For Quick Alerts
ALLOW NOTIFICATIONS  
For Daily Alerts

ಅತಿಯಾಗಿ ತಿನ್ನುವುದಕ್ಕೆ ಕಡಿವಾಣ ಹಾಕಬೇಕೆ?

|

ನಮ್ಮಲ್ಲಿ ಹಲವರು ಬಕಾಸುರನಂತೆ ತಿನ್ನಲೆಂದೆ ಹುಟ್ಟಿ ಬಂದವರಂತೆ ತಿನ್ನುತ್ತಿರುತ್ತಾರೆ. ಆದರೆ ಮಿತಾಹಾರ ಸೇವನೆಯು ಆರೋಗ್ಯಕರವಾದ ಮತ್ತು ಆನಂದದಾಯಕ ಜೀವನ ಶೈಲಿಗೆ ಆಧಾರಸ್ತಂಭವಾಗಿದೆ.

ಅದಕ್ಕಾಗಿಯೇ ಕನ್ನಡದಲ್ಲಿ ಗಾದೆಯೇ ಇದೆಯಲ್ಲ " ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ವೆಂದು. ಮಿತವಾಗಿ ತಿನ್ನಲು ಆಲೋಚಿಸುತ್ತಿರುವವರಿಗೆ ನಾವು ಕೆಲವು ಮಾರ್ಗೋಪಾಯಗಳನ್ನು ನೀಡಿದ್ದೇವೆ. ಆ ಮಾರ್ಗವನ್ನು ಅನುಸರಿಸಿದರೆ ಮಿತವಾಗಿ ತಿನ್ನುವಿರಿ, ಸಮತೂಕದಿಂದ ಆರೋಗ್ಯವಾಗಿರಿ.

1. ಸಂಗಾತಿಯನ್ನು ಹುಡುಕಿ

1. ಸಂಗಾತಿಯನ್ನು ಹುಡುಕಿ

ಮಿತವಾಗಿ ತಿನ್ನಲು ಇರುವ ಅತ್ಯುತ್ತಮ ಮಾರ್ಗ ಸಂಗಾತಿಯನ್ನು ಹುಡುಕುವುದು. ನೀವು ನಿಜವಾಗಿಯು ತಿಂಡಿಪೋತರಾಗಿದ್ದಲ್ಲಿ ಮೊದಲು ಯಾರಾದರು ಸಂಗಾತಿಯನ್ನು ಹುಡುಕಿ. ಆ ನೆಪದಲ್ಲಾದರು ನೀವು ಅವರ ಮುಂದೆ ಚೆನ್ನಾಗಿ ಕಾಣಲು, ಮತ್ತು ನಿಮ್ಮ ಆಕರ್ಷಣೆಯನ್ನು ಉಳಿಸಿಕೊಳ್ಳುವ ಸಲುವಾಗಿಯಾದರು ಸ್ವಲ್ಪ ಕಡಿಮೆ ತಿನ್ನಲು ಆರಂಭಿಸುತ್ತೀರಾ.

2. ಆಸಕ್ತಿಕರವಲ್ಲದ ಆಹಾರ

2. ಆಸಕ್ತಿಕರವಲ್ಲದ ಆಹಾರ

ನಿಮಗೇನಾದರು ಕೆಲಸವಿಲ್ಲದೆ ಆರಾಮವಾಗಿದ್ದಾಗ ಹಸಿವಾದರೆ ಅಥವಾ ಆಗಾಗ ಹಸಿವಾಗುತ್ತಲೆ ಇದ್ದರೆ, ಪ್ರಪಂಚದಲ್ಲಿನ ತಿಂಡಿಗಳಲ್ಲಿಯೇ ನಿಮಗೆ ಇಷ್ಟವಾಗದ ಅಥವಾ ವಾಕರಿಕೆ ಬರುವಂತಹ ಆಹಾರಗಳನ್ನು ನೆನೆಸಿಕೊಳ್ಳಿ. ಆಗ ನಿಮ್ಮ ತಿನ್ನುವ ಚಟವು ತಾನೇ ತಾನಾಗಿ ಕಡಿಮೆಯಾಗಿ ಬೇರೇನಾದರು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೀರಿ.

