For Quick Alerts
ALLOW NOTIFICATIONS  
For Daily Alerts

ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು

By Super
|

ತಲೆನೋವು, ನಮ್ಮ ದೈನಂದಿನ ಜೀವನದಲ್ಲಿ ನಮ್ಮನ್ನು ಕಾಡುವ ಕಾಯಿಲೆಯಲ್ಲದ ಕಾಯಿಲೆ...! ಏನಾಯಿತು,,,, ಎಂದರೆ ತಲೆನೋವು ಎಂಬ ಉತ್ತರ ನೀವು ನೀಡಿದರೆ, ಅದೊಂದು ಕಾಯಿಲೆಯೇ ಎಂಬಂತೆ ಜನ ನೋಡುತ್ತಾರೆ. ತೀರಾ ಹೆಚ್ಚಾದಾಗ ಮಾತ್ರ ಇದು ಕಾಯಿಲೆ ಎಂಬ ಅಭಿಪ್ರಾಯ ಜನರಲ್ಲಿದೆ. ಆದರೆ ತಲೆನೋವು ಬಂದವರಿಗೆ ಗೊತ್ತು ಅದರ ಪರಿಣಾಮ ಹೇಗಿರುತ್ತದೆ ಎಂದು. ಯೋಚನೆ ಮಾಡುವ ಸಾಮರ್ಥ್ಯವನ್ನು ಕಿತ್ತುಕೊಳ್ಳುವ, ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ತಲೆನೋವು ಯಾರಿಗೆ ತಾನೇ ಬೇಕು ಎನಿಸುತ್ತದೆ.

ಒಂದು ತಮಾಷೆಯ ಮತ್ತು ಅರ್ಥ ಬದ್ಧವಾದ ಸುಭಾಷಿತದ ಪ್ರಕಾರ " ಪ್ರತಿ ತಲೆಗೂ ತನ್ನದೆ ಆದ ತಲೆನೋವು ಇರುತ್ತದೆ". ಹಾಗಾಗಿ ತಲೆ ಇದ್ದವರಿಗೆ ತಲೆನೋವು ಸಹಜ. ಇದು ಬಂದರೆ ನಾವು ಅಸ್ಪಿರಿನ್ ಮಾತ್ರೆ ತೆಗೆದುಕೊಳ್ಳಲು ಹೋಗುತ್ತೇವೆ. ಆದರೆ ಮಾತ್ರೆಗಳನ್ನು ದಿನಾಲೂ ಸೇವಿಸುತ್ತಿದ್ದರೆ ಅದು ಕಾಯಿಲೆಯನ್ನು ವಾಸಿ ಮಾಡುವುದರ ಜೊತೆಗೆ ಮತ್ತೊಂದು ಕಾಯಿಲೆಯನ್ನು ಕೊಟ್ಟುಬಿಡುತ್ತದೆ. ಹಾಗಾಗಿ ಬೋಲ್ಡ್‌ಸ್ಕೈ ಈ ತಲೆನೋವನ್ನು ನಿವಾರಿಸಲು ಮನೆಯಲ್ಲಿಯೇ ದೊರೆಯುವ ಹಲವಾರು ಮನೆ ಮದ್ದುಗಳನ್ನು ನಿಮಗೆ ತಿಳಿಸಿಕೊಡುತ್ತದೆ. ಭಾರತೀಯ ಮನೆ ಮದ್ದುಗಳ ರಹಸ್ಯವನ್ನು ಅರಿತುಕೊಂಡು, ಅದರಿಂದ ನೀವು ತಲೆನೋವನ್ನು ನಿವಾರಿಸಿಕೊಳ್ಳಬಹುದು.

ಇದರಲ್ಲಿನ ಕೆಲವು ವಸ್ತುಗಳು ನಿಮ್ಮ ಮನೆಯ ಅಡುಗೆ ಮನೆಯಲ್ಲಿ ದೊರೆಯುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಸಹ ಉಂಟಾಗುವುದಿಲ್ಲ.ಇವುಗಳನ್ನು ನೀವು ಬಳಸುತ್ತಾ ಇದ್ದಲ್ಲಿ, ಕೇವಲ ಒಂದು ವಾರದ ಒಳಗೆ ನಿಮ್ಮ ತಲೆನೋವಿನ ಪರಿಣಾಮದಲ್ಲಿ ಗಣನೀಯವಾದ ಬದಲಾವಣೆಯನ್ನು ನೀವು ಕಾಣಬಹುದು. ಅದಕ್ಕಾಗಿ ಏಕೆ ಕಾಯುತ್ತೀರಾ? ಬನ್ನಿ ಮೊದಲು ಆ ಮನೆಮದ್ದುಗಳು ಯಾವುವು ಎಂಬುದನ್ನು ತಿಳಿದುಕೊಂಡು ಬರೋಣ:

ಲವಂಗ ಮತ್ತು ಹರಳುಪ್ಪಿನ ಪೇಸ್ಟ್

ಲವಂಗ ಮತ್ತು ಹರಳುಪ್ಪಿನ ಪೇಸ್ಟ್

ಇದು ತಲೆನೋವಿಗೆ ಪರಿಣಾಮಕಾರಿ ಮನೆ ಮದ್ದು.ನೀವು ಮಾಡಬೇಕಾದ್ದು ಇಷ್ಟೆ,ಲವಂಗ ಮತ್ತು ಹರಳುಪ್ಪು ಕುಟ್ಟಿ ಪುಡಿ ಮಾಡಿ,ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಇಟ್ಟುಕೊಳ್ಳಿ.ಪೇಸ್ಟ್ ನಲ್ಲಿ ಇರುವ ಹರಳುಪ್ಪು ಹೈಗ್ರೋಸ್ಕೊಪಿಕ್ ಆಗಿರುವುದರಿಂದ ತಲೆಯಲ್ಲಿರುವ ದ್ರವವನ್ನು ತೆಗೆದು ತಲೆ ನೋವನ್ನು ಕಡಿಮೆ ಮಾಡುತ್ತದೆ.

ದಾಲ್ಚಿನ್ನಿ ಪುಡಿಯ ಪೇಸ್ಟ್ ಹೆಚ್ಚಿರಿ

ದಾಲ್ಚಿನ್ನಿ ಪುಡಿಯ ಪೇಸ್ಟ್ ಹೆಚ್ಚಿರಿ

ತಲೆನೋವನ್ನು ನಿವಾರಿಸಲು ಸುಲಭ ಉಪಾಯವೆಂದರೆ ದಾಲ್ಚಿನ್ನಿ ಪುಡಿಯನ್ನು ನೀರು ಬೇರೆಸಿ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.ಇದನ್ನು ಹಣೆಗೆ ಹಚ್ಚಿದರೆ ತಕ್ಷಣ ನೋವು ಕಡಿಮೆ ಆಗುತ್ತದೆ.

ಶ್ರೀಗಂಧ ಲೇಪಿಸಿ

ಶ್ರೀಗಂಧ ಲೇಪಿಸಿ

ಗಂಧದ ಚಕ್ಕೆಯನ್ನು ತೆಗೆದುಕೊಂಡು ನೀರಿನಲ್ಲಿ ತೇದು ಪೇಸ್ಟ್ ಮಾಡಿಟ್ಟುಕೊಳ್ಳಿ.ಇದನ್ನು ತಲೆನೋವು ಇದ್ದಾಗ ಹಣೆಯ ಮೇಲೆ ಲೇಪಿಸಿ.ತಲೆನೋವಿನಿಂದ ಸಂಪೂರ್ಣ ಗುಣಮುಖರಾಗುತ್ತೀರಿ.

ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ

ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ

15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾದುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ ರಸ ಕುಡಿಯಿರಿ

ಬೆಳ್ಳುಳ್ಳಿ ರಸ ಕುಡಿಯಿರಿ

ಕೆಲವು ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆಯಿರಿ.1 ಚಮಚದಷ್ಟು ರಸ ಕುಡಿಯಿರಿ.ಇದು ನೋವು ನಿವಾರಕದಂತೆ ಕೆಲಸಮಾಡುತ್ತದೆ ಮತ್ತು ತಲೆನೋವು ಸಂಪೂರ್ಣ ಕಡಿಮೆ ಆಗುತ್ತದೆ.

ನಿಮ್ಮ ಕಾಲುಗಳನ್ನು ಬಿಸಿನೀರಿನಲ್ಲಿ ಇಟ್ಟುಕೊಳ್ಳಿ

ನಿಮ್ಮ ಕಾಲುಗಳನ್ನು ಬಿಸಿನೀರಿನಲ್ಲಿ ಇಟ್ಟುಕೊಳ್ಳಿ

ತಲೆನೋವನ್ನು ನಿವಾರಿಸಲು ಇನ್ನೊಂದು ಮನೆ ಮದ್ದು ಎಂದರೆ ಕುರ್ಚಿ ಮೇಲೆ ಕುಳಿತುಕೊಂಡು ಬಕೆಟ್ ನಲ್ಲಿ ಬಿಸಿ ನೀರನ್ನು ತುಂಬಿಸಿ ಅದರಲ್ಲಿ ನಿಮ್ಮ ಕಾಲನ್ನು ನೆನೆಸಿಡಿ.ಇದನ್ನು ನೀವು ಮಲಗಲು ಹೋಗುವ 15 ನಿಮಿಷ ಮೊದಲು ಮಾಡಿ.ಇದನ್ನು ಕಡಿಮೆ ಎಂದರೆ 2 ರಿಂದ 3 ವಾರ ಮಾಡಿ ಅದರಲ್ಲೂ ನಿಮಗೆ ತೀವ್ರ ತಲೆನೋವು ಇರುವಾಗ ಅಥವಾ ಸೈನಸ್ ತಲೆನೋವು ಬಂದಾಗ ಈ ರೀತಿ ಮಾಡಿ.

