For Quick Alerts
ALLOW NOTIFICATIONS  
For Daily Alerts

ಸುಲಭವಾಗಿ ದೇಹಕ್ಕೆ ಆಕಾರ ನೀಡಿ

By Poornima Heggade
|

ನಾವು ಸ್ಲಿಮ್ ಮತ್ತು ಫಿಟ್ ಆಗಿದ್ದರಷ್ಟೇ ನಾವು ಅಂದ ಕಾಣುವುದು. ನಮ್ಮನ್ನು ನೋಡಿದ ಕೂಡಲೇ ಆಕರ್ಷಕವಾಗಿ ಕಾಣಬೇಕು ಎಂದರೆ ನಮ್ಮ ಮೈಕಟ್ಟು ಅಂದವಾಗಿರಬೇಕು. ಅದಕ್ಕೆ ನಮ್ಮ ದೇಹದಲ್ಲಿ ಬೊಜ್ಜು ಇರಬಾರದು. ಆದರೆ ನಮ್ಮೆಲ್ಲರ ದೇಹ ಹೆಚ್ಚಾದ ಬೊಜ್ಜನ್ನು ಒಂದು ಕಡೆ ಶೇಖರಣೆ ಮಾಡುವ ಒಂದು ಅಭ್ಯಾಸವನ್ನು ಬೆಳೆಸಿಕೊಂಡಿದೆ. ಉದಾಹರಣೆಗೆ ಮೇಲೆ ಬಹಳ ತೆಳುವಾದ ದೇಹವಿದ್ದರೆ ಕೆಳಗೆ ಅಷ್ಟೇ ದಪ್ಪನಾದ ಶರೀರವಿರುತ್ತದೆ. ಸೇಬು ಹಣ್ಣಿನ ಆಕಾರದ ದೇಹದಲ್ಲಿ ಸೊಂಟದ ಬಳಿಯಲ್ಲಿ ಮಾತ್ರ ಒಟ್ಟಾದ ಬೊಜ್ಜಿರುತ್ತದೆ ಹಾಗೂ ಇದನ್ನು ಬಿಟ್ಟು ದೇಹದ ಉಳಿದ ಭಾಗಗಳು ಅಷ್ಟೇನು ಬೊಜ್ಜಿನಿಂದ ಕೂಡಿರುವುದಿಲ್ಲ. ಹೀಗಾಗದಂತೆ ತಡೆಯಬೇಕು ಎಂದರೆ ಅದಕ್ಕೆ ಸೂಕ್ತ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮ ಅಗತ್ಯ.

ಆದರೆ ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಮಾತ್ರ ವ್ಯಾಯಾಮವನ್ನು ಮಾಡಿ ಉಳಿದ ದೇಹದ ಭಾಗಗಳನ್ನು ಅವಗಣನೆ ಮಾಡುವುದಲ್ಲ. ಎಲ್ಲಾ ಭಾಗಗಳಿಗೂ ಸಮ ಪ್ರಮಾಣದ ಪ್ರಾಮುಖ್ಯತೆ ನೀಡಬೇಕು. ವ್ಯಾಯಾಮಗಳಲ್ಲೂ ಹಲವು ಬಗೆಗಳಿದ್ದು ಇಲ್ಲಿ ಕೆಲವನ್ನು ನಿಮಗಾಗಿ ಕೊಡಲಾಗಿವೆ. ಇದು ಯಾವುದೇ ಒಂದು ಭಾಗವನ್ನಷ್ಟೇ ಗಮನ್ದಲ್ಲಿಡದೇ ಎಲ್ಲಾ ಭಾಗಗಳಿಗೂ ವ್ಯಾಯಾಮ ಆಗುವಂತೆ ಇವೆ. ಇವನ್ನು ಪ್ರತಿದಿನ ಶಿಸ್ತಿನಲ್ಲಿ ಪಾಲಿಸಿದ್ದೇ ಆದಲ್ಲಿ ನಿಮ್ಮ ದೇಹದ ಒಂದ ಭಾಗದಲ್ಲಿ ಬೊಜ್ಜು ತುಂಬಿಕೊಳ್ಳುವ ಸಮಸ್ಯೆ ಇರುವುದಿಲ್ಲ.

ಈ ಕೆಳಗಿನವುಗಳಲ್ಲಿ ಎಲ್ಲವನ್ನೂ ಅಥವಾ ನಿಮಗೆ ಸರಿಹೊಂದುವ ಕೆಲವನ್ನು ಆರಿಸಿ ಪ್ರತಿದಿನ ಮಾಡಲು ಆರಂಭಿಸಿ.

