For Quick Alerts
ALLOW NOTIFICATIONS  
For Daily Alerts

ಆಹಾರವನ್ನು ಹೀಗೆ ತಿಂದರೆ ಹೆಚ್ಚು ಆರೋಗ್ಯಕರ

By Super
|

ಮನುಷ್ಯ ಶ್ರಮಜೀವಿ. ಜೀವನ ಸಾಗಿಸಲು ನಾನಾ ಕಸರತ್ತು ಮಾಡುತ್ತಲೇ ಇರುತ್ತಾನೆ. ಇದರಲ್ಲಿ ದುಡಿಮೆಯೂ ಒಂದು. ದುಡಿಯದಿದ್ದರೆ ಜೀವನ ಸಾಗಿಸುವುದು ಕಷ್ಟ. ದುಡಿಯಬೇಕಾದರೆ ದೇಹಕ್ಕೆ ಶಕ್ತಿ ಬೇಕು. ದೇಹದಲ್ಲಿ ಶಕ್ತಿಯಿದ್ದರೆ ಮಾತ್ರ ದುಡಿಯಬಹುದು. ದುಡಿದರೆ ಸಹಜವಾಗಿಯೇ ಹಸಿವಾಗುತ್ತದೆ. ಈ ಹಸಿವು ನೀಗಿಸಿಕೊಳ್ಳಲು ಆಹಾರ ಸೇವಿಸಬೇಕಾಗುತ್ತದೆ. ಇಂತಹ ಆಹಾರದಿಂದಲೇ ದೇಹಕ್ಕೆ ಶಕ್ತಿ ಬರುತ್ತದೆ.

ಹಸಿವಾದಾಗ ಏನಾದರೂ ಆಗಬಹುದೆಂದು ನಾವು ಹೊಟ್ಟೆಗೆ ಹಾಕಿಕೊಂಡು ಹಸಿವು ನೀಗಿಸಿಕೊಳ್ಳುತ್ತೇವೆ. ಆದರೆ ನಾವು ತಿನ್ನುವ ಆಹಾರ ಕ್ರಮ ಮತ್ತು ಸರಿಯಾದ ಪೋಷಕಾಂಶಗಳಿರುವ ಆಹಾರಗಳನ್ನು ತಿನ್ನುತ್ತಿದ್ದೇವೆಯಾ? ನಾವು ತಿನ್ನುತ್ತಿರುವ ಆಹಾರ ನಮ್ಮ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರಬಹುದೆಂದು ನಾವು ಗಮನಿಸುವುದೇ ಇಲ್ಲ. ಆಹಾರ ಸೇವನೆಯಿಂದಷ್ಟೇ ದೇಹಕ್ಕೆ ಶಕ್ತಿ ಬರುವುದಿಲ್ಲ. ಸರಿಯಾದ ಪೋಷಕಾಂಶ ಮತ್ತು ಆರೋಗ್ಯಕರವಾಗಿರುವ ಆಹಾರದಿಂದ ಮಾತ್ರ ದೇಹದ ಬೆಳವಣಿಗೆ ಮತ್ತು ದೇಹಕ್ಕೆ ಶಕ್ತಿ ಬರಲು ಸಾಧ್ಯ. ಇಲ್ಲವಾದಲ್ಲಿ ಎಷ್ಟು ತಿಂದರೂ ಅದು ನೀರಿನಲ್ಲಿಟ್ಟ ಹೋಮದಂತಾಗುತ್ತದೆ.

ಹೀಗಾದಾಗ ಮುಂದೊಂದು ದಿನ ನಾವು ಅನಾರೋಗ್ಯಕ್ಕೆ ಒಳಗಾಗುವುದು ಖಚಿತ. ಇದಕ್ಕಾಗಿ ನಾವು ಆಹಾರ ಕ್ರಮವನ್ನು ಸರಿಯಾಗಿ ರೂಢಿಸಿಕೊಳ್ಳಬೇಕು. ಯಾವೆಲ್ಲಾ ಆಹಾರವನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಹೇಗೆ ರೂಢಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ.

