For Quick Alerts
ALLOW NOTIFICATIONS  
For Daily Alerts

ಕರುಳನ್ನು ಶುದ್ಧ ಮಾಡುವ ಪ್ರಮುಖ 10 ಆಹಾರಗಳು

|

ಕರುಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ನಾವು ತಿಂದ ಆಹಾರ ಜೀರ್ಣವಾಗುವುದು. ಇದು ನಮ್ಮ ದೇಹಕ್ಕೆ ಅಗತ್ಯವಾದ ಖನಿಜಾಂಶಗಳನ್ನು ಹೀರಿಕೊಂಡು, ಬೇಡದ ತ್ಯಾಜ್ಯಗಳನ್ನು ಹೊರಹಾಕುವ ಕಾರ್ಯವನ್ನು ಮಾಡುತ್ತದೆ.

ಕರುಳಿನ ಕಾರ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮಲಬದ್ಧತೆ, ಅಜೀರ್ಣ ಸಮಸ್ಯೆ ಕಂಡು ಬರುವುದು. ಆದ್ದರಿಂದ ಕರುಳು ತನ್ನ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲು ಕರುಳನ್ನು ಕ್ಲೆನ್ಸ್ ಮಾಡಿ, ಅದರ ಆರೋಗ್ಯ ಕಾಪಾಡುವ ಆಹಾರಗಳನ್ನು ತಿನ್ನಬೇಕು.

ಇಲ್ಲಿ ನಾವು ಕೆಲ ಆಹಾರಗಳ ಪಟ್ಟಿ ನೀಡಿದ್ದೇವೆ, ಈ ಆಹಾರಗಳು ಕರುಳನ್ನು ಕ್ಲೆನ್ಸ್ ಮಾಡಿ, ಕರುಳಿನ ಕಾರ್ಯ ಸಾಮರ್ಥ್ಯ ಕಾಪಾಡುವುದು:

ಸಿಟ್ರಸ್ ಇರುವ ಆಹಾರಗಳು

ಸಿಟ್ರಸ್ ಇರುವ ಆಹಾರಗಳು

ನಿಂಬೆಹಣ್ಣಿನಂತಹ ಸಿಟ್ರಸ್ ಆಹಾರಗಳು ಕರುಳನ್ನು ಕ್ಲೆನ್ಸ್ ಮಾಡುವುದು. ಆದ್ದರಿಂದಲೇ ದಿನಾ ಕಿತ್ತಳೆ, ನಿಂಬೆ ಪಾನೀಯ ಕುಡಿದರೆ ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆ ಕಂಡು ಬರುವುದಿಲ್ಲ.

 ಸೊಪ್ಪು

ಸೊಪ್ಪು

ಸೊಪ್ಪು ಕೂಡ ಕರುಳನ್ನು ಶುದ್ಧ ಮಾಡುವುದು. ಕರುಳಿನಲ್ಲಿರುವ ನಾರಿನಂಶ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ.

ಬ್ರೊಕೋಲಿಯ ಮೊಳಕೆ

ಬ್ರೊಕೋಲಿಯ ಮೊಳಕೆ

ಬ್ರೊಕೋಲಿಯ ಮೊಳಕೆಯನ್ನು ತಿಂದರೆ ತುಂಬಾ ಒಳ್ಳೆಯದು. ದೇಹಕ್ಕೆ ಅಗತ್ಯವಾದ ಅನೇಕ ಖನಿಜಾಂಶಗಳು ಬ್ರೊಕೋಲಿಯಲ್ಲಿದೆ ಹಾಗೂ ಕರುಳನ್ನು ಕೂಡ ಕ್ಲೆನ್ಸ್ ಮಾಡುವುದು.

ಹಣ್ಣಿನ ಜ್ಯೂಸ್

ಹಣ್ಣಿನ ಜ್ಯೂಸ್

ಶೋಕಿಗಾಗಿ ಅನಾರೋಗ್ಯಕರ ಕಾರ್ಬೋಹೈಡ್ರೇಟ್ ಇರುವ ಪಾನೀಯಗಳನ್ನು ಕುಡಿಯುವ ಬದಲು ಹಣ್ಣಿನ ಜ್ಯೂಸ್ ಕುಡಿದರೆ ಕರುಳಿನ ಆರೋಗ್ಯಕ್ಕೆ ಮಾತ್ರವಲ್ಲ, ಸಂಪೂರ್ಣ ದೇಹಕ್ಕೆ ಒಳ್ಳೆಯದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ 10ಕ್ಕೂ ಹೆಚ್ಚಿನ ಆರೋಗ್ಯಕರ ಗುಣವಿದೆ, ಇದು ಕರುಳನ್ನು ಕ್ಲೆನ್ಸ್ ಮಾಡುತ್ತದೆ, ಬೊಜ್ಜು ಕರಗಿಸಿ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ, ಜೀರ್ಣಕ್ರಿಯೆಗೆ ಒಳ್ಳೆಯದು ಹೀಗೆ ಇದರ ನಾನಾ ಉಪಯೋಗಗಳನ್ನು ಪಟ್ಟಿ ಮಾಡುತ್ತಲೇ ಹೋಗಬಹುದು.

 ಮೊಸರು

ಮೊಸರು

ಮೊಸರು ಗ್ಯಾಸ್ಟ್ರಿಕ್ ಸಮಸ್ಯೆ ವಿರುದ್ಧ ಹೋರಾಡುವುದಲ್ಲದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಕರುಳು ಶುದ್ಧವಾಗುವುದು, ಆದ್ದರಿಂದ ಪ್ರತೀದಿನ ಕಪ್ ಮೊಸರನ್ನು ಆಹಾರದ ಜೊತೆ ತೆಗೆದುಕೊಳ್ಳಲು ಮರೆಯಬೇಡಿ.

 ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಇದರಲ್ಲಿ ಒಮೆಗಾ 3 ಎಂಬ ಕೊಬ್ಬಿನಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಣ್ಣೆ ಹಣ್ಣು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕುತ್ತದೆ.

ದವಸ ಧಾನ್ಯ

ದವಸ ಧಾನ್ಯ

ದವಸ ಧಾನ್ಯಗಳನ್ನು ತಿಂದರೆ , ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಕರುಳು ಕ್ಲೆನ್ಸ್ ಆಗುತ್ತದೆ.

ಕಾಳುಗಳು

ಕಾಳುಗಳು

ಮೊಳಕೆ ಬರಿಸಿದ ಕಾಳುಗಳಂತೂ ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ಕೂಡ ಕರುಳನ್ನು ಕ್ಲೀನ್ ಮಾಡುತ್ತದೆ. ಕರುಳಿನ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ತಡೆಯಲು ಕರುಳನ್ನು ಕ್ಲೆನ್ಸ್ ಮಾಡುವುದು ಒಳ್ಳೆಯದು.

English summary

Clean Colon Diet

If the colon is not functioning properly, you will keep suffering from digestive and stomach ailments like constipation, improper bowel movements etc. There are many foods that can help clean the colon.
X
Desktop Bottom Promotion