1.ನೃತ್ಯ

1.ನೃತ್ಯ

ನಮ್ಮ ದೇಹದ ಎಲ್ಲಾ ಭಾಗಗಳಿಗೂ ವ್ಯಾಯಾಮ ದೊರಕುವಂತೆ ಮಾಡಲು ನೃತ್ಯ ಬಹಳ ಉತ್ತಮ ಸಾಧನವಾಗಿದೆ. ಇದರ ಪರಿಣಾಮವನ್ನು ನೀವು ದೇಹದ ಕೇವಲ ಒಂದೇ ಭಾಗದ ಮೇಲೆ ಕಾಣಲು ಸಾಧ್ಯವಿಲ್ಲ. ಎಲ್ಲಾ ಕಡೆಯೂ ಇದರ ಪರಿಣಾಮ ಇರುತ್ತದೆ. ಪ್ರತಿದಿನ ನೃತ್ಯಾಭ್ಯಾಸ ಮಾಡುವುದರಿಂದ ನಿಮ್ಮ ದೇಹವನ್ನು ಸರಿಯಾದ ಆಕಾರಕ್ಕೆ ತರಲು ಮತ್ತು ದೇಹದ ಸ್ನಾಯುಗಳಿಗೆ ಶಕ್ತಿ ತುಂಬಲು ಸಹಕಾರಿ. ಇದರ ಜೊತೆಗೆ ಇದು ಮೋಜಿನ ಚಟುವಟಿಕೆಯೂ ಆಗಿದೆ.

2.ತೂಕಗಳು

2.ತೂಕಗಳು

ಬೇರೆ ಬೇರೆ ತೂಕದ ಕಲ್ಲುಗಳನ್ನು ಎತ್ತುವ ಮೂಲಕ ವ್ಯಾಯಾಮ ಮಾಡುವುದು ಇನ್ನೊಂದು ರೀತಿಯ ಚಟುವಟಿಕೆ. ಇದರಿಂದ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ ಹಾಗೂ ನಮ್ಮ ದೇಹ ಸುಂದರವಾಗಿ ಕಾಣುತ್ತದೆ. ಇದು ಅಷ್ಟೊಂದು ಸುಲಭವಲ್ಲ ಆದರೆ ಪರಿಣಾಮವೂ ಅಷ್ಟೇ ಆಕರ್ಷಕವಾಗಿರುತ್ತದೆ. ಇವು ನಮ್ಮ ದೇಹಕ್ಕೆ ಬೇರೆ ಯಾವುದೇ ವ್ಯಾಯಮ ನೀಡುವುದಕ್ಕಿಂತ ಹೆಚ್ಚಿನ ರೂಪ ಕೊಡುತ್ತವೆ.

3.ಕಾರ್ಡಿಯೋ

3.ಕಾರ್ಡಿಯೋ

ಸೈಕ್ಲಿಂಗ್, ಓಡುವುದು, ಟ್ರೇಡ್ ಮಿಲ್, ಸ್ಟೆಪ್ಪಿಂಗ್ ಮುಂತಾದುವೆಲ್ಲಾ ಕಾರ್ಡಿಯೋ ದೈಹಿಕ ವ್ಯಾಯಾಮಗಳು. ಇವು ನಮ್ಮ ದೇಹದ ಎಲ್ಲಾ ಭಾಗಗಳಿಂದ ಹೆಚ್ಚಿನ ಬೊಜ್ಜನ್ನು ಕರಗಿಸಿ ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ. ಅಲ್ಲದೇ ನಮ್ಮ ದೇಹಕ್ಕೆ ಸುಂದರವಾದ ಆಕಾರವನ್ನೂ ನೀಡುತ್ತವೆ.

4.ಯೋಗ

4.ಯೋಗ

ದೇಹದ ಸುಂದರ ಆಕಾರಕ್ಕೆ ಯೋಗ ಮತ್ತೊಂದು ಉತ್ತಮ ಚಟುವಟಿಕೆ. ಇದು ದೀರ್ಘಕಾಲಿಕ ಮತ್ತು ಶಾಶ್ವತ ಪರಿಣಾಮ ಎಂದೂ ಪ್ರಸಿದ್ಧವಾಗಿದೆ. ಇದು ದೇಹಕ್ಕೆ ಆಕಾರ ನೀಡುವ ಜೊತೆಗೆ ನಮ್ಮ ಚರ್ಮ, ಆರೋಗ್ಯ, ಒತ್ತಡಗಳ ಮೇಲೂ ಪರಿಣಾಮ ಬೀರುತ್ತದೆ.

5.ಕ್ರೀಡೆಗಳು

5.ಕ್ರೀಡೆಗಳು

ನಮ್ಮ ಮೆಚ್ಚಿನ ಆಟಗಳನ್ನು ಆಡುವುದೂ ಬೊಜ್ಜು ಕರಗಿಸುವ ಇನ್ನೊಂದು ಸೂತ್ರ. ಬಾಡ್ಮಿಂಟನ್, ಟೆನ್ನಿಸ್, ಕ್ರಿಕೆಟ್ ಮುಂತಾದ ಆಟಗಳು ನಿಮ್ಮ ಮನರಂಜನೆಯೂ ಹೌದು ಜೊತೆಗೆ ಆರೋಗ್ಯ ಮತ್ತು ದೇಹದಾಕಾರಕ್ಕೂ ಒಳಿತು. ಈ ಎಲ್ಲಾ ಆಟಗಳನ್ನು ಆಡುವಾಗ ಸಾಕಷ್ಟು ಶಕ್ತಿಯ ವ್ಯಯವಾಗುತ್ತದೆ ಹಾಗೂ ಈ ಸಮಯದಲ್ಲಿ ದೇಹದ ಎಲ್ಲಾ ಬೊಜ್ಜು ಕರಗುತ್ತದೆ.

