For Quick Alerts
ALLOW NOTIFICATIONS  
For Daily Alerts

ಬೆನ್ನು, ಸೊಂಟ ನೋವಿನಿಂದ ಮುಕ್ತಿಗೆ ಈ ರೀತಿ ಮಾಡಿ

By Super
|

ನಾವು ಯಾವುದೇ ಕೆಲಸವನ್ನು ಮಾಡುತ್ತಿರಲಿ, ಕೆಲಸ ಮಾಡುವಾಗ ಮಾತ್ರ ನಮ್ಮ ನಿಲುವು, ಭಂಗಿ, ನಡಿಗೆ ಎಲ್ಲವೂ ಸರಿಯಾಗಿರಬೇಕು. ಆಗ ಮಾತ್ರ ನಾವು ನೋಡುಗರ ದೃಷ್ಟಿಯಲ್ಲೂ ಸೈ ಎನ್ನಿಸಿಕೊಳ್ಳಬಹುದು!

ಬೆನ್ನು, ಕುತ್ತಿಗೆ ಕಾಲು ನೋವುಗಳು ಆಗಾಗ ಕೆಲವರಲ್ಲಿ, ಅದೂ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುವುದು ಸಾಮಾನ್ಯ. ಇದಕ್ಕೆ ಕಾರಣ ನಮ್ಮ ಬಗ್ಗೆ ನಮಗೇ ಇರುವ ನಿರ್ಲಕ್ಷ ಎಂದರೆ ನಂಬುವಿರೆ! ಆದರೆ ಇದು ಖಂಡಿತ ನಿಜ. ಯಾವುದೇ ಕೆಲಸವನ್ನು ಮಾಡುವಾಗ ನಮ್ಮ ದೇಹ ಸುಸ್ಥಿತಿಯಲ್ಲಿರಬೇಕು. ಅದರಲ್ಲೂ ಯಾವ ಯಾವ ಸಂದರ್ಭಗಳಲ್ಲಿ ಹೇಗಿರಬೇಕು ಎಂಬುದು ಬಹಳ ಮುಖ್ಯ.

ನೀವು ಮಲಗಿದಾಗ

ನೀವು ಮಲಗಿದಾಗ

ದಿನವೂ ಮಲಗುವಾಗ ಹೆಚ್ಚು ದಿಂಬುಗಳನ್ನು ಬಳಸಿ ಮಲಗುವುದು ಒಳ್ಳೆಯದಲ್ಲ. ಇದರಿಂದ ಕತ್ತು ಹಾಗೂ ಬೆನ್ನಿನ ಸೆಳೆತ ಉಂಟಾಗಬಹುದು. ಆದ್ದರಿಂದ ತಲೆಯ ಅಡಿಗೆ ದೇಹಕ್ಕೆ ಬೆಂಬಲ ನೀಡುವಂತಹ ಆದರೆ ಬೆನ್ನಿನ ಮೂಳೆಗೆ ಸಮಾನಾಂತರವಾಗಿ ತಲೆಯನ್ನಿಟ್ಟು ಮಲಗಬೇಕು ಎಂದು ತಜ್ಞರು ಹೇಳುತ್ತಾರೆ.

ಮನೆಗೆಲಸ ಮಾಡುವಾಗ

ಮನೆಗೆಲಸ ಮಾಡುವಾಗ

ಮನೆಗೆಲಸವೂ ಕೂಡ ಒಂದು ಬಗೆಯ ವ್ಯಾಯಾಮವೇ. ಉದಾಹರಣೆಗೆ, ವ್ಯಾಕ್ಯೂಮ್ ಮಾಡುವಾಗ ಒಂದೇ ಸ್ಥಳದಲ್ಲಿ ನಿಲ್ಲದೇ ಯಂತ್ರ ಚಲಿಸಿದಂತೆಯೇ ನೀವೂ ಕಾಲಿನ ಮಂಡಿ ಮಡಚುವುದು, ಕಾಲನ್ನು ಹಿಂದೆ ಮುಂದೆ ಮಾಡುವುದು, ಬೆನ್ನು ಬಾಗಿಸುವುದು ಮಾಡಿದರೆ ದೇಹಕ್ಕೆ ಸೂಕ್ತವಾದ ವ್ಯಾಯಾಮ ದೊರೆಯುತ್ತದೆ.

ನಿಮಗೆ ಶೀತ ಆದಾಗ

ನಿಮಗೆ ಶೀತ ಆದಾಗ

ಬೆನ್ನು ನೋವಿಗೆ ಮೊದಲ ಐದು ಕಾರಣಗಳಲ್ಲಿ ಸೀನುವಿಕೆಯೂ ಒಂದು. ಇದಕ್ಕೆ ಒಸ್ಟಿಯೊಪಾತ್ಸ್ ಎನ್ನುತ್ತಾರೆ. ಹಠಾತ್ತನೆ ಸೀನುವಾಗ ಕುತ್ತಿಗೆ ಹಾಗೂ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನೀವು ಕೆಮ್ಮುವಾಗ ಅಥವಾ ಸೀನುವಾಗ ಬೆನ್ನುಮೂಳೆಯ ಬದಲಿಗೆ ಮೊಣಕಾಲನ್ನು ಮಡಚಿ ಕಾಲಿಗೆ ಹೆಚ್ಚು ಒತ್ತಡವನ್ನು ಹಾಕಿದರೆ ಬೆನ್ನು ನೋವು ಕಾಣಿಸಿಕೊಳ್ಳುವುದಿಲ್ಲ.

