For Quick Alerts
ALLOW NOTIFICATIONS  
For Daily Alerts

ಬ್ರೇಕ್ ಫಾಸ್ಟ್ ಗೆ ಇವುಗಳನ್ನು ತಿನ್ನುವುದು ಆರೋಗ್ಯಕರವಲ್ಲ!

|

ನಾವು ದಿನದಲ್ಲಿ 3-4 ಹೊತ್ತು ತಿನ್ನುತ್ತೇವೆ ಆದರೂ ಬೆಳಗ್ಗೆ ತಿನ್ನುವ ಆಹಾರ ಪ್ರಮುಖವಾದದು. ದೇಹಕ್ಕೆ ಶಕ್ತಿಯನ್ನು ತುಂಬುವಂತಹ ಆಹಾರವನ್ನು ತಿನ್ನಬೇಕು. ಆದ್ದರಿಂದಲೇ ಬೆಳಗ್ಗೆ ರಾಜನಂತೆ, ಮಧ್ಯಾಹ್ನ ಮಿತವಾಗಿ, ರಾತ್ರಿ ನಿರ್ಗತಿಕನಂತೆ ತಿನ್ನುವುದು ಆರೋಗ್ಯಕರ ಎಂದು ಹೇಳುವುದು.

ಬ್ರೇಕ್ ಫಾಸ್ಟ್ ವಿಷಯದಲ್ಲಿ ಸಾಕಷ್ಟು ಜನರು ತಪ್ಪುಗಳನ್ನು ಮಾಡುತ್ತಾರೆ. ಕೆಲವರು ಸಣ್ಣಗಾಗಬೇಕೆಂದು ಬೆಳಗ್ಗಿನ ಬ್ರೇಕ್ ಫಾಸ್ಟ್ ಮಾಡದೆ ತಪ್ಪಾದ ಡಯಟ್ ಕ್ರಮ ಅನುಸರಿಸಿದರೆ, ಮತ್ತೆ ಕೆಲವರು ಬೆಳಗ್ಗೆ ಕರಿದ ಪದಾರ್ಥಗಳನ್ನು, ಅಧಿಕ ಕ್ಯಾಲೋರಿ ಇರುವ ಆಹಾರವನ್ನು ತಿನ್ನುವ ಮೂಲಕ ಅನಾರೋಗ್ಯಕರ ಡಯಟ್ ಪಾಲಿಸುತ್ತಾರೆ. ಇನ್ನು ಕೆಲವರು ಅಡುಗೆ ಮಾಡಲು ಸಮಯವಿಲ್ಲವೆಂದು ರೆಡಿ ಟು ಕುಕ್ ಆಹಾರಗಳ ಮೊರೆ ಹೋಗಿದ್ದಾರೆ.

ಇಲ್ಲಿ ನಾವು ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ಯಾವ ರೀತಿಯ ಆಹಾರಗಳು ಆರೋಗ್ಯಕರವಲ್ಲವೆಂಬುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಪ್ಯಾನ್ ಕೇಕ್

ಪ್ಯಾನ್ ಕೇಕ್

ಪ್ಯಾನ್ ಕೇಕ್ ಅನ್ನು ಸಾಮಾನ್ಯವಾಗಿ ಬೆಳಗ್ಗಿನ ಬ್ರೇಕ್ ಪಾಸ್ಟ್ ಗೆ ಹೆಚ್ಚಾಗಿ ತಯಾರಿಸಲಾಗುವುದು. ಆದರೆ ಇದರಲ್ಲಿ ಬೆಣ್ಣೆ, ಸಕ್ಕರೆಯಂಶ ಅಧಿಕವಿರುವುದರಿಂದ ತುಂಬಾ ಅಪರೂಪಕ್ಕೆ ಮಾತ್ರ ಈ ರೀತಿಯ ಪ್ಯಾನ್ ಕೇಕ್ ಮಾಡಿ ತಿನ್ನುವುದು ಒಳ್ಳೆಯದು.

 ಸ್ವೀಟ್ ಪೊಂಗಲ್

ಸ್ವೀಟ್ ಪೊಂಗಲ್

ಸ್ಟೀಟ್ ಪೊಂಗಲ್ ಅನ್ನು ಬೆಲ್ಲ ಹಾಕಿ ಮಾಡಿದರೆ ಆರೋಗ್ಯಕರ, ಅದೇ ಸಕ್ಕರೆ ಹಾಕಿ ಮಾಡಿದರೆ ಆರೋಗ್ಯಕರವಾದ ಬ್ರೇಕ್ ಫಾಸ್ಟ್ ಇದಲ್ಲ.

