For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳಿವು!

|

ನಾನ್ ವೆಜ್ ತಿನ್ನುವವರು ಮಾತ್ರವಲ್ಲ ನಾನ್ ವೆಜ್ ತಿನ್ನದವರಲ್ಲಿ ಅನೇಕರು ಮೊಟ್ಟೆಯನ್ನು ತಿನ್ನುತ್ತಾರೆ. ಇದರಿಂದ ಕೇಕ್ ಮುಂತಾದ ಬೇಕರಿ ತಿಂಡಿಗಳನ್ನು ಹಾಗೂ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ನೀವು ಮೊಟ್ಟೆ ತಿನ್ನುವವರಾದರೆ ಮೊಟ್ಟೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಇಷ್ಟಪಡುತ್ತೇವೆ.

ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಮತ್ತು ಪ್ರೊಟೀನ್ ಅಂಶಗಳಿವೆ. ನೀವು ದಪ್ಪಗಾಗಲು ಬಯಸುವುದಾದರೆ ಮೊಟ್ಟೆಯ ಹಳದಿ ತಿನ್ನುವುದು ಒಳ್ಳೆಯದು, ತೆಳ್ಳಗಾಗಲು ಬಯಸುವುದಾದರೆ ಅದರ ಬಿಳಿ ಮಾತ್ರ ತಿನ್ನಿ.

ಮೊಟ್ಟೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಯಸುವುದಾದರೆ ಮುಂದೆ ಓದಿ:

ಅಮೈನೋ ಆಸಿಡ್

ಅಮೈನೋ ಆಸಿಡ್

ಮೊಟ್ಟೆಯಲ್ಲಿ 9 ರೀತಿಯ ಅಮೈನೋ ಆಸಿಡ್ ಗಳಿವೆ. ಇವು ಸ್ನಾಯುಗಳಲ್ಲಿ ಹಾನಿಯುಂಟಾಗಿದ್ದರೆ ಅವುಗಳನ್ನು ಸರಿಪಡಿಸಿ ಸ್ನಾಯುಗಳನ್ನು ಬಲಪಡಿಸುತ್ತದೆ. ಪ್ರತಿ ಮೊಟ್ಟೆಯಲ್ಲಿ 9ಗ್ರಾಂ ಪ್ರೊಟಿನ್ ದೊರೆಯುತ್ತದೆ.

ಆರೋಗ್ಯಕರವಾಗಿ ತೆಳ್ಳಗಾಗಲು

ಆರೋಗ್ಯಕರವಾಗಿ ತೆಳ್ಳಗಾಗಲು

ಮೊಟ್ಟೆಯನ್ನು ಬೇಯಿಸಿ ಅದರ ಬಿಳಿ ಭಾಗವನ್ನು ಮಾತ್ರ ತಿಂದರೆ ಆರೋಗ್ಯಕರವಾಗಿ ತೆಳ್ಳಗಾಗುವಿರಿ.

ಕಣ್ಣಿನ ಆರೋಗ್ಯಕ್ಕೆ

ಕಣ್ಣಿನ ಆರೋಗ್ಯಕ್ಕೆ

ದಿನಾ ಮೊಟ್ಟೆ ತಿಂದರೆ ಕಣ್ಣಿನ ಆರೋಗ್ಯ ಹೆಚ್ಚುತ್ತದೆ, ಕಣ್ಣಿನ ಪೊರೆ ಉಂಟಾಗದಂತೆ ತಡೆಯುತ್ತದೆ.

ಮಕ್ಕಳ ಮೆದುಳಿನ ಆರೋಗ್ಯಕ್ಕೆ

ಮಕ್ಕಳ ಮೆದುಳಿನ ಆರೋಗ್ಯಕ್ಕೆ

ಮಕ್ಕಳ ಮೆದುಳು ಚುರುಕಾಗಿ ಇರಬೇಕೆಂದು ಬಯಸುವುದಾದರೆ ಪ್ರತಿದಿನ ಒಂದು ಬೇಯಿಸಿದ ಮೊಟ್ಟೆ ಕೊಡಿ.

ಮಹಿಳೆಯರ ಆರೋಗ್ಯಕ್ಕೆ

ಮಹಿಳೆಯರ ಆರೋಗ್ಯಕ್ಕೆ

ಮೊಟ್ಟೆಯಲ್ಲಿ ವಿಟಮಿನ್ ಡಿ ಇರುವುದರಿಂದ ಮಹಿಳೆಯರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಟಮಿನ್ ಡಿ ಕೊರತೆ ಉಂಟಾದರೆ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವುದಿಲ್ಲ.

 ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದರಿಂದಾಗಿ ಹೃದಯದ ಸ್ವಾಸ್ಥ್ಯ ಹೆಚ್ಚುವುದು.

