For Quick Alerts
ALLOW NOTIFICATIONS  
For Daily Alerts

ಮುಂಜಾನೆ ವ್ಯಾಯಾಮದ ಪ್ರಯೋಜನಗಳು

By Hemanth P
|

ನೀವು ಮುಂಜಾನೆ ವೇಳೆ ರಸ್ತೆ, ಬೀದಿಗಳ ಕಡೆ ಗಮನಹರಿಸಿದ್ದೀರಾ? ಒಂದು ವೇಳೆ ಗಮನಹರಿಸಿದ್ದೀರಿ ಎಂದಾದರೆ ಆಗ ನಿಮಗೆ ಜನರು ನಡೆದಾಡುವುದು, ವಾಹನಗಳು ಅತ್ತಿಂದಿತ್ತ ಹೋಗುವುದು, ಕೆಲವರು ಜಿಮ್ ನ ಬಟ್ಟೆ ಹಾಕಿ ಜಿಮ್ ಗೆಹೋಗುವುದು, ಮತ್ತೆ ಕೆಲವರು ಕ್ರಿಕೆಟ್ ಅಥವಾ ಫುಟ್ಬಾಲ್ ಜೆರ್ಸಿ ಹಾಕಿಕೊಂಡು ಆಟವಾಡಲು ಓಡುತ್ತಿರುವುದು, ಇನ್ನು ಕೆಲವರು ಹಾಗೆ ನಡೆಯುವುದನ್ನು ಕಾಣಬಹುದು. ಈ ದೃಶ್ಯಗಳು ಮುಂಜಾನೆ ವೇಳೆ ಬೀದಿಗಳನ್ನು ನೋಡಿದಾಗ ಸಾಮಾನ್ಯವಾಗಿ ಕಂಡುಬರುತ್ತದೆ. ಯಾಕೆಂದರೆ ಹೆಚ್ಚಿನವರು ಮುಂಜಾನೆ ವೇಳೆ ವ್ಯಾಯಾಮ ಮಾಡಲು ಬಯಸುತ್ತಾರೆ.

ಮುಂಜಾನೆ ವೇಳೆ ವ್ಯಾಯಾಮ ಮಾಡುವುದರಿಂದ ಅದು ಆರೋಗ್ಯಕಾರಿ ಮತ್ತು ನಮ್ಮನ್ನು ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಹೆಚ್ಚಿನವರು ಮುಂಜಾನೆ ಎದ್ದು ಮಾಡುವ ಮೊದಲ ಕೆಲಸವೆಂದರೆ ವ್ಯಾಯಾಮ. ಮುಂಜಾನೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಹಿಂದಿನ ಕಾಲದಲ್ಲೂ ಜನರು ಸೂರ್ಯ ಮೂಡುವುದಕ್ಕಿಂತ ಮೊದಲೇ ಎದ್ದು ಕೆಲವು ದೈಹಿಕ ವ್ಯಾಯಾಮ ಅಥವಾ ಕೆಲಸ ಮಾಡುತ್ತಿದ್ದರು. ವೇದ ಮತ್ತು ಪುರಾಣಗಳಲ್ಲಿ ಮುಂಜಾನೆ ಎದ್ದು ಯೋಗ ಮಾಡಬೇಕೆಂದು ಉಲ್ಲೇಖಿಸಲಾಗಿದೆ.

Advantages of morning workout

ಮುಂಜಾನೆಯ ವ್ಯಾಯಾಮದಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಕೆಲವೊಂದು ಪ್ರಯೋಜನಗಳನ್ನು ಇಲ್ಲಿ ಚರ್ಚಿಸಲಾಗಿದೆ.