1. ನಿಮ್ಮ ಪ್ರಸ್ತುತ ಆಹಾರ ಕ್ರಮವನ್ನು ವಿಶ್ಲೇಷಿಸಿ

1. ನಿಮ್ಮ ಪ್ರಸ್ತುತ ಆಹಾರ ಕ್ರಮವನ್ನು ವಿಶ್ಲೇಷಿಸಿ

ಆರೋಗ್ಯಕರ ಆಹಾರ ತಿನ್ನುವ ಅಭ್ಯಾಸವನ್ನು ರೂಪಿಸಿಕೊಳ್ಳಲು ಮೊದಲನೇಯದಾಗಿ ಪ್ರಸಕ್ತ ನಿಮ್ಮ ಆಹಾರ ತಿನ್ನುವ ಅಭ್ಯಾಸವನ್ನು ವಿಶ್ಲೇಷಿಸಿ. ಏನೆಲ್ಲಾ ತಿನ್ನುತ್ತಿದ್ದೀರಿ ಎನ್ನುವುದನ್ನು ಆಹಾರ ದಿನಚರಿ ಮೂಲಕ ಅದನ್ನು ಗಮನಿಸಿ. ಈ ತಂತ್ರದ ಮೂಲಕ ನಿಮ್ಮ ಪ್ರಸಕ್ತ ಆಹಾರ ಅಭ್ಯಾಸ ಆರೋಗ್ಯಕರವಾಗಿದೆಯಾ ಅಥವಾ ಇಲ್ಲವಾ ಎನ್ನುವುದನ್ನು ತಿಳಿದುಕೊಳ್ಳಬಹುದು.

2. ನಿಧಾನವಾಗಿ ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿ

2. ನಿಧಾನವಾಗಿ ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿ

ಒಂದೇ ದಿನದಲ್ಲಿ ಆರೋಗ್ಯಕರ ಆಹಾರ ಕ್ರಮಕ್ಕೆ ಬದಲಾಯಿಸಿಕೊಳ್ಳುವುದು ತುಂಬಾ ಕಷ್ಟ. ಹೊಸ ಆಹಾರಕ್ರಮ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವ ಬದಲು ನಿಧಾನವಾಗಿ ಹಾಗೂ ಸ್ಥಿರವಾಗಿ ಆಚರಣೆಗೆ ತನ್ನಿ.

3. ಮೆಡಿಟೇರಿಯನ್ ಆಹಾರ ಪ್ರಯತ್ನಿಸಿ

3. ಮೆಡಿಟೇರಿಯನ್ ಆಹಾರ ಪ್ರಯತ್ನಿಸಿ

ಮೆಡಿಟೇರಿಯನ್ ಆಹಾರ ಲಭ್ಯವಿರುವ ಅತ್ಯಂತ ಆರೋಗ್ಯಕರ ಆಹಾರವಾಗಿದೆ. ಈ ಆಹಾರವು ಒಳ್ಳೆಯ ರುಚಿ ಮತ್ತು ಆರೋಗ್ಯವನ್ನು ಹೊಂದಿರುವ ಆಹಾರ. ಮೆಡಿಟೇರಿಯನ್ ಆಹಾರದಲ್ಲಿ ಹೆಚ್ಚು ಕಾಳುಗಳು, ಸಂಸ್ಕರಿದ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಹೈನು ಉತ್ಪನ್ನಗಳಿವೆ.

4. ನಿಮ್ಮ ಕ್ಯಾಲೋರಿ ಅಗತ್ಯತೆ ನಿರ್ಧರಿಸಿ

4. ನಿಮ್ಮ ಕ್ಯಾಲೋರಿ ಅಗತ್ಯತೆ ನಿರ್ಧರಿಸಿ

ದೈನಂದಿನ ಚಟುವಟಿಕೆಗಳಿಗೆ ಎಷ್ಟು ಮಟ್ಟದ ಕ್ಯಾಲೋರಿ ಬೇಕೆಂದು ವಿಶ್ಲೇಷಿಸಿ ಮತ್ತು ಅರ್ಥಮಾಡಿಕೊಳ್ಳಿ. ಚಯಾಪಚಯಾ ಕ್ರಿಯೆ ಮತ್ತು ದೈಹಿಕ ಚಟುವಟಿಕೆಗಳನ್ನು ಅನುಸರಿಸಿ ವಿಭಿನ್ನ ವ್ಯಕ್ತಿಗಳಿಗೆ ಭಿನ್ನ ರೀತಿಯ ಕ್ಯಾಲೋರಿ ಬೇಕಾಗುತ್ತದೆ. ಕ್ಯಾಲೋರಿ ಅಗತ್ಯತೆಯಲ್ಲಿ ಸ್ನಾಯುವಿನ ದ್ರವ್ಯರಾಶಿ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇಲ್ಲದಿದ್ದರೆ ನಿಮ್ಮ ದೇಹದ ಮಾಂಸ ಖಂಡಗಳು ಶಕ್ತಿ ಕುಂದಲು ಪ್ರಾರಂಭವಾಗುತ್ತದೆ.

