For Quick Alerts
ALLOW NOTIFICATIONS  
For Daily Alerts

ಬೆನ್ನು ನೋವಿಗೆ ಚಿಕಿತ್ಸೆ ಮಾಡುವ ಮುನ್ನ ತಿಳಿಯಿರಿ ಕಾರಣ!

|

ಬೆನ್ನು ನೋವು ಅನೇಕ ಕಾರಣ ಕಾರಣಗಳಿಂದ ಬರಬಹುದು. ಖಿನ್ನತೆ ಇದ್ದರೆ, ಕೂರುವ ಭಂಗಿ ಸರಿಯಿಲ್ಲದಿದ್ದರೆ, ಆತ್ಮವಿಶ್ವಾಸದ ಕೊರತೆ ಇದ್ದರೆ ಬೆನ್ನು ನೋವು ಕಂಡು ಬರುತ್ತದೆ. ಕೆಲವರಿಗೆ ದೈಹಿಕ ತೊಂದರೆಯಿಂದ ಕೂಡ ಬೆನ್ನು ನೋವು ಕಂಡು ಬರುತ್ತದೆ.

ಬೆನ್ನು ನೋವು ಕಾಣಿಸಿದಾಗ ಮೂವ್ ಅಥವಾ ಇತರ ಬೆನ್ನು ನೋವಿನ ಮುಲಾಮು ಹಚ್ಚಿ ಸುಮ್ಮೆನಿದ್ದು ಬಿಡುತ್ತೇವೆ ಹೊರತು ಅದಕ್ಕೆ ಕಾರಣವೇನು ಎಂದು ಯೋಚಿಸುವುದಿಲ್ಲ. ಯಾವುದೇ ಸಮಸ್ಯೆಗೆ ಕಾರಣ ತಿಳಿದರೆ ಪರಿಹಾರ ಸುಲಭ. ನಮ್ಮ ಕೂರುವ ಭಂಗಿ ಸರಿಯಿಲ್ಲದ ಕಾರಣ ಬೆನ್ನು ನೋವು ಬರುತ್ತದೆ. ಆಗ ನೋವಿಗೆ ಮುಲಾಮ್ ಹಚ್ಚಿ ಕೂರುವ ಭಂಗಿ ಬದಲಾಯಿಸದೆ ಇದ್ದರೆ ಬೆನ್ನು ನೋವು ಆಗಾಗ ಕಾಡುತ್ತಲೇ ಇರುತ್ತದೆ. ಆದ್ದರಿಂದ ಕಾರಣ ತಿಳಿಯುವುದು ಅಗತ್ಯ. ಈ ಕೆಳಗಿನ ಅಂಶಗಳು ಬೆನ್ನು ನೋವು ಬರಲು ಪ್ರಮುಖ ಕಾರಣಗಳಾಗಿವೆ.

ಹಳೆಯ ಗಾಯದ ನೋವು

ಹಳೆಯ ಗಾಯದ ನೋವು

ಬೆನ್ನು, ಕುತ್ತಿಗೆ ಹತ್ತಿರ ನೋವು, ಸ್ಣಾಯುಗಳ ಸೆಳೆತ ಈ ರೀತಿ ಕಂಡು ಬಂದರೆ ಅದು ಹಳೆಯ ಗಾಯದಿಂದ ಬಂದಂತಹ ನೋವು ಆಗಿರಬಹುದು. ಉದಾಹರಣೆಗೆ ಒಂದು ಕಾಲಿಗೆ ಗಾಯವಾದರೆ ನಮ್ಮ ನಮ್ಮ ದೇಹದ ಭಾರವನ್ನು ಮತ್ತೊಂದು ಕಾಲಿನ ಮೇಲೆ ಹಾಕುತ್ತೇವೆ. ಇದರಿಂದಾಗಿ ಬೆನ್ನು ನೋವು ಉಂಟಾಗುತ್ತದೆ. ನಮ್ಮ ದೇಹದ ಭಂಗಿಯಲ್ಲಿ ವ್ಯತ್ಯಾಸ ಉಂಟಾದರೆ ಬೆನ್ನು ನೋವು ಉಂಟಾಗುತ್ತದೆ.

ಪೋಷಕಾಂಶದ ಕೊರತೆ ಉಂಟಾದರೆ

ಪೋಷಕಾಂಶದ ಕೊರತೆ ಉಂಟಾದರೆ

ಮೂಳೆ ಬಲವಾಗಿರಬೇಕಾದರೆ ದೇಹದಲ್ಲಿ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿರಬೇಕು. ಅದರಲ್ಲೂ ಕ್ಯಾಲ್ಸಿಯಂ ಕೊರತೆ ಉಂಟಾದರೆ, ವಿಟಮಿನ್ ಗಳ ತೊಂದರೆ ಉಂಟಾದರೆ ಬೆನ್ನು ನೋವು ಕಂಡು ಬರುತ್ತದೆ.

