For Quick Alerts
ALLOW NOTIFICATIONS  
For Daily Alerts

ಆರೋಗ್ಯಕ್ಕಾಗಿ ತಿನ್ನಬೇಕು ಬಣ್ಣದ ಆಹಾರಗಳು

By Super
|

ನಿಮ್ಮ ಶರೀರಕ್ಕೆ ಗರಿಷ್ಟ ಪ್ರಮಾಣದಲ್ಲಿ ಪೋಷಕಾಂಶಗಳನ್ನೊದಗಿಸಿ, ಆರೋಗ್ಯವಂತ ಹಾಗೂ ಸದೃಢಕಾಯರಾಗಿರಲು ಅತಿ ಸರಳವಾದ ಉಪಾಯದ ಬಗ್ಗೆ ಗಾಢವಾಗಿ ಯೋಚಿಸುತ್ತಿರುವಿರಾ ?! ಇದಕ್ಕೆ ಉತ್ತರವು ನೇರ ಹಾಗೂ ಸರಳವಾಗಿದೆ. ಅದೇನೆಂದರೆ, ನಿಮ್ಮ ದಿನನಿತ್ಯದ ಆಹಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬಣ್ಣ ಬಣ್ಣದ ತಿನಿಸುಗಳನ್ನು ಸೇರಿಸಿ ತನ್ಮೂಲಕ ವಿವಿಧ ಬಣ್ಣಗಳೊಂದಿಗೆ ಆಟವಾಡಿರಿ. ನಿಮ್ಮ ಮುಖ್ಯ ಗುರಿಯು ಬಹಳ ಕಾಲದವರೆಗೆ ಬೆಳೆದು, ಬಾಧಿಸುವ ರೋಗಗಳನ್ನು ತಡೆಗಟ್ಟಿ, ಆರೋಗ್ಯಪೂರ್ಣರಾಗಿರುವುದೇ ಹೌದಾದರೆ, ಬೇರೆ ಬೇರೆ ಬಣ್ಣದ ತರಾವರಿ ತಿನಿಸುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಲು ಇದು ಸಕಾಲ.

ಬಣ್ಣದ ಪ್ರಾಮುಖ್ಯತೆಯೇನೆoದು ನೀವು ಕೇಳಬಹುದು. ಏನೆoದರೆ, ಈ ಬಣ್ಣ ಬಣ್ಣದ ತಿನಿಸುಗಳು carotenoids ಎಂಬ ಅತಿ ಮುಖ್ಯವಾದ ವಸ್ತುವನ್ನು ಹೊಂದಿದ್ದು, ಅದು ನಿಜಕ್ಕೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಎಚ್ಚರ! ಬಣ್ಣ ಬಣ್ಣದ ತಿನಿಸುಗಳೆಂದರೆ ದೊಡ್ಡ ದೊಡ್ಡ, ಬಣ್ಣ ಬಣ್ಣದ ಮಾಂಸಾಹಾರದ ತುಣುಕುಗಳೆಂದಲ್ಲ, ಬದಲಾಗಿ, ಅಪ್ಪಟ ಪ್ರಾಕೃತಿಕ, ಸಸ್ಯಮೂಲವಾದ ದೊಣ್ಣೆ ಮೆಣಸಿನoತಹ ವಿವಿಧ ವರ್ಣಗಳಲ್ಲಿ ಲಭ್ಯವಿರುವ ತರಕಾರಿಗಳು.

