು ಲೆನ್ಸ್ ಇವೆರಡರಲ್ಲಿ ಯಾವುದು ಒಳ್ಳೆಯದು

Contact lenses or glasses are usually used by people who have power in their eyes. Most people are glad to get rid of their glasses for purely cosmetic reasons. It is irritating to have a glass in front of your eyes 24x7. But the choice between contact lenses or glasses is much more than a superficial decision.
X
Desktop Bottom Promotion