For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಎದ್ದು ಏನು ತಿನ್ನಬೇಕು? 20 ಐಡಿಯಾ!

By Super
|

ಬೆಳಗ್ಗೆ ನಮ್ಮ ಮೂಡ್ ಹೇಗಿರುತ್ತದೋ ಅದರಂತೆ ಆ ದಿನವಿರುತ್ತದೆ ಅನ್ನುವ ಮಾತು ಸುಳ್ಳಲ್ಲ. ಆದ್ದರಿಂದಲೇ ಬೆಳಗ್ಗೆ ಎಲ್ಲವೂ ಶುಭಕರವಾಗಿರಬೇಕೆಂದು ಬಯಸುತ್ತೇವೆ. ಇಷ್ಟೆಲ್ಲಾ ಯೋಚಿಸುವ ನಾವು ಅತೀ ಮುಖ್ಯವಾದ ಒಂದು ವಿಷಯದಲ್ಲಿ ಎಡವುತ್ತೇವೆ? ಅದೇನೆಂದರೆ ನಮ್ಮ ಆಹಾರಕ್ರಮ!

ಬೆಳಗ್ಗಿನ ನಮ್ಮ ಆಹಾರಕ್ರಮಕ್ಕೂ, ನಮ್ಮ ಮೂಡ್ ಗೂ ಒಂದಕ್ಕೊಂದು ಸಂಬಂಧವಿದೆ. ಪ್ರೊಟೀನ್, ವಿಟಮಿನ್ಸ್, ನಾರಿನಂಶ ಇರುವ ಆಹಾರಗಳನ್ನು ಬ್ರೇಕ್ ಫಾಸ್ಟ್ ಗೆ ತಿಂದರೆ ದಿನಾಪೂರ್ತಿ ಚಟುವಟಿಕೆಯಿಂದ ಇರುವಿರಿ, ಆಯಾಸ ಉಂಟಾಗುವುದಿಲ್ಲ, ಮೂಡ್ ಕೂಡ ಚೆನ್ನಾಗಿಯೇ ಇರುತ್ತದೆ.

ರಾತ್ರೀ ಮಲಗಿ ಬೆಳಗ್ಗೆ ಎದ್ದಾಗ ದೇಹ ತನ್ನ ಕೆಲಸವನ್ನು ಮಾಡಲು ಅನುಕೂಲಕರವಾಗುವಂತಹ ಇಂಧನವನ್ನು ( ಶಕ್ತಿಯುತ ಆಹಾರವನ್ನು) ಕೊಡಬೇಕು, ಆಗ ನಮ್ಮ ದೇಹವು ಅವುಗಳಿಂದ ಶಕ್ತಿಯನ್ನು ತಕ್ಷಣ ಹೀರಿಕೊಂಡು, ನಿಮ್ಮಲ್ಲಿ ಶಕ್ತಿಯನ್ನು ತುಂಬುವುದು. ಅದರಲ್ಲೂ ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ಈ ಕೆಳಗಿನ ಆಹಾರಗಳು ತುಂಬಾ ಬೆಸ್ಟ್.

ಜೇನು

ಜೇನು

ಬೆಳಗ್ಗೆ ಎದ್ದು ಬ್ರೆಷ್ ಮಾಡಿದ ಬಳಿಕ ಒಂದು ಲೋಟ ಬಿಸಿ ನೀರಿಗೆ ಜೇನು ಮತ್ತು ನಿಂಬೆರಸ ಹಾಕಿ ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.

 ಧಾನ್ಯಗಳು

ಧಾನ್ಯಗಳು

ಮೊಳಕೆ ಬರಿಸಿದ ಧಾನ್ಯಗಳಿಂದ ಮಾಡಿದ ಪದಾರ್ಥಗಳು ಕೂಡ ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ತುಂಬಾ ಒಳ್ಳೆಯದು. ಇವುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಇರುವುದರಿಂದ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಹರ್ಬಲ್ ಟೀ

ಹರ್ಬಲ್ ಟೀ

ಬೆಳಗ್ಗೆ ಎದ್ದಾಗ ಹಾಲು ಹಾಕಿ ಮಾಡಿದ ಟೀ ಕುಡಿಯುವ ಬದಲು ಬ್ಲ್ಯಾಕ್ ಟೀ, ಗ್ರೀನ್ ಟೀ, ಹರ್ಬಲ್ ಟೀ ಇವುಗಳಲ್ಲಿ ನಿಮಗೆ ಇಷ್ಟ ಬಂದ ಟೀ ಕುಡಿಯಿರಿ. ಇವುಗಳು ಹಾಲು ಹಾಕಿದ ಟೀಗಿಂತ ಬೇಗನೆ ನಿಮ್ಮ ಮೂಡ್ ಅನ್ನು ರಿಫ್ರೆಶ್ ಮಾಡುತ್ತದೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯನ್ನು ಇತರ ಸಮಯದಲ್ಲಿ ತಿನ್ನುವುದಕ್ಕಿಂತ ಬೆಳಗ್ಗಿನ ಬ್ರೇಕ್ ಪಾಸ್ಟ್ ಗೆ ತಿಂದರೆ ಹೆಚ್ಚು ಪ್ರಯೋಜನಕಾರಿ. ಇದರಲ್ಲಿರುವ ಒಮೆಗಾ 3, ಪೋಷಕಾಂಶಗಳನ್ನು ನಮ್ಮ ದೇಹವು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಬ್ರೇಕ್ ಫಾಸ್ಟ್ ಗೆ ಇದನ್ನು ತಿನ್ನುವುದು ಒಳ್ಳೆಯದು.

