For Quick Alerts
ALLOW NOTIFICATIONS  
For Daily Alerts

ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಕೆಲ ಟಿಪ್ಸ್

|

ಕೆಲಸಕ್ಕೆ ಹೋಗುವವರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ ಒತ್ತಡ. ಒತ್ತಡದಿಂದಾಗಿ ವ್ಯಕ್ತಿ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಈವತ್ತು ದಿನ ಸರಿಯಿರಲಿಲ್ಲ ನಾಳೆ ಎಲ್ಲವೂ ಸರಿ ಹೋಗುತ್ತೆ ಅಂತ ನೀವು ಯೋಚಿಸುತ್ತಿದ್ದರೆ ಅದನ್ನು ಮನಸ್ಸಿನಿಂದ ತೆಗೆದುಹಾಕಿ. ಪ್ರತಿ ದಿನವೂ ನೀವು ಒತ್ತಡವನ್ನು ಎದುರಿಸಲೇ ಬೇಕು ಎಂಬುದು ಸತ್ಯ. ಕೆಲಸಕ್ಕೆ ಹೋಗುವ ಪ್ರತಿಯೊಬ್ಬರು ಒತ್ತಡವನ್ನು ಎದುರಿಸುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವು ಆರೋಗ್ಯ ಮತ್ತು ಚರ್ಮದ ಸಮಸ್ಯೆಗಳಿಗೆ ಒಂದು ಮುಖ್ಯ ಕಾರಣ.

ಪ್ರತಿ ಬಾರಿ ಹೆಚ್ಚಾಗುವ ಕೆಲಸದ ಭಾರ, ಗುರಿಮುಟ್ಟಬೇಕೆಂಬ ಡೆಡ್ ಲೈನ್ ಗಳು, ರುಚಿಹೀನ ಕ್ಯಾಂಟಿನ್ ಫುಡ್, ಕಿರಿಕಿರಿಯುಂಟು ಮಾಡುವ ಸಹದ್ಯೋಗಿಗಳು, ಆಫೀಸಿನ ರಾಜಕಾರಣ ಮತ್ತು ಬಾಸ್ ನ ಬಾಸಿಸಂ ಇವೆಲ್ಲ ನಿಮ್ಮ ಮೇಲೆ ಒತ್ತಡ ಹೇರುತ್ತದೆ! ಇದು ನಿಮ್ಮ ಮನಸ್ಸು ಮತ್ತು ಆರೋಗ್ಯದ ಮೇಲೆ ಮಾತ್ರವಲ್ಲ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತವೆ. ಹಲವು ದಂಪತಿಗಳು ತಮ್ಮ ವೈಯುಕ್ತಿಕ ಮತ್ತು ವೃತ್ತಿ ಜೀವನವನ್ನು ಈ ಒತ್ತಡದ ಕಾರಣದಿಂದಲೇ ಸಂಭಾಳಿಸಲು ಕಷ್ಟಪಡುತ್ತಾರೆ.

ಸ್ಪರ್ಧೆ ಅಥವ ಸವಾಲುಗಳಿಂದಾಗಿ ಒತ್ತಡದ ಮಟ್ಟ ಹೆಚ್ಚಾಗುತ್ತದೆ. ಕೆಲಸ ಮಾಡುವ ಜಾಗದಲ್ಲಿನ ಒತ್ತಡವು ನಿಮ್ಮ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೈಹಿಕ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಒತ್ತಡದ ಮಟ್ಟವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ನಿಮಗೆ ಒತ್ತಡವನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದಿರಬೇಕು.

