For Quick Alerts
ALLOW NOTIFICATIONS  
For Daily Alerts

ರಕ್ತವನ್ನು ಶುದ್ಧೀಕರಿಸುವ 13 ಆಹಾರಗಳು

By Hemu
|

ನಮ್ಮ ದೇಹದಲ್ಲಿ ರಕ್ತದ ಪ್ರಮಾಣದ ಕಡಿಮೆಯಾಗದಂತೆ ನೋಡಿಕೊಳ್ಳುವುದು ಎಷ್ಟು ಅವಶ್ಯಕವೋ ಅಷ್ಟೇ ಅವಶ್ಯಕ ಶುದ್ಧವಾದ ರಕ್ತವನ್ನು ಹೊಂದುವುದು. ರಕ್ತದಲ್ಲಿ ಕಲ್ಮಶ ಹೆಚ್ಚಾದಂತೆ ಕಾಯಿಲೆಗಳು ಅಧಿಕವಾಗುವುದು. ನಿಮ್ಮ ರಕ್ತ ಕಲ್ಮಶವಾಗಿದೆ ಎಂದು ತೋರಿಸುವ ಪ್ರಮುಖ ಲಕ್ಷಣಗಳೆಂದರೆ:- ಆಗಾಗ ಕಾಡುವ ತಲೆನೋವು, ತಲೆ ಸುತ್ತು, ಅಲರ್ಜಿ, ತುರಿ, ರೋಗ ನಿರೋಧಕ ಶಕ್ತಿ ಕುಂದುವುದು, ಮೊಡವೆ, ತ್ವಚೆ ತುಂಬಾ ಡ್ರೈಯಾಗುವುದು, ತ್ವಚೆ ಕಪ್ಪು ಬಣ್ಣಕ್ಕೆ ತಿರುಗುವುದು(ತ್ವಚೆ ಕಂದಿ ಹೋಗುವುದು), ಬಿಳುಚಿಕೊಂಡ ತ್ವಚೆ.

ರಕ್ತವನ್ನು ಶುದ್ಧ ಮಾಡಲು ಅನೇಕ ಬಗೆಯ ಟಾನಿಕ್, ಔಷಧಗಳು ದೊರೆಯುವುದಾದರೂ ರಕ್ತದ ಶುದ್ಧೀಕರಣಕ್ಕೆ ನೈಸರ್ಗಿಕವಾದ ವಿಧಾನವನ್ನು ಬಳಸುವುದು ಒಳ್ಳೆಯದು. ರಕ್ತವನ್ನು ಶುದ್ಧೀಕರಿಸುವ ಆಹಾರಗಳನ್ನು ತಿನ್ನುವುದು ಮತ್ತು ಪ್ರತಿನಿತ್ಯ ವ್ಯಾಯಾಮ ಮಾಡುವುದು ಈ ಎರಡು ವಿಧಾನವನ್ನು ಅನುಸರಿಸಿದರೆ ಶುದ್ಧವಾದ ರಕ್ತ ನಿಮ್ಮದಾಗಿ, ಆರೋಗ್ಯಕರ ಜೀವನ ನಡೆಸಬಹುದು. ಇಲ್ಲಿ ನಾವು ರಕ್ತವನ್ನು ಶುದ್ಧೀಕರಿಸುವ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಬ್ರೊಕೋಲಿ

ಬ್ರೊಕೋಲಿ

ಬ್ರೊಕೋಲಿಯಲ್ಲಿ antioxidants ಇದ್ದು, ಇದು ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕಿ, ರಕ್ತವನ್ನು ಶುದ್ಧ ಮಾಡುತ್ತದೆ.

ಎಲೆಕೋಸು

ಎಲೆಕೋಸು

ಎಲೆಕೋಸು ಕೂಡ ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ. ಕ್ಯಾಬೇಜ್ ಅನ್ನು ಸಲಾಡ್ ನಲ್ಲಿ ಹಾಕಿ ತಿಂದರೆ ಮತ್ತಷ್ಟು ಆರೋಗ್ಯಕರ.

ಹೂಕೋಸು

ಹೂಕೋಸು

ಇದರಲ್ಲಿ chlorophyll ಎಂಬ ಅಂಶವಿದ್ದು, ಇದು ಕೂಡ ರಕ್ತವನ್ನು ಶುದ್ಧೀಕರಿಸುತ್ತದೆ.

