For Quick Alerts
ALLOW NOTIFICATIONS  
For Daily Alerts

ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದೆಯೇ?

By Super
|

ನಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಕಡಿಮೆ ಆಗುತ್ತಿದೆಯೋ ಅಥವಾ ನಮ್ಮ ಆರೋಗ್ಯವನ್ನು ಹಾಳು ಮಾಡುವ ಖಾದ್ಯಗಳನ್ನು ನಾವು ಹೆಚ್ಚು ಸೇವಿಸುತ್ತಿದ್ದೇವೆಯೋ ಆರೋಗ್ಯ ಸಂಬಂಧಿ ಸಮಸ್ಯೆಗಳು ಹಿಂದಿನ ಕಾಲಕ್ಕೆ ಹೋಲಿಸಿದರೆ ಬಹಳ ಹೆಚ್ಚಾಗಿರುವುದಂತೂ ಸುಳ್ಳಲ್ಲ. ಫಾಸ್ಟ್ ಫುಡ್, ಆಫೀಸುಗಳಲ್ಲಿ ಕೆಲಸಕ್ಕೆ ಉತ್ತೇಜನ ಬೇಕು ಎಂದು ನಾವು ಸೇವಿಸುವಾ ಕಾಫಿ, ತಂಪು ಪಾನೀಯಗಳು ಇವೆಲ್ಲ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಎಷ್ಟು ಸೂಕ್ತ. ಒಂದಿಷ್ಟು ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ನಾವು ಆರೋಗ್ಯ ಸಂಬಧಿ ಸಮಸ್ಯೆಗಳನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಎದುರಿಸುತ್ತಿದ್ದೇವೆ. ನಾವು ಮತ್ತೆ ಮತ್ತೆ ರೋಗಗ್ರಸ್ಥರಾಗುತ್ತಿದ್ದೇವೆ ಎಂದು ಎಲ್ಲರಿಗೂ ಅನ್ನಿಸುತ್ತದೆ. ಪದೇ ಪದೇ ಹಾಳಾಗುತ್ತಿರುವ ನಿಮ್ಮ ಆರೋಗ್ಯಕ್ಕೆ ನಿಮ್ಮ ಆಹಾರ ಪದ್ಧತಿ ಕಾರಣವಾಗಿರಬಹುದು. ನಮ್ಮ ಅಷ್ಟೊಂದು ಸಮರ್ಪಕವಾಗಿರದ ಆಹಾರ ಪದ್ಧತಿಯಿಂದ ಹೆಚ್ಚಿನ ಅನಾರೋಗ್ಯ ಸಮಸ್ಯೆಗಳು ಎದುರಾಗುವುದನ್ನು ನಾವು ತಿಳಿದೇ ಇದ್ದೇವೆ.

ಇಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನೀವು ದೂರವಿಡಬೇಕಾದ ಕೆಲವು ಆಹಾರಗಳನ್ನು ಪಟ್ಟಿಮಾಡಲಾಗಿದೆ.

1. ತಂಪು ಪಾನೀಯಗಳು

1. ತಂಪು ಪಾನೀಯಗಳು

ಇತ್ತೀಚೆಗೆ ನಡೆದ ಒಂದು ಸಂಶೋಧನೆಯ ಪ್ರಕಾರ ಪ್ರತಿದಿನ ಒಂದು ತಂಪು ಪಾನೀಯ ಸೇವಿಸುವವರಲ್ಲಿ ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ 22 ಶೇಕಡಾ ಹೆಚ್ಚು.

2. ಕಾಫಿ

2. ಕಾಫಿ

ಪ್ರತಿ ದಿನ ಬೆಳಗ್ಗೆ ಎದ್ದು ಒಂದು ಲೋಟ ಕಾಫಿ ಕುಡಿದೇ ದಿನದಾರಂಭ ಮಾಡುವುದು ನಿಮ್ಮ ಅಭ್ಯಾಸ ಆಗಿರಬಹುದು. ಇದು ಇಡೀ ದಿನ ನಿಮ್ಮನ್ನು ಉಲ್ಲಸಿತರಾಗಿಡಬಹುದು. ಆದರೆ ಸಂಶೋಧನೆಗಳು ಇವು ನಿಮ್ಮ ತೂಕವನ್ನು ಹೆಚ್ಚಿಸುವುದಕ್ಕೆ ಮೊದಲ ಕಾರಣವಾಗಿವೆ ಎಂದು ಹೇಳುತ್ತಿವೆ.

