For Quick Alerts
ALLOW NOTIFICATIONS  
For Daily Alerts

ದಿನಾ ಸೌತೆಕಾಯಿ ತಿನ್ನಿ, ಡೋಂಟ್ ಮಿಸ್ ಇಟ್ ಓಕೆ?

By Super
|

ಸೌತೆಕಾಯಿಗಳು ಪ್ರಪಂಚದ ಅತೀ ಹೆಚ್ಚು ಉತ್ಪಾದಿತ ತರಕಾರಿಗಳ ಪೈಕಿ ನಾಲ್ಕನೆಯ ಸ್ಥಾನದಲ್ಲಿದ್ದು, ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಸ್ತುಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಆದ್ದರಿಂದಲೇ ಇದನ್ನು 'ಅತ್ಯುತ್ತಮ ಆಹಾರ' ಎಂದೂ ಗುರುತಿಸುವುದುಂಟು. ಮಾರ್ಕೆಟ್ ಗೆ ಹೋದಾಗ ನಿಮ್ಮ ಬೊಗಸೆಯ ತುಂಬಾ ಗಟ್ಟಿಯಾದ, ತಾಜಾ, ಮತ್ತು ಹಚ್ಚ ಹಸುರು ಬಣ್ಣವುಳ್ಳ ಒಂದಿಷ್ಟು ಸೌತೆಕಾಯಿಗಳನ್ನು ಆರಿಸಿಕೊಂಡು ಹಾಗೇ ನಿಮ್ಮ ಕೈಚೀಲದೊಳಗಡೆ ಇಳಿಯಬಿಡಿರಿ.

ಹಾಗೆಯೇ ಮಾಡಿದ್ದೀರಾ?! ಹಾಗಿದ್ದಲ್ಲಿ ನಿಮಗೆ ಅಭಿನಂದನೆಗಳು. ಏಕೆಂದರೆ, ಹಾಗೆ ಮಾಡುವುದರ ಮೂಲಕ ನೀವು ನಿಮಗಾಗಿ ಸಮೃದ್ಧ ಆರೋಗ್ಯಕರವಾದ ಗುಣಗಳುಳ್ಳ ಅಹಾರವಸ್ತುವೊಂದನ್ನು ತಂದಂತಾಯಿತು. ಸೌತೆಕಾಯಿಯನ್ನು ದಿನಾ ತಿಂದರೆ ಏನೆಲ್ಲಾ ಲಾಭ ಪಡೆಯಬಹುದೆಂದು ತಿಳಿಯಲು ಮುಂದೆ ಓದಿ:

ಸೌತೆಕಾಯಿಯು ನಿಮ್ಮ ಶರೀರವನ್ನು ಮರುಜಲಪೂರಣಗೊಳಿಸುತ್ತದೆ

ಸೌತೆಕಾಯಿಯು ನಿಮ್ಮ ಶರೀರವನ್ನು ಮರುಜಲಪೂರಣಗೊಳಿಸುತ್ತದೆ

ನೀವು ಬಿಡುವಿಲ್ಲದ ಕೆಲಸದ ಒತ್ತಡವುಳ್ಳವರಾಗಿದ್ದು, ಪದೇ ಪದೇ ನಿಮಗೆ ಸಾಕಷ್ಟು ನೀರನ್ನು ಕುಡಿಯುವುದು ಸಾಧ್ಯವಿಲ್ಲವಾದರೆ, ಈ ತಂಪಾದ ಸೌತೆಕಾಯಿಯನ್ನು ತಿಂದುಬಿಡಿರಿ. ಯಾಕೆಂದರೆ, ಇದರಲ್ಲಿ ಶೇ. 90 ರಷ್ಟು ನೀರಿನಂಶವಿದೆ. ಈ ಸೌತೆಕಾಯಿಯು ನಿಮಗಾದ ನೀರಿನ ನಷ್ಟವನ್ನು ಸಂತೋಷದಿಂದ ಭರಿಸುತ್ತದೆ.