3. ರಾತ್ರಿ ಹೊತ್ತು ಕುರುಕುಲು ತಿಂಡಿಯನ್ನು ತಿನ್ನದಿರುವುದು

3. ರಾತ್ರಿ ಹೊತ್ತು ಕುರುಕುಲು ತಿಂಡಿಯನ್ನು ತಿನ್ನದಿರುವುದು

ಟಿ.ವಿ ಗೆ ದಾಸರಾಗಿರುವ ಕೆಲವರು ರಾತ್ರಿ ಹೊತ್ತು ತಮ್ಮ ನೆಚ್ಚಿನ ಸಿನಿಮಾವನ್ನು ಅಮೋಘ 250ನೇ ಬಾರಿಗೆ ಬೇಕಾದರು ಯಾವುದೇ ಬೇಸರವಿಲ್ಲದೆ ಕುರುಕುಲು ತಿಂಡಿಯನ್ನು ತಿನ್ನುತ್ತ ನೋಡುತ್ತಿರುತ್ತಾರೆ. ಪ್ರತಿ ರಾತ್ರಿಯು ಹೀಗೆ ಆದರೆ ಅದು ಕಷ್ಟ ಕಷ್ಟ. ಹಾಗಾಗಿ ಈ ಟಿ.ವಿ ನೋಡುವ ಸಮಯವನ್ನು ಕಡಿಮೆ ಮಾಡಿ ಅಥವಾ ಆ ಸಮಯದಲ್ಲಿ ನಿಮ್ಮ ಸ್ನೇಹಿತರ ಜೊತೆ ಹರಟೆ ಹೊಡೆಯಿರಿ. ಹೀಗೆ ಮಾಡುವುದರಿಂದ ತಿನ್ನಬಾರದ ಸಮಯದಲ್ಲಿ ತಿನ್ನಬಾರದುದನ್ನು ತಿನ್ನುವುದನ್ನು ತಡೆಯಬಹುದು ಹಾಗು ಮಿತವಾಗಿ ತಿನ್ನುವುದನ್ನು ಪರಿಣಾಮಕಾರಿಯಾಗಿ ಪ್ರಾರಂಭಿಸಬಹುದು.

4.ವೀಡಿಯೊಗಳು

4.ವೀಡಿಯೊಗಳು

ಕೆಲವೊಮ್ಮೆ ಕೇವಲ ಕಲ್ಪನೆಗಳು ಕೆಲಸಕ್ಕೆ ಬರುವುದಿಲ್ಲ. ಅದಕ್ಕಾಗಿ ನೀವು ಕಡಿಮೆ ತಿನ್ನುವುದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೆಲವು ವೀಡಿಯೊಗಳನ್ನು ವೀಕ್ಷಿಸಬೇಕಾಗುತ್ತದೆ. ನಿಮಗೆ ವಾಕರಿಕೆ ತರಿಸುವಂತಹ ಅಥವಾ ಅಸಹ್ಯ ಮೂಡಿಸುವಂತಹ ವಿಡೀಯೊಗಳನ್ನು ನೋಡಿ. ಅಂದರೆ ಜಿರಲೆ ತಿನ್ನುವವರು, ಹುಳು- ಹುಪ್ಪಟೆಗಳನ್ನು ತಿನ್ನುವವರು ಅಥವಾ ನಿಮಗೆ ಹಿಡಿಸದಂತಹ ಯಾವುದೇ ರೀತಿಯ ಪದಾರ್ಥಗಳನ್ನು ತಿನ್ನುತ್ತಿರುವಂತಹವರ ವೀಡಿಯೊಗಳನ್ನು ವೀಕ್ಷಿಸಿ. ಆಗ ನಿಮ್ಮಷ್ಟಕ್ಕೆ ನೀವೆ ಸ್ವಲ್ಪ ಹೊತ್ತಿನವರೆಗೆ ಯಾವುದನ್ನು ತಿನ್ನಲು ಹೋಗುವುದಿಲ್ಲ.

5. ಮೊದಲು ಸೂಪ್

5. ಮೊದಲು ಸೂಪ್

ನೀವು ಊಟಕ್ಕೆ ಹೋಗುವ ಮೊದಲು, ಒಂದು ಲೋಟ ನೀರು ಅಥವಾ ನಿಮಗೆ ಇಷ್ಟವಾದಂತಹ ಸೂಪ್‍ ಅನ್ನು ಒಂದು ಬಟ್ಟಲು ಕುಡಿಯಿರಿ. ಹೀಗೆ ಮಾಡುವುದರಿಂದ ನಿಮ್ಮ ಊಟವನ್ನು ನೀವು ಸ್ವಲ್ಪ ಕಡಿಮೆಯೆ ತಿನ್ನುತ್ತೀರಿ. ಏಕೆಂದರೆ ನಿಮ್ಮ ಹೊಟ್ಟೆಯಲ್ಲಿರುವ ದ್ರವಾಹಾರವು ನಿಮಗೆ ಭಾಗಶಃ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.

