For Quick Alerts
ALLOW NOTIFICATIONS  
For Daily Alerts

ಕೆಲಸದ ಸಮಯದಲ್ಲಿ ಕಾಡುವ ಸೊಂಟ ನೋವಿಗೆ ಪರಿಹಾರ

By Reena
|

ಇತ್ತೀಚಿನ ದಿನಗಳಲ್ಲಿ ಕಂಡುಬರುವ ದೈಹಿಕ ಸಮಸ್ಯೆಗಳಲ್ಲಿ ಬೆನ್ನುನೋವು ಕೂಡ ಒಂದು. ಅದರಲ್ಲೂ ಅತ್ಯಂತ ಚಿಕ್ಕವಯಸ್ಸಿನವರಲ್ಲಿಯೇ ಬೆನ್ನುನೋವು ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ! ಕೆಲವರಿಗಂತೂ ಜೀವನದುದ್ದಕ್ಕೂ ಜೊತೆಗಾರನಂತೆ ಈ ಸಮಸ್ಯೆ ಕಾಡುತ್ತದೆ.

ನೀವು ಬೆನ್ನುನೋವಿನಿಂದ ನರಳುತ್ತಿದ್ದರೆ ನಿಮ್ಮ ಕೆಲಸ ಮೇಲೆ ಗಮನ ಹರಿಸುವುದು ತುಂಬಾ ಕಷ್ಟ. ಕಟ್ಟಡ ನಿರ್ಮಾಣ ಕಾರ್ಖಾನೆ ಕೆಲಸ, ನರ್ಸಿಂಗ್ ನಂತಹ ತೀವ್ರ ಒತ್ತಡ ತರುವ ಹಲವಾರು ಉದ್ಯೋಗಗಳು ನಿತ್ಯದ ಬೆನ್ನುನೋವಿಗೆ ಕಾರಣವಾಗಬಹುದು.

Back Pain at Wor

ಕೆಲಸ ಮಾಡುವಾಗ ಬರುವ ಬೆನ್ನು ನೋವಿಗೆ ಕಾರಣಗಳು :

ಪುನರಾವರ್ತನೆ :

ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುತ್ತಿದ್ದರೆ ಸ್ನಾಯುಗಳ ಸೆಳೆತದಿಂದ ವಿಪರೀತ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಅತೀಯಾದ ಒತ್ತಡ ಮತ್ತು ದೇಹದಲ್ಲಿ ಚಲನೆಯಿದ್ದರೆ ಅವು ಬೆನ್ನು ನೋವಿಗೆ ಕಾರಣವಾಗುತ್ತವೆ.

ಒತ್ತಡ :

ಅತೀ ಒತ್ತಡದಿಂದ, ಭಾರದ ವಸ್ತುವನ್ನು ಎತ್ತುವ ಅಥವಾ ಕೊಂಡೊಯ್ಯುವ ಸಂದರ್ಭದಲ್ಲಿ ಬೆನ್ನುನೋವು ಉಂಟಾಗುತ್ತದೆ. ನಿಮ್ಮ ಬೆನ್ನಿನ ಭಾಗಕ್ಕೆ ಅತೀಯಾಗಿ ಕೆಲಸದ ಒತ್ತಡಬಿದ್ದರೆ ಬೆನ್ನುನೋವು ಸಹ ಉಲ್ಭಣಿಸುತ್ತದೆ.

ಸರಿಯಾದ ಭಂಗಿ :

ಬೆನ್ನಿನ ನೈಸರ್ಗಿಕ ಕ್ರಿಯೆಗಳ ಮೇಲೆ ಹೆಚ್ಚಿನ ಒತ್ತಡಬಿದ್ದಾಗ ಸ್ನಾಯುಗಳ ದೌರ್ಭಲ್ಯಗಳಂತಹ ಸಮಸ್ಯೆಗಳು ಉಂಟಾಗುತ್ತವೆ.

