For Quick Alerts
ALLOW NOTIFICATIONS  
For Daily Alerts

ವೈದ್ಯರು ತಕ್ಷಣ ಗುರುತಿಸದ 6 ಭಯಂಕರ ಕಾಯಿಲೆಗಳು!

|

ನಿಮ್ಮ ವೈದ್ಯರು ಬಹಳ ಬುದ್ದಿವಂತರೇ ಆಗಿರಬಹುದು ಆದರೆ ಕೆಲವೊಂದು ಕಾಯಿಲೆಯ ಬಗ್ಗೆ ಖಚಿತಪಡಿಸಕೊಳ್ಳಲು ನಿಮ್ಮ ಸಹಾಯ ಬೇಕಾಗುತ್ತದೆ. ನೀವು ಕೆಲವು ವಿಷಯಗಳನ್ನು ಇದು ಅಷ್ಟೊಂದು ಪ್ರಮುಖವಲ್ಲ ಎಂದು ನಿಮ್ಮಷ್ಟಕ್ಕೆ ನಿರ್ಧಾರ ಮಾಡಿದ್ದಲ್ಲಿ ನಿಮ್ಮ ವೈದ್ಯರು ನಿಮ್ಮ ಕಾಯಿಲೆಯ ಬಗ್ಗೆ ತಪ್ಪು ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ. ಹೆಚ್ಚಿನವರು ಸಂಕೋಚದಿಂದಲೋ. ಭಯದಿಂದಲೋ ವೈದ್ಯರ ಹತ್ತಿರ ತಮ್ಮ ಕಾಯಿಲೆ ಬಗ್ಗೆ ಸಂಪೂರ್ಣವಾಗಿ ಹೇಳುವುದಿಲ್ಲ, ನೀವು ಸರಿಯಾಗಿ ಹೇಳದಿದ್ದರೆ ಅವರಿಗೂ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ.

ನಿಜವಾದ ಶಕ್ತಿ ಬರುವುದು ಜಾರಿಕೊಳ್ಳುವುದರಿಂದ ಅಥವಾ ತಪ್ಪಿಸಿಕೊಳ್ಳುವುದರಿಂದಲ್ಲ ಬದಲಾಗಿ ಸತ್ಯವನ್ನು ಒಪ್ಪಿಕೊಳ್ಳುವುದರಿಂದಾಗಿ. ಹೀಗೆ ಈಗಲೇ ತೆರೆದ ಮನಸ್ಸಿನಿಂದ ಎಲ್ಲವನ್ನೂ ಒಪ್ಪಿಕೊಳ್ಳಲು ಆರಂಭಿಸಿ, ನಿಮ್ಮ ಸಮಸ್ಯೆಗಳನ್ನು ಮರೆಮಾಚದೆ ಹೇಳಿ, ಅನೇಕ ಬಾರಿ ವೈದ್ಯರು ಕೂಡ ಪ್ರಾರಂಭದಲ್ಲಿಯೇ ಕೆಲವೊಂದು ಕಾಯಿಲೆಗಳನ್ನು ಗುರುತಿಸಲು ಎಡವುತ್ತಾರೆ. ಉದಾಹರಣಗೆ ಮೆದುಳು ಜ್ವರ ಬಂದವರಿಗೆ ಸಾಮಾನ್ಯ ಜ್ವರದ ಔಷಧಿ ಕೊಡುತ್ತಾ ಇರುತ್ತಾರೆ, ರೋಗಿಯ ಜ್ವರ ಸ್ವಲ್ಪವೂ ಕಮ್ಮಿಯಾಗದಿದ್ದಾಗ ಕೊನೆಗೆ ಸಂಶಯ ಬಂದು ಪರೀಕ್ಷೆ ಮಾಡಿಸುತ್ತಾರೆ, ಆಗ ಮೆದುಳು ಜ್ವರವೆಂದು ಖಚಿತವಾದರೂ ಕಾಲ ಮಿಂಚಿ ಹೋಗಿರುತ್ತದೆ, ಆದ್ದರಿಂದ ವೈದ್ಯರಷ್ಟು ಅಲ್ಲದಿದ್ದರೆ ಸ್ವಲ್ಪ ಮಟ್ಟಿಗೆ ಕಾಯಿಲೆ, ಅವುಗಳ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು, ಏನಂತೀರಿ?

ನೀವೂ ಈ ಮಾತನ್ನು ಒಪ್ಪುವುದಾದರೆ ಮುಂದೆ ಓದಿ

1. ವಾಸೋಮೋಟಾರ್ ರಿಂಟಿಸ್ (ಮೂಗು ಸೋರುವಿಕೆ)

1. ವಾಸೋಮೋಟಾರ್ ರಿಂಟಿಸ್ (ಮೂಗು ಸೋರುವಿಕೆ)

