For Quick Alerts
ALLOW NOTIFICATIONS  
For Daily Alerts

ಕೆಲಸದ ಒತ್ತಡದಿಂದ ವಿಶ್ರಾಂತಿ ಬೇಕೆಂದು ಅನಿಸುತ್ತಿದೆಯೇ?

By Super
|

ಪ್ರತಿಯೊಬ್ಬರ ದಿನ ನಿತ್ಯದ ಬದುಕಿನಲ್ಲೂ ಒತ್ತಡ ಎಂಬುದು ಇದ್ದೆ ಇರುತ್ತದೆ,ಅದು ಪರೀಕ್ಷೆಯ ಒತ್ತಡ,ಆಫೀಸ್ ನ ಮೀಟಿಂಗ್,ಡ್ಯೂ ಡೇಟ್ ಯಾವುದೇ ಇರಬಹುದು.ಈ ರೀತಿಯ ಒತ್ತಡದಿಂದ ನಮ್ಮ ಅರೋಗ್ಯ ಹದಗೆಡಬಹುದು.ಒತ್ತಡ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಇನ್ನಷ್ಟು ಸಮಸ್ಯೆಗಳು ಬಂದೊದಗಬಹುದು. ಒತ್ತಡ ಆರೋಗ್ಯವನ್ನು ಸಾಕಷ್ಟು ಹದಗೆಡಿಸುತ್ತದೆ.ಆದ್ದರಿಂದ ಕೆಲಸದ ಮಧ್ಯೆ ವಿರಾಮದ ಅವಶ್ಯಕತೆ ಸಾಕಷ್ಟಿರುತ್ತದೆ.ಒತ್ತಡ ಹೋಗಲಾಡಿಸಲು ಸಾಕಷ್ಟು ಸಣ್ಣಪುಟ್ಟ ಬದಲಾವಣೆ ತಂದುಕೊಂಡರೆ ಉಲ್ಲಾಸ ಮೂಡಬಹುದು.

ಆದ್ದರಿಂದ ಒತ್ತಡ ಪರಿಹರಿಸಿಕೊಂಡು ಅರೋಗ್ಯಯುತವಾಗಿ ಇರಲು ಕೆಲವು ಸಲಹೆಗಳು ಇಲ್ಲಿವೆ. ಇವುಗಳಿಗೆ ಸಾಕಷ್ಟು ಸಮಯ ಬೇಕಿಲ್ಲ.ಇರುವ ಅಲ್ಪಸ್ವಲ್ಪ ಸಮಯದಲ್ಲೇ ಇವುಗಳನ್ನು ರೂಡಿಸಿಕೊಂಡರೆ ಆರೋಗ್ಯಯುತವಾಗಿ ಇರುವುದರ ಜೊತೆಗೆ ಒತ್ತಡದಿಂದ ಮುಕ್ತಿ ದೊರಕುತ್ತದೆ.

ಪ್ರತಿ ಗಂಟೆಗೆ 5 ನಿಮಿಷದ ವಿರಾಮ ಪಡೆದುಕೊಳ್ಳಿ

ಪ್ರತಿ ಗಂಟೆಗೆ 5 ನಿಮಿಷದ ವಿರಾಮ ಪಡೆದುಕೊಳ್ಳಿ

ನೀವು ಎಷ್ಟೇ ಬ್ಯುಸಿ ಇರಬಹುದು.ಹೆಚ್ಚು ಕೆಲಸವಿರಬಹುದು.ಆದರೆ ಗಂಟೆಗೆ 5 ನಿಮಿಷ ವಿರಾಮ ತೆಗೆದುಕೊಳ್ಳುವುದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.

ಸ್ಟ್ರೆಚ್ (ಮೈ ಮುರಿಯುವುದು)

ಸ್ಟ್ರೆಚ್ (ಮೈ ಮುರಿಯುವುದು)

ಒಮ್ಮೆ ಮೈ ಮುರಿಯುವುದರಿಂದ ನಿಮಗೆ ವಿಶ್ರಾಂತಿ ಸಿಗುತ್ತದೆ. ಎಷ್ಟೇ ಒತ್ತಡವಿದ್ದರೂ ಮೈ ಮುರಿಯುವುದರಿಂದ ಕಡಿಮೆ ಮಾಡಿಕೊಳ್ಳಬಹುದು.ದೇಹ ಸಡಿಲಗೊಳ್ಳುತ್ತದೆ.ಜೋರಾಗಿ ಉಸಿರಾಡಿ ಮತ್ತು ಮೈ ಮುರಿಯುವುದರಿಂದ ಸ್ನಾಯುಗಳು ಸಡಿಲಗೊಂಡು ವಿರಾಮ ದೊರೆತು ಕೆಲಸದಲ್ಲಿ ಗಮನ ಕೊಡಲು ಸಹಾಯಕವಾಗುತ್ತದೆ.