ಅದ್ದರಿಂದ, ಮುಂದಿನ ಬಾರಿ ನೀವು ಖರೀದಿಗೆ ಹೋಗುವಾಗ ಹಸಿರು ಸೊಪ್ಪಿನ ತರಕಾರಿಯೊಂದಿಗೆ, ವಿವಿಧ ಬಣ್ಣ ಬಣ್ಣದ ಎಲ್ಲಾ ಸೇವನಾರ್ಹ ತಿನಿಸುಗಳನ್ನು ಖರೀದಿಸಿರಿ. ಏಕೆಂದರೆ, ಪ್ರತಿಯೊಂದು ವರ್ಣವೂ ಕೂಡ ಸಾಕಷ್ಟು ಆರೋಗ್ಯದಾಯಕ ಗುಣಗಳನ್ನು ಹೊಂದಿದೆ. ನಿಮ್ಮ ಆಹಾರದಲ್ಲಿ, ಬಣ್ಣ ಬಣ್ಣದ ತಿನಿಸುಗಳ ಅಗತ್ಯದ ಬಗ್ಗೆ ನಿಮಗೆ ಇನ್ನೂ ಕೂಡ ಸಂದೇಹವಿರುವುದಾದರೆ, ನಾವು ಈ ಕೆಳಗೆ 20 ಅತ್ಯುತ್ತಮ ಬಣ್ಣ ಬಣ್ಣದ ತಿನಿಸುಗಳು ಮತ್ತು ಅವುಗಳ ಪ್ರಯೋಜನವನ್ನು ಪಟ್ಟಿ ಮಾಡುವುದರ ಮೂಲಕ ನಿಮಗೆ ಅತ್ಯುತ್ತಮ ಕಾರಣಗಳನ್ನು ಕೊಡುತ್ತೇವೆ.

ಲಿಂಬೆಹಣ್ಣು

ಲಿಂಬೆಹಣ್ಣು

ಪ್ರತಿದಿನ ನಿಮ್ಮ ಶರೀರಕ್ಕೆ ಅಗತ್ಯವಿರುವ ಸರಿಸುಮಾರು 100 ಶೇಖಡಾ C ಅನ್ನಾಂಗವನ್ನು ಈ ಸಣ್ಣ, ಹಳದಿ ಬಣ್ಣದ ಲಿಂಬೆಹಣ್ಣು ಹೊಂದಿದೆ. ಇದು ಸುಲಭವಾಗಿ ಎಲ್ಲರ ಕೈಗೆಟುಕುವoತಹದ್ದಾಗಿದ್ದು, ಇದು ಶರೀರದಲ್ಲಿ ಒಳ್ಳೆಯ ಕೊಲೆಸ್ಟರಾಲ್ (good cholesterol) ಅನ್ನು ಹೆಚ್ಚಿಸುತ್ತದೆ ಮತ್ತು ಅದೇ ಕಾಲಕ್ಕೆ ಮೂಳೆಗಳು ಹಾಗೂ ಹಲ್ಲುಗಳನ್ನು ಶಕ್ತಿಯುತವಾಗಿಸುವುದರಿಂದ, ಲಿಂಬೆ ಹಣ್ಣು ಅತ್ಯುತ್ತಮ ಅಹಾರವಸ್ತುವಾಗಿದೆ.

ಲಿಂಬೆಹಣ್ಣುಗಳು, citrus flavonoids ಎಂಬ ಅವಶ್ಯಕವಾದ ವಸ್ತುವನ್ನು ಹೊಂದಿದ್ದು, ಇದು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಉರಿ ಶಮನ (anti-inflammatory) ಗುಣಗಳನ್ನು ತೋರಿಸಿಕೊಟ್ಟಿದೆ.

ಹಸಿರು ಬಟಾಣಿ ಕಾಳುಗಳು

ಹಸಿರು ಬಟಾಣಿ ಕಾಳುಗಳು

ಈ ಬಟಾಣಿಯಲ್ಲಿ ಯಾವುದೇ ಅತ್ಯುತ್ಕೃಷ್ಟವಾದ antioxidants ಅಥವಾ ಯಾವುದೇ ವಿಶೇಷವಾದ ಗುಣವಿಲ್ಲವಾದರೂ ಸಹ ಇದೊಂದು ಆರೋಗ್ಯದಾಯಕ ವಸ್ತುವಾಗಿದೆ ಹಾಗೂ ನಿಮ್ಮ ಅಹಾರಕ್ರಮದ ಒಂದು ಅವಶ್ಯಕ ಭಾಗವಾಗಿದೆ. ಏಕೆಂದರೆ, ಇದು ಹಲವು ಖನಿಜಗಳು, ಸತು ಮತ್ತು ಕಬ್ಬಿಣದ ಅoಶವನ್ನೂಳಗೊಂಡoತೆ ಅನೇಕ ಅಂಶಗಳಿಂದ ಸಂತುಲಿತಗೊಂಡಿದೆ.