ಚಪ್ಪಲಿ

ಚಪ್ಪಲಿ

ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು, ವಿಶೇಷವಾಗಿ ಸ್ಟಿಲಿಟೊಸ್ ಗಳನ್ನು ಧರಿಸುವುದರಿಂದ, ನಿಮ್ಮ ಸೊಂಟ ಮತ್ತು ಬೆನ್ನಿನ ಕೆಳಭಾಗದ ಮೇಲೆ ಒತ್ತಡ ಉಂಟಾಗುತ್ತದೆ. ನಿಮ್ಮ ನಿಲುವು ಬದಲಾಯಿಸುವಾಗ, ದೇಹದ ಸಂಪೂರ್ಣ ತೂಕವನ್ನು ಪಾದದ ಮೇಲೆ ಹಾಕಬೇಕಾಗುತ್ತದೆ. ಇದರಿಂದ ಕಾಲು ಹಾಗೂ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಸ್ಪಂಜಿನಂಥ ಒಳ ಅಡಿಭಾಗವಿರುವ ಚಪ್ಪಲಿಗಳು. ಒತ್ತಡವನ್ನು ಹೀರಿಕೊಳ್ಳುಲು ಸಹಾಯ ಮಾಡುತ್ತವೆ.

 ಟಿ.ವಿ ನೋಡುವಾಗ:

ಟಿ.ವಿ ನೋಡುವಾಗ:

ಸಾಮಾನ್ಯವಾಗಿ ಟಿ.ವಿಯನ್ನು ವೀಕ್ಷಿಸುವಾಗ ಕುಷನ್ ಮೃದು ಸೋಫಾಗಳನ್ನು ಬಳಸುತ್ತೀರಿ. ಆದರೆ ಇದು ನಿಮ್ಮ ದೇಹದ ನಿಲುವನ್ನು ಸರಿಯಾಗಿರಿಸುವುದಿಲ್ಲ. ಹೀಗೆ ಟಿ.ವಿ ನೋಡುವಾಗ ಬೆನ್ನೂ ಕೂಡ ಬಾಗುತ್ತದೆ. ಆದ್ದರಿಂದ ಟಿ.ವಿ ನೋಡುವಾಗ ಊಟದ ಕೊಠಡಿಯಲ್ಲಿ ಬಳಸುವಂತಹ ಕುರ್ಚಿಗಳನ್ನು ಬಳಸುವುದು ಉತ್ತಮ. ಯಾಕೆಂದರೆ ಇದರಿಂದ ನೀವು ನೇರವಾಗಿ ಕುಳಿತುಕೊಳ್ಳಬಹುದಾಗಿದೆ.

ಲ್ಯಾಪ್ ಟಾಪ್

ಲ್ಯಾಪ್ ಟಾಪ್

ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರು ಅವರ ಬೆನ್ನು ನೋವಿನ ಸಮಸ್ಯೆಗೆ ಸದಾ ಪರಿಹಾರ ಹುಡುಕುತ್ತಲೇ ಇರುತ್ತಾರೆ. ಕಂಪ್ಯೂಟರ್ ಕೀ- ಬೋರ್ಡ್ ನಲ್ಲಿ ಟೈಪ್ ಮಾಡುವುದು ಸಾಮಾನ್ಯ ವ್ಯಾಯಾಮ ಮಾಡಿದಾಗ ಉಂಟಾಗುವ ನೋವಿಗಿಂತಲೂ ಹೆಚ್ಚಾಗಿರುತ್ತದೆ. ಆದ್ದರಿಂದ ಈ ನೋವನ್ನು ತಪ್ಪಿಸಲು ಕುರ್ಚಿಯಲ್ಲಿ ಆದಷ್ಟು ನೇರವಾಗಿ ಕುಳಿತುಕೊಳ್ಳಿ. ಮತ್ತು ಬಹಳ ಸಮಯದವರೆಗೆ ಒಂದೇ ಜಾಗದಲ್ಲಿ ಕುಳಿತುಕೊಳ್ಳಬೇಡಿ.

ಕಂಪ್ಯೂಟರ್ ಬಳಸುವಾಗ

ಕಂಪ್ಯೂಟರ್ ಬಳಸುವಾಗ

ಕಂಪ್ಯೂಟರ್ ಬಳಸುವಾಗ ನಿಮ್ಮ ಕಾಲುಗಳು ನೇರವಾಗಿ ನೆಲದಲ್ಲಿ ಚಾಚಿರಲಿ. ಕಂಪ್ಯೂಟರ್ ಸ್ಕ್ರೀನ್ ನಿಮ್ಮ ಕಣ್ಣ ಮುಂದೆ ನೇರವಾಗಿ ಇರುವಂತೆ ನೋಡಿಕೊಳ್ಳಿ. ಬೆನ್ನನ್ನು ಹಿಂದೆ ಮುಂದೆ ಆಗಾಗ ಬಗ್ಗಿಸಿ. ಕಾಲು ಬೆರಳುಗಳನ್ನು ಹತ್ತು ಸೆಕೆಂಡುಗಳ ಕಾಲ ಒತ್ತಿ ಹಿಡಿಯಿರಿ. ಇದೊಂದು ವ್ಯಾಯಾಮದಂತಾಗಿದ್ದು ಕಾಲು ನೋವು ಉಂಟಾಗದಂತೆ ತಡೆಯುತ್ತದೆ.