5. ಉಪಹಾರ ತುಂಬಾ ಮುಖ್ಯ

5. ಉಪಹಾರ ತುಂಬಾ ಮುಖ್ಯ

ಪ್ರತೀ ದಿನ ನೀವು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿಕೊಂಡು ಹೋಗುವುದಾದರೆ ಮೊದಲಿಗೆ ಪ್ರತೀ ದಿನ ಆರೋಗ್ಯಕರ ಉಪಹಾರವನ್ನು ಸೇವಿಸಿ. ನಿದ್ರೆಯ ಬಳಿಕ ಆರೋಗ್ಯಕರ ಉಪಹಾರ ಸೇವಿಸಿ ನಿಮ್ಮ ದಿನವನ್ನು ಆರಂಭಿಸಿ.

6. ಆರೋಗ್ಯಕರವಾಗಿರುವುದನ್ನು ಆಯ್ಕೆ ಮಾಡಿ

6. ಆರೋಗ್ಯಕರವಾಗಿರುವುದನ್ನು ಆಯ್ಕೆ ಮಾಡಿ

ಒಮ್ಮೆ ನೀವು ಆರೋಗ್ಯಕರ ಆಹಾರ ಸೇವನೆಯನ್ನು ಆರಂಭಿಸಿದರೆ ಕ್ಯಾಲೋರಿ ಮತ್ತು ಆಹಾರದ ಗಾತ್ರಕ್ಕೆ ಆದ್ಯತೆ ನೀಡಲ್ಲ. ಇದರ ಬದಲಿಗೆ ಹೆಚ್ಚು ಬಣ್ಣಗಳು, ವೈವಿಧ್ಯತೆ ಮತ್ತು ಆಹಾರಕ್ಕೆ ತಾಜಾತನ ಸೇರಿಸುವ ಬಗ್ಗೆ ಯೋಚಿಸಿ. ಈ ಕ್ರಮವು ನೀವು ಆರೋಗ್ಯಕರ ಆಯ್ಕೆ ಮಾಡಲು ನೆರವಾಗಲಿದೆ.

7. ಕಾರ್ಬೊನೇಟೆಡ್ ನೀರನ್ನು ತ್ಯಜಿಸಿ

7. ಕಾರ್ಬೊನೇಟೆಡ್ ನೀರನ್ನು ತ್ಯಜಿಸಿ

ಕಾರ್ಬೊನೇಟೆಡ್ ನೀರು ಅಥವಾ ಯಾವುದೇ ಕೃತಕ ಬಣ್ಣವನ್ನು ಹೊಂದಿರುವಂತಹ ಪಾನೀಯಗಳು ಕೃತಕ ಸಕ್ಕರೆಯನ್ನು ಹೊಂದಿರುತ್ತದೆ. ಇದು ನಿಮ್ಮ ಆರೋಗ್ಯಕರ ಆಹಾರ ಕ್ರಮಕ್ಕೆ ತಡೆಯಾಗಬಹುದು. ಇಂತಹ ಪಾನೀಯವನ್ನು ಆಗಾಗ ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯ ಹದಗೆಡುತ್ತಿರುತ್ತದೆ.

8. ತಿಂಡಿ ಬದಲಿಗೆ ಹಣ್ಣುಗಳನ್ನು ತಿನ್ನಿ

8. ತಿಂಡಿ ಬದಲಿಗೆ ಹಣ್ಣುಗಳನ್ನು ತಿನ್ನಿ

ಸಂಜೆ ವೇಳೆಗೆ ನಿಮಗೆ ಜಂಕ್ ಫುಡ್ ತಿನ್ನುವ ಅಭ್ಯಾಸವಿದ್ದರೆ ಅದರ ಬದಲಿಗೆ ಒಂದು ತಟ್ಟೆ ತಾಜಾ ಹಣ್ಣುಗಳನ್ನು ತಿನ್ನಿ. ನಿಮಗೆ ಹಸಿವಾಗಿದ್ದರೆ ಹಣ್ಣು ತಿನ್ನಿ. ಇದು ನಿಮ್ಮ ದೇಹಕ್ಕೆ ಅದ್ಭುತವನ್ನು ಮಾಡಲಿದೆ ಮತ್ತು ಹಣ್ಣುಗಳನ್ನು ತಿನ್ನುವುದರಿಂದ ಪ್ರಮುಖ ವಿಟಮಿನ್ ಮತ್ತು ಪೋಷಕಾಂಶಗಳು ಸಿಗಲಿದೆ.