ಮೊಟ್ಟೆಯ ಹಳದಿ ಲೋಳೆ

ಮೊಟ್ಟೆಯ ಹಳದಿ ಲೋಳೆ

ಮೊಟ್ಟೆಯ ಹಳದಿ ಲೋಳೆಯು ಅತಿ ದುರ್ಲಭವಾದ choline ನಂತಹ ಅತಿ ಅವಶ್ಯವಾದ ವಸ್ತುಗಳ ಆಗರವಾಗಿದೆ. ಸ್ತನದ ಕ್ಯಾನ್ಸರ್ ನ ಅಪಾಯವನ್ನು ಕಡಿತಗೊಳಿಸುವಲ್ಲಿ choline ಸಹಕಾರಿಯಾಗಿದೆ ಮಾತ್ರವಲ್ಲದೇ, ಅದರಲ್ಲಿರುವ ವಿವಿಧ antioxidant ಗಳು ಸ್ನಾಯುಗಳ ಸವಕಳಿಯನ್ನು ಹಾಗೂ cataract ನಂತಹ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ.

ಮೊಟ್ಟೆಯ ಹಳದಿ ಲೋಳೆಯು ಹಲವು ಹೃದಯ ಸಂಬಂಧಿ ಕಾಯಿಲೆಗಳೊಂದಿಗೆ ತಳಕು ಹಾಕಿಕೊಂಡಿದೆಯಾದ್ದರಿಂದ ಅದು ಹಾನಿಕರ ಎಂಬುದು ಹಲವರ ಅನಿಸಿಕೆಯಾದರೂ ಸಹ, ಹಿತಮಿತವಾಗಿ ಅದನ್ನು ಸೇವಿಸುವುದರಿಂದ ಬಾಧಕವಿಲ್ಲ.

ಕಪ್ಪು ಬೀನ್ಸ್ (black beans)

ಕಪ್ಪು ಬೀನ್ಸ್ (black beans)

ಆರೋಗ್ಯಭರಿತ, ಅಗ್ಗದ ದರದಲ್ಲಿ ಸಿಗುವ, ಸುಲಭವಾಗಿ ಬೇಯಿಸಬಹುದಾದ ಬ್ಲ್ಯಾಕ್ ಬೀನ್ಸ್ ಅನ್ನು ನಿಮ್ಮ ಆಹಾರದೊಂದಿಗೆ ಸೇರಿಸುವ ಮೂಲಕ ಕಪ್ಪು ಬಣ್ಣದ ಅಲಂಕಾರವನ್ನು ನಿಮ್ಮ ತಿನಿಸಿಗೆ ಸೇರಿಸಿರಿ. ಅವು ಪ್ರೋಟೀನ್ ನಿಂದ ಸಮೃಧ್ಧವಾಗಿವೆ ಮತ್ತು ನಾರಿನಂಶದಿಂದ ಸಂಪನ್ನವಾಗಿವೆ. ಅಲ್ಲದೆ, ಸಣ್ಣ ಪ್ರಮಾಣದಲ್ಲಿ omega-3 fatty ಆಮ್ಲಗಳನ್ನು ಹೊಂದಿವೆ. ಈ ಎಲ್ಲಾ ಅಂಶಗಳು ನಿಮ್ಮನ್ನು ಹಸಿವಿನಿಂದ ಧೀರ್ಘಕಾಲದವರೆಗೆ ದೂರವಿರಿಸುತ್ತದೆ ಮತ್ತು ಅದೇ ಕಾಲಕ್ಕೆ ನಿಮ್ಮ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಕಪ್ಪು ಬಣ್ಣವು ಕಡುವಾಗಿದ್ದಷ್ಟೂ antioxidant ಗಳ ಪ್ರಮಾಣ ಹೆಚ್ಚು.

