For Quick Alerts
ALLOW NOTIFICATIONS  
For Daily Alerts

ಕೀಮೋಥೆರಪಿ ಮಾಡಿಸಿದವರಿಗೆ ಉತ್ತಮವಾದ 10 ಆಹಾರ

|

ಅಕ್ಟೋಬರ್ ತಿಂಗಳು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ತಿಂಗಳಾಗಿದೆ. ಈ ತಿಂಗಳಿನಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ವೈದ್ಯರು, ಕ್ಯಾನ್ಸರ್ ಆಸ್ಪತ್ರೆಗಳು, NGO, ಮಾಧ್ಯಮಗಳು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ಅದಕ್ಕೆ ಜೀವನ ಶೈಲಿಯೇ ಪ್ರಮುಖ ಕಾರಣವೆಂಬುವುದು ತಿಳಿದುಬಂದಿದೆ.

ಭಾರತದ 11 ನಗರಗಳಲ್ಲಿ PBCR ನಡೆಸಿದ ಸಂಶೋಧನೆಯಲ್ಲಿ ಒಂದು ಲಕ್ಷ ಜನರಲ್ಲಿ ಶೇ 36ರಷ್ಟು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ತಿಳಿದುಬಂದಿದೆ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲೂ ಕಂಡು ಬರುತ್ತಿದೆ.

ಸ್ತನ ಕ್ಯಾನ್ಸರ್ ಅನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಚಿಕಿತ್ಸೆ ನೀಡುವುದು ಸುಲಭ. ಕೀಮೋಥೆರಪಿ ಮಾಡಿಸಿ, ಆರೋಗ್ಯಕರ ಡಯಟ್ ಪಾಲಿಸಿದರೆ ಸ್ತನ ಕ್ಯಾನ್ಸರ್ ನಿಂದ ಪಾರಾಗಬಹುದು. ಸ್ತನ ಕ್ಯಾನ್ಸರ್ ತಡೆಗಟ್ಟಲು ಮತ್ತು ಕೀಮೋಥೆರಪಿ ಚಿಕಿತ್ಸೆಗೆ ಒಳಗಾದವರು ಬೇಗನೆ ಚೇತರಿಸಿಕೊಳ್ಳಲು ಈ ಕೆಳಗಿನ ಆಹಾರಗಳು ಸಹಾಯಕಾರಿಯಾಗಿದೆ.

ಹಣ್ಣುಗಳನ್ನು ತಿನ್ನಿ

ಹಣ್ಣುಗಳನ್ನು ತಿನ್ನಿ

ಕೀಮೋಥೆರಪಿ ಮಾಡಿಸಿದವರು ಸಾಕಷ್ಟು ಹಣ್ಣುಗಳನ್ನು ತಿನ್ನಬೇಕು, ಅದರಲ್ಲೂ ಸಿಟ್ರಸ್ ಅಂಶವಿರುವ ಹಣ್ಣುಗಳನ್ನು ತಿನ್ನಬೇಕು, ಇತರರು ಸ್ತನ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಹಣ್ಣುಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ.

 ಆಲೂಗಡ್ಡೆ

ಆಲೂಗಡ್ಡೆ

ಸ್ತನ ಕ್ಯಾನ್ಸರ್ ಇರುವ ವ್ಯಕ್ತಿಗೆ ಆಲೂಗಡ್ಡೆ ಬೆಸ್ಟ್ ಆಹಾರವಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅದರಲ್ಲೂ ಬೇಯಿಸಿದ ಆಲೂಗಡ್ಡೆ ತುಂಬಾ ಒಳ್ಳೆಯದು.

ಅನ್ನ

ಅನ್ನ

ಕೀಮೋಥೆರಪಿ ಮಾಡಿಸಿದವರು ಅನ್ನ ತಿನ್ನಬಹುದು. ಅನ್ನದಲ್ಲಿರುವ ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಬ್ರೆಡ್

ಬ್ರೆಡ್

ಧಾನ್ಯಗಳಿಂದ ಮಾಡಿದ ಬ್ರೆಡ್ ಅನ್ನು ಕೀಮೋಥೆರಪಿ ಮಾಡಿಸಿದವರಿಗೆ ಕೊಡಬಹುದು.

