For Quick Alerts
ALLOW NOTIFICATIONS  
For Daily Alerts

ಟೊಮೆಟೊದಲ್ಲಿ ಆರೋಗ್ಯಕರ ಗುಣಗಳಿವೆಯೇ?

By Super
|

ಟೊಮೆಟೊ! ಓಹ್! ಅವು ಸಿಹಿಯಾಗಿರುತ್ತೆ, ಆಹಾ! ರಸಭರಿತವಾಗಿರುತ್ತೆ, ಊಂ! ಸಖತ್ ರುಚಿಯಾಗಿರುತ್ತೆ!. ಹೌದು ಎಲ್ಲರಿಗೂ ಗೊತ್ತು ಅದು ಆರೋಗ್ಯಕ್ಕೆ ತುಂಬ ಒಳ್ಳೆಯದು ಅಂತ ಅಲ್ವಾ? ಹೂಂ, ಹೌದು, ಖಂಡಿತ. ಆದರೆ ಟೊಮೆಟೊಗಳು ಯಾಕೆ ಆರೋಗ್ಯಕ್ಕೆ ಒಳ್ಳೆಯದು ಅಂತ ಗೊತ್ತಾ? ಹೂಂ... ಅದರಲ್ಲಿ ವಿಟಮಿನ್ ಸಿ ಇರುತ್ತೆ ಅಲ್ವಾ? ಅದರಲ್ಲಿ ಹೆಚ್ಚು ಕ್ಯಾಲೊರಿಗಳಿರಲ್ಲ ಅಲ್ವಾ? ಅದರಲ್ಲಿ ಹೆಚ್ಚು ಕೊಬ್ಬಿನಂಶ ಇರಲ್ಲ ಅಲ್ವಾ? ಹೌದು ಹೌದು ಹೌದು ಆದರೆ ಅದಷ್ಟೇ ಅಲ್ಲ!!

ಬನ್ನಿ ನೋಡೋಣ ಯಾಕೆ ಟೊಮೆಟೊಗಳು ಆರೋಗ್ಯಕ್ಕೆ ತುಂಬ ಒಳ್ಳೆಯದು ಅಂತ.

ಹಣ್ಣಾದ ಕೆಂಪು ಟೊಮೆಟೊ (ಸುಮಾರು 150 ಗ್ರಾಂನ ಒಂದು ಕಪ್) ವಿನಲ್ಲಿ ವಿಟಮಿನ್ ಎ,ಸಿ,ಕೆ, ಫೊಲೇಟ್ ಮತ್ತು ಪೊಟ್ಯಾಶಿಯಂ ಇರುತ್ತದೆ. ಟೊಮೆಟೊಗಲ್ಲಿ ಸೋಡಿಯಂ, ಕೊಬ್ಬಿನಂಶ, ಕೊಲೆಸ್ಟ್ರಾಲ್ ಮತ್ತು ಕ್ಯಾಲೊರಿಗಳು ಕಡಿಮೆ ಇರುತ್ತದೆ. ಟೊಮೆಟೊಗಳು ತೈಮಿನ್, ನೈಸಿನ್, ವಿಟಮಿನ್ ಬಿ6, ಮ್ಯಾಗ್ನೀಶಿಯಂ, ಫಾಸ್ಫರಸ್ ಮತ್ತು ಕಾಪರ್ ಅಂಶವನ್ನು ಒದಗಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು.