6.ಸ್ಟ್ರೆಚ್ ವ್ಯಾಯಾಮಗಳು

6.ಸ್ಟ್ರೆಚ್ ವ್ಯಾಯಾಮಗಳು

ಈ ವ್ಯಾಯಾಮಗಳನ್ನು ಆರಂಭ ಮಾಡಿದಲ್ಲಿ ಇವನ್ನು ನಿಯಮಿತವಾಗಿ ಮಾಡಬೇಕು. ಇವು ನಮ್ಮ ದೇಹದ ತೂಕವನ್ನು ಇಳಿಸುವುದಿಲ್ಲ ಆದರೆ ನಮ್ಮ ದೇಹಕ್ಕೆ ಆಕಾರ ನೀಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದು ನೀವು ಊಹಿಸಿಯೂ ಇರದ ಆಕಾರವನ್ನು ನಿಮ್ಮ ದೇಹಕ್ಕೆ ನೀಡುತ್ತವೆ. ನಂಬಿಕೆ ಬರಲಿಲ್ಲ ಎಂದಾದರೆ ಪ್ರಯತ್ನಿಸಿ ನೋಡಿ.

7.ತಾಯಿ ಚಿ

7.ತಾಯಿ ಚಿ

ಇವು ಒಂದು ಬಗೆಯ ಚೈನೀಸ್ ವ್ಯಾಯಾಮಗಳು. ಇವು ನಿಮ್ಮ ದೇಹದ ಶಕ್ತಿಯನ್ನು ಜೊತೆಗೆ ನಿಮ್ಮ ಸ್ವ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇವು ನಿಮ್ಮ ದೇಹವನ್ನು ನಿಮಗೆ ಬೇಕಾದಂತೆ ಬಗ್ಗಿಸಲು ಆಗುವಂತೆಯೂ ಮಾಡುತ್ತವೆ. ನೀವು ವ್ಯಾಯಾಮ ಮಾಡಲು ಇಷ್ಟಪಡುವವರಾದರೆ ಇದನ್ನು ಖಂಡಿತ ಒಮ್ಮೆ ಪ್ರಯತ್ನಿಸಿ ನೋಡಿ.

8.ಈಜುವಿಕೆ

8.ಈಜುವಿಕೆ

ನೀರಿನ ಚಟುವಟಿಕೆಗಳು ಬೇಗನೆ ಬೊಜ್ಜನ್ನು ಕರಗಿಸಲು ಇರುವ ಸುಲಭವಾದ ವ್ಯಾಯಾಮಗಳು. ಈಜುವಿಕೆಯಿಂದಾಗಿ ನಮ್ಮ ತೂಳುಗಳು ಮತ್ತು ಕಾಲುಗಳಲ್ಲಿ ಬಲ ಬರುತ್ತದೆ. ಹಾಗೂ ಸಾಕಷ್ಟು ಕ್ಯಾಲರಿಯನ್ನು ಇದರ ಮೂಲಕ ವ್ಯಯಿಸಬಹುದು. ಇದು ದೇಹಕ್ಕೆ ಎಲ್ಲಾ ರೀತಿಯಿಂದಲೂ ಒಳ್ಳೆಯ ವ್ಯಾಯಾಮ

9.ಸ್ಕಿಪ್ಪಿಂಗ್

9.ಸ್ಕಿಪ್ಪಿಂಗ್

ಪ್ರತಿದಿನ 100 - 200 ಸ್ಕಿಪ್ಸ್ ಮಾಡಿದ್ದೇ ಆದಲ್ಲಿ ನಿಮ್ಮಷ್ಟು ಅಂದವಾದ ಮೈಕಟ್ಟು ನಿಮ್ಮ ನಗರದಲ್ಲೇ ಯಾರಿಗೂ ಇರಲಾರದು. ಇದು ದೇಹದ ಎಲ್ಲಾ ಭಾಗಗಳಿಗೂ ಸಮ ಪ್ರಮಾಣದ ವ್ಯಾಯಾಮವನ್ನು ನೀಡುತ್ತದೆ.

10.ಜಿಮ್

10.ಜಿಮ್

ಜಗತ್ತಿನಲ್ಲೇ ಅತೀ ಹೆಚ್ಚು ಜನರು ಮಾಡುವ ಚಟುವಟಿಕೆ ಜಿಮ್. ಇದರಲ್ಲಿ ಮೇಲೆ ಹೇಳಿದ ಎಲ್ಲಾ ತರಹದ ಚಟುವಟಿಕೆಗಳೂ ಒಳಗೊಂಡಿರುತ್ತವೆ.

English summary

Best Workouts For Body Shape

Our body has a tendency to increase more fats in a particular body part. For example, a pear shaped body has a huge bottom and small top, an apple shaped body had fats accumulated to the waist and a chilly type body has no fats found anywhere.
Story first published: Monday, December 30, 2013, 11:09 [IST]
X
Desktop Bottom Promotion