ಹಾಗಲಕಾಯಿ

ಹಾಗಲಕಾಯಿ

ಹಾಗಾಲಕಾಯಿಯ ಖಾದ್ಯ ಮತ್ತು ಅದರ ಜ್ಯೂಸ್ ರಕ್ತವನ್ನು ಶುದ್ಧೀಕರಿಸುವಲ್ಲಿ ತುಂಬಾ ಪರಿಣಾಮಕಾರಿ.

ಕಹಿ ಬೇವಿನ ಎಲೆ

ಕಹಿ ಬೇವಿನ ಎಲೆ

ರಕ್ತ ತುಂಬಾ ಕಲ್ಮಶವಾಗಿ ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದ್ದರೆ ಪ್ರತೀದಿನ ಸ್ವಲ್ಪ ಕಹಿ ಬೇವಿನ ಎಲೆಯನ್ನು ತಿನ್ನಿ. ಇದು ಕೆಲವೇ ದಿನಗಳಲ್ಲಿ ನಿಮ್ಮ ರಕ್ತವನ್ನು ಶುದ್ಧ ಮಾಡುತ್ತದೆ.

ಬ್ರಾಹ್ಮೀ ಎಲೆ

ಬ್ರಾಹ್ಮೀ ಎಲೆ

ಬ್ರಾಹ್ಮೀ ಎಲೆ ರಕ್ತವನ್ನು ಶುದ್ಧೀಕರಿಸುವುದು ಮಾತ್ರವಲ್ಲ, ನಿಮ್ಮ ಜ್ಞಾಪಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

 ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ರಕ್ತದಲ್ಲಿರುವ ಕೊಬ್ಬಿನಂಶ ಕಡಿಮೆ ಮಾಡುತ್ತದೆ ಹಾಗೂ ಅದರಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಬೇಗನೆ ತೆಳ್ಳಗಾಗ ಬಯಸುವವರು ಬೆಳಗ್ಗೆ 1-2 ಎಸಳು ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು.

ಕ್ಯಾರೆಟ್

ಕ್ಯಾರೆಟ್

ಬೆಳಗ್ಗೆ ಒಂದು ಅಥವಾ 2 ಕ್ಯಾರೆಟ್ ತಿಂದರೆ ಇದು ರಕ್ತವನ್ನು ಶುದ್ಧೀಕರಿಸುವುದು ಮಾತ್ರವಲ್ಲ, ನಿಮ್ಮ ತ್ವಚೆಯ ಅಂದವನ್ನೂ ಹೆಚ್ಚಿಸುವುದು.

ಖರ್ಬೂಜ

ಖರ್ಬೂಜ

ಇದು ರಕ್ತವನ್ನು ಶುದ್ಧೀಕರಿಸುವುದು ಮಾತ್ರವಲ್ಲ, ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ.

ಅನಾನಾಸ್

ಅನಾನಾಸ್

ರಕ್ತವನ್ನು ಶುದ್ಧೀಕರಿಸಲು ತಿನ್ನಬೇಕಾದ ಮತ್ತೊಂದು ಹಣ್ಣೆಂದರೆ ಪೈನಾಪಲ್. ಈ ಹಣ್ಣು ಕಿಡ್ನಿಯ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಶುಂಠಿ ಟೀ

ಶುಂಠಿ ಟೀ

ಪ್ರತೀದಿನ ಶುಂಠಿ ಟೀ ಕುಡಿಯುವುದರಿಂದ ರಕ್ತವನ್ನು ಶುದ್ಧೀಕರಿಸಬಹುದು.

ಪಾರ್ಸ್ಲೆ

ಪಾರ್ಸ್ಲೆ

ಇದರ ಜ್ಯೂಸ್ ಅನ್ನು ಪ್ರತೀದಿನ ತೆಗೆದುಕೊಂಡರೆ ಕೆಲವೇ ದಿನಗಳಲ್ಲಿ ಶುದ್ಧವಾದ ರಕ್ತವನ್ನು ಪಡೆಯಬಹುದು.

 ನೆಲ್ಲಿಕಾಯಿ ಮತ್ತು ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಮತ್ತು ನೆಲ್ಲಿಕಾಯಿ ಜ್ಯೂಸ್

ಪ್ರತೀದಿನ ನೆಲ್ಲಿಕಾಯಿ ತಿನ್ನುವುದು ಅಥವಾ ಸ್ವಲ್ಪ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬಿನಂಶ ಕರಗುವುದರ ಜೊತೆ ರಕ್ತ ಶುದ್ಧವಾಗುವುದು.

English summary

Blood Purifying Foods

If you want to purify your blood, you need to include some detoxifying foods which cleanse the blood and helps in the healthy functioning of the liver and kidneys. Check out the blood purifying foods.
X
Desktop Bottom Promotion