3. ಕರಿದ ಆಹಾರ

3. ಕರಿದ ಆಹಾರ

ಚಿಪ್ಸ್ ಹಾಗೂ ಎಣ್ಣೆಯಲ್ಲಿ ಕರಿದ ಯಾವುದೇ ಸಿಹಿ ತಿಂಡಿ ನಿಮ್ಮ ಆರೋಗ್ಯಕ್ಕೆ ಬಹಳ ಹಾನಿಕರ.

4. ಸಂಸ್ಕರಿಸಿದ ಮಾಂಸ

4. ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸವನ್ನು ಆದಷ್ಟು ದೂರವಿಡಿವುದು ಒಳಿತು. ಆರೋಗ್ಯ ತಜ್ಞರು ನಾವುಇ ಸೇವಿಸುವ ಮಾಂಸವನ್ನು ಆದಷ್ಟು ಕಡಿಮೆ ಮಾಡುವುದು ಒಳಿತು ಎಂದು ಸಲಹೆ ನೀಡುತ್ತಾರೆ. ಹೀಗೆ ಮಾಡುವುದರಿಂದ ಕೆಲವು ಬಗೆಯ ಕ್ಯಾನ್ಸರ್ ಗಳನ್ನು ದೂರವಿಡಬಹುದು.

5. ಘನೀಕೃತ ಚಿಪ್ಸ್

5. ಘನೀಕೃತ ಚಿಪ್ಸ್

ಘನೀಕರಿಸಿದ ಮನೆಯಲ್ಲೇ ತಯಾರಿಸಿ ಎಂಬ ಚಿಪ್ಸ್ ಗಳನ್ನು ಆದಷ್ಟು ದೂರವಿಡಿ. ನೀವು ಈಗ ಸೂಪರ್ ಮಾರ್ಕೆಟ್ ಗಳಲ್ಲಿ ಖರೀದಿಸುವ ಇಂತಹ ಆಹಾರಗಳು ಹೆಚ್ಚು ಕೊಬ್ಬಿನ ಅಂಶ ಹೊಂದಿರುತ್ತದೆ. ಇವುಗಳಿಂದ ನಿಮ್ಮ ರಕ್ತ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಇವುಗಳು ನಿಮ್ಮ ಹೃದಯದ ಆರೋಗ್ಯಕ್ಕೂ ಹಾನಿಕರ.

6. ಕೆಫೀನ್ ಮತ್ತು ಶಕ್ತಿ ಪಾನೀಯಗಳು

6. ಕೆಫೀನ್ ಮತ್ತು ಶಕ್ತಿ ಪಾನೀಯಗಳು

ಶಕ್ತಿ ಪಾನೀಯಗಳಲ್ಲಿ ಇರುವ ಒಂದು ಅಂಶವಾದ ಕೆಫೀನ್ ನಮ್ಮ ಆರೋಗ್ಯದ ಮೇಲೆ ಬೀರುವ ಪ್ರಭಾವದ ಬಗ್ಗೆ ಆರೋಗ್ಯ ತಜ್ಞರಲ್ಲಿ ವಿವಿಧ ಅಭಿಮತಗಳಿವೆ. ಒಂದು ಬಗೆಯ ಉತ್ತೇಜಕವಾದ ಕೆಫೇನ್ ನಮ್ಮ ಹಾರ್ಮೋನ್ ಗಳ ಮೇಲೆ ಪ್ರಭಾವ ಬೀರಬಹುದು. ಇದು ನಮ್ಮ ಸ್ವಾಭಾವಿಕ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಇದು ಮೈಗ್ರೇನ್ ಗೆ ಕೂಡ ಕಾರಣವಾಗಬಹುದು. ಶಕ್ತಿ ಪಾನೀಯಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

7. ಕುರುಕಲು ತಿಂಡಿ

7. ಕುರುಕಲು ತಿಂಡಿ

ಇತ್ತೀಚೆಗೆ ನಡೆದ ಕೆಲವು ಸಂಶೊಧನೆಗಳು ಕೆಲವೇ ಕೆಲವು ಪ್ಯಾಕೆಟ್ ಕುರುಕಲು ಆಹಾರ ಸೇವನೆ ನೀವು ಎಷ್ಟೋ ಲೀಟರ್ ಎಣ್ಣೆಯನ್ನು ಸೇವಿಸಿದಕ್ಕೆ ಸಮ ಎಂಬ ಅಭಿಪ್ರಾಯ ನೀಡಿದೆ.

