For Quick Alerts
ALLOW NOTIFICATIONS  
For Daily Alerts

ಉರಿಯೂತ ಉಂಟು ಮಾಡುವ 20 ಆಹಾರಗಳು

|

ಉರಿಯೂತ ಅಂದರೆ inflammation ಹೆಚ್ಚಿನವರಲ್ಲಿ ಕಂಡು ಬರುವಂತಹ ಸಮಸ್ಯೆಯಾಗಿದೆ. ಹೊಟ್ಟೆ ನೋವು ಎಂದು ವೈದ್ಯರ ಬಳಿ ಹೋದಾಗ ಅವರು ನಿಮಗೆ inflammation ಆಗಿದೆ ಎಂದು ಹೇಳುತ್ತಾರೆ. ಹೆಚ್ಚಿನವರಿಗೆ ಉರಿಯೂತ (inflammation) ಹೇಗೆ ಉಂಟಾಗುತ್ತದೆ, ಏಕೆ ಉಂಟಾಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ.

ಉರಿಯೂತಕ್ಕೆ ಅನೇಕ ಕಾರಣಗಳಿವೆ. ಉರಿಯೂತಕ್ಕೆ ಮುಖ್ಯ ಕಾರಣವೆಂದರೆ ನಾವು ತಿನ್ನುವ ಆಹಾರಗಳು. ದೇಹದ ಅಂಗಗಳಿಗೆ ಅಧಿಕ ರಕ್ತ ಸಂಚಾರವಾದರೆ ತ್ವಚೆ ಕೆಂಪು ಬಣ್ಣಕ್ಕೆ ತಿರುಗುತ್ತದೆ, ಉರಿಯೂತ ನೋವು ಕಾಣಿಸಿಕೊಳ್ಳುವುದು. ಈ ರೀತಿ ಉಂಟಾಗುವುದನ್ನು ಫುಡ್ ಅಲರ್ಜಿ ಎಂದು ಕೂಡ ಹೇಳುತ್ತೇವೆ.

ಈ ಕೆಳಗಿನ ಆಹಾರಗಳು ಉರಿಯೂತಕ್ಕೆ ಪ್ರಮುಖ ಕಾರಣಗಳಾಗಿದ್ದು ಅಲರ್ಜಿ ಸಮಸ್ಯೆ ಇರುವವರು ಇವುಗಳಿಂದ ದೂರವಿರುವುದು ಒಳ್ಳೆಯದು:

ಸಲಹೆ: ಇಲ್ಲಿ ನೀಡಿರುವ ಕೆಲವು ಪದಾರ್ಥಗಳು ಆರೋಗ್ಯಕರ ಕೂಡ ಹೌದು, ಅಲರ್ಜಿ ಉಂಟಾದ ಸಮಯದಲ್ಲಿ ತಿನ್ನಬಾರದು, ಸಂಪೂರ್ಣವಾಗಿ ಗುಣಮುಖವಾದ ಮೇಲೆ ತಿನ್ನಬಹುದು.

ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ

ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ

ಯಾವುದೇ ಬಗೆಯ ಸಕ್ಕರೆ, HFCS,ಸುಕ್ರೋಸ್, ಲ್ಯಾಕ್ಟೋಸ್, ಬಿಳಿ ಬ್ರೆಡ್ ನಂತಹ ಪದಾರ್ಥಗಳು ರಕ್ತ ಸಂಚಾರವನ್ನು ಇದ್ದಕ್ಕಿದ್ದಂತೆ ಹಚ್ಚು ಮಾಡುತ್ತವೆ. ಇದು ರೋಗ ನಿರೋಧಕ ಸಾಮರ್ಥ್ಯವನ್ನು ಕಡಿಮೆ ಮಾಡಿ ಅಲರ್ಜಿಯನ್ನು ಉಂಟು ಮಾಡುತ್ತದೆ.

 ವನಸ್ಪತಿ

ವನಸ್ಪತಿ

ವನಸ್ಪತಿಯಲ್ಲಿ ಅಧಿಕ ಒಮೆಗಾ 6 ಕೊಬ್ಬಿನಂಶವಿದೆ. ಇದನ್ನು ತಿಂದರೆ ದೇಹದಲ್ಲಿ ಒಮೆಗಾ 6 ಹಾಗೂ ಒಮೆಗಾ 3 ನಡುವೆ ವ್ಯತ್ಯಾಸ ಉಂಟಾಗಿ ಉರಿಯೂತ ಉಂಟಾಗುತ್ತದೆ

ಹಾಲು ಹಾಗೂ ಹಾಲಿನ ಉತ್ಪನ್ನಗಳು

ಹಾಲು ಹಾಗೂ ಹಾಲಿನ ಉತ್ಪನ್ನಗಳು

ದೇಹಕ್ಕೆ ಅತ್ಯಧಿಕ ಪ್ರೊಟೀನ್ ಸೇರಿದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಧಿಕ ಪ್ರೊಟೀನ್ ಲ್ಯಾಕ್ಟೋಸ್ ಆಗಿ ಪರಿವರ್ತನೆಗೊಂಡು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ ಉರಿಯೂತಕ್ಕೆ ಕಾರಣವಾಗುತ್ತದೆ.