 ಹಾಲು

ಹಾಲು

ಇದರಲ್ಲಿ ಪ್ರೊಟೀನ್ ಮತ್ತು ಇತರ ಪೋಷಕಾಂಶಗಳಿರುವುದರಿಂದ ನಿಮ್ಮ ದಿನವನ್ನು ಒಂದು ಗ್ಲಾಸ್ ನಿಂದ ಪ್ರಾರಂಭಿಸುವುದು ಒಳ್ಳೆಯದು.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿದ್ದರೆ ಬೆಳಗ್ಗೆ 2 ಪೀಸ್ ಕಲ್ಲಂಗಡಿ ಹಣ್ಣನ್ನು ತಿನ್ನಿ, ನಿಮ್ಮ ದೇಹದಲ್ಲಿ ನೀರಿನಂಶ ಕಾಪಾಡಲು ಇದು ಸಹಾಯ ಮಾಡುವುದು.

ಓಟ್ಸ್

ಓಟ್ಸ್

ಓಟ್ಸ್ ತಿನ್ನುವವರಿಗೆ ದಪ್ಪಗಾಗುತ್ತೇನೆ ಎಂಬ ಭಯವಿಲ್ಲ, ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ, ಹೃದಯದ ಆರೋಗ್ಯಕ್ಕಂತೂ ತುಂಬಾ ಒಳ್ಳೆಯದು.

 ಕಾಫಿ

ಕಾಫಿ

ಬೆಳಗ್ಗೆ ಎದ್ದಾಗ ಏಕೋ ಲೈಟಾಗಿ ತಲೆನೋವು ಕಾಣಿಸುತ್ತದೆ ಎಂದು ಅನಿಸಿದರೆ ಒಂದು ಗ್ಲಾಸ್ ಬಿಸಿ-ಬಿಸಿ ಕಾಫಿ ಮಾಡಿ ಕುಡಿಯಿರಿ, ತಲೆನೋವು ಕ್ಷಣಾರ್ಧದಲ್ಲಿ ಮಾಯವಾಗುವುದು.

ಸಿಟ್ರಸ್ ಆಹಾರಗಳು

ಸಿಟ್ರಸ್ ಆಹಾರಗಳು

ಪ್ರತೀದಿನದ ನಿಮ್ಮ ಆಹಾರಕ್ರಮದಲ್ಲಿ ಇರಬೇಕು. ಅದರಲ್ಲೂ ಬೆಳಗ್ಗೆ ಸಿಟ್ರಸ್ ಇರುವ ಆಹಾರಗಳನ್ನು ತಿಂದರೆ ಮತ್ತಷ್ಟು ಒಳ್ಳೆಯದು. ಏಕೆಂದರೆ ಇದರಲ್ಲಿ antioxidants ಅಧಿಕವಿರುತ್ತದೆ.

 ಗೋಧಿ ಬ್ರೆಡ್

ಗೋಧಿ ಬ್ರೆಡ್

ಗೋಧಿ ಬ್ರೆಡ್ ಮೈದಾ ಬ್ರೆಡ್ ನಷ್ಟು ರುಚಿಕರವಲ್ಲದಿದ್ದರೂ, ಸ್ಯಾಂಟ್ ವಿಚ್ ಮಾಡಿದರೆ ಇದರ ರುಚಿ ಹೆಚ್ಚಿಸಬಹುದು. ಬ್ರೇಕ್ ಫಾಸ್ಟ್ ಗೆ ಗೋಧಿ ಬ್ರೆಡ್ ಸ್ಯಾಂಡ್ ವಿಚ್ ಕೂಡ ತುಂಬಾ ಒಳ್ಳೆಯದು.

 ಬಾಳೆಹಣ್ಣು

ಬಾಳೆಹಣ್ಣು

ಬ್ರೇಕ್ ಫಾಸ್ಟ್ ಗೆ ಒಂದು ಬಾಳೆ ಹಣ್ಣು, ಒಂದು ಲೋಟ, ಬೇಕಿದ್ದರೆ ಒಂದು ಮೊಟ್ಟೆ ಇದ್ದರೆ ಮತ್ತೇನು ತಿನ್ನಬೇಕಾಗಿಲ್ಲ.