9. ಕಚೇರಿಯಲ್ಲೂ ಮನೆಯಡುಗೆ ತಿನ್ನಿ

9. ಕಚೇರಿಯಲ್ಲೂ ಮನೆಯಡುಗೆ ತಿನ್ನಿ

ಮನೆಯಡುಗೆಯನ್ನು ಕೊಂಡೊಯ್ಯುವುದರಿಂದ ಆರೋಗ್ಯಕರ ಜೀವನ ಸಾಗಿಸಬಹುದು. ಎಷ್ಟು ಮಟ್ಟದ ಸಕ್ಕರೆ, ಸೋಡಿಯಂ ಮತ್ತು ಕೃತಕ ಪದಾರ್ಥಗಳನ್ನು ಸೇವಿಸಿದ್ದೀರಿ ಎಂದು ಲೆಕ್ಕ ಹಾಕಿ ಒತ್ತಡಕ್ಕೆ ಒಳಗಾಗಬೇಕಿಲ್ಲ.

10. ಹಣ್ಣು ಮತ್ತು ತರಕಾರಿ ಯಾವಾಗಲೂ ಒಳ್ಳೆಯ ಆಯ್ಕೆ

10. ಹಣ್ಣು ಮತ್ತು ತರಕಾರಿ ಯಾವಾಗಲೂ ಒಳ್ಳೆಯ ಆಯ್ಕೆ

ದಿನದಲ್ಲಿ ನಿಮ್ಮ ಆಹಾರದಲ್ಲಿ ಐದು ಬಗೆಯ ಹಣ್ಣು ಹಾಗೂ ತರಕಾರಿಯನ್ನು ಸೇರಿಸಲು ಮರೆಯದಿರಿ.

11. ನಿಮ್ಮ ಭಾಗದ ಗಾತ್ರ ಕಡಿಮೆ ಮಾಡಿ

11. ನಿಮ್ಮ ಭಾಗದ ಗಾತ್ರ ಕಡಿಮೆ ಮಾಡಿ

ಟೇಬಲ್ ಮೇಲೆ ಒಳ್ಳೆಯ ಆಹಾರ ನೋಡಿದಾಗ ನಾವು ಪ್ಲೇಟ್ ಗೆ ಹೆಚ್ಚಿನದನ್ನು ಹಾಕಿಕೊಳ್ಳುತ್ತೇವೆ. ಪ್ಲೇಟ್ ತುಂಬಾ ಹಾಕಿಕೊಳ್ಳುವ ತಪ್ಪನ್ನು ಮಾಡಬೇಡಿ. ಪ್ಲೇಟ್ ನಲ್ಲಿ ಸ್ವಲ್ಪ ಆಹಾರವನ್ನು ಹಾಕಿಕೊಳ್ಳಿ.

12. ಲೇಬಲ್ ಓದುವುದನ್ನು ಆರಂಭಿಸಿ

12. ಲೇಬಲ್ ಓದುವುದನ್ನು ಆರಂಭಿಸಿ

ಯಾವುದೇ ಆಹಾರ ಉತ್ಪನ್ನವನ್ನು ಖರೀದಿಸುವಾದ ಮೊದಲು ಬಾಕ್ಸ್ ನಲ್ಲಿ ಆಹಾರದಲ್ಲಿ ಏನೆಲ್ಲಾ ಪದಾರ್ಥಗಳನ್ನು ಹಾಕುತ್ತಾರೆಂದು ಓದಿಕೊಳ್ಳಿ. ಆಹಾರದಲ್ಲಿ ಯಾವ ರೀತಿಯ ಪದಾರ್ಥಗಳು ಮತ್ತು ಕೃತಕ ವಸ್ತುಗಳು ಇದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.