ಸೇಬುಗಳು (ಆಪಲ್ಸ್)

ಸೇಬುಗಳು (ಆಪಲ್ಸ್)

ಕೆಂಪು ಸೇಬುಗಳು antioxidant ಗಳ ಶಕ್ತಿಕೆಂದ್ರಗಳಾಗಿವೆ. ಈ antioxidant ಗಳು, ದೇಹದಲ್ಲಿ ಉತ್ಪನ್ನವಾಗುವ ಅತಿ ಪ್ರಮುಖ ಹಾನಿಕಾರಕ ವಸ್ತುಗಳ ಉತ್ಪಾದನೆಯನ್ನು ತಡೆಗಟ್ಟುತ್ತವೆ ತನ್ಮೂಲಕ ಬೇಗನೆ ವಯಸ್ಸಾಗುವ ಪ್ರಕ್ರಿಯೆಯನ್ನು ಹಾಗೂ ಇತರ ರೋಗಗಳನ್ನು ತಡೆಯುತ್ತದೆ. ಸೇಬುಗಳಲ್ಲಿರುವ polyphenols ಗಳೆಂಬ antioxidant ಗಳು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ಮಾತ್ರವಲ್ಲದೇ, ಇದು ನೀವು ವಿವಿಧ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ನೀರು

ನೀರು

ಬಣ್ಣರಹಿತವಾಗಿದ್ದರೂ ಸಹ ನೀರು ನಿಮ್ಮ ಆಹಾರಕ್ರಮದಲ್ಲಿ ಅತಿ ಅವಶ್ಯವಾಗಿ ಇರಲೇಬೇಕಾದ ವಸ್ತುವಾಗಿದೆ. ಹೆಚ್ಚಿನ ಪ್ರಮಾಣದ ನೀರಿನ ಸೇವನೆಯಿಂದ, ನಿಮ್ಮ ಶರೀರದಲ್ಲಿನ ವಿಷ ಪದಾರ್ಥಗಳು ನಿವಾರಣೆಯಾಗುತ್ತವೆ. ನೀರು ನಿಮ್ಮ ಶರೀರದ ಉಷ್ಣತೆಯನ್ನು ಕಾಪಾಡುತ್ತದೆ, ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟುತ್ತದೆ, ಮತ್ತು ನಿಮ್ಮ ಕೀಲುಗಳನ್ನು ಸಡಿಲವಾಗಿರಿಸುತ್ತವೆ. ಅಲ್ಲದೆ ನೀರು ನಿಮ್ಮ ಶರೀರಕ್ಕೆ ಅತಿ ಅವಶ್ಯಕ ಖನಿಜಗಳನ್ನು ಸಹ ಒದಗಿಸುತ್ತದೆ.

ನೀರು ಒಂದು ಶಕ್ತಿಯುತವಾದ, ಪ್ರಾಕೃತಿಕ ವಸ್ತುಗಳಲ್ಲಿ ಒಂದಾಗಿದ್ದು, ನೀವು ಆರೋಗ್ಯಯುತವಾದ ತೂಕವನ್ನು ಕಾಪಿಡುವಲ್ಲಿ ಸಹಕಾರಿಯಾಗಿದೆ.