ಅತೀ ಉಷ್ಣತೆಯ ವಿರುದ್ಧ ದೇಹದ ಹೊರಗೂ ಮತ್ತು ಒಳಗೂ ಹೋರಾಡುತ್ತದೆ

ಅತೀ ಉಷ್ಣತೆಯ ವಿರುದ್ಧ ದೇಹದ ಹೊರಗೂ ಮತ್ತು ಒಳಗೂ ಹೋರಾಡುತ್ತದೆ

ಸೌತೆಕಾಯಿಯ ಸೇವನೆಯು ನಿಮ್ಮನ್ನು ಹುಳಿತೇಗಿನಿಂದ (heartburn) ಮುಕ್ತಗೊಳಿಸುತ್ತದೆ. ಈ ಸೌತೆಕಾಯಿಯನ್ನು ನಿಮ್ಮ ತ್ವಚೆಯ ಮೇಲೆ ಇರಿಸಿದರೆ ಅಥವಾ ಲೇಪಿಸಿದರೆ, ನಿಮ್ಮ ತ್ವಚೆಯು ಸೌರಕಲೆಯಿಂದ (ಬಿಸಿಲಿನಿಂದ ಕಪ್ಪಾಗುವುದು) ವಿಮುಕ್ತಗೊಳ್ಳುತ್ತದೆ.

ಸೌತೆಕಾಯಿಯು ನಂಜುನಿವಾರಕವಾಗಿದೆ

ಸೌತೆಕಾಯಿಯು ನಂಜುನಿವಾರಕವಾಗಿದೆ

ಸೌತೆಕಾಯಿಯಲ್ಲಿರಬಹುದಾದ ಯಾವತ್ತೂ ಜಲವು ಒಂದು ಕಸಬರಿಕೆಯಂತೆ ವರ್ತಿಸಿ, ನಿಮ್ಮ ಶರೀರದ ತ್ಯಾಜ್ಯವನ್ನು ಗುಡಿಸಿ ನಿವಾರಿಸಿಬಿಡುತ್ತದೆ. ನಿಯಮಿತವಾದ ಸೌತೆಕಾಯಿಗಳ ಸೇವನೆಯು, ಮೂತ್ರಪಿಂಡದ ಕಲ್ಲುಗಳನ್ನೂ ಸಹ ಕರಗಿಸಿ ಬಿಡುತ್ತದೆ ಎಂದು ತಿಳಿದು ಬಂದಿದೆ.

ಸೌತೆಕಾಯಿಗಳು ನಿಮ್ಮ ದೈನಂದಿನ ಅವಶ್ಯಕತೆಯ ಅನ್ನಾಂಗಗಳನ್ನು ಪೂರೈಸುತ್ತದೆ

ಸೌತೆಕಾಯಿಗಳು ನಿಮ್ಮ ದೈನಂದಿನ ಅವಶ್ಯಕತೆಯ ಅನ್ನಾಂಗಗಳನ್ನು ಪೂರೈಸುತ್ತದೆ

ದಿನವೊಂದಕ್ಕೆ ನಮ್ಮ ಶರೀರಕ್ಕೆ ಅಗತ್ಯವಿರುವ ಹೆಚ್ಚಿನ ಎಲ್ಲಾ ವಿಟಮಿನ್ಸ್ ಸೌತೆಕಾಯಿಯು ಹೊಂದಿದೆ. ಇದರಲ್ಲಿ ಅನ್ನಾಂಗಗಳಾದ A, B, ಮತ್ತು C ಗಳಿದ್ದು, ಇವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸಂವರ್ಧಿಸಿ ನಿಮ್ಮನ್ನು ಉಲ್ಲಾಸಭರಿತರನ್ನಾಗಿಸಿ, ನಿಮ್ಮ ಶರೀರಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಸೌತೆಕಾಯಿಯನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿಸಲು, ಅದರ ರಸದೊಂದಿಗೆ ಪಾಲಕ್ ಸೊಪ್ಪು ಮತ್ತು ಕ್ಯಾರೆಟ್ ಅನ್ನು ಸೇರಿಸಿರಿ. ಸೌತೆಕಾಯಿಯಲ್ಲಿ ವಿಟಮಿನ್ C ಯ ಪ್ರಮಾಣವು ಉತ್ತಮ ಮಟ್ಟದಲ್ಲಿರುವುದರಿoದ ಇದನ್ನು ತ್ವಚೆಯ ಮೇಲೆ ಇರಿಸಿಕೊಳ್ಳಲು ಮರೆಯದಿರಿ. ದಿನನಿತ್ಯ ಅವಶ್ಯಕವಾದ ಸುಮಾರು ಶೇ. 12 ರಷ್ಟು ವಿಟಮಿನ್ C ಯನ್ನು ಸೌತೆಕಾಯಿಯು ಹೊಂದಿದೆ.

