For Quick Alerts
ALLOW NOTIFICATIONS  
For Daily Alerts

ಕಪ್ಪು ಏಲಕ್ಕಿಯಲ್ಲಿರುವ ವಿಶೇಷತೆ ಏನೆಂದು ಗೊತ್ತಿದೆಯೇ?

By Super
|

ಏಲಕ್ಕಿಯನ್ನು ಸಂಬಾರ ಪದಾರ್ಥಗಳ ರಾಣಿ (ಸ್ಪೈಸ್ ಕ್ವೀನ್) ಎಂದೇ ಕರೆಯಲಾಗುತ್ತದೆ. ಕರಿಯ ಏಲಕ್ಕಿ ಎಂದರೆ ಏನು ಎಂಬುದರ ಬಗ್ಗೆ ಅದರ ಉಪಯೋಗಗಳನ್ನು ತಿಳಿಯುವ ಮೊದಲು ನೋಡೋಣ.

ಏಲಕ್ಕಿ ಪ್ರಬಲ ಸುಗಂಧವನ್ನು ಹೊಂದಿರುವ ಒಂದು ಸಣ್ಣ ಸಸ್ಯ. ಈ ಏಲಕ್ಕಿಯಲ್ಲಿ 2 ಬಗೆಗಳಿರುತ್ತವೆ 'ಕಪ್ಪು ಏಲಕ್ಕಿ' ಮತ್ತು 'ಹಸಿರು ಏಲಕ್ಕಿ'. ಇವುಗಳಲ್ಲಿ ಕಪ್ಪು ಏಲಕ್ಕಿ ಹೆಚ್ಚು ಹೆಸರು ಪಡೆದಿರುವ ಏಲಕ್ಕಿ. ಇದರ ಪರಿಮಳ ಮತ್ತು ರುಚಿಗಾಗಿ ಇದನ್ನು ಅಡುಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ. ರುಚಿಯಾದ ಅಡುಗೆ ತಯಾರಿಸುವಾಗ ಮುಖ್ಯವಾಗಿ ಉಪಯೋಗಿಸುವ ಸಂಬಾರ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು. ಕಪ್ಪು ಏಲಕ್ಕಿ ಕೇವಲ ಅಡುಗೆಗೆ ರುಚಿ ನೀಡುವುದು ಮಾತ್ರವಲ್ಲ.ದೇಹಕ್ಕೂ ಕೂಡ ಅರೋಗ್ಯ ನೀಡುತ್ತದೆ. ಇದರ ನಿಯಮಿತವಾದ ಬಳಕೆಯಿಂದ ದೇಹವನ್ನು ಆರೋಗ್ಯಯುತವಾಗಿ ಇರಿಸಿಕೊಳ್ಳಬಹುದು.

ಇದರ ಮೂಲಿಕೆಯಿಂದ ತಯಾರಿಸಲಾಗುವ ಎಣ್ಣೆಯನ್ನು ಪರಿಣಾಮಕಾರಿ ಎಣ್ಣೆ ಎನ್ನಲಾಗಿದ್ದು ಇದನ್ನು ಅರೋಮತೆರಪಿಗೆ ಬಳಸಲಾಗುತ್ತದೆ. ಈ ಕಪ್ಪು ಏಲಕ್ಕಿಯಿಂದ ದೇಹದ ಆರೋಗ್ಯದ ಜೊತೆಗೆ ಹೊಳೆಯುವ ಕೂದಲನ್ನು ಪಡೆಯಲು ಸಾಕಷ್ಟು ವಿಧಾನಗಳಿವೆ. ನಿಮ್ಮ ಚರ್ಮ,ಕೂದಲು,ಅರೋಗ್ಯ ಇವುಗಳಿಗೆ ಕಪ್ಪು ಏಲಕ್ಕಿಯಿಂದಾಗುವ ಅನುಕೂಲಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಕಪ್ಪು ಏಲಕ್ಕಿಯಿಂದಾಗುವ 15 ಉಪಯೋಗಗಳು

