For Quick Alerts
ALLOW NOTIFICATIONS  
For Daily Alerts

ಎಳ್ಳು, ಎಳ್ಳೆಣ್ಣೆಯಲ್ಲಿರುವ ಪ್ರಮುಖ ಔಷಧೀಯ ಗುಣಗಳು

|

ಎಳ್ಳಿನ ಬಳಕೆ ಇಂದು ನೆನ್ನೆಯದಲ್ಲಿ. ಸುಮಾರು 5000 ವರ್ಷಗಳ ಹಿಂದಿನಿಂದಲೂ ಬಳಕೆಯಲ್ಲಿದೆ. ಇದರಲ್ಲಿರುವ ಅತ್ಯಧಿಕ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು ನಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಎಳ್ಳಿನಲ್ಲಿರುವ ಪೋಷಕಾಂಶಗಳೆಂದರೆ ಮೆಗ್ನಿಷ್ಯಿಯಂ, ತಾಮ್ರ, ಸತು, ಕ್ಯಾಲ್ಸಿಯಂ, ಕಬ್ಬಿಣದಂಶ, ಮ್ಯಾಂಗನೀಸ್, ಸತು, ವಿಟಮಿನ್ ಬಿ6, ರಂಜಕ ಮತ್ತು ಪ್ರೊಟೀನ್ .

ಎಳ್ಳು ಮತ್ತು ಎಳ್ಳೆಣ್ಣೆ (til oil)ಅನೇಕ ಆರೊಗ್ಯಕರ ಗುಣಗಳನ್ನು ಹೊಂದಿದ್ದು, ಅವುಗಳ ಬಗ್ಗೆ ವಿವರವಾಗಿ ತಿಳಿಯಲು ಮುಂದೆ ಓದಿ:

ಎಳ್ಳು ತ್ವಚೆ ಸಮಸ್ಯೆಯ ವಿರುದ್ಧ ಹೋರಾಡುತ್ತದೆ

ಎಳ್ಳು ತ್ವಚೆ ಸಮಸ್ಯೆಯ ವಿರುದ್ಧ ಹೋರಾಡುತ್ತದೆ

ಎಳ್ಳಿನಲ್ಲಿರುವ(til) ಸತುವಿನಂಶ ತ್ವಚೆ ಸಂಬಂಧಿ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ, ತ್ವಚೆ ಕಣಗಳ ರಕ್ಷಣೆ ಮಾಡುತ್ತದೆ. ಎಳ್ಳೆಣ್ಣೆಯನ್ನು ಸುಟ್ಟ ಗಾಯವನ್ನು ಒಣಗಿಸಲು, ಕಲೆಯನ್ನು ಹೋಗಲಾಡಿಸಲು ಬಳಸಬಹುದು.

ಪ್ರೊಟೀನ್ ಕೊರತೆಯನ್ನು ನೀಗಿಸುತ್ತದೆ

ಪ್ರೊಟೀನ್ ಕೊರತೆಯನ್ನು ನೀಗಿಸುತ್ತದೆ

ಪ್ರೊಟೀನ್ ಕೊರತೆ ಇರುವವರು ಎಳ್ಳುಂಡೆ, ಎಳ್ಳು ಜ್ಯೂಸ್ ಇವುಗಳನ್ನು ತಿನ್ನುವುದು ಒಳ್ಳೆಯದು. ಒಂದು ಔನ್ಸ್ ಎಳ್ಳು ಬೀಜದಲ್ಲಿ 4.7 ಗ್ರಾಂ ಪ್ರೊಟೀನ್ ಇರುತ್ತದೆ.

