For Quick Alerts
ALLOW NOTIFICATIONS  
For Daily Alerts

ತಲೆನೋವಿಗೆ ಮಾತ್ರೆ ನುಂಗಿದರೆ ಆರೋಗ್ಯ ಜೋಕೆ!

|

ತಲೆನೋವು ಬಂದರೆ ಒಂದು ಮಾತ್ರೆ ನುಂಗಿ ಸುಮ್ಮೆನಿದ್ದು ಬಿಡುತ್ತೇವೆ. ಮಾತ್ರೆಯ ಪ್ರಭಾವ ಕಮ್ಮಿಯಾದ ನಂತರ ಪುನಃ ತಲೆನೋವು ಕಾಣಿಸಿಕೊಳ್ಳುತ್ತದೆ, ಯಾವುದೇ ವಿಷಯದ ಕಡೆ ಗಮನ ಹರಿಸಲು ಸಾಧ್ಯವಾಗದೇ, ಕೆಲಸ ಮಾಡಲು ಸಾಧ್ಯವಿಲ್ಲದೆ ಒದ್ದಾಡಿ ಬಿಡುತ್ತೇವೆ, ತಲೆ ಸಿಡಿಯುವುದು ತಡೆಯಲಾರದೆ ಮತ್ತೊಂದು ಮಾತ್ರೆ ನುಂಗಿ ಬಿಡುತ್ತೇವೆ.

ತಲೆ ನೋವಿನ ನಿವಾರಣೆ ಆಗಾಗ ಮಾತ್ರೆ ನುಂಗುವುದು ಒಳ್ಳೆಯ ಅಭ್ಯಾಸವಲ್ಲ. ಮಾತ್ರೆಯ ಬದಲು ತಲೆ ನೋವು ಕಡಿಮೆ ಮಾಡುವ ಸಾಮರ್ಥ್ಯವಿರುವ ಆಹಾರಗಳನ್ನು ತಿನ್ನಿ. ಇನ್ನು ಮುಂದೆ ತಲೆನೋವು ಆದಾಗ ಈ ಈ ಕೆಳಗಿನ ಆಹಾರಗಳಿಂದ ತಲೆನೋವನ್ನು ಹೋಗಲಾಡಿಸಿ:

ಆಲೂಗಡ್ಡೆ

ಆಲೂಗಡ್ಡೆ

ಮದ್ಯಪಾನ ಮಾಡಿ ಮಲಗಿ ಬೆಳಗ್ಗೆ ಎದ್ದರೆ ತುಂಬಾ ತಲೆನೋವು ಉಂಟಾಗುವುದು. ಮದ್ಯವನ್ನು ಕುಡಿದರೆ ಅದು ದೇಹದಲ್ಲಿ ನೀರಿನಂಶ ಹಾಗೂ ಪೊಟಾಷ್ಯಿಯಂ ಕಮ್ಮಿ ಮಾಡುವುದರಿಂದ ತಲೆನೋವು ಉಂಟಾಗುವುದು. ಬಾಳೆ ಹಣ್ಣು, ಬೇಯಿಸಿದ ಆಲೂಗಡ್ಡೆ ತಿಂದರೆ ತಲೆನೋವು ಕಡಿಮೆಯಾಗುವುದು.

ಕಲ್ಲಂಗಡಿ

ಕಲ್ಲಂಗಡಿ

ತಲೆನೋವು ಕಾಣಿಸಿದರೆ ಮಾತ್ರೆಯನ್ನು ನುಂಗುವ ಮೊದಲು ಕಲ್ಲಂಗಡಿ ಹಣ್ಣನ್ನು ತಿನ್ನಿ, ಈ ರೀತಿ ಮಾಡಿದರೆ ಮಾತ್ರೆ ನುಂಗುವ ಅವಶ್ಯಕತೆ ಬೀಳುವುದಿಲ್ಲ.

3. ಕಾಫಿ

3. ಕಾಫಿ

ಕೆಫೀನ್ ಅಂಶವಿರುವ ಆಹಾರ ತಲೆನೋವನ್ನು ಕಡಿಮೆಮಾಡುತ್ತದೆ. ಕಾಫಿ ಕುಡಿದರೆ ತಲೆನೋವು ಕಡಿಮೆಯಾಗುವುದು. ಆದರೆ ನೆನೆಪಿಡಿ ತುಂಬಾ ಕಾಫಿ ಕುಡಿದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ತಲೆನೋವು ಹೆಚ್ಚಾಗುವುದು.