1. ನಿಮ್ಮನ್ನು ಉಲ್ಲಾಸಿತವಾಗಿಡುತ್ತದೆ
ಮುಂಜಾನೆ ವೇಳೆ ವ್ಯಾಯಾಮ ಮಾಡುವುದರಿಂದ ನೀವು ದಿನವಿಡಿ ಉಲ್ಲಾಸಿತರಾಗಿ ಇರಬಹುದು. ಮುಂಜಾನೆಯ ವ್ಯಾಯಾಮವು ವಾಕಿಂಗ್, ಜಿಮ್, ಡ್ಯಾನ್ಸ್ ಅಥವಾ ಯೋಗ ಆಗಬಹುದು. ನಿಮ್ಮ ದೇಹದಲ್ಲಿನ ಚಯಾಪಚಯಾ ಕ್ರಿಯೆಯು ಹೆಚ್ಚಾಗಿ ನಿಮ್ಮನ್ನು ದಿನವಿಡಿ ಶಕ್ತಿಯುತವಾಗಿಡಲಿದೆ. ಮುಂಜಾನೆ ವೇಳೆ ವ್ಯಾಯಾಮ ಮಾಡುವ ಕಾರಣ ಹಾರ್ಮೋನುಗಳು ಮೇಲಕ್ಕೇರಿ ನಿಮ್ಮನ್ನು ಜಾಗರೂಕ ಮತ್ತು ಉಲ್ಲಾಸಿತವಾಗಿಡುತ್ತದೆ. ನಿಮಗೆ ಬಸವಳಿದ ಅಥವಾ ಉದಾಸೀನ ಭಾವವಾಗದು. ಮುಂಜಾನೆ ವೇಳೆ ವ್ಯಾಯಾಮ ಮಾಡುವ ಕಾರಣ ನಿಮ್ಮ ತ್ವಚೆ ಮತ್ತು ಮುಖ ತಾಜಾತನದಿಂದ ಇರುತ್ತದೆ.

2. ಶಿಸ್ತು
ಮುಂಜಾನೆ ವ್ಯಾಯಾಮ ಮಾಡುವುದರಿಂದ ದೇಹವನ್ನು ಶಿಸ್ತಿನಲ್ಲಿ ಇಡಬಹುದು. ನಿಯಮಿತ ವ್ಯಾಯಾಮದಿಂದ ದೇಹದ ಚಟುವಟಿಕೆ ನಿಯಂತ್ರಿತವಾಗಿರುತ್ತದೆ. ಮುಂಜಾನೆಯ ವ್ಯಾಯಾಮದಿಂದಾಗಿ ನಿಮ್ಮ ದೇಹವು ಅದಕ್ಕೆ ಹೊಂದಿಕೊಂಡು ಹೋಗುತ್ತದೆ. ಒಮ್ಮೆ ನೀವು ಇದಕ್ಕೆ ಹೊಂದಿಕೊಂಡರೆ, ನೀವು ವ್ಯಾಯಾಮ ಮಾಡದಿದ್ದರೂ ಪ್ರತೀ ದಿನ ಅದೇ ಸಮಯಕ್ಕೆ ಏಳುತ್ತೀರಿ. ಈ ಹವ್ಯಾಸಕ್ಕೆ ನಿಮ್ಮ ಮೆದುಳು ಸರಿಯಾಗಿ ಹೊಂದಿಕೊಂಡಿರುತ್ತದೆ. ಮುಂಜಾನೆ ವ್ಯಾಯಾಮ ಮಾಡುವುದರಿಂದ ರಾತ್ರಿ ಸರಿಯಾಗಿ ನಿದ್ದೆ ಬೀಳುತ್ತದೆ.

3. ನಿಯಮಿತ ಆಹಾರಕ್ರಮ
ಮುಂಜಾನೆ ವೇಳೆ ವ್ಯಾಯಾಮ ಮಾಡುವ ಜನರು ಆರೋಗ್ಯಕರ ಆಹಾರಕ್ರಮ ಪಾಲಿಸಿಕೊಂಡು ಹೋಗುತ್ತಾರೆ. ಮುಂಜಾನೆ ವೇಳೆ ವ್ಯಾಯಾಮ ನಡೆಸುವ ಉಪಯೋಗವೆಂದರೆ ದೇಹವು ಆಹಾರ ಸೇವನೆಯನ್ನು ನಿಯಂತ್ರಿಸುತ್ತದೆ. ಮುಂಜಾನೆ ವೇಳೆ ವ್ಯಾಯಾಮ ಮಾಡುವ ಜನರ ಆಹಾರ ಕ್ರಮವು ತುಂಬಾ ಆರೋಗ್ಯಕರವಾಗಿರುತ್ತದೆ ಎಂದು ಪರಿಗಣಿಸಲಾಗಿದೆ. ಆಹಾರ ಜೀರ್ಣಕ್ರಮವು ಸರಿಯಾದ ಕ್ರಮದಲ್ಲಿರುತ್ತದೆ ಮತ್ತು ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಜೀರ್ಣ ಅಥವಾ ಮಲಬದ್ಧತೆ ಇರುವವರಿಗೆ ಮುಂಜಾನೆ ವ್ಯಾಯಾಮ ತುಂಬಾ ಪ್ರಯೋಜನಕಾರಿ.