ಎಳ್ಳೆಣ್ಣೆಯಿಂದ ಬಾಯಿ ಶುಚಿತ್ವ

ಎಳ್ಳೆಣ್ಣೆಯಿಂದ ಬಾಯಿ ಶುಚಿತ್ವ

ಸ್ವಲ್ಪ ಎಳ್ಳೆಣ್ಣೆಯನ್ನು (til oil)ಬಾಯಿಗೆ ಹಾಕಿ ಬಾಯಿ ಮುಕ್ಕಳಿಸಿದರೆ ಬಾಯಿ ಶುದ್ಧವಾಗುವುದು, ಹಲ್ಲಿನ ಬಿಳುಪು ಹೆಚ್ಚುವುದು, ಇದು ಬಾಯಿನಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ, ಬಾಯಿ ಹುಣ್ಣು, ಬಾಯಿ ದುರ್ವಾಸನೆ ಈ ರೀತಿಯ ಸಮಸ್ಯೆಯನ್ನು ತಡೆಯುವುದು.

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ

ಎಳ್ಳೆಣ್ಣೆಗೆ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಔಷಧೀಯ ಗುಣವಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಇದರಲ್ಲಿರುವ ಮೆಗ್ನಿಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಎಳ್ಳೆಣ್ಣೆ ಬಳಸಿ ಪ್ರಯೋಜನ ಪಡೆಯಬಹುದು.

ಹೃದಯದ ಸ್ವಾಸ್ಥ್ಯ ಹೆಚ್ಚಿಸುವುದು

ಹೃದಯದ ಸ್ವಾಸ್ಥ್ಯ ಹೆಚ್ಚಿಸುವುದು

ಎಳ್ಳೆಣ್ಣೆಯಲ್ಲಿ antioxidants ಅಂಶವಿದ್ದು ಎದೆ ಉರಿ ಮುಂತಾದ ಹೃದಯ ಸಂಬಂಧಿ ಕೆಲಸಗಳ ವಿರುದ್ಧ ಹೋರಾಡುತ್ತದೆ.

DNA ಕಣಗಳ ರಕ್ಷಣೆ ಮಾಡುತ್ತದೆ

DNA ಕಣಗಳ ರಕ್ಷಣೆ ಮಾಡುತ್ತದೆ

ಎಳ್ಳೆಣ್ಣೆ ನಿಮ್ಮ DNA ಕಣಗಳಿಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಅದಲ್ಲದೆ ಪ್ರತೀದಿನ 100 ಮಿಗ್ರಾಂ ಎಳ್ಳು ತಿನ್ನುವುದರಿಂದ ಕರುಳಿನ ಕ್ಯಾನ್ಸರ್ ತಡೆಯಬಹುದು.

 ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತದೆ

ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತದೆ

ಇದರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಯ ವಿರುದ್ಧ ಹೋರಾಡುತ್ತದೆ

ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಯ ವಿರುದ್ಧ ಹೋರಾಡುತ್ತದೆ

ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆ ಇರುವವರು ಪ್ರತೀದಿನ ಸ್ವಲ್ಪ ಎಳ್ಳನ್ನು(til)ತಿನ್ನಿ. ಇದರಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ ಇರುವವರು ಎಳ್ಳು ತಿಂದರೆ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಕೂದಲಿನ ಆರೋಗ್ಯ ವೃದ್ಧಿಸುವುದು

ಕೂದಲಿನ ಆರೋಗ್ಯ ವೃದ್ಧಿಸುವುದು

ಎಳ್ಳೆಣ್ಣೆಯನ್ನು (til oil)ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಇರುವುದು, ಅಕಾಲಿಕ ನೆರೆ ಕಂಡು ಬರುವುದಿಲ್ಲ, ಕೂದಲು ಕವಲೊಡೆಯುವ ಸಮಸ್ಯೆ ಕಂಡು ಬರುವುದಿಲ್ಲ, ಕೂದಲು ಆರೋಗ್ಯಕರವಾಗಿ, ಸೊಂಪಾಗಿ ಬೆಳೆಯುವುದು.

English summary

Amazing Health Benefit Of Til And Til Oil

Til seeds are not only praised for their nutritional content in seed form, but are also highly valued for their rancid-resistant oil. In fact, once you learn of the health benefits of til seeds, you may just find yourself stocking up on this ancient condiment.
 
X
Desktop Bottom Promotion