ವೈಟ್ ಬ್ರೆಡ್

ವೈಟ್ ಬ್ರೆಡ್

ಗೋಧಿ ಬ್ರೆಡ್ ಗಿಂತ ವೈಟ್ ಬ್ರೆಡ್ ತಿನ್ನಲು ರುಚಿಕರವಾದರೂ ಮೈ ತೂಕವನ್ನು ಹೆಚ್ಚಿಸುವುದರಿಂದ ಇದನ್ನು ಬ್ರೇಕ್ ಫಾಸ್ಟ್ ಆಗಿ ಬಳಸದಿರುವುದು ಒಳ್ಳೆಯದು.

ಕಾಫಿ ಮತ್ತು ಬಿಸ್ಕೆಟ್

ಕಾಫಿ ಮತ್ತು ಬಿಸ್ಕೆಟ್

ಸಂಜೆ ಕಾಫಿಗೆ ಬಿಸ್ಕೆಟ್ ತಿಂದರೆ ಓಕೆ, ಆದರೆ ಕಾಫಿ ಮತ್ತು ಬಿಸ್ಕೆಟ್ ನಿಮ್ಮ ಬ್ರೇಕ್ ಫಾಸ್ಟ್ ಆಗದಿರಲಿ.

ಫ್ರೈ ಮಾಡಿದ ತಿಂಡಿಗಳು

ಫ್ರೈ ಮಾಡಿದ ತಿಂಡಿಗಳು

ಬೆಳಗ್ಗೆ ತಿಂಡಿಗೆ ಕರಿದ ಪದಾರ್ಥಗಳನ್ನು ಸ್ವಲ್ಪ ದೂರ ಇಡುವುದು ಒಳ್ಳೆಯದು. ಫ್ರೈ ಮಾಡಿದ ಆಲೂಗಡ್ಡೆ, ಉದ್ದಿನವಡೆ ಇವು ಯಾವುದೂ ಒಳ್ಳೆಯದಲ್ಲ.

 ನಿಮಿಷಗಳಲ್ಲಿ ರೆಡಿಯಾಗುವ ಬ್ರೇಕ್ ಫಾಸ್ಟ್

ನಿಮಿಷಗಳಲ್ಲಿ ರೆಡಿಯಾಗುವ ಬ್ರೇಕ್ ಫಾಸ್ಟ್

ಇತ್ತೀಚಿನ ದಿನಗಳಲ್ಲಿ ರೆಡಿ ಟು ಕುಕ್ ಅಡುಗೆ ಸಾಕಷ್ಟು ದೊರೆಯುತ್ತದೆ. ಇಂತಹ ಆಹಾರಗಳಲ್ಲಿ ಕ್ಯಾಲೋರಿ ಮತ್ತು ಸೋಡಿಯಂ ಅಧಿಕವಿರುತ್ತದೆ. ಆದ್ದರಿಂದ ಸಮಯವಿಲ್ಲವೆಂದು ಇಂತಹ ಆಹಾರಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯ ಜೋಪಾನ.

ಫ್ರೈ ಮಾಡಿದ ಚಿಕನ್

ಫ್ರೈ ಮಾಡಿದ ಚಿಕನ್

ಬಾಡಿ ಬಿಲ್ಡ್ ಮಾಡುವವರು ಬೆಳಗ್ಗೆ ಗ್ರಿಲ್ಡ್ ಚಿಕನ್ ತಿನ್ನುತ್ತಾರೆ. ಗ್ರಿಲ್ಡ್ ಚಿಕನ್ ತುಂಬಾ ಆರೋಗ್ಯಕರ, ಆದರೆ ಎಣ್ಣೆಯಲ್ಲಿ ಕರಿದ ಚಿಕನ್ ತಿನ್ನಬೇಡಿ, ಫ್ರೈ ಮಾಡಿದ ಪದಾರ್ಥಗಳು ನಿಮ್ಮ ಸೈಜ್ ಅನ್ನು ಡಬಲ್ ಮಾಡುವುದು.

 ಹಾಲು ಮಾತ್ರ ಕುಡಿಯುವುದು

ಹಾಲು ಮಾತ್ರ ಕುಡಿಯುವುದು

ಕೆಲವರಿಗೆ ಬೆಳಗ್ಗಿನ ಬ್ರೇಕ್ ಫಾಸ್ಟ್ ಎಂದು ಒಂದು ಗ್ಲಾಸ್ ಹಾಲು ಮಾತ್ರ. ಬರೀ ಹಾಲು ಸಾಕಾಗುವುದಿಲ್ಲ, ಅದರ ಜೊತೆಗೆ ಸ್ವಲ್ಪ ಹಣ್ಣು ಮತ್ತು ಒಂದು ಎಗ್ ತಿಂದರೆ ಸಾಕಾಗುವುದು.