ಸೇಬು ಹಣ್ಣನ್ನು ತಿನ್ನಿ

ಸೇಬು ಹಣ್ಣನ್ನು ತಿನ್ನಿ

ಬೆಳಿಗ್ಗೆ ಮುಂಜಾನೆ ಎದ್ದ ತಕ್ಷಣ ಒಂದು ಹೋಳು ಸೇಬು ಹಣ್ಣನ್ನು ಉಪ್ಪಿನೊಂದಿಗೆ ತಿನ್ನಿ.ಇದನ್ನು ತಿಂದ ನಂತರ ಬಿಸಿ ನೀರು ಅಥವಾ ಹಾಲನ್ನು ಕುಡಿಯಿರಿ.ಸುಮಾರು 10 ದಿನಗಳವರೆಗೆ ಇದನ್ನು ಮಾಡಿ ನೋಡಿ ಮತ್ತು ನಿಮ್ಮ ನಿರಂತರ ತಲೆನೋವಿನಿಂದ ಮುಕ್ತಿ ಪಡೆಯಿರಿ.

ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ

ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ

ಬಾದಾಮಿ ಎಣ್ಣೆ ತಲೆನೋವಿಗೆ ಉತ್ತಮವಾದ ಮನೆಮದ್ದುಗಳಲ್ಲಿ ಒಂದು.15 ನಿಮಿಷಗಳವರೆಗೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ತಲೆನೋವು ಕಡಿಮೆ ಆಗುತ್ತದೆ.

ವೀಳ್ಯದೆಲೆ ತಿನ್ನಿ

ವೀಳ್ಯದೆಲೆ ತಿನ್ನಿ

ವೀಳ್ಯದೆಲೆ ನೋವು ನಿವಾರಕ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.ಇದು ನಿಮಗೆ ತಲೆನೋವಿನಿಂದ ಹೊರಬರಲು ಸಹಕರಿಸುತ್ತದೆ.ಅಡಿಕೆ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಅದನ್ನು ಹಣೆಗೆ ಹಚ್ಚಿ.ಇದರಿಂದ ನಿಮಗಿದ್ದ ತಲೆನೋವು ಖಂಡಿತ ಗುಣವಾಗುತ್ತದೆ.

ಚೀಸ್ ಅನ್ನು ಹೆಚ್ಚು ತಿನ್ನಬೇಡಿ

ಚೀಸ್ ಅನ್ನು ಹೆಚ್ಚು ತಿನ್ನಬೇಡಿ

ನಿಮಗೆ ತಲೆನೋವು ಹೆಚ್ಚಿದ್ದರೆ ಚೀಸ್,ಹಂದಿ ಮಾಂಸ ಮತ್ತು ಚಾಕೊಲೇಟ್ ತಿನ್ನುವುದನ್ನು ತಪ್ಪಿಸಿ.ಇದರ ಬದಲಿಗೆ ವಿಟಮಿನ್ ಸಿ ಮತ್ತು ಡಿ,ಬಿ 12 ಮತ್ತು ಪ್ರೋಟೀನ್,ಕ್ಯಾಲ್ಸಿಯಂ ಇರುವ ಆಹಾರಗಳನ್ನು ಹೆಚ್ಚು ಬಳಸಿ.

ಹೆಚ್ಚು ಹಸಿರು ತರಕಾರಿಗಳು,ಕ್ಯಾಬೇಜ್,ಹೂಕೋಸು,ಮೆಂತೆ ಸೊಪ್ಪು ಇನ್ನಿತರ ಸೊಪ್ಪುಗಳನ್ನು ಆಹಾರದಲ್ಲಿ ಬಳಸಿ.ತಲೆನೋವಿನಿಂದ ಮುಕ್ತಿ ಪಡೆಯಬೇಕೆಂದರೆ ಹೊರಗಿನ ಆಹಾರಗಳು ಮತ್ತು ಜಂಕ್ ಫುಡ್ ಗಳನ್ನು ತಿನ್ನಬೇಡಿ.

ಚೆನ್ನಾಗಿ ನಿದ್ದೆ ಮಾಡಿ

ಚೆನ್ನಾಗಿ ನಿದ್ದೆ ಮಾಡಿ

ತಲೆನೋವು ಬರಲು ಮುಖ್ಯ ಕಾರಣವೆಂದರೆ ನಿದ್ರೆ ಸರಿಯಾಗಿ ಮಾಡದಿರುವುದು.ಆದ್ದರಿಂದ ಸರಿಯಾಗಿ ನಿದ್ದೆ ಮಾಡಿ.ಪ್ರತಿದಿನ 6 ತಾಸು ನಿದ್ದೆ ಮಾಡುವುದರಿಂದ ನಿಮಗೆ ತಲೆನೋವು ಬರಲಾರದು.

ಇವುಗಳೆಲ್ಲ ನೀವು ತಲೆನೋವು ಬಂದಾಗ ಮಾಡಿಕೊಳ್ಳಬಹುದಾದ ಮನೆ ಮದ್ದುಗಳು.

English summary

16 Highly Effective Home Remedies For Headache

Headache is quite common. People from all ages and all walks of life suffer from headaches quite frequently. They also take certain medicines to get rid of headache and spend too much money by taking some ineffective drugs.
X
Desktop Bottom Promotion