ಸೌತೆಕಾಯಿಯು ತ್ವಚೆಗೆ ಹಿತವನ್ನುಂಟು ಮಾಡುವ ಖನಿಜಗಳನ್ನು ಒದಗಿಸುತ್ತದೆ

ಸೌತೆಕಾಯಿಯು ತ್ವಚೆಗೆ ಹಿತವನ್ನುಂಟು ಮಾಡುವ ಖನಿಜಗಳನ್ನು ಒದಗಿಸುತ್ತದೆ

ಸೌತೆಕಾಯಿಯು ಪೊಟ್ಯಾಸಿಯಂ, ಮೆಗ್ನೀಷಿಯಂ, ಮತ್ತು ಸಿಲಿಕಾನ್ ಅನ್ನು ಸಮೃದ್ಧವಾಗಿ ಹೊಂದಿದೆ. ಆದ್ದರಿಂದಲೇ, ಜಲ ಚಿಕಿತ್ಸಕರು (spa) ಸೌತೆಕಾಯಿ ಆಧಾರಿತ ಚಿಕಿತ್ಸೆಗೆ ಮೊರೆಹೋಗುತ್ತಾರೆ.

ಸೌತೆಕಾಯಿಯು ಜೀರ್ಣಕಾರ್ಯಕ್ಕೆ ಮತ್ತು ತೂಕ ನಷ್ಟಕ್ಕೆ ಸಹಕಾರಿ

ಸೌತೆಕಾಯಿಯು ಜೀರ್ಣಕಾರ್ಯಕ್ಕೆ ಮತ್ತು ತೂಕ ನಷ್ಟಕ್ಕೆ ಸಹಕಾರಿ

ಸೌತೆಕಾಯಿಯಲ್ಲಿ ಅಧಿಕ ಜಲಾಂಶವಿದ್ದು, ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ, ತೂಕ ನಷ್ಟವನ್ನು ಹೊಂದಲು ಬಯಸುವವರಿಗೆ ಸೌತೆಕಾಯಿಯು ವರದಾನವಾಗಿದೆ. ಸೌತೆಕಾಯಿಗಳನ್ನು ಸೂಪುಗಳಲ್ಲಿ ಮತ್ತು ಸಲಾಡ್ ಗಳಲ್ಲಿ ಬಳಸಿರಿ. ಒಂದು ವೇಳೆ ಸೌತೆಕಾಯಿಯು ನಿಮ್ಮ ಇಷ್ಟದ ತಿನಿಸು ಅಲ್ಲವಾದರೆ, ನೀವು ನೀವು ಸೌತೆಕಾಯಿಯ ತುಣುಕುಗಳನ್ನು ಕಡ್ಡಿಯೊಂದಕ್ಕೆ ಸಿಕ್ಕಿಸಿ, ಅವುಗಳನ್ನು ಕಡಿಮೆ ಕೊಬ್ಬಿನಾಂಶವುಳ್ಳ, ಕೆನೆಯುಳ್ಳ ಮೊಸರಿನಲ್ಲಿ ಅದ್ದಿಯೂ ಸಹ ಸೇವಿಸಬಹುದು. ಸೌತೆಕಾಯಿಯ ತುಣುಕುಗಳನ್ನು ಜಗಿಯುವುದರಿಂದ ದವಡೆಗಳಿಗೆ ಉತ್ತಮ ವ್ಯಾಯಾಮವಾದoತಾಗುತ್ತದೆ ಜೊತೆಗೆ ಅದರ ನಾರಿನಂಶವು ಜೀರ್ಣಕ್ರಿಯೆಯಲ್ಲಿ ಬಹುವಾಗಿ ಸಹಕರಿಸುತ್ತದೆ. ಸೌತೆಕಾಯಿಯ ಪ್ರತಿದಿನದ ಬಳಕೆಯು ಬಹುಕಾಲದ ಮಲಬದ್ಧತೆಗೆ ಒಂದು ಸಾಧನ ಎಂದು ಪರಿಗಣಿಸಬಹುದು.

