For Quick Alerts
ALLOW NOTIFICATIONS  
For Daily Alerts

ಎದೆ ಉರಿ ಸಮಸ್ಯೆ ಕಡಿಮೆ ಮಾಡುವ 9 ಆಹಾರಗಳು

|

ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಎದೆ ಉರಿ ಉಂಟಾಗುತ್ತದೆ. ಎದೆ ಉರಿ ಕಾಣಿಸಿದರೆ ಹೊಟ್ಟೆ ಮತ್ತು ಎದೆ ಭಾಗದಲ್ಲಿ ಉರಿ ಕಂಡು ಬರುವುದು. ಲಕ್ಷಾಂತರ ಮಂದಿಗೆ ಈ ಸಮಸ್ಯೆ ಇದೆ. ಈ ಸಮಸ್ಯೆ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.

ಕೆಲವೊಂದು ಆಹಾರಗಳನ್ನು ತಿಂದರೆ ಎದೆ ಉರಿ ಜಾಸ್ತಿಯಾಗುತ್ತವೆ. ಕೆಲವರಿಗೆ ಅವಲಕ್ಕಿ ತಿಂದರೆ ತುಂಬಾ ಎದೆ ಉರಿ ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲವರಿಗೆ ಉಪ್ಪಿಟ್ಟು ತಿಂದರೆ ಎದೆ ಉರಿಯುತ್ತದೆ. ಎದೆ ಉರಿ ಸಮಸ್ಯೆ ಇರುವವರಿಗೆ ಎಲ್ಲಾ ಬಗೆಯ ಆಹಾರಗಳನ್ನು ತಿನ್ನಲು ಸಾಧ್ಯವಿಲ್ಲ. ಗ್ಯಾಸ್ ಉತ್ಪತ್ತಿ ಮಾಡುವ ಆಹಾರಗಳು ಎದೆ ಉರಿ ಬರುವಂತೆ ಮಾಡಿದರೆ, ಈ ಕೆಳಗಿನ ಆಹಾರಗಳು ಎದೆ ಉರಿಯನ್ನು ಕಡಿಮೆ ಮಾಡುತ್ತವೆ:

ಮೊಸರು

ಮೊಸರು

ಎದೆ ಉರಿಯಿದ್ದರೆ ಮೊಸರಿಗೆ ಸ್ವಲ್ಪ ಸಕ್ಕರೆ ಹಾಕಿ ತಿನ್ನುವುದು ಒಳ್ಳೆಯದು. ಮೊಸರನ್ನು ಸ್ವಲ್ಪ ನೀರು ಹಾಕಿ ತೆಳ್ಳಗೆ ಮಾಡಿ ದಿನದಲ್ಲಿ 2-3 ಗ್ಲಾಸ್ ಕುಡಿಯುವುದು ಒಳ್ಳೆಯದು.

ಲೋಳೆಸರದ ಜ್ಯೂಸ್

ಲೋಳೆಸರದ ಜ್ಯೂಸ್

ಲೋಳೆಸರದ ಜ್ಯೂಸ್ ನಲ್ಲಿ ವಿಟಮಿನ್ ಎ, ಬಿ1, ಬಿ2, ಬಿ3, ಸಿ, ಇ , ರಂಜಕ ಇರುವುದರಿಂದ ಎದೆ ಉರಿ ಕಡಿಮೆಯಾಗುತ್ತದೆ.

 ಬಾಳೆ ಹಣ್ಣು

ಬಾಳೆ ಹಣ್ಣು

ಎದೆ ಉರಿ ಆಗುತ್ತಿರುವಾಗ ಬಾಳೆ ಹಣ್ಣು ತಿಂದರೆ ಕೂಡಲೇ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಿಯಾಗಿ ನಡೆಯಹುವಂತೆ ಮಾಡಿ ಮಲಬದ್ಧತೆ ಸಮಸ್ಯೆ ಇದ್ದರೆ ಅದನ್ನು ಕೂಡ ಹೋಗಲಾಡಿಸುತ್ತದೆ.

 ಸೇಬು

ಸೇಬು

ಎದೆ ಉರಿ ಕಾಣಿಸಿಕೊಂಡರೆ ಸೇಬು ತಿನ್ನುವುದುಅಥವಾ ಸೇಬು ಜ್ಯೂಸ್ ಕುಡಿಯುವುದರಿಂದ ಎದೆ ಉರಿಯನ್ನು ಕಡಿಮೆ ಮಾಡಬಹುದು. ಪ್ರತಿದಿನ ಸೇಬು ತಿಂದರೆ ಎದೆ ಉರಿ ಸಮಸ್ಯೆ ಕಂಡು ಬರುವುದಿಲ್ಲ.

 ಹಾಲು

ಹಾಲು

ಹಸಿ ಹಾಲನ್ನು ಕುಡಿದರೆ ಎದೆ ಉರಿ, ಹೊಟ್ಟೆ ಉರಿ ಕಡಿಮೆಯಾಗುವುದು ಬರೀ ಹಾಲು ಕುಡಿಯಲು ಇಷ್ಟವಿಲ್ಲದವರು ಅದಕ್ಕೆ ಸ್ವಲ್ಪ ಜೇನು ಹಾಕಿ ಕುಡಿಯಬಹುದು.

ನಿಂಬೆ ಹಣ್ಣು

ನಿಂಬೆ ಹಣ್ಣು

ನಿಂಬೆ ಹಣ್ಭಿನಿಂದ ಜ್ಯೂಸ್ ಮಾಡಿ ಕುಡಿದರೆ ಕೂಡ ಎದೆ ಉರಿ ಕಡಿಮೆಯಾಗುತ್ತದೆ. ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ದೇಹದಲ್ಲಿ ಬೊಜ್ಜು ಕೂಡ ಶೇಖರವಾಗುವುದಿಲ್ಲ.

 ಜೀರಿಗೆ

ಜೀರಿಗೆ

ಎದೆ ಉರಿ ಇರುವವರು ಪ್ರತಿದಿನ ಜೀರಿಗೆ ನೀರು ಮಾಡಿ ಕುಡಿದರೆ ಎದೆ ಉರಿ ಕಾಣಿಸಿಕೊಳ್ಳುವುದಿಲ್ಲ.

ಪಪ್ಪಾಯಿ

ಪಪ್ಪಾಯಿ

ಊಟದ ಒಂದು ಗಂಟೆ ಮೊದಲು ಸ್ವಲ್ಪ ಪಪ್ಪಾಯಿಯನ್ನು ತಿಂದರೆ ಊಟದ ನಂತರ ಎದೆ ಉರಿ ಕಂಡು ಬರುವುದಿಲ್ಲ.

 ಕಿತ್ತಳೆ

ಕಿತ್ತಳೆ

ಸಿಟ್ರಸ್ ಇರುವ ಆಹಾರಗಳು ಎದೆ ಉರಿಯನ್ನು ಕಡಿಮೆ ಮಾಡುತ್ತದೆ. ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

English summary

9 Simple Foods To Cure Heartburn | Tips For Health | ಎದೆ ಉರಿಯನ್ನು ಕಡಿಮೆಮಾಡುವ 9 ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Heartburn is commonly caused due to the intake of some foods and beverages. For example, gastric foods and fried foods like burger, radish etc can cause heartburn.Here are few best foods that can help cure heartburn naturally. Have them to get instant relief.
X
Desktop Bottom Promotion