For Quick Alerts
ALLOW NOTIFICATIONS  
For Daily Alerts

ಈ ಆಹಾರಗಳು ಪುರುಷರಿಗೆ ಬೆಸ್ಟ್, ಏಕೆ ಗೊತ್ತಾ?

By Super
|

ನಮ್ಮದು ಪುರುಷ ಪ್ರಧಾನ ಸಮಾಜ. ಇಲ್ಲಿ ಒಂದು ಕುಟುಂಬದ ಘನತೆ, ಅದರ ಯಜಮಾನನ ನಡೆ-ನುಡಿ ಆಲೋಚನೆಗಳನ್ನು ಅವಲಂಭಿಸಿರುತ್ತದೆ. ಹೊರಗೆ ಕೆಲಸ ಮಾಡಿ ಹಣ ಸಂಪಾದಿಸಿ, ತನ್ನ ಕುಟುಂಬದ ಬೇಕು ಬೇಡಗಳನ್ನು ನೋಡಿಕೊಳ್ಳುವುದರ ಜೊತೆಗೆ ಪುರುಷನು ತನ್ನ ಕುಟುಂಬದ ಸಂರಕ್ಷಣೆಯನ್ನೂ ವಹಿಸಿಕೊಂಡಿರುತ್ತಾನೆ. ಆದರೆ ಇಂದಿನ ದಿನಗಳಲ್ಲಿ ಪುರುಷ ಮತ್ತು ಮಹಿಳೆಯರು ಸಮಾನವಾಗಿ ದುಡಿಯುತ್ತಿದ್ದಾರೆ. ಹೊರಗಡೆ ದುಡಿದು ಬಂದ ಹೆಣ್ಣಿಗೆ ಗಂಡನ ಆರೈಕೆಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಸಾಧ್ಯವಾಗುತ್ತಿಲ್ಲ.

ಮೊದಲಾದರೆ ದುಡಿಯುವ ಗಂಡಸು ಎಂಬ ಕಾರಣಕ್ಕೆ ಅಜ್ಜಿ ಅಥವಾ ಅಮ್ಮಂದಿರು ಬಿಸಿ ಆಹಾರ, ತುಪ್ಪ, ಹಣ್ಣು, ಕಾಳುಗಳು, ಸಿಹಿ .....ಗಳನ್ನು ಬಡಿಸಿ ಉಪಚರಿಸುತ್ತಿದ್ದರು. ಆದರೆ ಈಗ ಗಂಡ-ಹೆಂಡತಿ ಇಬ್ಬರಿಗೂ ಪುರುಸೊತ್ತು ಇಲ್ಲ, ಆಹಾರ ಶೈಲಿ ಬದಲಾಗಿದೆ, ಆರೋಗ್ಯದೆಡೆಗೆ ಕಾಳಜಿ ಕಡಿಮೆಯಾಗುತ್ತಿದೆ. ಇದರಿಂದ ಆರೋಗ್ಯ ಹಾಳಾಗುತ್ತದೆ, ಅದರಲ್ಲೂ ಪುರುಷರು ತಮ್ಮ ಆರೋಗ್ಯದ ಬಗ್ಗೆ ತಾವೇ ಗಮನ ಕೊಡುವುದು ಕಮ್ಮಿ, ಮನೆಯಲ್ಲಿ ಹೆಂಡತಿ ಅಥವಾ ಅಮ್ಮ ನನ್ನನ್ನು ಆರೈಕೆ ಮಾಡಬೇಕೆಂದು ಬಯಸುತ್ತಾರೆ. ಮನೆಯಲ್ಲಿ ಹೆಂಡತಿಯೂ ಹೊರಗಡೆ ದುಡಿಯಲು ಹೋಗುತ್ತಿದ್ದರೆ ನಿಮ್ಮ ಬೇಕು, ಬೇಡಗಳನ್ನು ಹೆಂಡತಿ ಗಮನಿಸಬೇಕೆಂದು ಬಯಸುವುದು ಸರಿಯಲ್ಲ, ಇಬ್ಬರೂ ಹೊಂದಾಣಿಕೆಯಿಂದ ಬಾಳ್ವೆ ಮಾಡಬೇಕಾಗುತ್ತದೆ.

