For Quick Alerts
ALLOW NOTIFICATIONS  
For Daily Alerts

ದೇಹದಲ್ಲಿನ ವಿಷಯುಕ್ತ ತ್ಯಾಜ್ಯಗಳನ್ನು ಹೊರ ಹಾಕಬೇಕೆ?

By Super
|

ನಿಮ್ಮ ದೇಹ ಜಡಗಟ್ಟಿದಂತೆ ಭಾಸವಾಗುತ್ತಿದೆಯೇ? ಮೊಡವೆ ಮತ್ತು ಚರ್ಮದಲ್ಲಿ ತುರಿಕೆ ಪ್ರಕೋಪ ಹೆಚ್ಚುತ್ತಿದೆಯೆ?ಇತ್ತೀಚಿಗೆ ಜೀರ್ಣ ವ್ಯವಸ್ಥೆ ಕುಂದಿದಂತೆ ಕಾಣುತ್ತಿದೆಯೇ? ನಿಮ್ಮ ಉತ್ತರ ಹೌದು ಎಂದಾದಲ್ಲಿ ನಿಮಗೆ ಡಿಟಾಕ್ಸ್ ನ ಅವಶ್ಯಕತೆ ಇದೆ.

ಆರೋಗ್ಯಯುತವಾದ ಜೀವನವನ್ನು ನಡೆಸಲು ನಿಮ್ಮ ದೇಹದಲ್ಲಿರುವ ವಿಷವನ್ನು ತೆಗೆಯುವುದು ಉತ್ತಮ ವಿಧಾನ .ಪ್ರತಿದಿನ ಡಿಟಾಕ್ಸ್ ಮಾಡುವುದರ ಮೂಲಕ ನಿಮ್ಮ ದೇಹದಲ್ಲಿರುವ ಎಲ್ಲ ವಿಷಯುಕ್ತ ತ್ಯಾಜ್ಯಗಳನ್ನು ತೆಗೆದು ಆರೋಗ್ಯಯುತವಾದ ಜೀವನ ನಡೆಸಿ.

1. ಆಂಟಿಆಕ್ಸಿಡೆಂಟ್ ವ್ಯಸನಿಯಾಗಿ

1. ಆಂಟಿಆಕ್ಸಿಡೆಂಟ್ ವ್ಯಸನಿಯಾಗಿ

ಹೊಳೆಯುವ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಡಿಟಾಕ್ಸಿಫೈ ಗೆ ಉತ್ತಮ ದಾರಿ. ಇದು ಪಿತ್ತಜನಕಾಂಗದ ಕಿಣ್ವಗಳ ಚಟುವಟಿಕೆಯನ್ನು ಹೆಚ್ಚುವುದರ ಜೊತೆಗೆ ದೇಹದಿಂದ ತ್ಯಾಜ್ಯವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ .

2. ಸಾವಯವ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸಿ

2. ಸಾವಯವ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸಿ

ಸಾವಯುವ ಉತ್ಪನ್ನಗಳು ಕೀಟಾಣು ಮತ್ತು ವಿಷದಿಂದ ರಕ್ಷಿಸಲು ಒಳ್ಳೆಯ ಮಾರ್ಗ. ಇದಿಲ್ಲದಿದ್ದರೆ ಕಷ್ಟ.

3. ಹರ್ಬಲ್ ಚಹಾವನ್ನು ಕುಡಿಯಿರಿ

3. ಹರ್ಬಲ್ ಚಹಾವನ್ನು ಕುಡಿಯಿರಿ

ಜೀರ್ಣಕ್ರಿಯೆ ಮತ್ತು ಒಳ್ಳೆಯ ನಿದ್ದೆಗೆ ಹರ್ಬಲ್ ಟೀ ಉತ್ತಮ.ಈ ಟೀ ದೇಹದಲ್ಲಿರುವ ವಿಷ ಜಂತುವನ್ನು ಹೊರಹಾಕಲು ಮತ್ತು ರಕ್ತಸಂಚಲನ ಸರಾಗವಾಗಲು ಸಹಾಯ ಮಾಡುತ್ತವೆ.