ನಿಮ್ಮ ಕಣ್ಣುಗಳಿಗೆ ಪುನಶ್ಚೇತನವನ್ನು ನೀಡುತ್ತದೆ

ನಿಮ್ಮ ಕಣ್ಣುಗಳಿಗೆ ಪುನಶ್ಚೇತನವನ್ನು ನೀಡುತ್ತದೆ

ತಂಪಾದ ಸೌತೆಯೊಂದರ ತುಣುಕನ್ನು ನಿಮ್ಮ ಊದಿಕೊಂಡ ಕಣ್ಣಿನ ಮೇಲಿರಿಸಿದರೆ, ಅದು ಹೊರನೋಟಕ್ಕೆ ಸೌಂದರ್ಯದ ಚಿಕಿತ್ಸೆಗೆ ಎಂದು ಅನಿಸಿದರೂ ಕೂಡ, ಸೌತೆಕಾಯಿಯು ತನ್ನ ಉರಿ ಪ್ರತಿಬಂಧಕ (anti-inflammatory) ಗುಣಗಳಿಂದಾಗಿ, ನಿಮ್ಮ ಕಣ್ಣಿನ ಉರಿಯೂತವನ್ನು ಕಡಿಮೆ ಮಾಡಬಲ್ಲುದಾಗಿದೆ.

ಕ್ಯಾನ್ಸರ್ ನ ವಿರುದ್ಧ ಹೊರಡುತ್ತದೆ

ಕ್ಯಾನ್ಸರ್ ನ ವಿರುದ್ಧ ಹೊರಡುತ್ತದೆ

ಸೌತೆಕಾಯಿಯಲ್ಲಿ secoisolariciresinol, lariciresinol ಮತ್ತು pinoresinol ಗಳನ್ನು ಒಳಗೊಂಡಿದೆ. ಈ ಮೂರು lignan ಗಳು ಪ್ರಬಲವಾಗಿ ಸೌತೆಕಾಯಿಯಲ್ಲಿ ಮುಪ್ಪರಿಗೊoಡಿದ್ದು, ಇವು ಅoಡಾಶಯ, ಸ್ತನಗಳು, ಪ್ರಾಸ್ಟೇಟ್ ಗ್ರಂಥಿ (ಪುರುಷರಲ್ಲಿ), ಮತ್ತು ಗರ್ಭಾಶಯದ ಕ್ಯಾನ್ಸರ್ ಗಳನ್ನೂ ಒಳಗೊಂಡಂತೆ, ಅನೇಕ ವಿಧದ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹ, ಕೊಲೆಸ್ಟ್ರಾಲ್ ದೂರವಿಡುತ್ತದೆ