ನೀವು ಕೆಲಸ ಮಾಡುವ ಜಾಗದಲ್ಲಿನ ಒತ್ತಡವನ್ನು ನೀವು ಹಲವು ರೀತಿಯಲ್ಲಿ ಎದುರಿಸಬಹುದು. ಆರೋಗ್ಯಕರ ಮತ್ತು ಉಲ್ಲಾಸಕರ ವಾತಾವರಣವನ್ನು ನಿರ್ಮಿಸಿಕೊಳ್ಳುವ ಮೂಲಕ ಒತ್ತಡದಿಂದ ಪಾರಾಗಬಹುದು. ನೀವು ವೃತ್ತಿಪರರಾಗಿದ್ದಲ್ಲಿ ಒತ್ತಡವನ್ನು ನಿರ್ವಹಿಸಲು ಇಲ್ಲಿವೆ ಕೆಲವು ಸರಳೋಪಾಯಗಳು. ಇವುಗಳ ನೆರವಿನಿಂದ ನೀವು ಒತ್ತಡದ ಸಮಸ್ಯೆಯಿಂದ ಪಾರಾಗಬಹುದು.

ಕೆಲಸದ ಒತ್ತಡವನ್ನು ತಡೆಗಟ್ಟಲು 8 ಸರಳ ದಾರಿಗಳು:

ದೀರ್ಘವಾಗಿ ಉಸಿರಾಡಿ

ದೀರ್ಘವಾಗಿ ಉಸಿರಾಡಿ

ಒತ್ತಡದಿಂದ ಮುಕ್ತರಾಗಲು ಮತ್ತು ಮನಸ್ಸನ್ನು ಪ್ರಶಾಂತಗೊಳಿಸಲು ಇದೊಂದು ಉತ್ತಮ ವಿಧಾನ. ಇದು ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವಲ್ಲಿ ಕೂಡ ಪರಿಣಾಮಕಾರಿ. ಇದರಿಂದಾಗಿ ನೀವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪುತ್ತದೆ.

ಶಾಂತವಾಗಿರಿ

ಶಾಂತವಾಗಿರಿ

ಹಲವು ಮಂದಿ ತಮ್ಮ ತಾಳ್ಮೆಯನ್ನು ಕಳೆದುಕೊಂಡು ಕೆಲಸದ ಜಾಗದಲ್ಲಿ ಏನೇನೋ ಮಾತಾಡಿ ತೊಂದರೆ ತಂದುಕೊಳ್ಳುತ್ತಾರೆ. ಇದು ನೀವಲ್ಲ ನಿಮ್ಮ ಒತ್ತಡ ಮಾತಾಡುತ್ತಿರುವುದು ಎಂದು ತಿಳಿದಿರಲಿ. ಇದನ್ನು ನಿಯಂತ್ರಿಸಬೇಕೆಂದರೆ ನೀವು ಶಾಂತತೆಯನ್ನು ಕಾಪಾಡಿಕೊಳ್ಳಬೇಕು. ಒಬ್ಬರೇ ಅಥವ ನಿಮ್ಮ ಸಹದ್ಯೋಗಿಯೊಂದಿಗೆ ಒಂದು ಸಣ್ಣ ವಾಕ್ ಹೋಗಿಬನ್ನಿ ಮನಸ್ಸು ನಿರಾಳವಾಗುತ್ತದೆ.

ತಮಾಷೆಯಾದುದನ್ನು ನೋಡಿ

ತಮಾಷೆಯಾದುದನ್ನು ನೋಡಿ

ನೀವು ಒತ್ತಡಕ್ಕೆ ಒಳಗಾದಾಗ ನಗುವುದು ಒಳ್ಳೆಯದು. ನಗು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಏನಾದರೂ ತಮಾಷೆಯಾಗಿರುವಂಥದ್ದನ್ನು ನೋಡಿ ಖುಷಿಯಾಗಿ.