ಆಪ್ರಿಕಾಟ್

ಆಪ್ರಿಕಾಟ್

ಕಿತ್ತಳೆ ಬಣ್ಣದ ಈ ಆಹಾರ ವಸ್ತುವು ಪೊಟಾಷ್ಯಿಯಂ, ನಾರು, A ಅನ್ನಾಂಗ, ಸಿ ಅನ್ನಾಂಗ, beta - carotene ಮತ್ತು lycopene ನಿಂದ ಸಮೃದ್ಧವಾಗಿದೆ. ಇದು ಯಕೃತ್ ಸಂಬಂಧಿ ಕಾಯಿಲೆಯಾದ ಯಕೃತ್ ನ ಕ್ಯಾನ್ಸರ್ ನ್ನು ತಡೆಗಟ್ಟುತ್ತದೆ.

ಬಾದಾಮಿ

ಬಾದಾಮಿ

ಈ ಚಿಕ್ಕ, ಕಂದು ಬಣ್ಣದ ವಸ್ತುವನ್ನು ನೀವು ಸಲಾಡ್ ನಲ್ಲಿ ಉಪಯೋಗಿಸಬಹುದು ಅಥವಾ ಸಂಜೆಯ ತಿನಿಸಿನ ರೂಪದಲ್ಲಿ ಸೇವಿಸಬಹುದು. ಈ ಕಾಳುಗಳು monosaturated ಕೊಬ್ಬು, ಪ್ರೋಟೀನ್, ಅನ್ನಾoಗಗಳು, ಮತ್ತು ಅವಶ್ಯಕ ಖನಿಜಗಳನ್ನು ಹೊಂದಿವೆ ಜೊತೆಗೆ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯಕ್ಕೆ ಉತ್ತಮವಾಗಿದೆ.

ರಾಸ್ ಬೆರ್ರಿ

ರಾಸ್ ಬೆರ್ರಿ

ಈ ಕಡು ಗುಲಾಬಿ ಬಣ್ಣದ ಹಣ್ಣು ellagic ಆಮ್ಲ ವೆಂಬ ವಸ್ತುವನ್ನು ಹೊಂದಿದ್ದು ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕೊನೆಗಾಣಿಸುತ್ತದೆ. ಅಲ್ಲದೆ, ಇದರಲ್ಲಿ ನಾರಿನಂಶವು ಸಮೃದ್ಧವಾಗಿದ್ದು ಇದು ಮಿತಿಮೀರಿದ ಕೊಲೆಸ್ಟ್ರಾಲ್ ಮತ್ತು ವಿವಿಧ ಹೃದಯ ಖಾಯಿಲೆಗಳನ್ನು ತಡೆಯುತ್ತದೆ.

ದಾಳಿಂಬೆ

ದಾಳಿಂಬೆ

ದಾಳಿಂಬೆಯು ತಾಜಾ, ಕಡು ಕೆಂಪುಬಣ್ಣವುಳ್ಳದ್ದಾಗಿದೆ. ಅವುಗಳಲ್ಲಿ ನಾರಿನಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಉತ್ತಮ ಪ್ರಮಾಣದಲ್ಲಿದ್ದು, ಅವು ನಿಮ್ಮ ಮೆದುಳನ್ನು ಸ್ವಸ್ಥ ಮತ್ತು ಚುರುಕಾಗಿರಿಸುತ್ತವೆ. ಸ್ವಸ್ಥ ಮೆದುಳು ಎಂಬುದು ಆರೋಗ್ಯದಿಂದಿರುವ ಹಾಗೂ ಒತ್ತಡರಹಿತರಾದ ನಿಮ್ಮನ್ನೇ ಸೂಚಿಸುತ್ತದೆ.

ಜೋಳ

ಜೋಳ

ಜೋಳ ಪೋಷಕಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳ ಉತ್ತಮ ಸಂಯೋಜನೆಯಾಗಿದ್ದು ನಾರಿನಂಶದಿಂದಲೂ ಸಮೃದ್ಧವಾಗಿದೆ ಅಲ್ಲದೇ ಅತಿ ಕಡಿಮೆ ಕ್ಯಾಲೋರಿ ಉಳ್ಳದ್ದಾಗಿದೆ.