ಅನ್ನ

ಅನ್ನ

ಬೆಳಗ್ಗೆ ಬ್ರೇಕ್ ಫಾಸ್ಟ್ ಆಗಿ ಅನ್ನ ತಿನ್ನುವವರು ಸಾಕಷ್ಟು ಮಂದಿ ಇದ್ದಾರೆ. ಅನ್ನವನ್ನು ತಿನ್ನುವ ಅಭ್ಯಾಸವನ್ನು ನಿಲ್ಲಿಸಿ. ಅನ್ನದ ಬದಲು ರಾಗಿ ರೊಟ್ಟಿ, ಚಪಾತಿ ತಿನ್ನಿ.

ಚೀಸ್

ಚೀಸ್

ಚೀಸ್ ಬಾಯಿಗೆ ರುಚಿಕ ಹಾಗೂ ಆರೋಗ್ಯಕರ ಕೂಡ ಹೌದು, ಆದರೆ ಬೆಳಗ್ಗೆ ತಿನ್ನಬೇಡಿ, ಮೈ ತೂಕ ಹೆಚ್ಚುವುದು.

ಬೆಣ್ಣೆ

ಬೆಣ್ಣೆ

ಬೆಣ್ಣೆ ದೋಸೆ, ಬೆಣ್ಣೆ ಹಾಕಿದ ಪದಾರ್ಥಗಳು ಬಾಯಿಗೆ ರುಚಿಕರ, ಆದರೆ ಸಮತೂಕದ ಮೈ ಕಟ್ಟು ಬಯಸುವುದಾದರೆ ಇವುಗಳಿಂದ ದೂರವಿರುವುದು ಒಳ್ಳೆಯದು.

 ಫ್ರಿಜ್ ನಲ್ಲಿಟ್ಟ ಜ್ಯೂಸ್

ಫ್ರಿಜ್ ನಲ್ಲಿಟ್ಟ ಜ್ಯೂಸ್

ಬೆಳಗ್ಗೆ ಜ್ಯೂಸ್ ಕುಡಿಯುವುದು ತುಂಬಾ ಒಳ್ಳೆಯದು, ಆದರೆ ಅದು ತಾಜಾ ಜ್ಯೂಸ್ ಆಗಿರಲಿ. ರೆಡಿ ಮೇಡ್ ಜ್ಯೂಸ್ ಅಥವಾ ಫ್ರಿಜ್ ನಲ್ಲಿಟ್ಟ ಜ್ಯೂಸ್ ಒಳ್ಳೆಯದಲ್ಲ.

ಫ್ರೈ ಮಾಡಿದ ಮೊಟ್ಟೆ

ಫ್ರೈ ಮಾಡಿದ ಮೊಟ್ಟೆ

ಮೊಟ್ಟೆಯನ್ನು ಬೆಲಗ್ಗೆ ತಿಂದರೆ ತುಂಬಾ ಆರೋಗ್ಯಕರ. ಆದರೆ ಬೇಯಿಸಿ ಅಥವಾ ಸ್ವಲ್ಪವೇ ಆಲೀವ್ ಎಣ್ಣೆ ಹಾಕಿ ಆಮ್ಲೇಟ್ ಮಾಡಿ ತಿನ್ನಿ. ಆದರೆ ಎಗ್ ಬುರ್ಜಿ ಮಾಡಿ ತಿನ್ನಬೇಡಿ.

ಬರ್ಗರ್

ಬರ್ಗರ್

ಬರ್ಗರ್ ಅನ್ನುವ ಫಾಸ್ಟ್ ಫುಡ್ ಅನಾರೋಗ್ಯಕರ. ಇದನ್ನು ಬೆಳಗ್ಗಿನ ಬ್ರೇಕ್ ಫಾಸ್ಟ್ ಆಗಿ ತಿನ್ನುವ ಅಭ್ಯಾಸ ಬೆಳೆಸಿಕೊಂಡರೆ ಸ್ವಲ್ಪ ದಿನಗಳಲ್ಲಿಯೇ ಒಬೆಸಿಟಿ ಬರುವುದು.