4.ನಿಮ್ಮದೇ ಆಂಟಿಆಕ್ಸಿಡೆಂಟ್ ಅನ್ನು ಉತ್ಪತ್ತಿ ಮಾಡಿಕೊಳ್ಳಿ

4.ನಿಮ್ಮದೇ ಆಂಟಿಆಕ್ಸಿಡೆಂಟ್ ಅನ್ನು ಉತ್ಪತ್ತಿ ಮಾಡಿಕೊಳ್ಳಿ

ಸಲ್ಫೂರಿಕ್ ಆಮ್ಲವನ್ನು ಹೊಂದಿರುವ ಬೆಳ್ಳುಳ್ಳಿ ಮತ್ತು ಮೊಟ್ಟೆಯನ್ನು ಹೆಚ್ಚು ಬಳಸಿ .ಇವು ದೇಹದಲ್ಲಿ ಆಂಟಿಆಕ್ಸಿಡೆಂಟ್ ಉತ್ಪತ್ತಿಯನ್ನು ಹೆಚ್ಚಿಸುತ್ತವೆ. ಇವು ದೇಹದಲ್ಲಿರುವ ವಿಷಯುಕ್ತ ರಾಸಾಯನಿಕವನ್ನು ಹೊರಹಾಕುತ್ತವೆ.

5.ನಿಂಬೆ ಹಣ್ಣಿನ ರಸ ಕುಡಿಯಿರಿ

5.ನಿಂಬೆ ಹಣ್ಣಿನ ರಸ ಕುಡಿಯಿರಿ

ಒಂದು ಲೋಟ ನಿಂಬೆ ಪಾನಕ ಕುಡಿಯುವುದರಿಂದ ಇದು ದೇಹವನ್ನು ಸ್ವಚ್ಚಮಾಡುತ್ತದೆ. ಇದು ಡೆಟಾಕ್ಸ್ ಮಾಡಲು ಅತ್ಯಂತ ಉತ್ತಮ ವಿಧಾನವಾಗಿದೆ. ತಾಜಾ ನಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿ ಕುಡಿದರೆ ಇದು ದೇಹದಲ್ಲಿರುವ ವಿಷ ತೆಗೆಯಲು ಸಹಕರಿಸುತ್ತದೆ.

6.ಸಕ್ಕರೆಯಿಂದ ದೂರವಿರಿ

6.ಸಕ್ಕರೆಯಿಂದ ದೂರವಿರಿ

ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ವಿಷವನ್ನು ತೆಗೆದು ಸ್ವಚ್ಚಗೊಳಿಸಲು ದಿನನಿತ್ಯ ಉಪಯೋಗಿಸುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬನ್ನಿ. ಸಕ್ಕರೆ ಅಂಶವಿರುವ ಮತ್ತು ಕೃತಕ ಸಿಹಿ ಬಳಸಿದ ಸಿಹಿ ತಿಂಡಿಗಳಿಂದ ದೂರವಿರಿ.

7. ಸಾಕಷ್ಟು ನೀರು ಕುಡಿಯಿರಿ

7. ಸಾಕಷ್ಟು ನೀರು ಕುಡಿಯಿರಿ

ಪ್ರತೀದಿನ ಅಂದಾಜು 8 ರಿಂದ 10 ಲೋಟ ನೀರು ಕುಡಿಯಿರಿ ಇದು ನಿಮ್ಮ ದೇಹದ ಕಲ್ಮಶವನ್ನು ಮೂತ್ರ ಮತ್ತು ಬೆವರಿನ ಮೂಲಕ ಹೊರಹಾಕುತ್ತದೆ.

8.ಸ್ವಲ್ಪವೇ ತಿನ್ನಿ

8.ಸ್ವಲ್ಪವೇ ತಿನ್ನಿ

ಹಗುರವಾದ ಆಹಾರ ಸೇವಿಸಿ ಮತ್ತು ಮಧ್ಯಪಾನದಿಂದ ದೂರವಿಡಿ ಇದು ನಿಮ್ಮ ಬಲವನ್ನು ದುಪ್ಪಟ್ಟುಗೊಳಿಸುತ್ತದೆ ಮತ್ತು ತೂಕ, ರಕ್ತದೊತ್ತಡ ಮತ್ತು ಕೊಬ್ಬನ್ನು ಕರಗಿಸುತ್ತದೆ.

9.ಮಸಾಜ್ ಪಡೆದುಕೊಳ್ಳಿ

9.ಮಸಾಜ್ ಪಡೆದುಕೊಳ್ಳಿ

ಒಳ್ಳೆಯ ಮಸಾಜ್ ಮಾಡಿಸಿಕೊಳ್ಳಿ ಇದರಿಂದ ಕಲ್ಮಶ ಹೊರಹಾಕಬಹುದು.