ಬೆನ್ನುನೋವನ್ನು ನಿವಾರಿಸಲು ಮಾರ್ಗೋಪಾಯಗಳು :

ನಿಮ್ಮ ಬೆನ್ನುನೋವಿನ ಒತ್ತಡವನ್ನು ತಗ್ಗಿಸುವ ದೃಷ್ಟಿಯಿಂದ ನೀವು ನಿಯಮಿತವಾಗಿ ಕೆಲವು ದೈಹಿಕ ಚಟುವಟಿಕೆಗಳನ್ನು ಮಾಡುವುದು ಅಗತ್ಯ. ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್, ಈಜುವುದು, ಜಾಗಿಂಗ್, ಬಲಪಡಿಸುವ ಮತ್ತು ಹಿಗ್ಗಿಸುವ ವ್ಯಾಯಾಮಗಳು ಬೆನ್ನುನೋವನ್ನು ನಿವಾರಿಸುವಲ್ಲಿ ಸಹಾಯಕಾರಿಯಾಗಿವೆ.

ನಿಮ್ಮ ದೇಹದ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳಿ. ನೀವು ನೇರವಾಗಿ ಕುಳಿತುಕೊಳ್ಳುವುದು ಬಹಳ ಅವಶ್ಯಕ. ಆದರೆ ನಿಮ್ಮ ಕೆಲಸ ಬಹಳ ಗಂಟೆಗಳ ಕಾಲ ಕುಳಿತು ಮಾಡಬೇಕಾದಂತಹ ಕೆಲಸವಾಗಿದ್ದರೆ, ಆಗಾಗ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ನಿಮ್ಮದು ಕುಳಿತುಕೊಂಡು ಮಾಡುವ ಕೆಲಸವಾಗಿದ್ದರೆ ಸ್ವಲ್ಪ ಸಮಯ ನಡೆದಾಡಿ. ಮತ್ತು ನಿಮ್ಮ ಕೆಲಸ ಬಹಳ ಗಂಟೆಗಳ ಕಾಲ ನಿಂತುಕೊಂಡು ಮಾಡುವಂತಹದ್ದಾಗಿದ್ದರೆ ನಿಮ್ಮ ದಣಿದ ಕಾಲುಗಳಿಗೆ ವಿಶ್ರಾಂತಿ ನೀಡಿ. ಇದರಿಂದ ಬೆನ್ನುನೋವನ್ನು ಬಾಗಶಃ ತಡೆಗಟ್ಟಬಹುದು.

ಭಾರದ ವಸ್ತುಗಳನ್ನು ಎತ್ತುವಾಗ ನಿಮ್ಮ ದೇಹದ ಸ್ಥಿತಿಯ ಬಗ್ಗೆ ಗಮನವಿರಲಿ. ನಿಮ್ಮ ದೇಹದ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಕೆಲಸವನ್ನು ಮಾಡಿ.

ಅನಗತ್ಯವಾಗಿ ಬೆನ್ನನ್ನು ಬಗ್ಗಿಸುವುದು, ಬಾಗುವುದು (ಗೂನು) ಹಾಗೂ ಅನಗತ್ಯ ಭಾರದ ವಸ್ತುಗಳನ್ನು ಎತ್ತಬೇಡಿ.

ಈ ರೀತಿ ನಿಮ್ಮ ದೇಹದ ಬಗ್ಗೆ ಹೆಚ್ಚು ಗಮನವಹಿಸಿ ಆದಷ್ಟು ಜಾಗರೂಕರಾಗಿದ್ದರೆ ಬೆನ್ನುನೋವಿನಂತಹ ನಿತ್ಯದ ಸಮಸ್ಯೆಗಳಿಗೆ ಗುಡ್ ಬಾಯ್ ಹೇಳಬಹುದು!

English summary

Back Pain at Work|ಕೆಲಸದ ಸಮಯದಲ್ಲಿ ಕಾಡುವ ಸೊಂಟ ನೋವಿಗೆ ಪರಿಹಾರ

It is very difficult to concentrate on your work if you are suffering from back pain. There are several jobs which tend to put intense pressure on your back like construction, factory work, nursing etc. However, at the same time even the routine office work can cause back pain. In the article below we will discuss back pain at work.
Story first published: Saturday, April 13, 2013, 12:49 [IST]
X
Desktop Bottom Promotion