4. ವೇಳಾಪಟ್ಟಿ
ಒಮ್ಮೆ ನೀವು ಮುಂಜಾನೆ ವೇಳೆ ವ್ಯಾಯಾಮ ಮಾಡಲು ಆರಂಭಿಸಿದರೆ ಆಗ ನಿಮ್ಮ ದಿನದ ವೇಳಾಪಟ್ಟಿಯು ತಯಾರಾಗುತ್ತದೆ. ಮುಂಜಾನೆಯ ವ್ಯಾಯಾಮದ ಮತ್ತೊಂದು ಪ್ರಯೋಜನವೆಂದರೆ ನೀವು ಮುಂಜಾನೆ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ದಿನದ ಬೇರೆ ಯಾವುದೇ ಸಮಯದಲ್ಲೂ ವ್ಯಾಯಾಮ ಮಾಡಬಹುದು. ಪ್ರತಿಯೊಬ್ಬರು ವ್ಯಸ್ತರಾಗಿರುತ್ತಾರೆ ಮತ್ತು ವ್ಯಾಯಾಮಕ್ಕೆ ಸಮಯ ಹೊಂದಿಸುವುದು ತುಂಬಾ ಕಷ್ಟ. ಹೆಚ್ಚಿನ ಜನರಿಗೆ ಮುಂಜಾನೆ ವ್ಯಾಯಾಮ ಮಾಡಲು ಸರಿಯಾದ ಸಮಯ. ಮುಂಜಾನೆ ವೇಳೆ ಯಾವುದೇ ರೀತಿಯ ಅಡ್ಡಿ ಮತ್ತು ಆತಂಕವಿರುವುದಿಲ್ಲ. ಇದರಿಂದ ಪ್ರಶಾಂತ ವಾತಾವರಣದಲ್ಲಿ ವ್ಯಾಯಾಮ ಮಾಡಬಹುದು.

5. ಉತ್ತಮ ಫಲಿತಾಂಶ

ಉಪಹಾರಕ್ಕೆ ಮೊದಲು ಮುಂಜಾನೆಯ ವ್ಯಾಯಾಮ ಮಾಡಬೇಕು. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಉಪಹಾರ ಅಥವಾ ಊಟದ ಬಳಿಕ ವ್ಯಾಯಾಮ ಮಾಡುವುದಕ್ಕಿಂತ ತುಂಬಾ ಒಳ್ಳೆಯದು. ಬೆಳಗ್ಗಿನ ಗಾಳಿಯು ತುಂಬಾ ತಾಜಾವಾಗಿರುತ್ತದೆ ಮತ್ತು ದಿನದ ಇತರ ಸಮಯಕ್ಕೆ ಹೋಲಿಸಿದರೆ ಹೆಚ್ಚಿನ ಆಮ್ಲಜನಕ ಹೊಂದಿರುತ್ತದೆ. ಬೆಳಗ್ಗಿನ ಗಾಳಿಯಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಹಿತಕಾರಿ. ದಿನದ ಇತರ ಸಮಯಕ್ಕಿಂತ ಬೆಳಗ್ಗಿನ ಅವಧಿಯಲ್ಲಿ ಸೂರ್ಯನ ಕಿರಣದಲ್ಲಿ ಹೆಚ್ಚಿನ ವಿಟಮಿನ್ ಇರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಬೆಳಗ್ಗಿನ ವ್ಯಾಯಾಮವು ತುಂಬಾ ಪ್ರಯೋಜನ ಹಾಗೂ ಪರಿಣಾಮಕಾರಿ. ಬೆಳಗ್ಗಿನ ಅವಧಿಯಲ್ಲಿ ವ್ಯಾಯಾಮ ಮಾಡುವುದರಿಂದ ಇದು ಕೆಲವೊಂದು ಲಾಭಗಳು.

English summary

Advantages of morning workout

Have you ever observed the streets in the morning? You will see some people walking on the street or a few vehicles passing by. There might be some people in their gym clothes going to their gym, there might be some in their cricket of football uniforms rushing to go play and there might be some come out for a normal morning walk.
Story first published: Monday, December 30, 2013, 11:22 [IST]
X
Desktop Bottom Promotion