ಇವೆಲ್ಲಕ್ಕಿಂತ ಹೆಚ್ಚಾಗಿ ಒಂದು ಟೊಮೆಟೊ 2 ಗ್ರಾಂನಷ್ಟು ಫೈಬರ್ ಅಂಶವನ್ನು ದೇಹಕ್ಕೆ ಒದಗಿಸುತ್ತದೆ. ಇದು ದಿನನಿತ್ಯ ನಮಗೆ ಬೇಕಾಗಿರುವ ಫೈಬರ್ ಅಂಶಕ್ಕಿಂತ ಶೇ 7 ರಷ್ಟು ಹೆಚ್ಚು. ಟೊಮೆಟೊಗಳಲ್ಲಿ ನೀರಿನಂಶ ಹೆಚ್ಚಿರುವುದರಿಂದ ಅವುಗಳನ್ನು ತಿನ್ನುವುದರಿಂದ ಸಮತೋಲನ ಆಹಾರ ತಿಂದಂತೆ. ಸಾಮಾನ್ಯವಾಗಿ ಅತಿಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಟೊಮೆಟೊಗಳನ್ನು ಒಳಗೊಂಡಂತೆ ಸೇವಿಸುವುದರಿಂದ ರಕ್ತದೊತ್ತಡ, ಅತಿ ಕೊಲೆಸ್ಟ್ರಾಲ್ನ ಸಮಸ್ಯೆ, ಪಾರ್ಶ್ವವಾಯು ಮತ್ತು ಹೃದಯದ ತೊಂದರೆಗಳಿಂದ ದೂರ ಉಳಿಯಬಹುದು.

ಒಂದು ಟೊಮೆಟೊ ಎಂದರೆ ಪೌಷ್ಟಿಕಾಂಶಗಳ ಆಗರ ಅಷ್ಟೇ ಅಲ್ಲ ಇನ್ನೂ ಇದರ ಉಪಯೋಗಗಳು ಸಾಕಷ್ಟಿವೆ!

ಆರೋಗ್ಯಕರ ಚರ್ಮ

ಆರೋಗ್ಯಕರ ಚರ್ಮ

ಟೊಮೆಟೊಗಳು ಚರ್ಮಕ್ಕೆ ಹೊಳಪನ್ನು ನೀಡುತ್ತವೆ. ಕ್ಯಾರೆಟ್ ಮತ್ತು ಸಿಹಿ ಆಲೂಗಡ್ಡೆಗಳಲ್ಲಿ ಕೂಡ ಟೊಮೆಟೊಗಳಲ್ಲಿರುವ ಬೀಟಾ-ಕ್ಯಾರೊಟೆನೆ ಇರುತ್ತದೆ. ಇದು ಸೂರ್ಯ ರಶ್ಮಿಯಿಂದ ನಿಮ್ಮ ಚರ್ಮಕ್ಕೆ ರಕ್ಷಣೆ ನೀಡುತ್ತದೆ. ಟೊಮೆಟೊಗಳಲ್ಲಿನ ಲೈಕೊಪೆನೆ UV ರಶ್ಮಿಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಡೆಗಟ್ಟುತ್ತದೆ. ಇದರಿಂದ ಚರ್ಮದ ಮೇಲುಂಟಾಗುವ ಬಿರುಕುಗಳು ಮತ್ತು ನಿರಿಗೆಗಳು ಕೂಡ ತಪ್ಪುತ್ತವೆ.

ಮೂಳೆಗಳನ್ನು ಬಲಗೊಳಿಸುತ್ತದೆ

ಮೂಳೆಗಳನ್ನು ಬಲಗೊಳಿಸುತ್ತದೆ

ಟೊಮೆಟೊಗಳು ಮೂಳೆಗಳನ್ನು ಬಲಗೊಳಿಸುತ್ತದೆ. ಟೊಮೆಟೊಗಳಲ್ಲಿರುವ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಅಂಶ ಮೂಳೆಗಳನ್ನು ಬಲಗೊಳಿಸುತ್ತದೆ ಮತ್ತು ಮೂಳೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಲೈಕೊಪೆನೆ ಅಂಶವು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವ ಮೂಲಕ ಒಸ್ಟಿಯೊಪೊರೊಸಿಸ್ ಅಂದರೆ ಅಸ್ಥಿ ರಂಧ್ರತೆಯನ್ನು ತಡೆಯುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಟೊಮೆಟೊಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ನೈಸರ್ಗಿಕ ಗುಣವನ್ನು ಹೊಂದಿದೆ. ಲೈಕೊಪೆನೆ ಅಂಶವು ಹಲವು ಬಗೆಯ ಕ್ಯಾನ್ಸರ್ ಗಳಾದ ಅಂಡಾಣು, ಸೆರ್ವಿಕಲ್, ಬಾಯಿ, ಫರೈನೆಕ್ಸ್, ಗಂಟಲು, ಅನ್ನನಾಳ, ಹೊಟ್ಟೆ, ಕೊಲೊನ್, ರೆಕ್ಟಲ್ ಮತ್ತು ಪುರುಷ ಜನನೇಂದ್ರಿಯ ಸಂಬಂಧಿತ ಕ್ಯಾನ್ಸರ್ ಗಳ ಅಪಾಯವನ್ನು ತಪ್ಪಿಸುತ್ತದೆ.