6.ನಿಮ್ಮ ತಾಯಿಯವರ ಸಹಾಯ ಪಡೆಯಿರಿ

6.ನಿಮ್ಮ ತಾಯಿಯವರ ಸಹಾಯ ಪಡೆಯಿರಿ

ನಿಮ್ಮ ತಾಯಿಯವರಿಗೆ ನಿಮ್ಮ ಬಗ್ಗೆ ಕಾಳಜಿಯಿರುವುದಾದರೆ, ಅಥವಾ ಅವರೇನಾದರು ನಿಮಗೆ ಯೋಗ್ಯ ಸಂಗಾತಿಯನ್ನು ಹುಡುಕುತ್ತಿದ್ದರೆ, ನಿಮಗೆ ಎಣ್ಣೆ, ತುಪ್ಪ ಮತ್ತು ಬೆಣ್ಣೆಗಳು ಮಿತವಾಗಿರುವ ಆಹಾರವನ್ನು ತಯಾರಿಸುವಂತೆ ಮತ್ತು ಅದನ್ನು ನಿಮಗೆ ಮಿತ ಪ್ರಮಾಣದಲ್ಲಿ ಬಡಿಸುವಂತೆ ಅವರಿಗೆ ಹೇಳಿ. ಆಕೆಯೇನಾದರು ದೃಢ ನಿರ್ಧಾರ ತೆಗೆದುಕೊಂಡರೆ ನೀವು ತಿನ್ನುವ ಆಹಾರದ ಪ್ರಮಾಣ ಕಡಿಮೆಯಾಗುವುದು ಖಂಡಿತ.

7. ಚ್ಯೂಯಿಂಗ್ ಗಮ್ ಅಗಿಯಿರಿ

7. ಚ್ಯೂಯಿಂಗ್ ಗಮ್ ಅಗಿಯಿರಿ

ಒಂದು ವೇಳೆ ನಿಮ್ಮ ಸುತ್ತ-ಮುತ್ತಲು ಇರುವ ತಿಂಡಿ ಪದಾರ್ಥಗಳನ್ನು ನೀವು ತಿನ್ನುವ ಬಯಕೆಯನ್ನು ನೀವು ನಿಯಂತ್ರಿಸಲಾರದೆ ಹೋದಲ್ಲಿ, ನಿಮ್ಮ ಜೇಬಿನಿಂದ ಚ್ಯೂಯಿಂಗ್ ಗಮ್ ತೆಗೆದು ಅಗಿಯಿರಿ. ಆಗ ನಿಮ್ಮ ಗಮನವನ್ನು ಬೇರೆಡೆ ಕೇಂದ್ರೀಕರಿಸಿ ತಿನ್ನುವುದನ್ನು ತಪ್ಪಿಸಿಕೊಳ್ಳಬಹುದು.

8.

8. "ಯೋಗ್ಯ" ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು

ನೀವು ಯಾರ ಜೊತೆಗೆ ನಿಮ್ಮ ದಿನವನ್ನು ಕಳೆಯುತ್ತೀರೋ ಅವರ ಹಾಗೆಯೆ ನಿಮ್ಮ ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತೀರಿ. ಅವರ ಹವ್ಯಾಸ, ಅವರ ಇಷ್ಟ ಮತ್ತು ಕಷ್ಟಗಳನ್ನು ನಿಮಗೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ನಿಮ್ಮ ಮೇಲೆ ಪ್ರಭಾವ ಬೀರಿರುತ್ತವೆ. ಹಾಗಾಗಿ ನೀವೇನಾದರು ಊಟಕ್ಕೆ ಹೋಗುವುದಾದರೆ ಜೊತೆಯಲ್ಲಿ ಒಂದು ಹುಡುಗಿಯನ್ನು ಕರೆದೊಯ್ಯಿ. ಆಗ ಆಕೆ ತಟ್ಟೆಯಲ್ಲಿರುವ ಲಘು ಆಹಾರವನ್ನು ನೋಡಿಯಾದರು ನೀವು ತಿನ್ನುವುದನ್ನು ಕಡಿಮೆ ಮಾಡುತ್ತೀರಾ.

9. ದುಬಾರಿ ಡಯೆಟೇಷಿಯನ್‍ರ ಬಳಿಗೆ ಹೋಗಿ ಬನ್ನಿ

9. ದುಬಾರಿ ಡಯೆಟೇಷಿಯನ್‍ರ ಬಳಿಗೆ ಹೋಗಿ ಬನ್ನಿ

ನೀವೇನಾದರು ಕಡಿಮೆ ತಿನ್ನುವ ಅಭ್ಯಾಸವನ್ನು ನಿರಂತರವಾಗಿ ಮಾಡಬೇಕೆಂದರೆ, ಒಬ್ಬ ದುಬಾರಿ ಡಯೆಟೇಷಿಯನ್‍ರ ಬಳಿಗೆ ಹೋಗಿ ಸಲಹೆ ಪಡೆಯಿರಿ. ಏಕೆಂದರೆ ಅವರಿಗೆ ನೀವು ಪಾವತಿಸುವ ದುಬಾರಿ ಶುಲ್ಕದ ಕಾರಣದಿಂದಾಗಿಯಾದರು ಪಥ್ಯವನ್ನು ಚಾಚೂ ತಪ್ಪದೆ ಮಾಡುತ್ತೀರ. ಇಲ್ಲವಾದಲ್ಲಿ ನಿಮ್ಮ ಹಣ ಮತ್ತು ಸಮಯ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ ಎಂಬ ಭಾವನೆ ನಿಮ್ಮನ್ನು ಕಾಡುತ್ತಿರುತ್ತದೆ.