1.ಜಠರ ಮತ್ತು ಕರುಳುಗಳ ಆರೋಗ್ಯ

1.ಜಠರ ಮತ್ತು ಕರುಳುಗಳ ಆರೋಗ್ಯ

ಕಪ್ಪು ಏಳಕ್ಕಿಯಿಂದ ಜಠರ ಮತ್ತು ಕರುಳಿಗೆ ಹೆಚ್ಚಿನ ಪ್ರಯೋಜನವಿದೆ. ಇದರರಲ್ಲಿರುವ ಉತ್ತೇಜಕ ಸಹಾಯದಿಂದ ಕರುಳು ಮತ್ತು ಜಠರಕ್ಕೆ ಬೇಕಾಗುವ ಅಗತ್ಯ ರಸವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಹೊಟ್ಟೆಯಲ್ಲಿ ಆಗುವ ಆಸಿಡ್ ಅನ್ನು ತಹಬಂದಿಯಲ್ಲಿ ಇಡಲು ಅನುಕೂಲವಾಗುವ ರಸವನ್ನು ಇದು ಉತ್ಪತ್ತಿ ಮಾಡುತ್ತದೆ. ಪರಿಣಾಮವಾಗಿ ಜಠರದ ಹುಣ್ಣು ಮತ್ತಿತರ ಅಸ್ವಸ್ಥತೆಯನ್ನು ತಡೆಗಟ್ಟುತ್ತದೆ.

2.ಹೃದಯರಕ್ತನಾಳೀಯ ಅರೋಗ್ಯ

2.ಹೃದಯರಕ್ತನಾಳೀಯ ಅರೋಗ್ಯ

ಕಪ್ಪು ಏಲಕ್ಕಿ ಹೃದಯದ ಆರೋಗ್ಯ ಕಾಪಾಡುತ್ತದೆ.ಏಲಕ್ಕಿ ಹೃದಯದ ಲಯವನ್ನು ನಿಯಂತ್ರಣದಲ್ಲಿಡುವುದರಿಂದ ಇದು ರಕ್ತದೊತ್ತಡ ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ.ಕಪ್ಪು ಏಲಕ್ಕಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.

3.ಉಸಿರಾಟದ ಅರೋಗ್ಯ ಕಾಪಾಡುತ್ತದೆ

3.ಉಸಿರಾಟದ ಅರೋಗ್ಯ ಕಾಪಾಡುತ್ತದೆ

ನೀವು ಉಸಿರಾಟದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಕಪ್ಪು ಏಲಕ್ಕಿಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಉಸಿರಾಟದ ವ್ಯಾಧಿಗಳಾದ ನಾಯಿಕೆಮ್ಮು, ಅಸ್ತಮಾ, ಬ್ರಾಂಕೈಟಿಸ್, ಶ್ವಾಸಕೋಶದ ಕ್ಷಯ ಮುಂತಾದವುಗಳನ್ನು ನಿಯಂತ್ರಿಸುವ ಗುಣ ಏಲಕ್ಕಿಯಲ್ಲಿದೆ. ಇದು ಶ್ವಾಸನಾಳವನ್ನು ಬೆಚ್ಚಗಾಗಿಸಿ ಗಾಳಿಯ ಪ್ರಸರಣದ ಮೂಲಕ ಶ್ವಾಸಕೋಶದ ಉಸಿರಾಟವನ್ನು ಸುಲಭವಾಗಿಸುತ್ತದೆ.

4.ಬಾಯಿಯ ಅರೋಗ್ಯ

4.ಬಾಯಿಯ ಅರೋಗ್ಯ

ಹಲವಾರು ದಂತ ಸಂಬಂಧಿ ಸಮಸ್ಯೆಗಳಾದ ಹಲ್ಲಿನ ಸೋಂಕು, ಹುಳುಕು ಇವುಗಳಿಗೆ ಕಪ್ಪು ಏಳಕ್ಕಿಯಿಂದ ಪರಿಹಾರ ಕಂಡುಕೊಳ್ಳಬಹುದು. ಏಲಕ್ಕಿಯ ಘಾಟಿನಿಂದ ಕೂಡಿದ ಪರಿಮಳವು ಬಾಯಿಯ ವಾಸನೆಯನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ.