ಒಂದು ಉಲ್ಲಾಸಕರ ಸ್ನಾನ ಮಾಡಿ

ಒಂದು ಉಲ್ಲಾಸಕರ ಸ್ನಾನ ಮಾಡಿ

ಬಿಸಿ ನೀರು ಅಥವಾ ತಣ್ಣೀರಿನ ಸ್ನಾನ ಮಾಡಿದರೆ ನಿಮ್ಮ ದೇಹ ಸಡಿಲಗೊಂಡು,ದೇಹದಲ್ಲಿ ಉಲ್ಲಾಸ ತುಂಬುತ್ತದೆ.ಒತ್ತಡ ನಿವಾರಿಸಲು ಇದು ಸುಲಭ ಮತ್ತು ಸರಳ ಮಾರ್ಗ.

ಪ್ರಕೃತಿ ನೋಟ ಸವಿಯಿರಿ

ಪ್ರಕೃತಿ ನೋಟ ಸವಿಯಿರಿ

ಹಸಿರು,ಸಮುದ್ರ,ಬೆಟ್ಟ ಗುಡ್ಡಗಳ ನಡುವೆ ಇದ್ದರೆ ಅದರಷ್ಟು ವಿಶ್ರಾಂತಿ ನೀಡುವ ಸ್ಥಳ ಇನ್ನೊಂದಿಲ್ಲ.ಪ್ರಕೃತಿಯ ನಡುವೆ ಸ್ವಲ್ಪ ಸಮಯ ಕಳೆದರೆ ಅದು ಸುಂದರವಾಗಿರುತ್ತದೆ.

ಒಂದು ಸಾಕು ಪ್ರಾಣಿ ಕೂಡ ನಿಮಗೆ ವಿಶ್ರಾಂತಿ ನೀಡಬಹುದು

ಒಂದು ಸಾಕು ಪ್ರಾಣಿ ಕೂಡ ನಿಮಗೆ ವಿಶ್ರಾಂತಿ ನೀಡಬಹುದು

ಒತ್ತಡ ನಿವಾರಿಸಲು ಸಾಕು ಪ್ರಾಣಿಗಳು (ಪೆಟ್ಸ್) ತುಂಬಾ ಸಹಾಯಕ.ಅವುಗಳು ನೀಡುವ ಪ್ರೀತಿ ಮತ್ತು ಕಾಳಜಿ,ಸಂತೋಷ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಸುತ್ತದೆ.

ಸಾಕಷ್ಟು ನೀರು ಕುಡಿಯಿರಿ ಮತ್ತು ಒಳ್ಳೆಯ ಆಹಾರ ತಿನ್ನಿ

ಸಾಕಷ್ಟು ನೀರು ಕುಡಿಯಿರಿ ಮತ್ತು ಒಳ್ಳೆಯ ಆಹಾರ ತಿನ್ನಿ

ಪಿಜ್ಜಾ ತಿನ್ನಲು ಎಲ್ಲರಿಗೂ ಇಷ್ಟ ಆದರೆ ಪೌಷ್ಟಿಕಾಂಶ ಇರುವ ಆಹಾರವನ್ನು ತಿಂದರೆ ಅದು ದೇಹಕ್ಕೆ ಹೆಚ್ಚು ಅರೋಗ್ಯ ನೀಡುವುದು ಮಾತ್ರವಲ್ಲ ಉತ್ಸಾಹವನ್ನೂ ನೀಡುತ್ತದೆ.ಜೊತೆಗೆ ಸಾಕಷ್ಟು ನೀರು ಕುಡಿಯಬೇಕು.

ನಿಮಗಿಷ್ಟವಾದ ಮಸಾಜ್(ಸ್ಪಾ)ಮಾಡಿಸಿಕೊಳ್ಳಿ

ನಿಮಗಿಷ್ಟವಾದ ಮಸಾಜ್(ಸ್ಪಾ)ಮಾಡಿಸಿಕೊಳ್ಳಿ

ನಿಮ್ಮ ಇಂದ್ರಿಯಗಳಿಗೆ ವಿಶ್ರಾಂತಿ ನೀಡಿ.ಪಾದಗಳಿಗೆ ಪೆಡಿಕ್ಯುರ್ ಅಥವಾ ಮುಖಕ್ಕೆ ನಿಮ್ಮ ಇಷ್ಟದ ಫೇಶಿಯಲ್ ಮಾಡಿಸಿಕೊಳ್ಳಿ ಮತ್ತು ಆಹ್ಲಾದವನ್ನು ಅನುಭವಿಸಿ.