ಮನೆಯಲ್ಲಿ ಪುರುಷರಿಗೆ ಬೇರೆ, ಮಹಿಳೆಯರಿಗೆ ಬೇರೆ ಎಂದು ಅಡುಗೆ ಮಾಡುವುದಿಲ್ಲ, ಆದರೆ ಪುರುಷರಿಗೆ ಮತ್ತು ಮಹಿಳೆಯರಿಗೆ ಅವಶ್ಯಕವಾದ ಪೋಷಕಾಂಶಗಳ ಅಳತೆಯಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ ಮಹಿಳೆಯರಿಗೆ ಹೆಚ್ಚು ಕ್ಯಾಲ್ಸಿಯಂ ಅವಶ್ಯಕ, ಆದರೆ ಪುರುಷರಿಗೆ ಹೆಚ್ಚು ಪ್ರೊಟೀನ್ ಅವಶ್ಯಕ. ಇಲ್ಲಿ ನಾವು ಪುರುಷರಿಗೆ ಅವಶ್ಯಕವಾದ ಪೋಷಕಾಂಶಗಳು ಅಧಿಕವಿರುವ ಆಹಾರಗಳ ಪಟ್ಟಿ ನೀಡಿದ್ದೇವೆ ನೋಡಿ:

ಉಷ್ಣವಲಯದ ಹಣ್ಣುಗಳು

ಉಷ್ಣವಲಯದ ಹಣ್ಣುಗಳು

ವಿವಿಧ ಬಣ್ಣಗಳ ಹಣ್ಣುಗಳಾದ ಮಾವು ಮತ್ತು ಪಪ್ಪಾಯಿಗಳ ಸಿಪ್ಪೆಗಳಲ್ಲಿ ಜೈವಿಕ ಪ್ಲೇವೋನಾಯ್ಡ್ ಮತ್ತು ಇತರ ಪೌಷ್ಟಿಕಾಂಶಗಳಿವೆ. ಬೇಸಿಗೆಯ ಆರಂಭವಾಗುತ್ತಿದ್ದಂತೆಯೇ ಇಂತಹ ಹಣ್ಣುಗಳು ಭಾರತದಲ್ಲಿ ಸುಲಭವಾಗಿ ಕೈಗೆಟುಕುವ ದರದಲ್ಲಿ ದೊರೆಯುತ್ತವೆ. ಆದ್ದರಿಂದ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಇಂತಹ ಹಣ್ಣುಗಳನ್ನು ಬಳಸುವುದು ಸೂಕ್ತ.

ದುಂಡು ಮೆಣಸು

ದುಂಡು ಮೆಣಸು

ಕೆಂಪು ಮೆಣಸಿನಲ್ಲಿ, ಕಿತ್ತಳೆ ರಸದಲ್ಲಿರುವುದಕ್ಕಿಂತ ಮೂರು ಪಟ್ಟು ಹೆಚ್ಚು ಸಿ ಜೀವಸತ್ವವಿರುತ್ತದೆ. ಕೆಲವು ವೈದ್ಯಕೀಯ ಮೂಲಗಳ ಪ್ರಕಾರ, ಕೆಂಪು ದುಂಡು ಮೆಣಸಿನ ಸೇವನೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ಜೈವಿಕ ಪ್ಲೇವೋನಾಯ್ಡ್ ನಮ್ಮ ದೇಹ ಸೇರುವುದೆಂದು ವಿಜ್ಞಾನಿಗಳೂ ಸಹ ಒಪ್ಪುತ್ತಾರೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಒಂದು ಅತ್ಯದ್ಬುತ ಆಹಾರ ಪದಾರ್ಥ. ನಮ್ಮ ಅಡುಗೆಮನೆ ಸಂಸ್ಕೃತಿಯು ಬೆಳ್ಳುಳ್ಳಿಯಲ್ಲಿಯ ಉರಿಯೂತ ನಿವಾರಕ ಲಕ್ಷಣವನ್ನು ಬಹಳ ಹಿಂದೆಯೆ ಗುರುತಿಸಿದೆ. ಇದರಲ್ಲಿ ನೈಸರ್ಗಿಕ ಔಷಧೀಯ ಗುಣಗಳಿದ್ದು, ಉತ್ಕರ್ಷಣ ನಿರೋಧಕ ಲಕ್ಷಣಗಳನ್ನೂ ಹೊಂದಿದೆ. ಹಾಗು ರಕ್ತಪರಿಚಲನೆಯನ್ನು ಸುಗಮಗೊಳಿಸಿ ಆರೋಗ್ಯವನ್ನು ವೃದ್ಧಿಸುವ ಗುಣವನ್ನು ಹೊಂದಿದೆ ಈ ಬೆಳ್ಳುಳ್ಳಿ.