 ಪೇಸ್ಟ್ರೀ

ಪೇಸ್ಟ್ರೀ

ಪೇಸ್ಟ್ರೀಯನ್ನು ಬೆಳಗ್ಗೆ ಮಾತ್ರ ತಿನ್ನಬೇಡಿ, ತಿನ್ನುವುದಾದರೆ ಸಂಜೆ ಹೊತ್ತಿಗೆ ತಿನ್ನಿ. ಇದನ್ನು ತಿನ್ನುವುದರಿಂದ ಹೊಟ್ಟೆಯೂ ತುಂಬುವುದಿಲ್ಲ. ಬೆಳಗ್ಗೆ ತಿಂದರೆ ಮಧ್ಯಾಹ್ನವರೆಗೆ ಹೊಟ್ಟೆ ಹಸಿವು ಆಗದಿರುವಂತಹ ಆರೋಗ್ಯಕರವಾದ ಆಹಾರ ತಿನ್ನಿ.

ಶೇಖರಿಸಿಟ್ಟ ಆಹಾರ

ಶೇಖರಿಸಿಟ್ಟ ಆಹಾರ

ಶೇಖರಿಸಿಟ್ಟ ಆಹಾರವನ್ನು ಬಿಸಿ ಮಾಡಿ, ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ತಿನ್ನಬೇಡಿ, ಏನಿದ್ದರೂ ತಾಜಾ ಆಹಾರವನ್ನು ಮಾತ್ರ ತಿನ್ನಿ.

ರೋಲ್ಸ್

ರೋಲ್ಸ್

ರೋಲ್ಸ್ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸುತ್ತದೆ. ಬೆಳಗ್ಗೆ ತಿಂಡಿ ಮಾಡಲು ಪುರುಸೊತ್ತು ಇಲ್ಲದಿದ್ದರೆ ವೆಜ್ ಅಥವಾ ನಾನ್ ವೆಜ್ ರೋಲ್ ತಿನ್ನುತ್ತಾರೆ. ಇದು ತಿಂದರೆ ಬೇಗನೆ ಹೊಟ್ಟೆ ತುಂಬುವುದಾದರೂ ಬ್ರೇಕ್ ಫಾಸ್ಟ್ ಗೆ ತಿನ್ನಲು ಸೂಕ್ತವಾದ ಆಹಾರ ಇದಲ್ಲ ಅನ್ನುವುದು ಒಳ್ಳೆಯದಲ್ಲ.

ಬೀನ್ಸ್ ಗ್ರೇವಿ

ಬೀನ್ಸ್ ಗ್ರೇವಿ

ಬೇಯಿಸಿದ ಬೀನ್ಸ್ ತುಂಬಾ ಆರೊಗ್ಯಕರ, ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೀನ್ಸ್ ಗ್ರೇವಿ ತಿನ್ನುವುದು ಒಳ್ಖೆಯದು.

ಫ್ರೆಂಚ್ ಟೋಸ್ಟ್

ಫ್ರೆಂಚ್ ಟೋಸ್ಟ್

ಫ್ರೆಂಚ್ ಟೋಸ್ಟ್ ಅನ್ನು ಬೇಕಾದರೆ ಸಮಜೆ ಸ್ನ್ಯಾಕ್ಸ್ ಆಗಿ ತಿನ್ನಬಹುದು, ಆದರೆ ನಿಮ್ಮ ಬ್ರೇಕ್ ಫಾಸ್ಟ್ ಅನ್ನು ಫ್ರೆಂಚ್ ಟೋಸ್ಟ್ ನಲ್ಲಿ ಮುಗಿಸಬೇಡಿ, ಬ್ರೇಕ್ ಫಾಸ್ಟ್ ಅನ್ನು ಆರೋಗ್ಯವಾಗಿ, ಚೆನ್ನಾಗಿ ತಿನ್ನಿ, ಆರೋಗ್ಯವಾಗಿರಿ.

ಕ್ರಾಷ್ ಡಯಟ್

ಕ್ರಾಷ್ ಡಯಟ್

ಬೆಳಗ್ಗೆ ಕ್ರಾಷ್ ಡಯಟ್ ಮಾಡುವುದು ಕೂಡ ಒಳ್ಳೆಯದಲ್ಲ, ಕ್ರಾಷ್ ಮಾಡಿದರೆ ಆರೋಗ್ಯಕರವಾಗಿ ತೆಳ್ಳಗಾಗಲು ಸಾಧ್ಯವಿಲ್ಲ ಅನ್ನುವುದು ನೆನಪಿರಲಿ.

English summary

20 Unhealthy Breakfast Choices To Avoid

Unhealthy breakfast choices can actually ruin your entire day. First of all, the wrong kind of morning foods will cause acidity and will increase body weight.
X
Desktop Bottom Promotion