ಧ್ಯಾನ

ಧ್ಯಾನ

ನೀವು ಇದಕ್ಕಾಗಿ ಪರ್ವತಕ್ಕೆ ಹೋಗಬೇಕೆಂದೇನಿಲ್ಲ.ಯಾರೂ ಇಲ್ಲದ ಜಾಗದಲ್ಲಿ 5 ನಿಮಿಷ ಧ್ಯಾನ ಮಾಡಿದರೆ ಸಾಕು ನಿಮ್ಮ ಮನಸ್ಸು ಒತ್ತಡ ಮುಕ್ತವಾಗುತ್ತದೆ.

ನಿಮ್ಮನ್ನು ನೀವು ಒಪ್ಪಿಕೊಳ್ಳಿ

ನಿಮ್ಮನ್ನು ನೀವು ಒಪ್ಪಿಕೊಳ್ಳಿ

ಧನಾತ್ಮಕ ಚಿಂತನೆ ನಿಮಗೆ ಹೆಚ್ಚು ಅರೋಗ್ಯ ನೀಡುತ್ತದೆ.ನಕಾರಾತ್ಮಕ ಯೋಚನೆ ಬಿಟ್ಟುಬಿಡಿ. ನೀವು ಏನೇ ಬಂದರೂ ಎದುರಿಸುವ ಶಕ್ತಿ ನಿಮ್ಮಲ್ಲಿದೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಿ.ನಿಮ್ಮನ್ನು ನೀವೇ ಹುರಿದುಂಬಿಸಿಕೊಳ್ಳಿ.

ನಿಮಗಾಗಿ ನೀವು ಏನಾದರೂ ಮಾಡಿ

ನಿಮಗಾಗಿ ನೀವು ಏನಾದರೂ ಮಾಡಿ

ನೀವು ಒಂದು ಕೆಲಸ ಮುಗಿಸಿದರೆ ಅದಕ್ಕೆ ನಿಮಗೆ ನೀವೇ ಚಾಕಲೇಟ್,ಗಿಫ್ಟ್ ಏನಾದರೂ ಒಂದು ತೆಗೆದುಕೊಳ್ಳುವುದಾಗಿ ನಿಗದಿಪಡಿಸಿಕೊಳ್ಳಿ.ನಿಮಗೆ ಇಷ್ಟವಾದ ಸಂಗೀತ ಕೇಳಿ ಆನಂದಿಸಿ.ಒತ್ತಡ ಕಡಿಮೆ ಮಾಡುವ ಸಂಗೀತಗಳು ನಿಮ್ಮನ್ನು ಶಾಂತಗೊಳಿಸಿ ವಿಶ್ರಾಂತಿ ನೀಡಿದರೆ,ಜೋರಾದ ಲವಲವಿಕೆ ಹೊಂದಿದ ಸಂಗೀತ ನಿಮ್ಮನ್ನು ಉಲ್ಲಾಸಭರಿತರಾಗಿ ಮಾಡುತ್ತದೆ.

ಸುಲಭವಾದ ಅಡುಗೆ ತಯಾರಿಸಿ

ಸುಲಭವಾದ ಅಡುಗೆ ತಯಾರಿಸಿ

ಅಡುಗೆ ಮಾಡುವುದು ಒಂದು ಕಲೆ.ಅದು ನಿಮಗೆ ನಿಮ್ಮ ಒತ್ತಡದಿಂದ ಹೊರಬರುವಂತೆ ಮಾಡುತ್ತದೆ.ನಿಮ್ಮ ಗಮನವನ್ನು ಬೇರೆಡೆ ನೀಡುವಂತೆ ಮಾಡುತ್ತದೆ.ಜೊತೆಗೆ ನೀವು ಪೋಷಕಾಂಶ ಇರುವ ಆಹಾರವನ್ನು ಸೇವಿಸಬಹುದು.

ಆರಾಮದಾಯಕ ಉಡುಗೆ ಧರಿಸಿ

ಆರಾಮದಾಯಕ ಉಡುಗೆ ಧರಿಸಿ

ಕೆಲಸ ಮುಗಿಸಿ ಮನೆಗೆ ಹೋದ ನಂತರ ನಿಮ್ಮ ಆಫೀಸ್ ಉಡುಪನ್ನು ತೆಗೆದು ಅರಾಮದಾಯಕವಾದ ಹತ್ತಿ ಅಥವಾ ಉಣ್ಣೆ ಬಟ್ಟೆ ಧರಿಸಿ.ಇದರಿಂದ ನಿಮಗೆ ಆರಾಮದಾಯಕ ಭಾವನೆ ಮೂಡುತ್ತದೆ.