ಮೂಗುಸೋರುವಿಕೆಯ ಲಕ್ಷಣಗಳನ್ನು ಸಾಮಾನ್ಯ ಅಲರ್ಜಿಯ ಲಕ್ಷಣಗಳೊಂದಿಗೆ ಹೋಲಿಕೆ ಮಾಡುವ ಸಾಧ್ಯತೆಗಳಿವೆ. ನಿಮ್ಮ ವೈದ್ಯರು ನಿಮ್ಮ ಲಕ್ಷಣಗಳನ್ನು ಸಾಮಾನ್ಯ ಅಲರ್ಜಿ ಎಂದು ಪರಿಗಣಿಸಿದರೆ ಅಥವಾ ನೀವು ಸರಿಯಾಗಿ ನಿಮ್ಮ ವೈದ್ಯರಿಗೆ ನಿಮ್ಮ ರೋಗ ಲಕ್ಷಣಗಳನ್ನು ತಿಳಿಯಪಡಿಸದೇ ಇದ್ದಲ್ಲಿ ತಪ್ಪು ಗ್ರಹಿಕೆ ಸಾಧ್ಯವಿದೆ. ನೀವು ಸುಗಂಧ ದ್ರವ್ಯ, ಕೆಲವು ಆಹಾರಗಳು ಇತ್ಯಾದಿಗಳಿಂದ ಅಲರ್ಜಿ ಹೊಂದಿದ್ದರೆ ಹಾಗೂ ಕಣ್ಣಲ್ಲಿ ನೀರು ಸೋರುವಿಕೆ, ಮೂಗು ಸೋರುವಿಕೆ ಇದ್ದಲ್ಲಿ ಅಲರ್ಜಿ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಮರೆಯದಿರಿ.

2.ಉದರದ ತೊಂದರೆ

2.ಉದರದ ತೊಂದರೆ

ಇದು ಜೀರ್ಣ ಸಮಸ್ಯೆಯಿಂದ ಹಾಗೂ ಕೆಲವು ಅಂಟು ಪದಾರ್ಥಗಳ ಸೇವನೆಯಿಂದ ಉಂಟಾಗುವ ರೋಗ ಲಕ್ಷಣವಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಆಹಾರದಲ್ಲಿರುವ ಪೋಷಕಾಂಶಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ ಇದಕ್ಕೆ ಕಾರಣ ಅವರ ಸಣ್ಣ ಕರುಳು ಆರೋಗ್ಯಕರವಾಗಿರುವುದಿಲ್ಲ. ಇದರ ಸಾಮಾನ್ಯ ರೋಗ ಲಕ್ಷಣಗಳೆಂದರೆ ಭೇದಿ, ಹೊಟ್ಟೆ ಉಬ್ಬುವುದು, ಮತ್ತು ಅನಿಯಮಿತ ಕರುಳಿನ ಚಲನೆಗಳು.

3.ಥೈರಾಯ್ಡ್ ಅನಾರೋಗ್ಯಗಳು

3.ಥೈರಾಯ್ಡ್ ಅನಾರೋಗ್ಯಗಳು

ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಮೊದಲು ಕಂಡುಬರುವ ರೋಗ ಲಕ್ಷಣಗಳೆಂದರೆ ಪ್ಯಾನಿಕ್ ಅಟಾಕ್ಸ್ ಮತ್ತು ಹೃದಯದ ನಾಡಿ ಮಿಡಿತದಲ್ಲಿ ವಿಪರೀತ ಏರಿಳಿತ. ಇಂತಹ ರೋಗಿಗಳು ಚಯಾಪಚಯ ಕ್ರಿಯೆಗಳಲ್ಲೂ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ಇದರ ಜೊತೆಗೆ ಸ್ನಾಯು ಸೆಳೆತ, ಗಂಟು ನೋವು ಹಾಗೂ ಬೆಳವಣಿಗೆಯಲ್ಲೂ ಏರುಪೇರಾಗುವ ಸಾಧ್ಯತೆಗಳಿವೆ. ಥೈರಾಯ್ಡ್ ನ ಲಕ್ಷಣಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಖಿನ್ನತೆಯ ಲಕ್ಷಣಗಳೊಂದಿಗೆ ತಪ್ಪಾಗಿ ಗ್ರಹಿಸುವ ಸಾಧ್ಯತೆಗಳಿವೆ.

4.ಕ್ಯಾನ್ಸರ್

4.ಕ್ಯಾನ್ಸರ್

ಒಂದು ಅತಿ ದೊಡ್ಡ ದುರಂತ ಎಂದರೆ ವೈದ್ಯರು ಕ್ಯಾನ್ಸರ್ ನ ಲಕ್ಷಣಗಳನ್ನು ಸಾಮಾನ್ಯ ನೆಗಡಿ ಅಥವಾ ಜ್ವರದ ಲಕ್ಷಣಗಳೊಂದಿಗೆ ತಪ್ಪಾಗಿ ಗ್ರಹಿಸುವುದು. ಬಿಳಿ ರಕ್ತ ಕಣಗಳ ಅನಿಯಮಿತ ಹಿಗ್ಗುವಿಕೆಯಿಂದ ಇದು ಉಂಟಾಗುತ್ತದೆ ಹಾಗೂ ಇದು ಒಬ್ಬ ರೋಗಿಯಿಂದ ಮತ್ತೊಬ್ಬ ರೋಗಿಗೆ ವಿಭಿನ್ನ ಲಕ್ಷಣಗಳನ್ನು ತೊರಿಸುತ್ತದೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಹಸಿವಾಗದಿರುವುದು, ಅಸಾಮಾನ್ಯ ಬೆವರುವಿಕೆ ಹಾಗೂ ಜ್ವರ. ಕ್ಯಾನ್ಸರ್ ನಿಂದ ಬಳಲುವ ರೋಗಿಯೂ ಅನಿಯಮಿತ ಹಾಗೂ ಸರಿಯಾದ ಕಾರಣವಿಲ್ಲದ ತೂಕ ಇಳಿತವನ್ನು ಅನುಭವಿಸುತ್ತಾರೆ, (ಇದುವರೆಗೆ ಸರಿಯಾಗಿ ರೋಗವನ್ನು ಗುರುತಿಸದೇ ಇದ್ದಲ್ಲಿ.)