8. ಬಿಳಿ ಪಾಸ್ತಾ

8. ಬಿಳಿ ಪಾಸ್ತಾ

ಬಿಳಿಯ ಪಾಸ್ತಾವನ್ನು ಕೆಲವು ಪೋಷಕಗಳನ್ನು ಮತ್ತು ಬೊಲೊಗ್ನೀಸ್ ಸಣ್ಣದಾಗಿ ಕತ್ತರಿಸಿದ ಕೆಂಪು ಮಾಂಸದಿಂದ ಮಾಡಲಾಗಿರುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

9. ಬ್ರೆಡ್

9. ಬ್ರೆಡ್

ನಾವು ಹೆಚ್ಚಾಗಿ ಏಕದಳ ಧಾನ್ಯಗಳನ್ನು ತಿನ್ನಲು ಸಲಹೆ ಪಡೆಯುತ್ತೇವೆ. ಆದರೆ ನಾವು ಸೂಪರ್ ಮಾರ್ಕೆಟ್ ನಲ್ಲಿ ಪಡೆಯುವ ಇಂತಹ ಧಾನ್ಯಗಳು ಹಲವು ಬಾರಿ ನಿಗದಿತ ಪ್ರಮಾಣದ ವಿಟಮಿನ್ ಮತ್ತು ನ್ಯೂಟ್ರಿನ್ ಗಳನ್ನು ಹೊಂದಿರುವುದಿಲ್ಲ ಜೊತೆಗೆ ಹೆಚ್ಚಿನ ಪ್ರಮಾಣದ ಲವಣಗಳು ಇರುತ್ತವೆ. ಖರೀದಿಸುವ ಮುನ್ನ ಪ್ಯಾಕ್ ನಲ್ಲಿರುವ ಅಂಶಗಳನ್ನು ಓದಿದ ಹಾಗು ನಂತರ ಖರೀದಿಸಿ.

12. ಪಾಪ್ ಕಾರ್ನ್

12. ಪಾಪ್ ಕಾರ್ನ್

ಜೋಳದ ಅರಳು ನಿಮ್ಮ ದೇಹಕ್ಕೆ ಕೆಟ್ಟದಲ್ಲ ಆದರೆ ಇದನ್ನು ಮಾಡುವ ವಿಧಾನ ಮತ್ತು ರುಚಿಯ ಸಲುವಾಗಿ ಬಳಸುವ ಸಾಮಗ್ರಿಗಳು ಹಾಗೂ ಮೈಕ್ರೋವೇವ್ ಓವನ್ ನ ಬಳಕೆ ನಿಮ್ಮ ಆರೋಗ್ಯಕ್ಕೆ ಹಾನಿಕರ. ಇದು ನಿಮ್ಮ ಜಠರದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಪಾಪ್ ಕಾರ್ನ್ ಅನ್ನು ಸಾಮಾನ್ಯವಾಗಿ ಹೆಚ್ಚಿನ ಉಪ್ಪನ್ನು ಬಳಸಿ ತಯಾರಿಸಲಾಗಿರುತ್ತದೆ ಇವೆಲ್ಲ ಸೇರಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

English summary

Common foods that should carry a health warning | ಆರೋಗ್ಯವನ್ನು ಹಾಳು ಮಾಡಬಲ್ಲ ಕೆಲವು ಸಾಮಾನ್ಯ ಆಹಾರ

Nowadays we are facing so many health hazards. Nobody thinks why we are falling sick again and again. Your eating habits may be a main reason for your terrible health. We're far more aware of the health problems associated with unhealthy food habits.Here are few foods which you need to avoid to get a healthy life.
X
Desktop Bottom Promotion