13. ಸಾಕಷ್ಟು ನೀರು ಕುಡಿಯಿರಿ

13. ಸಾಕಷ್ಟು ನೀರು ಕುಡಿಯಿರಿ

ಪ್ರತೀ ದಿನ ಬೆಳಗ್ಗೆ ಒಂದು ಲೋಟ ನೀರು ಕುಡಿಯಿರಿ. ಇದು ಆಮ್ಲಜನಕ ಮತ್ತು ನೀರನ್ನು ಪೂರೈಸಿ ಎಲ್ಲಾ ಜೀವಕೋಶಗಳನ್ನು ಪುನರ್ಯೌವನಗೊಳಿಸಲು ನೆರವಾಗುತ್ತದೆ.

14. ನಿಧಾನವಾಗಿ ತಿನ್ನಿ

14. ನಿಧಾನವಾಗಿ ತಿನ್ನಿ

ನಿಧಾನವಾಗಿ ತಿನ್ನುವುದು ಆಹಾರದ ರುಚಿ ನೋಡಲು ಒಳ್ಳೆಯ ವಿಧಾನ ಮತ್ತು ಕಡಿಮೆ ತಿನ್ನಬಹುದು. ಆಹಾರ ಚೆನ್ನಾಗಿ ಜಗಿದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಇದರಿಂದ ಜೀರ್ಣಕ್ರಿಯೆಗೆ ನೆರವಾಗುತ್ತದೆ ಮತ್ತು ಹೊಟ್ಟೆ ಕೂಡ ತುಂಬುತ್ತದೆ.

15. ಪರಿಪೂರ್ಣತೆ ಮುಖ್ಯವಲ್ಲ

15. ಪರಿಪೂರ್ಣತೆ ಮುಖ್ಯವಲ್ಲ

ಆರೋಗ್ಯಕರ ಆಹಾರಕ್ರಮದೆಡೆ ನಿಮ್ಮ ಪ್ರಯಾಣದ ವೇಳೆ ಆಹಾರಕ್ರಮದಲ್ಲಿ ಮಾಡುವ ಪ್ರತಿಯೊಂದು ಬದಲಾವಣೆ ಅತೀ ಮುಖ್ಯವಾಗುತ್ತದೆ. ಪರಿಪೂರ್ಣತೆಗೆ ಪ್ರಯತ್ನಿಸಬೇಡಿ ಮತ್ತು ನೀವು ಹೆಚ್ಚಾಗಿ ಇಷ್ಟಪಡುವ ಆಹಾರವನ್ನು ಸಂಪೂರ್ಣವಾಗಿ ತೆಗೆದುಹಾಕಬೇಡಿ.

16. ಹೊರಗಿನಿಂದ ತರಿಸುವ ಬದಲು ಅಡುಗೆ ಮಾಡಿ

16. ಹೊರಗಿನಿಂದ ತರಿಸುವ ಬದಲು ಅಡುಗೆ ಮಾಡಿ

ಹೋಟೆಲ್ ಗಳಿಂದ ಆಹಾರ ತರಿಸುವುದನ್ನು ಆದಷ್ಟು ತಡೆಯಿರಿ. ಇದರ ಬದಲಿಗೆ ಮನೆಯಲ್ಲೇ ಅಡುಗೆ ಮಾಡಿ. ಫಿಜ್ಜಾ ಮತ್ತು ಬರ್ಗರ್ ತನಕ ಮನೆಯಲ್ಲಿ ಏನು ಬೇಕಿದ್ದರೂ ಮಾಡಬಹುದು. ಇದನ್ನು ಆರೋಗ್ಯಕರವಾಗಿ ಮಾಡಬಹುದು. ಯಾಕೆಂದರೆ ನೀವೇ ಅಡುಗೆಯವರಾಗಿರುತ್ತೀರಿ.