5. ಹೃದಯಾಘಾತ

5. ಹೃದಯಾಘಾತ

ಹೃದಯಾಘಾತ ಬಹಳ ಅಪಾಯಕಾರಿ ಮತ್ತು ಆಘಾತಕ್ಕೊಳಪಟ್ಟವನ ಪ್ರಾಣಕ್ಕೇ ಮಾರಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. ರಕ್ತನಾಳಗಳಲ್ಲಿ ಹರಿಯುತ್ತಿರುವ ರಕ್ತವು ನಿಂತು ಹೋಗುತ್ತದೆ ಮತ್ತು ಇದರ ರೋಗ ಲಕ್ಷಣಗಳೆಂದರೆ ಆಯಾಸ, ಉಸಿರಾಡಲು ಕಷ್ಟವಾಗುವುದು ಅಥವಾ ಹೃದಯದಲ್ಲಿ ನೋವು. ಇದನ್ನು ಹೆಚ್ಚಿನ ಸಂದರ್ಭಗಳಲ್ಲಿ ಒತ್ತಡದಿಂದಾದ ನೋವು ಅಥವಾ ಬರಿಯ ನೋವು ಎಂದು ತಪ್ಪು ತಿಳಿಯುವ ಸಾಧ್ಯತೆಗಳಿವೆ.

6.ಬ್ಯಾಕ್ಟೀರಿಯಾಗಳಿಂದಾದ ಮಿದುಳ್ಪೊರೆ ಉರಿತ

6.ಬ್ಯಾಕ್ಟೀರಿಯಾಗಳಿಂದಾದ ಮಿದುಳ್ಪೊರೆ ಉರಿತ

ಈ ಲಕ್ಷಣದಲ್ಲಿ ನಿಮ್ಮ ಬೆನ್ನಮೂಳೆಯಲ್ಲಿ ಊತ ಕಾಣಿಸಿಕೊಳ್ಳಬಹುದು ಇದನ್ನು ಹೆಚ್ಚಿನ ಸಂದರ್ಭಗಳಲ್ಲಿ ಜ್ವರ ಎಂದು ಭಾವಿಸುವ ಸಾಧ್ಯತೆಗಳಿವೆ ಇದಕ್ಕೆ ಕಾರಣ ರೋಗ ಲಕ್ಷಣಗಳು ಒಂದೇ ಆಗಿರುವುದು. ಅವುಗಳೆಂದರೆ ತುರಿಕೆ, ಬಿಗಿಯಾದ ಕತ್ತು ಹಾಗೂ ಜ್ವರ. ಇದು ಮುಂದೆ ಪಾರ್ಶ್ಚವಾಯುವಿಗೂ ಎಡೆಮಾಡಿಕೊಡಬಹುದು.

ನಿಮ್ಮ ವೈದ್ಯರು ನಿಮ್ಮ ರೋಗವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದಿಲ್ಲ ಎಂದು ದೃಢಪಡಿಸಲು ನಿಮ್ಮ ಎಲ್ಲಾ ರೋಗ ಲಕ್ಷಣಗಳನ್ನು ಸರಿಯಾಗಿ ವೈದ್ಯರಲ್ಲಿ ತಿಳಿಸಿ. ನಿಮ್ಮ ವೈದ್ಯರು ನಿಮ್ಮ ರೋಗ ಲಕ್ಷಣಗಳ ಬಗ್ಗೆ ಸರಿಯಾದ ಗಮನ ಹರಿಸುವುದಿಲ್ಲ ಎಂದು ಅನ್ನಿಸಿದರೆ ಎರಡನೆಯ ಸಲಹೆಯನ್ನು ಪಡೆಯಲು ಹಿಂಜರಿಯದಿರಿ. ಸುರಕ್ಷಿತವಾಗಿರುವುದು ಮತ್ತೆ ಮರುಗುವುದಕ್ಕಿಂತ ಉತ್ತಮ.

English summary

6 Illnesses Your Doctor May Not Detect

Your doctor may be a genius, but that doesn’t make him immune to mistakes. Particularly, if you are hiding something from the doctor because you think they can’t be called emergencies, your doctor is most likely not able to diagnose correctly.
X
Desktop Bottom Promotion