4. ದವಸಧಾನ್ಯಗಳಿಂದ ಮಾಡಿದ ಬ್ರೆಡ್

4. ದವಸಧಾನ್ಯಗಳಿಂದ ಮಾಡಿದ ಬ್ರೆಡ್

ದೇಹದಲ್ಲಿ ಕಾರ್ಬೋಹೈಡ್ರೇಟ್ ಕಡಿಮೆಯಾದರೂ ತಲೆನೋವು ಉಂಟಾಗುವುದು. ಇದರಿಂದ ದೇಹದಲ್ಲಿ ಗ್ಲೈಕೋನ್ ಉತ್ಪತ್ತಿ ಕಡಿಮೆಯಾಗುವುದು. ಗ್ಲೈಕೋನ್ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಅವಶ್ಯಕ. ಆದ್ದರಿಂದ ತಲೆನೋವು ಕಮ್ಮಿ ಮಾಡಲು ಕಾರ್ಬೋಹೈಡ್ರೇಟ್ ಇರುವ ಆಹಾರ ಒಳ್ಳೆಯದು. ಮೊಸರು, ದವಸ ಧಾನ್ಯಗಳಿಂದ ಮಾಡಿದ ಬ್ರೆಡ್ ಇವುಗಳನ್ನು ತಿನ್ನುವುದು ಒಳ್ಳೆಯದು.

5. ಬಾದಾಮಿ

5. ಬಾದಾಮಿ

ಬಾದಾಮಿಯಲ್ಲಿರುವ ಮ್ಯಾಗ್ನಿಷಿಯಂ ತಲೆನೋವು ಬರದಂತೆ ತಡೆಯುತ್ತದೆ. ಆಗಾಗ ತಲೆನೋವು ಕಾಣಿಸಿಕೊಳ್ಳುವವರು ಬಾದಾಮಿ, ಬಾಳೆ ಹಣ್ಣು, ಬೆಣ್ಣೆ ಹಣ್ಣು, ಕೆಂಪಕ್ಕಿ ಅನ್ನ ಇವುಗಳನ್ನು ಪ್ರತಿದಿನ ತಿಂದರೆ ತಲೆನೋವು ಬರುವುದಿಲ್ಲ.

6. ಖಾರ ಪದಾರ್ಥಗಳು

6. ಖಾರ ಪದಾರ್ಥಗಳು

ಖಾರ ಪದಾರ್ಥಗಳು ತಿಂದರೆ ತಲೆನೋವು ಕಡಿಮೆಯಾಗುತ್ತದೆ ಎಂದು ಹೇಳಿದರೆ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು. ಕರಿಮೆಣಸು ಹಾಕಿ ತಯಾರಿಸಿದ ಆಹಾರ ತಿಂದರೆ ಸ್ವಲ್ಪ ಹೊತ್ತಿನಲ್ಲಿಯೇ ತಲೆನೋವು ಕಡಿಮೆಯಾಗುವುದು.

7. ಮೊಸರು

7. ಮೊಸರು

ಪ್ರತೀದಿನ ಮೊಸರು ತಿಂದರೆ ತಲೆನೋವು ಆಗಾಗ ಕಾಣಿಸುವುದಿಲ್ಲ. ತಲೆನೋವು ಬಂದ ತಕ್ಷಣ ಸ್ವಲ್ಪ ಮೊಸರು ತಿನ್ನಿ. ನೋವು ತಕ್ಷಣ ಕಡಿಮೆಯಾಗುತ್ತದೆ.

8. ಎಳ್ಳು

8. ಎಳ್ಳು

ಎಳ್ಳಿನಲ್ಲಿ ವಿಟಮಿನ್ ಇ ಇದ್ದು ಮೈಗ್ರೇನ್ ಬರದಂತೆ ತಡೆಯುತ್ತದೆ. ಎಳ್ಳು ರಕ್ತವನ್ನು ಶುದ್ಧೀಕರಿಸುತ್ತದೆ, ಇದರಲ್ಲಿ ಮ್ಯಾಗ್ನಿಷಿಯಂ ಇರುವುದರಿಂದ ದೇಹಕ್ಕೆಶಕ್ತಿ ದೊರೆಯುತ್ತದೆ.

9. ಪಾಲಾಕ್

9. ಪಾಲಾಕ್

ಪಾಲಾಕ್ ಹ್ಯಾಂಗೋವರ್ ನಿಂದ ಹೊರಬರಲು ಸಹಾಯ ಮಾಡುತ್ತದೆ. ರಕ್ತ ಸಂಚಾರಕ್ಕೆ ಸರಿಯಾಗಿ ನಡೆಯುವಂತೆ ಮಾಡುತ್ತದೆ.

English summary

9 Foods That Will Help Your Headaches | Tips For Health | ತಲೆನೋವಿಗೆ ಮಾತ್ರೆಬೇಡ, ಈ ಆಹಾರ ಸಾಕು | ಆರೋಗ್ಯಕ್ಕಾಗಿ ಕೆಲ ಸಲಹೆ

Those who suffer from frequent headaches no very well that they are incredibly hard to ignore. But before popping those pills over and over, we'd advise checking out some other reasons and solutions to the problem, such as making sure you are eating things that help your headache instead of making it worse!
X
Desktop Bottom Promotion