ನಿಮಗಾಗಿ ಸ್ವಲ್ಪ ಸಮಯ ಕಾಪಾಡಿಕೊಳ್ಳಿ

ನಿಮಗಾಗಿ ಸ್ವಲ್ಪ ಸಮಯ ಕಾಪಾಡಿಕೊಳ್ಳಿ

ನಿತ್ಯದ ಜಂಜಾಟದ ಕೆಲಸದ ನಂತರ ನಿಮ್ಮ ಮನೆಯಲ್ಲಿ ನೀವು ಒಬ್ಬರೇ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆಯುವಂತಹ ಜಾಗವನ್ನು ಕಂಡುಕೊಳ್ಳಿ.ನಿಮ್ಮ ಮೊಬೈಲ್ ಫೋನ್ ಗಳನ್ನೂ ಸ್ವಿಚ್ ಆಫ್ ಮಾಡಿಬಿಡಿ.

ಮುಖಕ್ಕೆ ನೀರು ಚುಮುಕಿಸಿಕೊಳ್ಳಿ/ಮುಖ ತೊಳೆದುಕೊಳ್ಳಿ

ಮುಖಕ್ಕೆ ನೀರು ಚುಮುಕಿಸಿಕೊಳ್ಳಿ/ಮುಖ ತೊಳೆದುಕೊಳ್ಳಿ

ಈ ಸುಲಭದ ಕೆಲಸ ನಿಮಗೆ ತಾಜಾ ಭಾವನೆ ನೀಡುತ್ತದೆ.ಒತ್ತಡದ ಕೆಲಸದ ನಂತರ ಹೋಗಿ ಮುಖಕ್ಕೆ ನೀರು ಚುಮುಕಿಸಿಕೊಳ್ಳಿ ಅಥವಾ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ನಿಧಾನ ಮತ್ತು ದೀರ್ಘ ಉಸಿರಾಟ

ನಿಧಾನ ಮತ್ತು ದೀರ್ಘ ಉಸಿರಾಟ

ನಿಧಾನವಾಗಿ ದೀರ್ಘ ಉಸಿರಾಟ ಮಾಡುವುದರಿಂದ ನಿಮ್ಮ ರಕ್ತದೊತ್ತಡ ಕಡಿಮೆ ಆಗುತ್ತದೆ.ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಾಣಾಯಾಮ ಮತ್ತು ಯೋಗದ ಉಸಿರಾಟವನ್ನು ಮಾಡಿ.

ಒಂದು ಸಣ್ಣ ನಿದ್ದೆ ಮಾಡಿ

ಒಂದು ಸಣ್ಣ ನಿದ್ದೆ ಮಾಡಿ

ಸ್ವಲ್ಪ ಗಂಟೆ ಹೆಚ್ಚು ಕೆಲಸ ಮಾಡಿದರೆ ಏನೂ ಆಗುವುದಿಲ್ಲ ಎಂದು ತಿಳಿಯುವುದು ಸುಲಭ ಆದರೆ ನಿಮಗೆ ನಿದ್ರೆಯ ಅವಶ್ಯಕತೆ ಇರುತ್ತದೆ.ಕೆಲಸದ ನಂತರ ನಿದ್ದೆ ಮಾಡಿ. ನಿಮ್ಮ ಒತ್ತಡ ಕಡಿಮೆಯಾಗುತ್ತದೆ.

ತಲೆಗೆ ಮಸಾಜ್ ಮಾಡುವುದರಿಂದ ಒತ್ತಡ ನಿವಾರಿಸಬಹುದು

ತಲೆಗೆ ಮಸಾಜ್ ಮಾಡುವುದರಿಂದ ಒತ್ತಡ ನಿವಾರಿಸಬಹುದು

ತಲೆಗೆ ಮಸಾಜ್ ಮಾಡುವುದರಿಂದ ರಕ್ತ ಸಂಚಲನ ಸರಿಯಾಗಿ ಆಗುತ್ತದೆ.ತಲೆನೋವು ಕಡಿಮೆಯಾಗುತ್ತದೆ ಮತ್ತು ಸರಿಯಾಗಿ ನಿದ್ದೆ ಬರುವಂತೆ ಮಾಡುತ್ತದೆ.ಇದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ.

ಬರೆಯುವುದನ್ನು ರೂಡಿಸಿಕೊಳ್ಳಿ

ಬರೆಯುವುದನ್ನು ರೂಡಿಸಿಕೊಳ್ಳಿ

ನಿಮಗೆ ನೀವೇ ಬರೆಯುವುದನ್ನು ರೂಡಿ ಮಾಡಿಕೊಳ್ಳಿ.ಡೈರಿ ಬರೆಯುವುದರಿಂದ ಒತ್ತಡ ಕಡಿಮೆ ಆಗುತ್ತದೆ.

English summary

Best Ways To Relax After A Hectic Day

We all have times in our lives when we have a lot going on like meeting deadlines, exams, due dates etc, which can affect our stress levels and put our health at risk. You want to get relaxed? Then there are some ways for this, listed the 20 best ways to unwind after a hectic day.
X
Desktop Bottom Promotion