ಕಾಫಿಗೆ ಬೈ ಹೇಳಿ

ಕಾಫಿಗೆ ಬೈ ಹೇಳಿ

ಸಾಮಾನ್ಯವಾಗಿ ಜನ ಕಾಫಿ ಕುಡಿಯುವುದು ಒತ್ತಡವನ್ನು ಕಡಿಮೆ ಮಾಡಲು ಉತ್ತಮೌಷಧ ಎಂದು ತಿಳಿಯುತ್ತಾರೆ. ಆದರೆ ಕೆಫೀನ್ ನಿಮ್ಮೊಳಗಿನ ಸಹಜವಾಗಿ ನಿಮ್ಮನ್ನು ಶಾಂತಗೊಳಿಸಬಲ್ಲ ಅಡಿನೊಸೈನ್ ಅನ್ನು ಕಡಿಮೆ ಮಾಡಿಬಿಡುತ್ತದೆ. ಆದ್ದರಿಂದ ಹೆಚ್ಚು ಕಾಫಿ ಕುಡಿಯಬೇಡಿ.

ಧ್ಯಾನ ಮಾಡಿ

ಧ್ಯಾನ ಮಾಡಿ

ಧ್ಯಾನ ಮಾಡುವುದು ಒತ್ತಡದಿಂದ ಹೊರಬರಲು ಮತ್ತು ಆರೋಗ್ಯವಾಗಿರಲು ಸಹಕಾರಿ. ಧ್ಯಾನ ನಿಮ್ಮ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಮನಸ್ಸು ಮತ್ತು ದೇಹವನ್ನು ಶಾಂತವಾಗಿರಿಸುತ್ತದೆ.

ಒಳ್ಳೆಯ ಆಹಾರ ಸೇವಿಸಿ

ಒಳ್ಳೆಯ ಆಹಾರ ಸೇವಿಸಿ

ಕೆಲವು ಆಹಾರಗಳು ನಿಮ್ಮ ಮೂಡನ್ನು ಉತ್ತಮಗೊಳಿಸಬಲ್ಲವು. ನೀವು ಒತ್ತಡದಲ್ಲಿದ್ದಾಗ ಬಾದಾಮಿ, ನೇರಳೆ ಹಣ್ಣು ಮತ್ತು ಕಿತ್ತಳೆ ಹಣ್ಣುಗಳನ್ನು ತಿನ್ನಿ. ಇವು ನಿಮ್ಮ ಒತ್ತಡವನ್ನು ಕಡಿಮೆಗೊಳಿಸುತ್ತದೆ.

ವಿಟಮಿನ್ ಸಿ ಸೇವಿಸಿ

ವಿಟಮಿನ್ ಸಿ ಸೇವಿಸಿ

ವಿಟಮಿನ್ ಸಿ ಆರೋಗ್ಯಕಾರಿ ಆ್ಯಂಟಿ ಆ್ಯಂಕ್ಸಿಡೆಂಟ್ ಇದು ಒತ್ತಡವನ್ನು ಸಹಜವಾಗಿ ಕಡಿಮೆಗೊಳಿಸುತ್ತದೆ. ಆದ್ದರಿಂದ ಕ್ಯಾರೆಟ್ ಗಳು, ಕಿತ್ತಳೆ ಹಣ್ಣು ಮತ್ತು ಸಿಟ್ರಸ್ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ. ಒತ್ತಡದಿಂದ ದೂರವುಳಿಯಿರಿ.

ನೀರು ಕುಡಿಯಿರಿ

ನೀರು ಕುಡಿಯಿರಿ

ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ಆರೋಗ್ಯವನ್ನು ಕಾಪಾಡುತ್ತದೆ. ಯಾವಾಗಲೂ ದೇಹದಲ್ಲಿ ನೀರಿನಂಶ ಸಮತೋಲನದಲ್ಲಿದ್ದರೆ ಆಯಾಸಗೊಂಡ ಮಾಂಸಖಂಡಗಳಿಗೆ ಆರಾಮ ನೀಡಿ ನೀವು ಶಾಂತ ಚಿತ್ತರಾಗಿರುವಂತೆ ಮಾಡುತ್ತದೆ.

English summary

8 Simple Ways To Beat Job Stress

There are many ways in which you can beat stress and have a healthy and joyous environment at workplace. If you are one of the working professionals who is suffering from stress, then here are some of the best and simple ways to beat job stress.
Story first published: Friday, December 6, 2013, 10:48 [IST]
X
Desktop Bottom Promotion