ಮಾಂಸ

ಮಾಂಸ

ಮಾಂಸ(red meat)ನಲ್ಲಿ N-glycolylneuraminic acid (Neu5Gc) ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ದೇಹದಲ್ಲಿ anti-Neu5Gc ಉತ್ಪತ್ತಿಯಾಗಿ ಇದು ದೀರ್ಘಕಾಲದ ಉರಿಯೂತ ಸಮಸ್ಯೆಯನ್ನು ಉಂಟು ಮಾಡಬಹುದು.

ಗೋಧಿ ಹಾಗೂ ಬಾರ್ಲಿ

ಗೋಧಿ ಹಾಗೂ ಬಾರ್ಲಿ

ಗೋಧಿ , ಬಾರ್ಲಿಯಲ್ಲಿ ಅಲರ್ಜೆನ್ (allergen), ಗ್ಲೂಟೆನ್(gluten) ಅಂಶವಿದ್ದು ದೇಹವು ಇದರ ವಿರುದ್ಧ ವರ್ತಿಸಿದಾಗ ತಕ್ಷಣ ಉರಿಯೂತ ಕಂಡು ಬರುತ್ತದೆ.

ಟ್ರಾನ್ಸ್ ಫ್ಯಾಟ್

ಟ್ರಾನ್ಸ್ ಫ್ಯಾಟ್

ಕರಿದ ಪದಾರ್ಥಗಳು, ಫಾಸ್ಟ್ ಫುಡ್ಸ್, ಬೇಕರಿ ಫುಡ್ಸ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ LDL ಹೆಚ್ಚಿಸಿ ಉರಿಯೂತ ಸಮಸ್ಯೆಯನ್ನು ಹೆಚ್ಚು ಮಾಡುತ್ತವೆ.

ಮದ್ಯಪಾನ

ಮದ್ಯಪಾನ

ಪ್ರತೀದಿನ ಮದ್ಯಪಾನ ಮಾಡುವ ಚಟವಿರುವವರಿಗೆ ಉರಿಯೂತದ ಸಮಸ್ಯೆ ಕಂಡು ಬರುವುದು ದಿಟ.

 ಸಂಸ್ಕರಿಸಿದ ಧಾನ್ಯಗಳು

ಸಂಸ್ಕರಿಸಿದ ಧಾನ್ಯಗಳು

ಸಂಸ್ಕರಿಸಿದ ಧಾನ್ಯಗಳಲ್ಲಿ ನಾರಿನಂಶ, ವಿಟಮಿನ್ ಬಿ, ಗ್ಲೈಸೆಮಿಕ್ಸ್ ಇಂಡೆಕ್ಸ್ ಕಡಿಮೆ ಇರುತ್ತದೆ. ಆದ್ದರಿಂದ ಸಂಸ್ಕರಿಸಿದ ಧಾನ್ಯಗಳಲ್ಲಿ ಪೋಷಕಾಂಶ ಕಡಿಮೆಯಾಗಿ, ಆರೋಗ್ಯ ಸಮಸ್ಯೆ ಹೆಚ್ಚುವುದು.

ಕೃತಕ ಬಣ್ಣ, ಕೃತಕ ಸಿಹಿ ಇರುವ ಆಹಾರಗಳು

ಕೃತಕ ಬಣ್ಣ, ಕೃತಕ ಸಿಹಿ ಇರುವ ಆಹಾರಗಳು

ಇಂತಹ ಆಹಾರಗಳಲ್ಲಿ ಮೋನೋಸೋಡಿಯಂ ಗ್ಲುಟಮೇಟ್ ಅಧಿಕವಿರುತ್ತದೆ, ಉರಿಯೂತ ಸಮಸ್ಯೆ ಒಮ್ಮೆ ಕಾಣಿಸಿದರೂ ಮತ್ತೆ ಇಂತಹ ಆಹಾರಗಳನ್ನು ಮುಟ್ಟಲು ಹೋಗಬೇಡಿ.

ಜೋಳದ ಉತ್ಪನ್ನಗಳು

ಜೋಳದ ಉತ್ಪನ್ನಗಳು

ಜೋಳದ ಎಣ್ಣೆ, ಜೋಳದ ಸಿರಪ್ ಇವುಗಳು ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ಅಡುಗಗೆ ಬಳಸಿದರೆ ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸಿ, ದೇಹದಲ್ಲಿ ಇನ್ಸುಲಿನ್ ಕಡಿಮೆ ಮಾಡಿ, ಉರಿಯೂತ ಉಂಟು ಮಾಡುತ್ತದೆ.