10. ಪ್ರತಿದಿನ 45 ನಿಮಿಷವಾದರೂ ವ್ಯಾಯಾಮ ಮಾಡಿ

10. ಪ್ರತಿದಿನ 45 ನಿಮಿಷವಾದರೂ ವ್ಯಾಯಾಮ ಮಾಡಿ

ದಿನವನ್ನು ರನ್ನಿಂಗ್, ಜಾಗಿಂಗ್, ಸೈಕ್ಲಿಂಗ್ ವ್ಯಾಯಾಮದ ಮೂಲಕ ಪ್ರಾರಂಭಿಸಿ ಇದು ನಿಮ್ಮ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಕೂಡ ಒಳ್ಳೆಯದು.

11.ಸಂಪೂರ್ಣ ಉಸಿರಾಟ ಮಾಡಿ

11.ಸಂಪೂರ್ಣ ಉಸಿರಾಟ ಮಾಡಿ

ದೀರ್ಘ ಉಸಿರಾಟವನ್ನು ರೂಡಿಸಿಕೊಳ್ಳಿ. ಇದರಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ ಮತ್ತು ದೇಹಕ್ಕೆ ಬೇಕಾಗುವ ಆಮ್ಲಜನಕದ ಪ್ರಸಾರವನ್ನು ಹೆಚ್ಚುಗೊಳಿಸುತ್ತದೆ.

12. ನಿಮ್ಮ ಮೂಗಿನ ಹೊಳ್ಳೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ

12. ನಿಮ್ಮ ಮೂಗಿನ ಹೊಳ್ಳೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ

ವಾತಾವರಣದಲ್ಲಿರುವ ಧೂಳು ಮತ್ತು ಮಾಲಿನ್ಯ ಉಸಿರಾಟದ ಮೂಲಕ ನಿಮ್ಮ ದೇಹವನ್ನು ಸೇರಿ ಅಲರ್ಜಿ ಉಂಟುಮಾಡುತ್ತದೆ. ಇದನ್ನು ತಡೆಯಲು ಪ್ರತಿದಿನ ಮೂಗನ್ನು ಸ್ವಚ್ಚಗೊಳಿಸಿ ಇದರಿಂದ ನಿಮಗೆ ಒಳ್ಳೆಯ ನಿದ್ದೆಯೂ ಬರುತ್ತದೆ .

13.ಯೋಗ ಮಾಡಿ

13.ಯೋಗ ಮಾಡಿ

ಯೋಗಾಸನಗಳನ್ನು ಅಭ್ಯಾಸ ಮಾಡುವುದು ಕೇವಲ ದೇಹದ ಕಲ್ಮಶವನ್ನಷ್ಟೇ ಅಲ್ಲ ಮನಸ್ಸನ್ನು ಶುದ್ಧಿಗೊಳಿಸುತ್ತದೆ.ಪ್ರತಿದಿನ ಸುಲಭ ಯೋಗಾಸನಗಳನ್ನು ಮಾಡುವುದರ ಮೂಲಕ ದೇಹದ ಕಲ್ಮಶವನ್ನು ದೂರಗೊಳಿಸಿ .

14. ಜ್ಯೂಸ್ ಕುಡಿಯಿರಿ

14. ಜ್ಯೂಸ್ ಕುಡಿಯಿರಿ

ತಾಜಾ ಹಣ್ಣು ಮತ್ತು ತರಕಾರಿ ಜ್ಯೂಸ್ ಕುಡಿಯುವ ಮೂಲಕ ನಿಮ್ಮ ಅಂತಗ್ರಹಣವನ್ನು ಹೆಚ್ಚಿಸಿಕೊಳ್ಳಿ.

15.ಸ್ವಲ್ಪ ವಿಶ್ರಾಂತಿ ಪಡೆಯಿರಿ

15.ಸ್ವಲ್ಪ ವಿಶ್ರಾಂತಿ ಪಡೆಯಿರಿ

ಆಲಸ್ಯ ಮತ್ತು ಸೋಮಾರಿತನವನ್ನು ಹೋಗಲಾಡಿಸಲು ಸರಿಯಾದ ನಿದ್ದೆ ಅಗತ್ಯ. ಪ್ರತಿದಿನ 8 ಗಂಟೆ ಒಳ್ಳೆಯ ನಿದ್ದೆ ಮಾಡುವಂತೆ ನೋಡಿಕೊಳ್ಳಿ.