ಬ್ರೊಕೋಲಿ

ಬ್ರೊಕೋಲಿ

ಹಸಿರು ಬಣ್ಣದ ಈ ಆಹಾರ ವಸ್ತುವು ಅನ್ನಾಂಗ K ಮತ್ತು ಅನ್ನಂಗ C ಗಳಿಂದ ಸಮೃದ್ಧ. ಈ ಎರಡು ಪ್ರಮುಖ ಪೋಷಕಾಂಶಗಳು ನಿಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಶಕ್ತಿಯುತವಾಗಿರಿಸಲು ಸಹಕಾರಿ. ಅಲ್ಲದೇ, ಇವು ವಿವಿಧ ರೀತಿಯ ಕ್ಯಾನ್ಸರ್ ಗಳನ್ನು ಮೊಟಕುಗೊಳಿಸುವಲ್ಲಿ ಸಹಕಾರಿ.

ಅಗಸೆದ ಬೀಜ

ಅಗಸೆದ ಬೀಜ

ಈ ಚಿಕ್ಕ ಕಂಡು ಬಣ್ಣದ ಬೀಜಗಳು omega-3 ಕೊಬ್ಬಿನಾಮ್ಲಗಳ ಒಂದು ಅತ್ಯುತ್ತಮ ಅಗರವಾಗಿವೆ. ಅನೇಕ ರೀತಿಯ ಹೃದಯ ಸಂಬಂಧಿ ಸಮಸ್ಯೆಗಳಿಗೆ ನೀವು ಒಳಗಾಗಬಹುದಾದ ಅಪಾಯವನ್ನು ಕಡಿಮೆಗೊಳಿಸುವಲ್ಲಿ ಇವು ಸಹಕಾರಿ. ರಕ್ತನಾಳಗಳಲ್ಲಿ ತಡೆ ಅಥವಾ ರಕ್ತ ಕಣಗಳ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುವುದರ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇವು ಸ್ತನ ಕ್ಯಾನ್ಸರ್ ನ ಅಪಾಯವನ್ನು ಸಹ ಕಡಿಮೆಗೊಳಿಸುತ್ತದೆ.

ಸಿಹಿ ಕುಂಬಳ

ಸಿಹಿ ಕುಂಬಳ

ಇದರಲ್ಲಿರುವ ಅಗಾಧ ಪ್ರಮಾಣದ beta carotene ಗೆ ಇದರ ಕಿತ್ತಳೆ ಬಣ್ಣವೇ ಸಾಕ್ಷಿ. ಇದು ಹೃದಯ ಕಾಯಿಲೆಯನ್ನು ತಡೆಯುತ್ತದೆ. ಇದು ಕಡಿಮೆ ಕ್ಯಾಲೋರಿಗಳುಳ್ಳದ್ದಾಗಿದ್ದು, ವಿಟಮಿನ್ A ಮತ್ತು ನಾರಿನಂಶದಿಂದ ಸಮೃದ್ಧವಾಗಿದೆ.

ನೇರಳೆ ಹಣ್ಣು

ನೇರಳೆ ಹಣ್ಣು

ನೇರಳೆ ಬಣ್ಣದ ಈ ಹಣ್ಣು, ಆಂಟಿಆಕ್ಸಿಡೆಂಟ್ ಮತ್ತು ನಾರಿನಂಶದಿಂದ ಸಮೃದ್ಧ. ನೇರಳೆ ಹಣ್ಣು ನಿಮ್ಮ ಶಕ್ತಿಯು ಕ್ಷಯವನ್ನು ತಡೆದು ಮೆದುಳನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಶಕ್ತಿಯುತವಾಗಿರಿಸುತ್ತದೆ. ಅಲ್ಲದೇ ಇದು ಬೊಜ್ಜನ್ನು ತಡೆಯುತ್ತದೆ, ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ, ಮತ್ತು ಮುಖ್ಯ ರಕ್ತನಾಳಗಳ ಗಡುಸಾಗುವಿಕೆಯನ್ನು ತಡೆಯುತ್ತದೆ.