17. ಪ್ರೋಟೀನ್ ಉಳ್ಳ ಆಹಾರಕ್ರಮ ಅಳವಡಿಸಿ

17. ಪ್ರೋಟೀನ್ ಉಳ್ಳ ಆಹಾರಕ್ರಮ ಅಳವಡಿಸಿ

ದೈನಂದಿನ ಕೆಲಸಗಳನ್ನು ಮಾಡಲು ದೇಹಕ್ಕೆ ಶಕ್ತಿ ತುಂಬಾ ಮುಖ್ಯ. ದೇಹಕ್ಕೆ ಈ ಶಕ್ತಿ ತುಂಬಲು ತೆಲು ಮಾಂಸ, ಮೊಟ್ಟೆ, ಧಾನ್ಯಗಳು, ಹಾಲು ಮತ್ತು ಬೆಣ್ಣೆಯಂತಹ ಪ್ರೋಟೀನ್ ಹೇರಳವಾಗಿರುವ ಆಹಾರವನ್ನು ಆಯ್ಕೆ ಮಾಡಿ. ಮೊಸರು, ಸೋಯಾಬೀನ್ಸ್ ಮತ್ತು ಕಾಳುಗಳನ್ನು ಆಹಾರ ಕ್ರಮಕ್ಕೆ ಸೇರಿಸುವುದರಿಂದ ಮೂಳೆ ಮತ್ತು ಹಲ್ಲುಗಳು ಆರೋಗ್ಯಕರವಾಗಿರುತ್ತದೆ.

18. ನಿಯಮಿತವಾಗಿ ತಿನ್ನಿ

18. ನಿಯಮಿತವಾಗಿ ತಿನ್ನಿ

ಪ್ರತೀ ಮೂರು ಅಥವಾ ನಾಲ್ಕು ಗಂಟೆಗೊಮ್ಮೆ ಏನಾದರೂ ತಿನ್ನುವುದು ಒಳ್ಳೆಯದು. ದಿನಕ್ಕೆ ಮೂರು ಊಟ ಮತ್ತು ಒಂದು ಅಥವಾ ಎರಡು ಸಲ ತಿಂಡಿ ತಿನ್ನಿ. ನಿಯಮಿತವಾಗಿ ತಿನ್ನುವುದರಿಂದ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಬಹುದು.

19. ಆರೋಗ್ಯಕರ ಕಾಬ್ರೋಹೈಡ್ರೇಟ್ಸ್ ಗಳು ಮುಖ್ಯ

19. ಆರೋಗ್ಯಕರ ಕಾಬ್ರೋಹೈಡ್ರೇಟ್ಸ್ ಗಳು ಮುಖ್ಯ

ಉತ್ತಮ ಕಾರ್ಬೋಹೈಡ್ರೇಟ್ಸ್ ಮತ್ತು ನಾರಿನಾಂಶಗಳಿರುವ ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡಿ. ಅದರಲ್ಲೂ ದೀರ್ಘ ಶಕ್ತಿಗಾಗಿ ಎಲ್ಲಾ ರೀತಿಯ ಧಾನ್ಯಗಳನ್ನು ಬಳಸಿ. ಧಾನ್ಯಗಳು ಸಸ್ಯರಾಸಾಯನಿಕ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುತ್ತದೆ. ಇದು ಹೃದ್ರೋಗ, ಕೆಲವು ವಿಧದ ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆಯಿಂದ ರಕ್ಷಿಸುತ್ತದೆ.

20. ಅನಾರೋಗ್ಯಕರ ಕೊಬ್ಬಿನ ಬದಲು ಆರೋಗ್ಯಕರ ಕೊಬ್ಬನ್ನು ಆಯ್ಕೆ ಮಾಡಿ

20. ಅನಾರೋಗ್ಯಕರ ಕೊಬ್ಬಿನ ಬದಲು ಆರೋಗ್ಯಕರ ಕೊಬ್ಬನ್ನು ಆಯ್ಕೆ ಮಾಡಿ

ಆರೋಗ್ಯಕರ ಕೊಬ್ಬು ನಿಮ್ಮ ಮೆದುಳು, ಹೃದಯ, ಜೀವಕೋಶಗಳು, ಕೂದಳು, ಚರ್ಮ ಮತ್ತು ಉಗುರಿನ ಪೋಷಣೆ ಮಾಡುತ್ತದೆ. ಒಮೆಗಾ-3ಯಿಂದ ಸಮೃದ್ಧವಾಗಿರುವ ಆಹಾರ ಮುಖ್ಯ ಮತ್ತು ಹೃದಯರಕ್ತನಾಳದ ಕಾಯಿಲೆ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಬುದ್ಧಿಮಾಂದ್ಯತೆ ತಡೆಗಟ್ಟಲು ನೆರವಾಗುತ್ತದೆ.

English summary

20 Best Ways Healthy Eating Habits

All of us desire to age gracefully, be fit, immune to various seasonal illness, and maintain a healthy body. We are pretty sure that this desire is listed somewhere in your top 10 wish list. In this rat race world we tend to eat only when our stomach growls or when we see some food.
X
Desktop Bottom Promotion