ಮಧುಮೇಹ, ಕೊಲೆಸ್ಟ್ರಾಲ್ ದೂರವಿಡುತ್ತದೆ

ಸೌತೆಕಾಯಿಯು ಮಧುಮೇಹವನ್ನು ಗುಣಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಸೌತೆಕಾಯಿಯು, ಮೇದೋಜೀರಕ ಗ್ರಂಥಿಯ ಕೋಶಗಳು ಇನ್ಸುಲಿನ್ ಅನ್ನು ಉತ್ಪಾದಿಸಲು ಅಗತ್ಯವಾದ ಹಾರ್ಮೋನ್ ಅನ್ನು ಹೊಂದಿದ್ದು, ಈ ಇನ್ಸುಲಿನ್, ಮಧುಮೇಹ ರೋಗಿಗಳಿಗೆ ಲಾಭದಾಯಕವೆಂದು ಜನಜನಿತವಾಗಿದೆ. ಸೌತೆಕಾಯಿಯಲ್ಲಿ sterols ಎಂಬ ಸಂಯುಕ್ತ ವಸ್ತುವೊಂದಿದ್ದು, ಇದು ಶರೀರದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸಲು ಸಹಕಾರಿಯಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಸೌತೆಕಾಯಿಗಳು ಬಹಳಷ್ಟು ನಾರು, ಪೊಟ್ಯಾಸಿಯಂ, ಮತ್ತು ಮೆಗ್ನೀಷಿಯಂ ಅನ್ನು ಒಳಗೊಂಡಿವೆ. ಈ ಪೋಷಕಾಂಶಗಳು ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವತ್ತ ಕಾರ್ಯನಿರ್ವಹಿಸುತ್ತವೆ. ಈ ಕಾರಣದಿಂದಲೇ, ಸೌತೆಕಾಯಿಯು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಇವೆರಡಕ್ಕೂ ಚಿಕಿತ್ಸೆ ನೀಡಲು ಉತ್ತಮವಾಗಿದೆ.

ಸೌತೆಕಾಯಿಯು ನಿಮ್ಮ ಬಾಯಿಯನ್ನು ತಾಜಾವಾಗಿರಿಸುತ್ತದೆ

ಸೌತೆಕಾಯಿಯು ನಿಮ್ಮ ಬಾಯಿಯನ್ನು ತಾಜಾವಾಗಿರಿಸುತ್ತದೆ

ಸೌತೆಕಾಯಿಯ ರಸವು ರೋಗಪೀಡಿತ ವಸಡುಗಳನ್ನು ಗುಣಪಡಿಸಿ ಅವುಗಳನ್ನು ತಾಜಾಗೊಳಿಸುತ್ತದೆ. ಸೌತೆಯೊಂದರ ತುಣುಕೊಂದನ್ನು ನಿಮ್ಮ ನಾಲಗೆಯ ಸಹಾಯದಿಂದ ಬಾಯಿಯ ಒಳಮೇಲ್ಭಾಗಕ್ಕೆ ಅರ್ಧ ನಿಮಿಷದವರೆಗೆ ಒತ್ತಿ ಹಿಡಿದರೆ, ಅದರಲ್ಲಿರುವ phyto ರಾಸಾಯನಿಕಗಳು ನಿಮ್ಮ ಬಾಯಿಯ ದುರ್ವಾಸನೆಗೆ ಕಾರಣವಾದ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತದೆ.

ಸೌತೆಕಾಯಿಯು ಕೂದಲು ಮತ್ತು ಉಗುರುಗಳನ್ನು ನಯವಾಗಿರಿಸುತ್ತದೆ

ಸೌತೆಕಾಯಿಯು ಕೂದಲು ಮತ್ತು ಉಗುರುಗಳನ್ನು ನಯವಾಗಿರಿಸುತ್ತದೆ

ಸೌತೆಕಾಯಿಯಲ್ಲಿರುವ ಚಮತ್ಕಾರಿ ಖನಿಜವಾದ ಸಿಲಿಕಾವು ನಿಮ್ಮ ಕೂದಲು ಮತ್ತು ಉಗುರುಗಳನ್ನು ಹೊಳಪು ಮತ್ತು ಶಕ್ತಿಯುತವಾಗಿಸುತ್ತವೆ. ಇದರಲ್ಲಿರುವ ಗಂಧಕ ಮತ್ತು ಸಿಲಿಕಾಗಳು ನಿಮ್ಮ ಕೂದಲ ಬೆಳವಣಿಗೆಯನ್ನು ಪ್ರಚೋದಿಸುತ್ತವೆ.

ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ

ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ

ಸೌತೆಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ.

ಸೌತೆಕಾಯಿಯು ಸಿಲಿಕಾದ ಒಂದು ಉತ್ತಮ ಮೂಲವಾಗಿರುವುದರಿಂದ, ಇದು ಕೀಲುಗಳ ಅಂಗಾಂಶಗಳನ್ನು ಶಕ್ತಿಯುತಗೊಳಿಸುವುದರ ಮೂಲಕ ಸಂದುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಇದರ ರಸವನ್ನು ಕ್ಯಾರೆಟ್ ರಸದೊಂದಿಗೆ ಸೇರಿಸಿ ಸೇವಿಸಿದರೆ, ಅದು ಶರೀರದ ಯುರಿಕ್ ಆಮ್ಲಗಳ ಮಟ್ಟವನ್ನು ತಗ್ಗಿಸುವುದರ ಮೂಲಕ ಸಂದುಗಳು (ಕಾಲುಗಳ) ಮತ್ತು ಕೀಲುಗಳ ಉರಿಯೂತ ಮತ್ತು ನೋವಿನಿಂದ ವಿಮುಕ್ತಿಗೊಳಿಸುತ್ತದೆ.

ಹ್ಯಾಂಗ್ ಓವರ್ ನಿಂದ ಹೊರಬರುವಂತೆ ಮಾಡುತ್ತದೆ

ಹ್ಯಾಂಗ್ ಓವರ್ ನಿಂದ ಹೊರಬರುವಂತೆ ಮಾಡುತ್ತದೆ

ಸೌತೆಕಾಯಿಯು ನೀವು ತಟಸ್ಥಗೊಳ್ಳುವುದನ್ನು ಅರ್ಥಾತ್ ನಿಮ್ಮ ಜಾಡ್ಯವನ್ನು (hang over) ತಡೆಯುತ್ತದೆ.

ಬೆಳಗ್ಗಿನ ತಲೆಶೂಲೆಯನ್ನು ಅಥವಾ ಜಾಡ್ಯವನ್ನು ಹೋಗಲಾಡಿಸಲು ಅಥವಾ ತಪ್ಪಿಸಲು, ಮಲಗುವ ಮೊದಲು ಕೆಲವು ಸೌತೆಕಾಯಿಯ ತುಣುಕುಗಳನ್ನು ಸೇವಿಸಿರಿ. ಸೌತೆಕಾಯಿಗಳು ಸಾಕಷ್ಟು ಅನ್ನಾಂಗ B, ಸಕ್ಕರೆ, ಮತ್ತು electrolyte ಗಳನ್ನು ಹೊಂದಿದ್ದು, ಇವು ಅನೇಕ ಅವಶ್ಯಕ ಪೋಷಕಾಂಶಗಳನ್ನು ಮರುಪೂರಣಗೊಳಿಸುತ್ತವೆ ಹಾಗೂ ಜಾಡ್ಯದ ಮತ್ತು ತಲೆಶೂಲೆಯ ತೀವ್ರತೆಯನ್ನು ಕಡಿಮೆ ಮಾಡುತ್ತವೆ.

ಸೌತೆಕಾಯಿಗಳು ಮೂತ್ರಪಿಂಡಗಳನ್ನು ನಿಯಮಿತವಾಗಿರಿಸುತ್ತವೆ

ಸೌತೆಕಾಯಿಗಳು ಮೂತ್ರಪಿಂಡಗಳನ್ನು ನಿಯಮಿತವಾಗಿರಿಸುತ್ತವೆ

ಸೌತೆಕಾಯಿಯು ನಿಮ್ಮ ಶರೀರದ ಯೂರಿಕ್ ಆಮ್ಲದ ಮಟ್ಟವನ್ನು ತಗ್ಗಿಸಿ ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸುತ್ತವೆ.

English summary

14 Reasons You Should Start Eating Cucumber

Pick a handful of firm, dark green cucumbers and drop them into your shopping cart. Congratulations! You have just bought yourself stuff full of good health.
X
Desktop Bottom Promotion