ಸಕ್ಕರೆ ಖಾಯಿಲೆ

ಸಕ್ಕರೆ ಖಾಯಿಲೆ

ಟೊಮೆಟೊಗಳು ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಟೊಮೆಟೊಗಳಲ್ಲಿ ಕ್ರೊಮಿಯಂನ ಅಂಶ ಹೆಚ್ಚಿರುತ್ತದೆಯಾದ್ದರಿಂದ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

ದೃಷ್ಟಿ

ದೃಷ್ಟಿ

ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಟೊಮೆಟೊಗಳು ಪ್ರಧಾನ ಪಾತ್ರ ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಎ ಅಂಶವು ಇರುಳುಗಣ್ಣಿನ ಸಮಸ್ಯೆಯನ್ನು ತಡೆಗಟ್ಟುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಟೊಮೆಟೊಗಳು ಅಕ್ಷಿಪಟಲದ ಅವನತಿ ಮತ್ತು ಗಂಭೀರ ಕಣ್ಣಿನ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

ಕೂದಲು

ಕೂದಲು

ಟೊಮೆಟೊಗಳಿಂದ ಕೂದಲ ಸೌಂದರ್ಯ ಹೆಚ್ಚುತ್ತದೆ. ಇದರಲ್ಲಿನ ವಿಟಮಿನ್ ಎ ಅಂಶವು ಕೂದಲನ್ನು ಹೆಚ್ಚು ಸದೃಢ ಮತ್ತು ಕಾಂತಿಯುಕ್ತವಾಗಿ ಮಾಡುತ್ತದೆ. ಆದರೆ ಟೊಮೆಟೊಗಳು ಕೂದಲುದುರಿವೆಕೆಗೆ ಪರಿಹಾರ ನೀಡುವುದಿಲ್ಲ. ಬದಲಿಗೆ ಇರುವ ಕೂದಲು ಸುಂದರವಾಗಿರಲು ಸಹಾಯ ಮಾಡುತ್ತದೆ.

 ಮೂತ್ರಪಿಂಡ ಮತ್ತು ಪಿತ್ತಗಲ್ಲುಗಳನ್ನು ನಿವಾರಿಸುತ್ತದೆ

ಮೂತ್ರಪಿಂಡ ಮತ್ತು ಪಿತ್ತಗಲ್ಲುಗಳನ್ನು ನಿವಾರಿಸುತ್ತದೆ

ಟೊಮೆಟೊಗಳು ಮೂತ್ರಪಿಂಡ ಮತ್ತು ಪಿತ್ತಗಲ್ಲುಗಳನ್ನು ನಿವಾರಿಸುತ್ತವೆ. ಕೆಲವು ಅಧ್ಯಯನಗಳ ಪ್ರಕಾರ ಟೊಮೆಟೊಗಳಲ್ಲಿನ ಬೀಜಗಳನ್ನು ತೆಗೆದು ತಿನ್ನುವವರಲ್ಲಿ ಈ ಕಲ್ಲುಗಳ ಸಮಸ್ಯೆ ಉಂಟಾಗುವುದಿಲ್ಲ.