ಕೋಸುಗಡ್ಡೆ

ಕೋಸುಗಡ್ಡೆ

ಒಂದು ಕಿರುಹೂವಿನಂತೆ ಕಾಣುವ, ಹಿತವಾದ ರುಚಿಯುಳ್ಳ ಈ ಕೋಸುಗಡ್ಡೆಯಿಂದ ಪುರುಷರ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳುಂಟು. ಇದರಲ್ಲಿರುವ ಐಸೊಥಿಯೊಸಿಯನೆಟ್ಗಳು ಯಕೃತ್ತನ್ನು ಪ್ರಚೋದಿಸಿ ಕ್ಯಾನ್ಸರ್ ಗೆ ಕಾರಣವಾದ ಕಣಗಳ ಉತ್ಪಾದನೆಯು ಕ್ಷಿಣಿಸುವಂತೆ ಮಾಡುತ್ತದೆ. ಅಲ್ಲದೆ ಕೋಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿ ಜೀವಸತ್ವವಿದೆ.

ಹಸಿರು ಚಹಾ ಅಥವಾ ಕಪ್ಪು ಚಹಾ

ಹಸಿರು ಚಹಾ ಅಥವಾ ಕಪ್ಪು ಚಹಾ

ಪಾಲಿಫಿನಾಲ್ಗಳು (ಕ್ಯಾಟ್ಚಿನ್ಸ್) ಗಳೆಂದು ಕರೆಯುವ ಕೆಲವು ಉತ್ಕರ್ಷಣ ನಿರೋಧಕಗಳು ಈ ಹಸಿರು ಚಹಾದಲ್ಲಿರುತ್ತವೆ. ಈ ನಿರೋಧಕಗಳು ಕ್ಯಾನ್ಸರ್ ಕೋಶಗಳ ವಿಭಜನೆಯನ್ನು ತಡೆಗಟ್ಟುತ್ತವೆ.ಹಸಿರು ಚಹಾ ದಂತೆಯೆ ನಮ್ಮ ಕಪ್ಪು ಚಹಾಕೂಡ ಆರೋಗ್ಯ ವೃದ್ಧಿಗೆ ಸಹಕಾರಿ. ಹಸಿರು ಚಹಾ, ಕೆಂಪು ವೈನ್ ಮತ್ತು ಆಲಿವ್ ತೈಲ ಗಳಲ್ಲಿ ಹೇರಳವಾಗಿರುವ ಪಾಲಿಫಿನೋಲ್ಗಳು ವಿವಿಧ ರೀತಿಯ ಕ್ಯಾನ್ಸರಗಳಿಂದ ರಕ್ಷಿಸುತ್ತವೆ. ಒಣ ಹಸಿರು ಚಹಾ ಎಲೆಗಳು ತಮ್ಮ ತೂಕದ 40 % ಪಾಲಿಫಿನಾಲ್ಗಳನ್ನು ಹೊಂದಿರುತ್ತವೆ. ಇದು ಹೊಟ್ಟೆ , ಶ್ವಾಸಕೋಶ , ದೊಡ್ಡ ಕರುಳು , ಗುದನಾಳ , ಮೇದೋಜೀರಕ ಗ್ರಂಥಿ ಮತ್ತು ಯಕೃತ್ತಿನ ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುತ್ತದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು

ಹಾಲು ಮತ್ತು ಹಾಲಿನ ಉತ್ಪನ್ನಗಳು

ಹಾಲು , ಇತರ ಡೈರಿ ಉತ್ಪನ್ನಗಳು, ಮೊಸರು ಮತ್ತು ಮೃದುಗಿಣ್ಣಿನಂತಹ ಹಾಲಿನ ಉತ್ಪನ್ನಗಳು ನಿಮ್ಮ ನಿತ್ಯದ ಆಹಾರದಲ್ಲಿರಲಿ. 1 ಲೋಟ ಹಾಲಿನಲ್ಲಿ ಸುಮಾರು 8 ಗ್ರಾಂ ಕಾರ್ನಿಟೈನ್ ಇರುತ್ತದೆ. ಹಾಲಿನ ಉತ್ಪನ್ನಗಳು ಕ್ಯಾಲ್ಸಿಯಂ ಸೇರಿದಂತೆ ಅನೇಕ ಸೂಕ್ಷ್ಮ ಪೋಷಕಾಂಶಗಳನ್ನೂ, ಎ ಮತ್ತು ಡಿ ಜೀವಸತ್ವಗಳನ್ನೂ ಹೊಂದಿವೆ.

ಆವಕಾಡೊ(ಬೆಣ್ಣೆ ಹಣ್ಣು)

ಆವಕಾಡೊ(ಬೆಣ್ಣೆ ಹಣ್ಣು)

ಆವಕಾಡೊದಲ್ಲಿ ನಿಮ್ಮ ಹೃದಯ, ರಕ್ತನಾಳ, ಜೀರ್ಣಾಂಗಗಳಿಗೆ ಅನುಕೂಲವಾಗುವಂತಹ ಆರೋಗ್ಯಕರ ಕೊಬ್ಬಿನಂಶವಿರುತ್ತವೆ. ನಾರಿನಂಶವನ್ನು ಅವಕಾಡೊ ಹೊಂದಿರುತ್ತದೆ.

ಟೊಮೆಟೊ

ಟೊಮೆಟೊ

ತರಕಾರಿಯಾಗಿರುವ ಈ ಹಣ್ಣು ಅತ್ಯಂತ ಹೆಚ್ಚಿನ ಪ್ರಮಾಣದ ಲೈಕೊಪೀನ್ ಹೊಂದಿದೆ . ಲೈಕೊಪೈನ್ ಸಸ್ಯಗಳಲ್ಲಿ ಕಂಡುಬರುವ ನೈಸರ್ಗಿಕ ರಾಸಾಯನಿಕ . ಈ ರಾಸಾಯನಿಕವು ಉತ್ಕರ್ಷಣ ನಿರೋಧಕವಾಗಿದ್ದು, ಒಂದು ಶ್ವಾಸಕೋಶದ ಮತ್ತು ಉದರ ಕ್ಯಾನ್ಸರ್ ಅಪಾಯಗಳನ್ನು ಕಡಿಮೆಮಾಡುತ್ತದೆ.

ಕೆಂಪು ವೈನ್

ಕೆಂಪು ವೈನ್

ಆಲ್ಕೋಹಾಲ್ ಬೆರಸದಿದ್ದರೂ ಕೆಂಪು ವೈನ್ ನಲ್ಲಿ ಕ್ಯಾನ್ಸರ್ ನಿಂದ ರಕ್ಷಿಸಬಹುದಾದ ಪಾಲಿಫಿನಾಲ್ಗಳಿರುತ್ತವೆ. ಪಾಲಿಫಿನಾಲ್ಗಳು ಪ್ರಬಲವಾದ ಉತ್ಕರ್ಷಣ ನಿರೋಧಕಗಳು. ಇವು , ಫ್ರೀ ರಾಡಿಕಲ್ ರೋಗ ಉತ್ಪತಿಯನ್ನು ತಟಸ್ಥಗೊಳಿಸುವ ಶಕ್ತಿ ಹೊಂದಿವೆ.