ಅಗಸೆದ ಬೀಜ(Flax seeds)

ಅಗಸೆದ ಬೀಜ(Flax seeds)

ನೀವು ಮಾಡುವ ಫ್ರೂಟ್ ಸಲಾಡ್ ಅನ್ನು ಅಗಸೆದ ಬೀಜದಿಂದ ಅಲಂಕರಿಸಿದರೆ ಒಳ್ಳೆಯದು. ಅದರಲ್ಲೂ ವೆಜ್ ಮಾತ್ರ ತಿನ್ನುವವರಿಗೆ ಒಮೆಗಾ 3 ಕೊಬ್ಬಿನಂಶ ದೊರೆಯಲು ಅತ್ಯುತ್ತಮವಾದ ಮೂಲ ಇದಾಗಿದೆ.

ಮೊಸರು

ಮೊಸರು

ಕೆಲವರಿಗೆ ಬೆಳಗ್ಗೆ ಹಾಲು ಕುಡಿದರೆ ಜೀರ್ಣವಾಗುವುದಿಲ್ಲ, ಅಂತವರು ಸ್ವಲ್ಪ ಮೊಸರು ತಿಂದರೆ ಒಳ್ಳೆಯದು. ಇದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾ ನಿಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.

ಗೋಧಿಯಿಂದ ಮಾಡಿದ ಪದಾರ್ಥಗಳು

ಗೋಧಿಯಿಂದ ಮಾಡಿದ ಪದಾರ್ಥಗಳು

ಗೋಧಿಯಿಂದ ಮಾಡಿದ ಪದಾರ್ಥಗಳಲ್ಲಿ ವಿಟಮಿನ್ ಇ ಮತ್ತು ನಾರಿನಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

 ಪಪ್ಪಾಯಿ

ಪಪ್ಪಾಯಿ

ಫ್ರೂಟ್ ಸಲಾಡ್ ನಲ್ಲಿ ಪಪ್ಪಾಯಿ ಕೂಡ ಸೇರಿಸಿ, ಇದು ತೆಳ್ಳಗಿನ ಮೈ ಕಟ್ಟು ಪಡೆಯಲು ಸಹಾಯ ಮಾಡುತ್ತದೆ ಹಾಗೂ ಇದರಲ್ಲಿರುವ ಪ್ರೊಟೀನ್ ಆರೊಗ್ಯಕ್ಕೆ ಒಳ್ಳೆಯದು. ಗರ್ಭಿಣಿಯರು ಇದನ್ನು ತಿನ್ನಬೇಡಿ.

 ಬಾದಾಮಿ

ಬಾದಾಮಿ

ರಾತ್ರಿಯಲ್ಲಿ 3-4 ಬಾದಾಮಿಯನ್ನು ನೆನೆ ಹಾಕಿ ಬೆಳಗ್ಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ಕೂದಲು ಉದುರುವುದನ್ನೂ ತಡೆಗಟ್ಟುತ್ತದೆ.

 ಬೆರ್ರಿ

ಬೆರ್ರಿ

ಬೆರ್ರಿ ಹಣ್ಣುಗಳು ಕೂಡ ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ತುಂಬಾ ಒಳ್ಳೆಯದು. ಇವುಗಳಲ್ಲಿ ವಿಟಮಿನ್ ಸಿ ಮತ್ತು ನಾರಿನಂಶ ಅಧಿಕವಿರುತ್ತದೆ.

 ಪೀನಟ್ ಬಟರ್

ಪೀನಟ್ ಬಟರ್

ಪೀನಟ್ ಬಟರ್ ನಿಧಾನಕ್ಕೆ ಕಾರ್ಬೋಹೈಡ್ರೇಟ್ಸ್ ಬಿಡುಗಡೆ ಮಾಡುವುದರಿಂದ ದಿನಾಪೂರ್ತಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

 ನೀರು

ನೀರು

ಬೆಳಗ್ಗೆ ನೀರು ಕುಡಿಯಬೇಕಾದದು ತುಂಬಾ ಅವಶ್ಯಕ. ಅದರಲ್ಲೂ ಬೆಳಗ್ಗೆ ಬಿಸಿ ನೀರು ಕುಡಿದರೆ ಮಲವಿಸರ್ಜನೆಗೆ ಸಹಕಾರಿ.

 ಸೇಬು

ಸೇಬು

ಸೇಬಿನಲ್ಲಿ ನಾರಿನಂಶ ಮತ್ತು ನೈಸರ್ಗಿಕವಾದ ಸಕ್ಕರೆಯಂಶವಿದೆ. ಬ್ರೇಕ್ ಫಾಸ್ಟ್ ನಲ್ಲಿ ಆಪಲ್ ಪೀಸ್ ಗಳಿರಲಿ.

English summary

20 Best Morning Foods For Your Breakfast

Proteins and fibrous carbs often make the best combination for a healthy breakfast. You need some instant energy and some subsistence fuel to carry on for the rest of the day. That is why it is very important to strike a perfect balance among the different types of morning foods that you have
X
Desktop Bottom Promotion