ಗೆಣಸು

ಗೆಣಸು

ಗೆಣಸಿನ ಬಣ್ಣವು ಬಿಳಿ, ಹಳದಿ, ಕೆಂಪು, ಅಥವಾ ಕಂದು ಬಣ್ಣದ್ದಾಗಿರುತ್ತದೆ. ಅವುಗಳಲ್ಲಿ beta - carotene, ಕಬ್ಬಿಣ, C ಅನ್ನಾಂಗ, ಮತ್ತು E ಅನ್ನಾಂಗಗಳು ಸಮೃದ್ಧವಾಗಿವೆ. ಗೆಣಸಿನ ನಿಯಮಿತ ಸೇವನೆಯು ನಿಮ್ಮ ಶರೀರವನ್ನು ಕೋಶಗಳ ನಾಶದಿಂದ ಕಾಪಾಡುತ್ತದೆ. ಸ್ನಾಯುಗಳ ಮರುಚೇತನಕ್ಕೆ ಅವು ಅತ್ಯುತ್ತಮ ಆಹಾರ ಪದಾರ್ಥ.

ಕ್ಯಾರಟ್

ಕ್ಯಾರಟ್

ಕಿತ್ತಳೆ ಬಣ್ಣದ ಈ ಆಹಾರವಸ್ತುವು carotene ಗಳ ಒಂದು ಉತ್ತಮ ಆಗರ. ಇದು ಕ್ಯಾನ್ಸರ್ ನ್ನು ತಡೆಗಟ್ಟಲು ಸಹಕಾರಿ, ವೃದ್ದಾಪ್ಯದ ಕುರುಡುತನದ ವಿರುದ್ಧ ರಕ್ಷಣೆ ನೀಡುತ್ತದೆ, ಇರುಳು ಕುರುಡುತನವನ್ನು ಕಡಿಮೆ ಮಾಡುತ್ತದೆ, ಮತ್ತು ಕೆಟ್ಟ ಕೊಲೆಸ್ಟರಾಲ್ (bad cholesterol) ನ್ನು ಕಡಿಮೆ ಮಾಡುತ್ತದೆ. ಕ್ಯಾರಟ್ ಗಳು ಸೂರ್ಯನ ತಾಪಮಾನದಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತವೆ.

ಕಿವಿ ಹಣ್ಣು

ಕಿವಿ ಹಣ್ಣು

ಹಸಿರು ಬಣ್ಣದ ಈ ಆಹಾರವಸ್ತುವು ಅನ್ನಾಂಗ C, ಅನ್ನಾಂಗ E, ಪೊಟ್ಯಾಸಿಯಂ, ಮತ್ತು ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧ. ಇವು ಜೀವಕೋಶಗಳ ನಾಶ ಮತ್ತು ವೃದ್ದಾಪ್ಯದ ಕುರುಡುತನವನ್ನು ತಡೆಯುವಲ್ಲಿ ಸಹಕಾರಿ.

ಟೊಮೆಟೊಗಳು

ಟೊಮೆಟೊಗಳು

ಕೆಂಪು ಬಣ್ಣದ ಈ ಆಹಾರವಸ್ತುವು lycopene ನ ಶಕ್ತಿಕೇಂದ್ರ. ಇದು ಮೂತ್ರಕೋಶ (bladder), ಹೊಟ್ಟೆ, ಮತ್ತು ಕರುಳಿನ ಕ್ಯಾನ್ಸರ್ ನ ಅಪಾಯವನ್ನು ತಡೆಯುತ್ತದೆ.

English summary

20 Best healthy colourful foods

Why colour is better, you ask? Simply because these colouful foods contain an essential substance called as carotenoids which is really good for your health. But be cautious as colourful foods do not mean a big colourful hamburger but instead natural and colourful foods like bell peppers. 
X
Desktop Bottom Promotion