5.ಮೂತ್ರದ ಅರೋಗ್ಯ

5.ಮೂತ್ರದ ಅರೋಗ್ಯ

ಕಪ್ಪು ಏಲಕ್ಕಿ ಮೂತ್ರದ ಸಮಸ್ಯೆ ನಿವಾರಿಸಿ ಮೂತ್ರಪಿಂಡವನ್ನು ಆರೋಗ್ಯವಾಗಿ ಕಾಪಾಡುವಲ್ಲಿ ಸಹಕರಿಸುತ್ತದೆ.

6.ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ:

6.ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ:

ಇದು ಸ್ತನ, ಅಂಡಾಶಯ ಮುಂತಾದ ಕ್ಯಾನ್ಸರ್ ನ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಈ ಕಪ್ಪು ಏಲಕ್ಕಿ ದೇಹದಲ್ಲಿ ಗ್ಲುಟಾಥಿಯೋನ್ ಪ್ರಮಾಣವನ್ನು ಹೆಚ್ಚಿಸಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ.

7.ಕಲ್ಮಶ ಹೋಗಲಾಡಿಸುತ್ತದೆ

7.ಕಲ್ಮಶ ಹೋಗಲಾಡಿಸುತ್ತದೆ

ಅಧ್ಯಯನದ ಪ್ರಕಾರ ಕಪ್ಪು ಏಲಕ್ಕಿ ದೇಹವನ್ನು ಶುದ್ಧಿಗೊಳಿಸುವಲ್ಲಿ ಸಹಕಾರಿ. ಇದು ರಕ್ತದಿಂದ ಕೆಫಿನ್ ಅಂಶವನ್ನು ತೆಗೆದುಹಾಕುವ ಗುಣವನ್ನು ಹೊಂದಿರುವುದರಿಂದ ದೇಹದ ಕಲ್ಮಶಗಳನ್ನು ಹೋಗಲಾಡಿಸಿ ಶುದ್ಧಿಗೊಳಿಸುತ್ತದೆ.

8.ಅರವಳಿಕೆ ಗುಣಲಕ್ಷಣ ಹೊಂದಿದೆ

8.ಅರವಳಿಕೆ ಗುಣಲಕ್ಷಣ ಹೊಂದಿದೆ

ಕಪ್ಪು ಏಲಕ್ಕಿಯಿಂದ ತಯಾರಿಸಲಾದ ತೈಲ ಅರವಳಿಕೆ ಮತ್ತು ನಿದ್ರಾಜನಕವಾಗಿ ಕೆಲಸಮಾಡುತ್ತದೆ. ತಲೆನೋವು ಇನ್ನಿತರ ನೋವುಗಳಿಗೆ ತಕ್ಷಣ ಪರಿಹಾರವನ್ನು ಒದಗಿಸುವ ಗುಣ ಈ ಏಳಕ್ಕಿಯಲ್ಲಿದೆ.ಕಪ್ಪು ಏಲಕ್ಕಿಯ ಎಣ್ಣೆ ಒತ್ತಡ ಮತ್ತು ಆಯಾಸವನ್ನು ಕೂಡ ನಿವಾರಿಸುತ್ತದೆ.

9.ಸೋಂಕುನಿವಾರಕ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣ ಹೊಂದಿದೆ

9.ಸೋಂಕುನಿವಾರಕ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣ ಹೊಂದಿದೆ

ಕಪ್ಪು ಏಲಕ್ಕಿ ಸುಮಾರು 14 ವಿವಿಧ ಜಾತಿಯ ಕೀಟಗಳನ್ನು ನಾಶಮಾಡುವ ಗುಣವನ್ನು ಹೊಂದಿದೆ.ಆದ್ದರಿಂದ ಇದರ ಸೇವನೆ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ.