16.ತ್ವಚೆ

16.ತ್ವಚೆ

ನಿಮ್ಮ ಚರ್ಮವನ್ನು ಆಗಾಗ ಒರೆಸಿಕೊಳ್ಳಿ ಅಥವಾ ಡ್ರೈ ಬ್ರೆಷ್ ಮಾಡಿ ಇದರಿಂದ ಚರ್ಮದ ಮೇಲಿರುವ ಕಲ್ಮಶ ಹೋಗಲಾಡಿಸಿಕೊಳ್ಳಿ.

17.ಕೆಟ್ಟ ಚಟಗಳನ್ನು(ವ್ಯಸನ) ಬಿಟ್ಟುಬಿಡಿ

17.ಕೆಟ್ಟ ಚಟಗಳನ್ನು(ವ್ಯಸನ) ಬಿಟ್ಟುಬಿಡಿ

ಮಧ್ಯಪಾನ ಅಥವಾ ಬೀದಿ ಸೇದುವ ಚಟವಿದ್ದರೆ ಬಿಟ್ಟುಬಿಡಿ. ಸಿಗರೇಟು ಸೇದುವವರ ಪಕ್ಕ ನಿಲ್ಲುವುದು ಕೂಡ ಕೆಟ್ಟ ಪರಿಣಾಮ ಬೀರುತ್ತದೆ. ಮದ್ಯಪಾನ ಮಾಡಲೇ ಬೇಕೆಂದಿದ್ದರೆ ಮಿತಿಯಲ್ಲಿರಲಿ .

18.ನಿಧಾನವಾಗಿ ತಿನ್ನಿ

18.ನಿಧಾನವಾಗಿ ತಿನ್ನಿ

ಊಟ ಮಾಡಲು ಸರಿಯಾದ ಸಮಯ ತೆಗೆದುಕೊಳ್ಳಿ. ಸರಿಯಾಗಿ ಅಗೆದು ತಿನ್ನಿ. ನಿಧಾನವಾಗಿ ತಿನ್ನುವುದು ನಿಮ್ಮ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಆಹಾರವನ್ನು ಸವಿದು ತಿನ್ನಬಹುದು.

19.ಮೈಕ್ರೋವೇವ್ ಬಳಕೆಯಿಂದ ದೂರವಿರಿ

19.ಮೈಕ್ರೋವೇವ್ ಬಳಕೆಯಿಂದ ದೂರವಿರಿ

ಮೈಕ್ರೋವೇವ್ ಆಹಾರದಲ್ಲಿರುವ ಜೀವಸತ್ವ ಕಡಿಮೆಗೊಳಿಸುತ್ತದೆ ಮತ್ತು ಮೈಕ್ರೋವೇವ್ ನಿಂದ ಹೊರಹೊಮ್ಮುವ ವಿಕಿರಣಗಳು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಆದ್ದರಿಂದ ಆದಷ್ಟು ದೂರವಿರಿ.

20.ಬೇಕರಿ ಅಥವಾ ಫಾಸ್ಟ್ ಫುಡ್ಸ್ ನಿಂದ ದೂರವಿರಿ

20.ಬೇಕರಿ ಅಥವಾ ಫಾಸ್ಟ್ ಫುಡ್ಸ್ ನಿಂದ ದೂರವಿರಿ

ಬೇಕರಿ ಅಥವಾ ಫಾಸ್ಟ್ ಫುಡ್ಸ್ ಮಾಡಿದ ಆಹಾರ ನೋಡಲು ಚೆನ್ನಾಗಿ ಕಾಣಬಹುದು ಆದರೆ ಅದನ್ನು ಕೃತಕ ಬಣ್ಣಗಳನ್ನು ಬಳಸಿ ಮಾಡಿರುತ್ತಾರೆ. ಅದು ಮೆದುಳು, ದೇಹ ಮತ್ತು ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

English summary

20 Ways Ways To Detox Your Body

Are you feeling sluggish? Do you have an outburst of acne and rash on your skin? Is your digestive system going haywire lately? If yes, then your body needs “detox”.
 
 
X
Desktop Bottom Promotion