 ಪಾಸ್ತಾ

ಪಾಸ್ತಾ

ಪಾಸ್ತಾವನ್ನು ಜಂಕ್ ಫುಡ್ಸ್ ಗುಂಪಿಗೆ ಸೇರಿಸಬಹುದಾದರೂ ಇದನ್ನು ಕ್ಯಾನ್ಸರ್ ಕಾಯಿಲೆ ವಿರುದ್ಧ ಹೋರಾಡುತ್ತಿರುವವರಿಗೆ ನೀಡಬಹುದು. ಪಾಸ್ತಾ ಅವರ ಬಾಯಿಗೆ ರುಚಿಯನ್ನು ನೀಡುವಲ್ಲಿಯೂ ಸಹಕಾರಿ.

ತೆಳು ಮಾಂಸ

ತೆಳು ಮಾಂಸ

ತೆಳು ಮಾಂಸದಲ್ಲಿ ಅಧಿಕ ಕೊಬ್ಬಿನಂಶ ಇರುವುದಿಲ್ಲ. ಆದ್ದರಿಂದ ಕೊಲೆಸ್ಟ್ರಾಲ್ ಅಂಶ ಹೆಚ್ಚುತ್ತದೆ ಎಂಬ ಭಯವಿಲ್ಲದೆಯೇ ಇದನ್ನು ತಿನ್ನಬಹುದು, ಅಲ್ಲದೆ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಮತ್ತು ವಿಟಮಿನ್ಸ್ ದೊರೆಯುವುದು.

ಬೀನ್ಸ್

ಬೀನ್ಸ್

ಬೇಯಿಸಿದ ಬೀನ್ಸ್ ಅನ್ನು ದಿನಾ ತಿಂದರೆ ಇವು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವುದರಿಂದ ಕೀಮೋಥೆರಪಿ ಮಾಡಿಸಿದವರು ಬೇಗನೆ ಚೇತರಿಸಿಕೊಳ್ಳಬಹುದು.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಕೀಮೋಥೆರಪಿ ಮಾಡಿಸಿದರೆ ತುಂಬಾ ದೇಹದ ತೂಕ ಕಮ್ಮಿಯಾಗುತ್ತದೆ. ಆದ್ದರಿಂದ ಅವರಲ್ಲಿ ಸುಸ್ತು ಕಂಡು ಬರುತ್ತದೆ. ಬೇಗನೆ ಚೇತರಿಕೆ ಕಂಡು ಬರಲು ಹಾಲಿನ ಉತ್ಪನ್ನಗಳನ್ನು ತಿನ್ನಬಹುದು.

 ಮೊಟ್ಟೆ

ಮೊಟ್ಟೆ

ಮೊಟ್ಟೆಯ ಬಿಳಿ ತಿನ್ನುವುದು ಒಳ್ಳೆಯದು. ಕೀಮೋಥೆರಪಿ ಮಾಡಿಸುವ ಮುನ್ನ ದಿನಕ್ಕೆ ಒಂದು ಮೊಟ್ಟೆ ತಿಂದರೆ ಒಳ್ಳೆಯದು.

ಮೀನು

ಮೀನು

ಮೀನಿನ ಅಡುಗೆಯನ್ನು ವಾರದಲ್ಲಿ 2 ಬಾರಿಯಾದರೂ ತಿನ್ನುವುದು ಒಳ್ಳೆಯದು.

English summary

Breast Cancer Chemotherapy Foods

There are tons of healthy foods Breast cancer patients should indulge in especially when they are on a chemotherapy treatment. Take a look at these healthy foods for Breast Cancer patients.
X
Desktop Bottom Promotion