ಕೂದಲಿನ ಆರೋಗ್ಯಕ್ಕೆ

ಕೂದಲಿನ ಆರೋಗ್ಯಕ್ಕೆ

ಸೊಂಪಾದ ಕೂದಲು ಬೇಕೆಂದು ಬಯಸುವವರು ವಾರಕ್ಕೊಮ್ಮೆ ಮೊಟ್ಟೆಯ ಬಿಳಿಯನ್ನು ಕೂದಲಿಗೆ ಹಚ್ಚುವುದು ಒಳ್ಳೆಯದು. ಇದು ಕೂದಲನ್ನು ಮಂದವಾಗಿಸಿ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಮಕ್ಕಳಲ್ಲಿ ಮೂಳೆ ಬಲವಾಗಿರಲು

ಮಕ್ಕಳಲ್ಲಿ ಮೂಳೆ ಬಲವಾಗಿರಲು

ಮೊಟ್ಟೆಯಲ್ಲಿ ವಿಟಮಿನ್ ಡಿ ಇರುವುದರಿಂದ ಇದನ್ನು ಮಕ್ಕಳಿಗೆ ಕೊಟ್ಟರೆ ಮಕ್ಕಳ ಮೂಳೆಗಳು ಬಲವಾಗುವುದು, ಮಕ್ಕಳ ಬೆಳವಣಿಗೆಗೆ ಪೂರಕವಾಗುವುದು.

ಮೊಟ್ಟೆಯ ಬಿಳಿ ವರ್ಸಸ್ ಮೊಟ್ಟೆಯ ಹಳದಿ

ಮೊಟ್ಟೆಯ ಬಿಳಿ ವರ್ಸಸ್ ಮೊಟ್ಟೆಯ ಹಳದಿ

ಮೊಟ್ಟೆಯ ಬಿಳಿಯಲ್ಲಿ ಪ್ರೊಟೀನ್ ಅಂಶವಿದ್ದು ಸಮತೂಕದ ಮೈಕಟ್ಟಿಗೆ ಇದನ್ನು ತಿನ್ನುವುದು ಒಳ್ಳೆಯದು. ಮೊಟ್ಟೆಯ ಹಳದಿ ಮಕ್ಕಳಿಗೆ ಮತ್ತು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಒಳ್ಳೆಯದು.

ಬ್ರೇಕ್ ಫಾಸ್ಟ್ ಗೆ ಮೊಟ್ಟೆ ತಿನ್ನುವುದರಿಂದ ಏನು ಪ್ರಯೋಜನ?

ಬ್ರೇಕ್ ಫಾಸ್ಟ್ ಗೆ ಮೊಟ್ಟೆ ತಿನ್ನುವುದರಿಂದ ಏನು ಪ್ರಯೋಜನ?

ಮೊಟ್ಟೆಯನ್ನು ಬ್ರೇಕ್ ಫಾಸ್ಟ್ ಗೆ ತಿಂದರೆ ದಿನದಲ್ಲಿ ಆಯಾಸ ಉಂಟಾಗುವುದಿಲ್ಲ. ಇದು ದೇಹಕ್ಕೆ ಅವಶ್ಯಕವಾದ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶವನ್ನು ಒದಗಿಸುತ್ತದೆ.

ಮೊಟ್ಟೆಯನ್ನು ಹೇಗೆ ತಿನ್ನಬೇಕು?

ಮೊಟ್ಟೆಯನ್ನು ಹೇಗೆ ತಿನ್ನಬೇಕು?

ಮೊಟ್ಟೆಯನ್ನು ಎಣ್ಣೆಯಲ್ಲಿ ಫ್ರೈ ಮಾಡಿ ತಿನ್ನುವ ಬದಲು ಬೇಯಿಸಿ ಅಥವಾ ಎಗ್ ಪೋಚ್ ಮಾಡಿ ತಿಂದರೆ ಆರೋಗ್ಯಕರ.

 ಯಾವಾಗ ಮೊಟ್ಟೆ ತಿನ್ನಬಾರದು?

ಯಾವಾಗ ಮೊಟ್ಟೆ ತಿನ್ನಬಾರದು?

ಇದನ್ನು ಹೃದಯದ ಕಾಯಿಲೆ ಇರುವವರು ಹಾಗೂ ಅಧಿಕ ಕೊಲೆಸ್ಟ್ರಾಲ್ ಇರುವವರು ತಿನ್ನಬಾರದು.

English summary

All You Need To Know About Eggs | Tips For Health | ಮೊಟ್ಟೆಯ ಬಗ್ಗೆ ನೀವು ತಿಳಿಯಬೇಕಾದ ಅಂಶಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Some people call themselves eggetarians because eggs are loved a majority of people in the world. Although eggs are generally considered non vegetarian, even vegetarians have started eating eggs now.If you are confused and need to know all about eggs, then we have the complete information for you.
X
Desktop Bottom Promotion