For Quick Alerts
ALLOW NOTIFICATIONS  
For Daily Alerts

ವ್ರತ ಪಾಲಿಸುವಾಗ ಆರ್ಯುವೇದ ಗುಣದ ಈ ಆಹಾರ ತಿನ್ನಿ

By Staff
|

ನವರಾತ್ರಿ ಸಮಯದಲ್ಲಿ ಉಪವಾಸ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ನಮ್ಮಲ್ಲಿದೆ. ನವರಾತ್ರಿ ಸಮಯದಲ್ಲಿ ಉಪವಾಸ ಮಾಡುವವರಲ್ಲಿ ಕೆಲವರು ಬರೀ ಒಂದು ಹೊತ್ತು ಮಾತ್ರ ಆಹಾರವನ್ನು ತೆಗೆದುಕೊಳ್ಳುತ್ತಾರೆ, ಉಪವಾಸ ಮಾಡುವವರು ಕೆಲವೊಂದು ಆರ್ಯುವೇದ ಪ್ಲಾನ್ ಬಳಸಿದರೆ ಮತ್ತಷ್ಟು ಆರೋಗ್ಯವನ್ನು ಪಡೆಯಬಹುದು.

ಉಪವಾಸ ಮಾಡುವಾಗ ಆರ್ಯುವೇದ ಗುಣವಿರುವ ಯಾವ ವಸ್ತುಗಳನ್ನು ತಿನ್ನಬೇಕು, ಅದರಿಂದ ದೊರೆಯುವ ಪ್ರಯೋಜನಗಳೇನು ಎಂದು ತಿಳಿಯಲು ಮುಂದೆ ಓದಿ:

ನಿಂಬೆ ಹಣ್ಣು

ನಿಂಬೆ ಹಣ್ಣು

ಉಪವಾಸ ಮಾಡುವವರು ಆಹಾರವನ್ನು ತೆಗೆದುಕೊಳ್ಳುವಾಗ ಲೋಟ ನಿಂಬೆ ಶರಬತ್ತು ಕುಡಿಯಿರಿ. ಇದು ದೇಹದಲ್ಲಿ ಉತ್ಸಾಹವನ್ನು ತುಂಬಿ ಸುಸ್ತನ್ನು ಹೋಗಲಾಡಿಸುತ್ತದೆ.

ತುಪ್ಪ

ತುಪ್ಪ

ವ್ರತದ ಅಡುಗೆಗಳನ್ನು ತಯಾರಿಸುವಾಗ ತುಪ್ಪವನ್ನು ಹಾಕಿ ತಯಾರಿಸಲು ಮರೆಯಬೇಡಿ. ಇದು ನರಗಳಿಗೆ ಶಕ್ತಿಯನ್ನು ತುಂಬುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಅಂಜೂರ

ಅಂಜೂರ

ಉಪವಾಸ ಮಾಡುವವರು ತಿನ್ನಬೇಕಾದ ಮತ್ತೊಂದು ಬೆಸ್ಟ್ ಹಣ್ಣೆಂದರೆ ಅಂಜೂರ. ಇದರಲ್ಲಿ ಅಧಿಕ ಪೋಷಕಾಂಶವಿದ್ದು, 2 ಹೊತ್ತು ಊಟ ಮಾಡದೆ ಬರೀ ಒಂದು ಹೊತ್ತು ಊಟ ಮಾಡಿದರೂ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಅಂಜೂರದಿಂದ ಪಡೆಯಬಹುದು.