ವಿವಿಧ ಬಗೆಯ ನೋವುಗಳಿಗೆ ಉಪಶಮನಕಾರಿ

ವಿವಿಧ ಬಗೆಯ ನೋವುಗಳಿಗೆ ಉಪಶಮನಕಾರಿ

ಟೊಮೆಟೊಗಳು ಹಲವು ಬಗೆಯ ನೋವುಗಳನ್ನು ಉಪಶಮನ ಮಾಡುತ್ತದೆ. ನೀವು ಸಣ್ಣ ಮತ್ತು ತೀವ್ರ ಸ್ವರೂಪದಲ್ಲಿ ಕೀಲು ನೋವು ಅಥವ ಬೆನ್ನು ನೋವು ಮೊದಲಾದ ನೋವುಗಳನ್ನು ಅನುಭವಿಸುತ್ತಿರುವವರಲ್ಲಿ ಒಬ್ಬರಾಗಿದ್ದರೆ ಟೊಮೆಟೊಗಳು ನಿಮಗೆ ದಿವ್ಯೌಷಧಿ. ಟೊಮೆಟೊಗಳಲ್ಲಿ ಬಯೋಫ್ಲೇವೊನೈಡ್ಗಳು ಮತ್ತು ಕ್ಯಾರೊಟಿನಾಯ್ಡಗಳು ಇರುವುದರಿಂದ ಅವು ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ. ತೀವ್ರವಾದ ನೋವಿನಲ್ಲಿ ಉರಿಯಿರುತ್ತದೆ. ಹಾಗಾಗಿ ಉರಿಯನ್ನು ತಡೆಗಟ್ಟುವುದು ನೋವನ್ನು ಮಣಿಸಲು ಇರುವ ಏಕೈಕ ದಾರಿ. ಮಾರುಕಟ್ಟೆಯಲ್ಲಿ ದೊರೆಯುವ ಹಲವು ಔಷಧಿಗಳು ಇದೇ ರೀತಿಯಲ್ಲಿ ಕೆಲಸ ಮಾಡುತ್ತವೆ.

ತೂಕ ಕಳೆದುಕೊಳ್ಳುವಿಕೆ

ತೂಕ ಕಳೆದುಕೊಳ್ಳುವಿಕೆ

ಟೊಮೆಟೊಗಳು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನೀವು ಯೋಜಿತ ರೀತಿಯಲ್ಲಿ ಪಥ್ಯವನ್ನು ಮಾಡುವ ಯೋಚನೆ ಹೊಂದಿದ್ದಲ್ಲಿ ನಿಮ್ಮ ಆಹಾರದಲ್ಲಿ ಟೊಮೆಟೊಗಳನ್ನು ಸೇರಿಸಿಕೊಳ್ಳಿ. ಇವುಗಳಿಂದ ಸಲಾಡ್, ಕ್ಯಾಸೆರೊಲ್ಸ್, ಸ್ಯಾಂಡ್ವಿಚ್ ಮತ್ತು ಇತರ ಊಟವನ್ನು ತಯಾರು ಮಾಡಿಕೊಳ್ಳಬಹುದು. ಟೊಮೆಟೊಗಳಲ್ಲಿ ನೀರು ಮತ್ತು ಫೈಬರ್ ಅಂಶ ಹೆಚ್ಚಿರುತ್ತದೆ. ಈ ಬಗೆಯ ಆಹಾರವನ್ನೇ ಡಯಟೀಷಿಯನ್ಗಳು ಸಮತೋಲನ ಆಹಾರ ಎಂದು ಕರೆಯುವರು. ಇವುಗಳನ್ನು ತಿಂದಾಗ ನಿಮಗೆ ಬೇಗ ಹೊಟ್ಟೆ ತುಂಬುತ್ತದೆ ಆದರೆ ಹೆಚ್ಚಿನ ಕೊಬ್ಬು ಅಥವ ಕ್ಯಾಲೊರಿಗಳು ದೇಹವನ್ನು ಸೇರುವುದಿಲ್ಲ.

English summary

9 Surprising Health Benefits of Tomatoes

Tomatoes also have a relatively high water content, which makes them a filling food. In general eating plenty of fruits and vegetables, including tomatoes, confers protection against high blood pressure, high cholesterol, strokes, and heart disease.
Story first published: Thursday, September 12, 2013, 17:28 [IST]
X
Desktop Bottom Promotion