ದಾಳಿಂಬೆ ರಸ

ದಾಳಿಂಬೆ ರಸ

ಇದು ಪ್ರೊಸ್ಟೇಟ್ ಕ್ಯಾನ್ಸರ್ ಗೆ ಚಿಕಿತ್ಸೆ ಅಲ್ಲ , ಆದರೆ ಅದರ ದಾರಿಯನ್ನು ಇದು ಮಾರ್ಪಡಿಸುತ್ತದೆ. ದಿನಕ್ಕೆ ಕೇವಲ ಒಂದು 8oz ಗಾಜಿನಲೋಟ ದಾಳಿಂಬೆ ಸೇವನೆಯಿಂದ ಪ್ರೊಸ್ಟೇಟ್ ನ ಸ್ಥಿರತೆಯನ್ನು ವೃದ್ಧಿಸಬಹುದು.

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಇವನ್ನು ನಮ್ಮ ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಇವು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಸತು ದಂತಹ ಪೋಷಕಾಂಶಗಳ ಮೂಲವಾಗಿವೆ. ಇದರಿಂದ ಪುರುಷತ್ವ ವೃದ್ಧಿಯಾಗುತ್ತದೆ. ಇವುಗಳ ಕೊರತೆ ವಿಶೇಷವಾಗಿ ಹರೆಯದ ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಪೀನಟ್ಸ್

ಪೀನಟ್ಸ್

ಪೀನಟ್ ಗಳು, ಸತು ಮತ್ತು ಅಗತ್ಯ ಮೇದಾಮ್ಲ ಗಳ ಉತ್ತಮ ಮೂಲಗಳಾಗಿವೆ. ಇದರಿಂದ ಒಣ ಚರ್ಮ , ಬಂಜೆತನ , ಮೆದುಳಿನ ಜೀವಕೋಶಗಳಿಗೆ ಹಾನಿ , ನಿರೋಧಕ ಶಕ್ತಿಯಲ್ಲಿ ಕೊರತೆಯಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯಕವಾಗಿತ್ತವೆ.

ಮೀನು

ಮೀನು

ಮೀನಿನಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಮತ್ತು ಪ್ರೋಟೀನ್ಗಳಿದ್ದು ಇವು ಸ್ನಾಯುವಿನ ಬಲವರ್ಧನೆಗೆ ಸಹಾಯ ಮಾಡುತ್ತವೆ. ಇದರಲ್ಲಿನ ಪ್ರೋಟೀನ್ ಆದ HDL ಉತ್ತಮ ಕೊಲೆಸ್ಟರಾಲ್ ಹೃದ್ರೋಗ ತಡೆಯುವಲ್ಲಿ ಸಹಾಯ ಮಾಡುತ್ತದೆ .

ರಾಗಿ

ರಾಗಿ

100ಗ್ರಾಂ ರಾಗಿಯಲ್ಲಿ 300 ಮಿ.ಗ್ರಾಂ ಗಿಂತ ಹೆಚ್ಚು ಕ್ಯಾಲ್ಸಿಯಂ ಇದ್ದು , ಪುರುಷರಲ್ಲಿ ಆಸ್ಟಿಯೊಪೊರೋಸಿಸ್ ತಡೆಗಟ್ಟಲುಇದು ಸಹಾಯ ಮಾಡುತ್ತದೆ. ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ. ಇದರಲ್ಲಿನ ಸತು ಮತ್ತು ನಾರಿನಂಶ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಚಿಯಾ ಬೀಜಗಳು