10.ರಕ್ತದ ಪರಿಚಲನೆ ಹೆಚ್ಚಿಸುತ್ತದೆ

10.ರಕ್ತದ ಪರಿಚಲನೆ ಹೆಚ್ಚಿಸುತ್ತದೆ

ಕಪ್ಪು ಏಲಕ್ಕಿಯಲ್ಲಿ ವಿಟಮಿನ್ ಸಿ,ಖನಿಜಾಂಶ,ಪೊಟ್ಯಾಷಿಯಂ ಮತ್ತು antioxidant ಗಳು ಹೇರಳವಾಗಿವೆ.ಇದು ನಿಮ್ಮ ಅಂತರಿಕ ವ್ಯಯಸ್ಥೆಯನ್ನು ವಿಷಕಾರಿ ವಸ್ತುಗಳಿಂದ ಕಾಪಾಡಿ ರಕ್ತ ಪರಿಚಲನೆಯನ್ನು ಸುಧಾರಿಸಿ ದೇಹವನ್ನು ಆರೋಗ್ಯಯುತವಾಗಿ ಇರಿಸಲು ಸಹಾಯ ಮಾಡುತ್ತದೆ.ನಿಮ್ಮ ಚರ್ಮ ನುಣುಪಾಗಿ ತಾರುಣ್ಯಭರಿತರಾಗಿ ಕಾಣಲು ಪ್ರತಿದಿನ ಏಲಕ್ಕಿ ಬಳಸಲು ಪ್ರಾರಂಭಿಸಿ.

11.ಕಾಂತಿಯುತ ಚರ್ಮ ಪಡೆಯಿರಿ

11.ಕಾಂತಿಯುತ ಚರ್ಮ ಪಡೆಯಿರಿ

ಕಪ್ಪು ಏಲಕ್ಕಿ ಕೇವಲ ತಾರುಣ್ಯದಿಂದ ಕಾಣುವಂತೆ ಮಾತ್ರವಲ್ಲ ಕಾಂತಿಯುತ ಚರ್ಮವನ್ನು ನೀಡುವ ಗುಣವನ್ನು ಕೂಡ ಹೊಂದಿದೆ.

12.ಚರ್ಮದ ಅಲರ್ಜಿಗೆ ಮದ್ದು

12.ಚರ್ಮದ ಅಲರ್ಜಿಗೆ ಮದ್ದು

ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣ ಈ ಕಪ್ಪು ಏಲಕ್ಕಿಯಲ್ಲಿ ಇರುವುದರಿಂದ ಚರ್ಮದ ಅಲರ್ಜಿಗೆ ಮದ್ದಾಗಿ ಇದನ್ನು ಬಳಸಬಹುದು.

13.ಬಲಯುತವಾದ ಕೂದಲು ಪಡೆಯಲು

13.ಬಲಯುತವಾದ ಕೂದಲು ಪಡೆಯಲು

ಕಪ್ಪು ಏಲಕ್ಕಿಯಲ್ಲಿರುವ anti-oxidative ಕೂದಲು ಮತ್ತು ನೆತ್ತಿಗೆ ಪೋಷಣೆಯನ್ನು ನೀಡುತ್ತದೆ.ಇದರ ಪರಿಣಾಮವಾಗಿ ನೀವು ಬಲಯುತವಾದ,ಕಾಂತಿಯುತವಾದ ಕೂದಲನ್ನು ಪಡೆಯಬಹುದು.

14.ನೆತ್ತಿಯ ಸೋಂಕುಗಳಿಗೆ ಪರಿಹಾರ

14.ನೆತ್ತಿಯ ಸೋಂಕುಗಳಿಗೆ ಪರಿಹಾರ

ಇದರಲ್ಲಿರುವ ನಂಜುನಿರೋಧಕ ಗುಣ ಕೂದಲ ಬುಡದಲ್ಲಾಗುವ ಸೋಂಕುಗಳಿಗೆ ಪರಿಹಾರ ಒದಗಿಸುತ್ತದೆ.

15.ಹೀಟ್ ಸ್ಟ್ರೋಕ್ ಗೆ ಪರಿಹಾರ

15.ಹೀಟ್ ಸ್ಟ್ರೋಕ್ ಗೆ ಪರಿಹಾರ

ಬೇಸಿಗೆಯ ಧಗೆಯಿಂದ ಉಂಟಾಗುವ ಹೀಟ್ ಸ್ಟ್ರೋಕ್ ಸಮಸ್ಯೆಗೆ ಈ ಕಪ್ಪು ಏಲಕ್ಕಿ ಬಳಸುವುದರಿಂದ ಪರಿಹಾರ ಕಂಡುಕೊಳ್ಳಬಹುದು.

English summary

15 Best Benefits Of Black Cardamom

Black cardamom is a small herb with strong aromatic fragrances and can be availed in two varieties – ‘black cardamom’ and ‘green cardamom’. From promoting your heath to making your hair shiny, there are a number of ways this spice can be used.
X
Desktop Bottom Promotion