10. ತಿನ್ನಲು ಸ್ಪೂನ್ ಬಳಸುತ್ತೀರೋ, ಕೈ ಬಳಸುತ್ತೀರೋ

10. ತಿನ್ನಲು ಸ್ಪೂನ್ ಬಳಸುತ್ತೀರೋ, ಕೈ ಬಳಸುತ್ತೀರೋ

ಒಂದು ಕುತೂಹಲಕರವಾದ ಅಧ್ಯಯನದಲ್ಲಿ ಹೊರಬಿದ್ದ ಸಂಗಾತಿಯೇನೆಂದರೆ, ಯಾರು ಕೈಯಲ್ಲಿ ಅಥವಾ ಚಮಚ, ಪೋರ್ಕ್ ಗಳಲ್ಲಿ ಊಟಮಾಡಲು ಇಷ್ಟ ಪಡುತ್ತಾರೋ ಅವರು ಕೈ ಬದಲಿಗೆ ಚಮಚ ಅಥವಾ ಪೋರ್ಕ್ ಬದಲಿಗೆ ಕೈಯನ್ನು ಬಳಸಿದರೆ, ಅವರು ತಿನ್ನುವ ಆಹಾರ ಪ್ರಮಾಣವು ಎಂದಿಗಿಂತ ಕಡಿಮೆಯಿರುತ್ತದೆ ಎಂದು ಸಾಭೀತಾಗಿದೆ. ಹಾಗಾಗಿ ತಿನ್ನಲು ಬದಲಿ ಸಾಧನಗಳನ್ನು ಬಳಸಿ.

11. ಗಾಢವಾದ ಬಣ್ಣದ ತಟ್ಟೆಗಳನ್ನು ಬಳಸಿ

11. ಗಾಢವಾದ ಬಣ್ಣದ ತಟ್ಟೆಗಳನ್ನು ಬಳಸಿ

ಬಣ್ಣದ ಪ್ರಭಾವ ಮತ್ತು ಪರಿಣಾಮದ ಆಧಾರದ ಮೇಲೆ ನಿರೂಪಿತವಾಗಿರುವ ವಿಷಯವೇನೆಂದರೆ, ನೀವು ಊಟ ಮಾಡಲು ಗಾಢ ಕಪ್ಪು ಅಥವಾ ಕಡು ನೀಲಿ ಬಣ್ಣದ ತಟ್ಟೆಗಳನ್ನು ಬಳಸಿದಾದಲ್ಲಿ ನಿಮ್ಮ ಊಟವನ್ನು ಬೇಗ ತಿಂದು ಮುಗಿಸುವಿರಿ ಎಂದು ಹೇಳಲಾಗುತ್ತದೆ.

12. ಪ್ರೋಟಿನ್‍ಗಳಿಗೆ ಆಧ್ಯತೆ ನೀಡಿ

12. ಪ್ರೋಟಿನ್‍ಗಳಿಗೆ ಆಧ್ಯತೆ ನೀಡಿ

ನೀವೇನಾದರು ನಿಮ್ಮ ಊಟದಲ್ಲಿ ಪ್ರೋಟಿನ್‍ಗಳಿಗೆ ಆಧ್ಯತೆ ನೀಡದೆ ಇದ್ದರೆ, ಹಸಿವು ನಿಮ್ಮನ್ನು ಕಾಡದೆ ಬೀಡುವುದಿಲ್ಲ. ಆಗ ನೀವು ಹೆಚ್ಚಾಗಿ ತಿನ್ನಲು ತೊಡಗುತ್ತೀರಿ. ಆಗಾಗಿ ನಿಮ್ಮ ಆಹಾರದಲ್ಲಿ ಹೆಚ್ಚು ಪ್ರೋಟಿನ್ ಇರುವಂತೆ ನೋಡಿಕೊಳ್ಳಿ.

English summary

12 Innovative Ways To Eat Less | Tips For Health | ಮಿತವಾಗಿ ತಿನ್ನಲು 13 ಮಾರ್ಗಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Most of us are hardcore foodies and definitely live to eat! But moderation is a key word for a healthy and happy lifestyle. We bring to you 13 innovative ways of telling yourself, “Hey! Eat Less”.
X
Desktop Bottom Promotion