ಚಿಯಾ ಬೀಜಗಳು

ಇದು ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ಬೇಸಿಗೆಯಲ್ಲಿ ಅತ್ಯುತ್ತಮ ಆಹಾರ . ಹೆಚ್ಚು ನಾರಿನ ಅಂಶ ಇರುವದರಿಂದ ಸಕ್ಕರೆ ಮತ್ತು ಕೊಲೆಸ್ಟರಾಲ್ ನ್ನು ನಿಯಂತ್ರಿಸುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳು ಆಲ್ಝೈಮರ್ನ ರೀತಿಯ ರೋಗಗಳನ್ನು ತಡೆಯುತ್ತದೆ. ಮಿದುಳಿನ ಜೀವಕೋಶಗಳು ಮತ್ತು ನರಪ್ರೇಕ್ಷಕಗಳ ಉತ್ತೇಜಿಸುವ ಮೂಲಕ ಬುದ್ಧಿಮಾಂದ್ಯತೆಯನ್ನು ತಡೆಗಟ್ಟುತ್ತದೆ.

ಸೋಯಾ

ಸೋಯಾ

ಇದರಲ್ಲಿ ಐಸೊಪ್ಲೇವೋನಾಯ್ಡ್ ಗಳು ಸಮೃದ್ಧವಾಗಿದೆ. ಇದು ಪ್ರೊಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ತಪ್ಪಿಸುತ್ತದೆ . 25 ಗ್ರಾಂ ಸೋಯಾ ಪ್ರೋಟೀನ್ ದಿನಾ ತಿಂದರೆ ಕೊಲೆಸ್ಟ್ರಾಲ್ ಕಡಿಮೆಯಾಗುವುದು.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಕುರುಕುಲಾದ ಮತ್ತು ರುಚಿಯಾದ ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚು ಕ್ಯಾಲೊರಿ ಇರುತ್ತದೆ. ಸುಮಾರು 559 ಬೀಜಗಳಲ್ಲಿ 100 ಗ್ರಾಂ ಪ್ರತಿ ಕ್ಯಾಲೋರಿಗಳು . ಜೊತೆಗೆ , ಫೈಬರ್ , ಜೀವಸತ್ವಗಳಿದ್ದು, ಹಲವಾರು ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಆರೋಗ್ಯದಾಯಕವಾಗಿವೆ.

ಎಳನೀರು

ಎಳನೀರು

ಎಳನೀರಿನಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ ನಿರ್ವಹಿಸುವ ಶಕ್ತಿಯಿದ್ದು, ಅಧಿಕ ರಕ್ತದೊತ್ತಡ ಮತ್ತು ಸ್ಟ್ರೋಕ್ , ದ್ರವ ನಷ್ಟ ಬದಲಿಗೆ ಸಹಾಯ ಮತ್ತು ತಡೆಯಲು ಸಹಾಯ ಮಾಡುತ್ತದೆ ಅತಿಸಾರ ಪೊಟ್ಯಾಸಿಯಮ್ , ಮ್ಯಾಂಗನೀಸ್ ಮತ್ತು ವಿಟಮಿನ್ ಸಿ , ಮೆಗ್ನೀಸಿಯಮ್ ಶ್ರೀಮಂತವಾಗಿರುತ್ತವೆ ಅದರ ಇದು ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಬಳಸಬಹುದು ಅಥವಾ ಸೇವನೆ ಮಾಡಬಹುದು.

ದಾಲ್ಚಿನ್ನಿ

ದಾಲ್ಚಿನ್ನಿ

ನಿಮ್ಮ ದೇಹದಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಇದು ಉತ್ಕರ್ಷಣ ನಿರೋಧಕಗಳ ಪೂರ್ಣವಾಗಿದೆ ( ಕೆಟ್ಟ ಉಸಿರಾಟದ ಉಂಟುಮಾಡುವ ವಸ್ತುಗಳನ್ನು ಒಳಗೊಂಡಂತೆ ) ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ .

English summary

Best Foods For Men

There are certain foods that nature has provided us with amazing health benefits hidden and today we list 20 best foods for men.
X
Desktop Bottom Promotion