ಬಾದಾಮಿ

ಬಾದಾಮಿ

ಆಹಾರವನ್ನು ತೆಗೆದುಕೊಳ್ಳುವಾಗ 2-3 ಬಾದಾಮಿಯನ್ನು ಬಾಯಿಗೆ ಹಾಕಿಕೊಳ್ಳಿ. ಇದರಲ್ಲಿರುವ ಪೋಷಕಾಂಶ ನಿಮ್ಮ ಸುಸ್ತನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಖರ್ಜೂರ

ಖರ್ಜೂರ

ಬರೀ ಒಂದು ಆಹಾರ ತೆಗೆದುಕೊಳ್ಳುವಾಗ ಅದರ ಜೊತೆ ಖರ್ಜೂರವನ್ನು ತಿನ್ನಲು ಮರೆಯದಿರಿ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದು ಮಾತ್ರವಲ್ಲ, ಹೊಟ್ಟೆ ಹಸಿವನ್ನು ನಿಯಂತ್ರಿಸಿ, ನೀವು ಮಾಡುವ ಕೆಲಸದಲ್ಲಿ ಕಾರ್ಯಮಗ್ನರಾಗುವಂತೆ ಮಾಡುತ್ತದೆ.

 ಜೀರಿಗೆ

ಜೀರಿಗೆ

ಹೊಟ್ಟೆ ಉರಿ, ಗ್ಯಾಸ್ ಮುಂತಾದ ಸಮಸ್ಯೆ ಕಾಣಿಸದಿರಲು ಒಂದು ಲೋಟ ಜೀರಿಗೆ ನೀರು ಸಹಾಯ ಮಾಡುವುದು.

ಲಸ್ಸಿ

ಲಸ್ಸಿ

ಲಸ್ಸಿ ಶಕ್ತಿವರ್ಧಕ ಪಾನೀಯವಾಗಿದೆ. ಅಲ್ಲದೆ ಇದರಲ್ಲಿ ಸ್ವಲ್ಪ ಚಕ್ಕೆ ಹಾಕಿ ಕುಡಿದರೆ ಕಾಯಿಲೆಗಳು ಬರದಂತೆ ತಡೆಯಬಹುದು.

 ಸೀಸನ್ ಫುಡ್ಸ್

ಸೀಸನ್ ಫುಡ್ಸ್

ಹಣ್ಣುಗಳನ್ನು ತಿನ್ನುವಾಗ ಸೀಸನ್ ಫುಡ್ ತಿನ್ನಿ, ಆಹಾರ ತಿಂದ ಬಳಿಕ ಒಂದು ಸೇಬು ತಿನ್ನುವುದು ಒಳ್ಳೆಯದು.

ಶುಂಠಿ

ಶುಂಠಿ

ಈರುಳ್ಳಿ, ಬೆಳ್ಳುಳ್ಳಿ ವ್ರತ ಅಡುಗೆಗಳಲ್ಲಿ ಬಳಸುವುದಿಲ್ಲ, ಆದರೆ ಶುಂಠಿಯನ್ನು ಬಳಸಬಹುದು, ಶುಂಠಿ ಬಳಸಿ, ಅದರ ಗುಣ ಪಡೆಯಿರಿ.

ಮೊಳಕೆ ಬರಿಸಿದ ಹೆಸರು ಕಾಳು

ಮೊಳಕೆ ಬರಿಸಿದ ಹೆಸರು ಕಾಳು

ಮೊಳಕೆ ಬರಿಸಿದ ಹೆಸರುಕಾಳು ಹೊಟ್ಟೆಯನ್ನು ತುಂಬಿರುವಂತೆ ಮಾಡುವುದಲ್ಲದೆ, ಬೇಗನೆ ಸುಸ್ತಾಗುವುದಿಲ್ಲ, ದಿನಾಪೂರ್ತಿ ಲವಲವಿಕೆಯಿಂದ ಇರುವಂತೆ ಮಾಡುವುದು.

English summary

Ayurvedic Foods For Navratri Fasting

During the nine day Navratri fast, it is best if you follow an Ayurvedic fasting plan. An ayurvedic plan will help keep you in good health and away from all types of diseases too. Take a look at some of the best ayurvedic foods to consume when you are fasting.
X
Desktop Bottom Promotion