ಕಡಲೆ ಬೀಜ

ಕಡಲೆ ಬೀಜ

ಕಡಲೆ ಬೀಜ ಕೂಡ ಹೆಚ್ಚಿನವರಲ್ಲಿ ಅಲರ್ಜಿಯನ್ನು ಉಂಟು ಮಾಡುತ್ತದೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಸ್ಯಾಚುರೇಟಡ್ ಫ್ಯಾಟ್ ಅಧಿಕವಿದ್ದು, ಇದರಲ್ಲಿ arachidonic acid ಇರುತ್ತದೆ. ಈ ಆಸಿಡ್ ದೇಹಕ್ಕೆ ಅಗತ್ಯ, ಆದರೆ ಮೊಟ್ಟೆಯನ್ನು ಮಿತಿ ಮೀರಿ ತಿಂದರೆ ಉರಿಯೂತ ಉಂಟಾಗುವುದು.

ಕರಿದ ಪದಾರ್ಥಗಳು

ಕರಿದ ಪದಾರ್ಥಗಳು

ಎಣ್ಣೆಯಲ್ಲಿ ಕರಿದ ಪದಾರ್ಥಗಳಲ್ಲಿ ಆಕ್ಸಿಡೈಸಡ್(oxidised) ಕೊಬ್ಬಿನಂಶವಿರುತ್ತದೆ. ಇದು ಉರಿಯೂತವನ್ನು ಉಂಟು ಮಾಡುತ್ತದೆ.

ತಂಪು ಪಾನೀಯಾಗಳು

ತಂಪು ಪಾನೀಯಾಗಳು

ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಿರುತ್ತದೆ. ಈ ಅಂಶ ಮಿತಿ ಮೀರಿ ಇರುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರ ಪರಿಣಾಮ ಉರಿಯೂತ ಉಂಟಾಗುವುದು.

 ನಟ್ಸ್

ನಟ್ಸ್

ನಟ್ಸ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಸಂಧಿ ನೋವು ಇರುವವರು ನಟ್ಸ್ ತಿಂದರೆ ಉರಿಯೂತ ಉಂಟಾಗುವುದು.

 ಟೊಮೆಟೊ

ಟೊಮೆಟೊ

ತುಂಬಾ ಸೂಕ್ಷ್ಮ ಶರೀರದವರಿಗೆ ಟೊಮೆಟೊ ತಿಂದರೂ ಅಲರ್ಜಿ ಉಂಟಾಗುವುದು. ಟೊಮೆಟೊ ತಿಂದ ತಕ್ಷಣ ಅಲರ್ಜಿ ಉಂಟಾದರೆ ಇದನ್ನು ತಿನ್ನದಿರುವುದು ಒಳ್ಳೆಯದು.

ಕೊಬ್ಬಿನಂಶವಿರುವ ಸಕ್ಕರೆ ಹಾಕಿದ ಮೊಸರು

ಕೊಬ್ಬಿನಂಶವಿರುವ ಸಕ್ಕರೆ ಹಾಕಿದ ಮೊಸರು

ಕೊಬ್ಬಿನಂಶ ಅಧಿಕವಿರುವ ಮೊಸರಿಗೆ ಸಕಕ್ರೆಯನ್ನು ಸೇರಿಸಿದರೆ ಉರಿಯೂತದ ಸಮಸ್ಯೆ ಕಂಡು ಬರಬಹುದು.

ಜಂಕ್ ಫುಡ್

ಜಂಕ್ ಫುಡ್

ಜಂಕ್ ಫುಡ್ಸ್ ತಿನ್ನದಿರುವುದು ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಫ್ರೊಕ್ಟೋಸ್ ಅಂಶವಿದ್ದು ಉರಿಯೂತಕ್ಕೆ ಕಾರಣವಾಗುತ್ತದೆ.

 ಬಿಳಿ ಬ್ರೆಡ್

ಬಿಳಿ ಬ್ರೆಡ್

ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶ ಅಧಿಕವಿದ್ದು ಉರಿಯೂತವನ್ನು ಉಂಟು ಮಾಡುತ್ತದೆ. ದವಸ ಧಾನ್ಯಗಳಿಂದ ಮಾಡಿದ ಬ್ರೆಡ್ ತಿನ್ನುವುದು ಒಳ್ಳೆಯದು.

ಸೋಡಿಯಂಮತ್ತು ಖಾರವಿರುವ ಪದಾರ್ಥಗಳು

ಸೋಡಿಯಂಮತ್ತು ಖಾರವಿರುವ ಪದಾರ್ಥಗಳು

ಸೋಡಿಯಂ ಮತ್ತು ಖಾರವಿರುವ ಪದಾರ್ಥಗಳಿಗೆ ತುಳಸಿ, ರೋಸೆ ಮೆರಿ ಇವುಗಳನ್ನು ಹಾಕಿದರೆ ಉರಿಯೂತ ಉಂಟಾಗದಂತೆ ತಡೆಯಬಹುದು.

English summary

20 Foods That Cause Inflammation | Tips For Health | ಉರಿಯೂತ ಉಂಟು ಮಾಡುವ 20 ಆಹಾರಗಳು| ಆರೋಗ್ಯಕ್ಕಾಗಿ ಕೆಲ ಸಲಹೆಗಳು

Some foods that we consider healthy can also trigger an immune response depending on the amount taken, the health status of the individual and existence of any allergic reactions. This doesn't mean that you have to avoid all these foods.
X
Desktop Bottom Promotion