ವಂಶಪಾರಂಪರ್ಯವಾಗಿ

ವಂಶಪಾರಂಪರ್ಯವಾಗಿ

ಮನೆಯಲ್ಲಿ ಅಮ್ಮನಿಗೆ ಅಥವಾ ಅಪ್ಪನಿಗೆ ಬೆನ್ನು ನೋವಿನ ಸಮಸ್ಯೆಯಿದ್ದರೆ ಅದು ವಂಶಪಾರಂಪರ್ಯವಾಗಿ ಬರಬಹುದು. ಮನೆಯಲ್ಲಿ ಹಿರಿಯರಿಗೆ ಈ ಸಮಸ್ಯೆ ಇದ್ದರೆ ನೀವು ಕೂರುವ, ನಿಲ್ಲುವ ಭಂಗಿ ಸರಿಯಾಗಿರಲಿ, ಇದರಿಂದ ಬೆನ್ನು ನೋವು ಬರದಂತೆ ತಡೆಯಬಹುದು.

ಅಧಿಕ ತೂಕ

ಅಧಿಕ ತೂಕ

ಬೆನ್ನು ನೋವು, ಮಂಡಿ ನೋವಿಗೆ ಅಧಿಕ ತೂಕ ಒಂದು ಕಾರಣವಾಗಿದೆ. ಹೊಟ್ಟೆ ಗಾತ್ರ ಅಧಿಕವಿದ್ದರೆ ಬೆನ್ನು ಮೇಲೆ ಒತ್ತಡ ಬಿದ್ದು ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಸ್ತ್ರೀಯರಿಗೆ ಎದೆ ತುಂಬಾ ದಪ್ಪವಿದ್ದರೆ ಬೆನ್ನು ನೋವು ಕಾಣಿಸಿಕೊಳ್ಳುವುದು.

ಅಭ್ಯಾಸ

ಅಭ್ಯಾಸ

ತಲೆ ಬಗ್ಗಿಸಿಕೊಂಡು ನಡೆಯುವ ಅಭ್ಯಾಸ, ಗೂನು ಬೆನ್ನಿನಂತೆ ನಡೆಯುವ ಅಭ್ಯಾಸ, ಕೂರುವ ಭಂಗಿ ಸರಿಯಿಲ್ಲದ್ದರೆ ಬೆನ್ನಿನ ಮೇಲೆ ಒತ್ತಡ ಇದ್ದು ಬೆನ್ನು ಬೆನ್ನು ನೋವು ಕಾಣಿಸಿಕೊಳ್ಳುವುದು.

ನಿಮ್ಮ ಕೆಲಸ

ನಿಮ್ಮ ಕೆಲಸ

ಡೆಸ್ಕ್ ವರ್ಕ್ ಬೆನ್ನು ನೋವಿಗೆ ಪ್ರಮುಖ ಕಾರಣವಾಗಿದೆ. ಅದಲ್ಲದೆ ಮಾನಸಿಕ ಒತ್ತಡ ಕೂಡ ಬೆನ್ನು ನೋವಿಗೆ ಕಾರಣವಾಗಿದೆ. ಕೆಲಸದ ಜಾಗದಲ್ಲಿ ಕೂರುವಾಗ ಕಾಲು ನೆಲಕ್ಕೆ ಮುಟ್ಟುವಂತೆ ಕೂತು ಕೆಲಸ ಮಾಡಿ, ಇದರಿಂದ ಬೆನ್ನು ನೋವು ಬರುವುದನ್ನು ತಡೆಗಟ್ಟಬಹುದು.

ಜೀವನ ಶೈಲಿ ಮತ್ತು ಫ್ಯಾಷನ್

ಜೀವನ ಶೈಲಿ ಮತ್ತು ಫ್ಯಾಷನ್

ಬಿಗಿಯಾದ ಡ್ರೆಸ್ ಧರಿಸಿವುದು, ಲೋ ವೇಸ್ಟ್ ಜೀನ್ಸ್, ಅಗಲದ ಬೆಲ್ಟ್ ಧರಿಸುವುದು, ಹೈ ಹೀಲ್ಡ್ ಚಪ್ಪಲಿ ಧರಿಸಿವುದು ಇವುಗಳಿಂದ ಬೆನ್ನು ನೋವಿನ ಸಮಸ್ಯೆ ಕಂಡು ಬರುತ್ತದೆ.

English summary

Common Causes Back Ache | Tips For Health | ಬೆನ್ನು ನೋವಿಗೆ ಸಾಮಾನ್ಯ ಕಾರಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Today, we will discuss some common causes of poor posture, so that being aware of these causes can help you avoid it to improve your posture.
X
Desktop Bottom Promotion