ಫೋನ್ ನಲ್ಲಿ ಮಾತನಾಡುವಾಗ

ಫೋನ್ ನಲ್ಲಿ ಮಾತನಾಡುವಾಗ

ನೀವು ಕೆಲಸದಲ್ಲಿ ನಿರತರಾಗಿದ್ದರೆ, ಫೋನ್ ಬಂದರೆ ಒಮ್ಮೆಯಾದರೂ ಎದ್ದು ನಿಂತು ಬೆನ್ನನ್ನು ಹಿಂದಕ್ಕೆ ಬಾಗಿಸಿ. ಮಾತನಾಡುವಾಗ ಕುತ್ತಿಗೆ ಮತ್ತು ಬುಜದ ನಡುವೆ ಫೋನ್ ಇಟ್ಟು ಅದೇ ಸಮಯದಲ್ಲಿ ಟೈಪ್ ಮಾಡಬೇಡಿ. ಇದರಿಂದ ಕುತ್ತಿಗೆ ನೋವು ಉಂಟಾಗಬಹುದು.

ವಾಹನ ಚಾಲನೆ ಮಾಡುವಾಗ

ವಾಹನ ಚಾಲನೆ ಮಾಡುವಾಗ

ಯಾವುದೇ ಆಘಾತವಾಗದಂತೆ ರಕ್ಷಿಸಲು ವಾಹನದಲ್ಲಿ ಚಾಲನೆ ಮಾಡುವಾಗ ನಿಮ್ಮ ತಲೆ ನೇರವಾಗಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಮೊದಲು ನೇರವಾಗಿ ಕುಳಿತುಕೊಳ್ಳಿ. ನಿಮ್ಮ ವಾಹನದಲ್ಲಿ ಮುಂದಿರುವ ಕನ್ನಡಿಯಲ್ಲಿ ಹಿಂದಿನ ವಾಹನಗಳೂ ಕಾಣುವಂತೆ ನೇರವಾಗಿ ಕುಳಿತುಕೊಳ್ಳಬೇಕು. ಟ್ರಾಫಿಕ್ ಗಳಲ್ಲಿ ನಿಮ್ಮ ಹೊಟ್ಟೆಯನ್ನು ಒಳಗೆಳೆದುಕೊಳ್ಳುವ ವ್ಯಾಯಾಮವನ್ನೂ ಕುಳಿತಲ್ಲಿಯೇ ಮಾಡಬಹುದು. ಪ್ರಬಲ (core) ಕೋರ್ ನಿಮ್ಮ ಬೆನ್ನನ್ನು ರಕ್ಷಿಸುತ್ತದೆ.

ಈ ರೀತಿ ಮಾಡಲು ಮರೆಯದಿರಿ

ಈ ರೀತಿ ಮಾಡಲು ಮರೆಯದಿರಿ

ದಿನಕ್ಕೊಮ್ಮೆಯಾದರೂ ದೇಹದ ಎಲ್ಲಾ ಸ್ನಾಯುಗಳ ಗುಂಪನ್ನು 15-30 ಸೆಕೆಂಡುಗಳ ಕಾಲ ಸ್ಟ್ರೆಚಿಂಗ್ ಮಾಡುವುದು ಉತ್ತಮ. ಇದು ನಿಮ್ಮ ಬೆನ್ನು ನೋವು ಉಂಟಾಗದಂತೆ ಎಲ್ಲಾ ವಿಧಗಳಲ್ಲೂ ಸಂರಕ್ಷಿಸುತ್ತದೆ. ನಿಮ್ಮ ಕಾಲುಗಳನ್ನು ಕೇವಲ ಮಡಚುವುದು ಮಾತ್ರವಲ್ಲದೇ, ಅದನ್ನು ಆರೂ ದಿಕ್ಕುಗಳಲ್ಲೂ ಚಲನೆ ಮಾಡಬೇಕು. ನಿಲ್ಲುವುದು, ಕುಳಿತುಕೊಳ್ಳುವುದು, ಮಲಗುವುದು ಇವೆಲ್ಲವೂ ದೇಹದ ಸರಿಯಾದ ನಿಲುವಿಗೆ ಉತ್ತಮ ವ್ಯಾಯಾಮವಾಗಿವೆ.

English summary

Best Ways To Keep Your Posture Perfect | Health Benefits

Simple ways to keep your back strong and posture perfect, no matter what you are doing, but how you are doing that is important. Here are few tips to keep your posture perfect.
X
Desktop Bottom Promotion