For Quick Alerts
ALLOW NOTIFICATIONS  
For Daily Alerts

ಥೈರಾಯ್ಡ್ ನಿಯಂತ್ರಣಕ್ಕೆ 12 ಸೂಪರ್ ಫುಡ್

|

ಥೈರಾಯ್ಡ್ ಕಾಯಿಲೆಯೂ ನಮ್ಮ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ನಲ್ಲಿ ವ್ಯತ್ಯಾಸದಿಂದ ಉಂಟಾಗುತ್ತದೆ. ಈ ಹಾರ್ಮೋನ್ ಗಳು ತುಂಬಾ ಚಟುವಿಟಕೆಯಿಂದ ಕೂಡಿದ್ದರೆ ಹೈಪರ್ ಥೈರಾಯ್ಡ್, ಕಡಿಮೆ ಚಟುವಿಕೆಯನ್ನು ಹೊಂದಿದ್ದರೆ ಹೈಪೋ ಥೈರಾಯ್ಡ್ ಎನ್ನಲಾಗುವುದು.

ಥೈರಾಯ್ಡ್ ಹಾರ್ಮೋನ್ ನಲ್ಲಿ ವ್ಯತ್ಯಾಸ ಬಂದರೆ ಜೀರ್ಣಕ್ರಿಯೆಯಲ್ಲಿ ತೊಂದರೆ ಕಂಡು ಬರುವುದು, ದೇಹದಲ್ಲಿ ಕ್ಯಾಲ್ಸಿಯಂ, ಐಯೋಡಿನ್ ಕೊರತೆ ಉಂಟಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಗಳನ್ನು ನಿಯಂತ್ರಣದಲ್ಲಿಡುವ ಮಾತ್ರೆ ಇದೆ. ದಿನಾ ಆ ಮಾತ್ರೆಗಳನ್ನು ತೆಗೆದುಕೊಂಡರೆ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಸರಿಯಾದ ರೀತಿಯಲ್ಲಿರುತ್ತದೆ, ಅಲ್ಲದೆ ಈ ಮಾತ್ರೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆಹಾರ ಪದ್ಧತಿಯ ಮೂಲಕವೂ ಥೈರಾಯ್ಡ್ ಷಟುವಟಿಕೆ ಸರಿಯಾಗಿ ನಡೆಯುವಂತೆ ಮಾಡಬಹುದು.

ಥೈರಾಯ್ಡ್ ಹಾರ್ಮೋನ್ ಗಳ ಉತ್ಪತ್ತಿ ಸರಿಯಾದ ಪ್ರಮಾಣದಲ್ಲಿಡುವ ಸಾಮರ್ಥ್ಯ ಕೆಲವೊಂದು ಆಹಾರಗಳಿಗಿವೆ. ಥೈರಾಯ್ಡ್ ಇರುವವರು ಈ ಕೆಳಗಿನ ಆಹಾರಗಳನ್ನು ತಿಂದರೆ ಅಧಿಕ ಪ್ರಯೋಜನವನ್ನು ಪಡೆಯಬಹುದು.

ಸ್ಟ್ರಾಬೆರಿ

ಸ್ಟ್ರಾಬೆರಿ

ಥೈರಾಯ್ಡ್ ಇರುವವರು ಐಯೋಡಿನ್ ಯುಕ್ತ ಆಹಾರವನ್ನು ತಿನ್ನಬೇಕು. ಸ್ಟ್ರಾಬೆರಿಯಲ್ಲಿ ಐಯೋಡಿನ್ ಅಂಶವಿರುವುದರಿಂದ ಥೈರಾಯ್ಡ್ ಇರುವವರು ಇದನ್ನು ತಿನ್ನುವುದು ಒಳ್ಳೆಯದು.

ಅಣಬೆ

ಅಣಬೆ

ಸೆಲೆನಿಯೋಮ್ ನ ಕೊರತೆ ಥೈರಾಯ್ಡ್ ಬರಲು ಪ್ರಮುಖ ಕಾರಣವಾಗಿದೆ. ಅಣಬೆಯಲ್ಲಿ ಸೆಲೆನಿಯೋಮ್(selenium) ಅಧಿಕವಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಕೂಡ ಸೆಲಿನಿಯೋಮ್ ಅಧಿಕವಿದೆ. ಆದ್ದರಿಂದ ದಿನಾ ಒಂದು ಎಸಳು ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು.

ಸೊಪ್ಪು

ಸೊಪ್ಪು

ಥೈರಾಯ್ಡ್ ಇರುವವರಿಗೆ ಮಲಬದ್ಧತೆ ಸಮಸ್ಯೆ ಕಂಡು ಬರುತ್ತದೆ.ಸೊಪ್ಪಿನಲ್ಲಿ ವಿಟಮಿನ್, ಪ್ರೊಟೀನ್, ಖನಿಜಾಂಶ ಹಾಗೂ ಒಮೆಗಾ 3 ಕೊಬ್ಬಿನಂಶವಿರುತ್ತದೆ. ಇದನ್ನು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ.

ಮಾಂಸಾಹಾರ

ಮಾಂಸಾಹಾರ

ಕಡಿಮೆ ಕೊಬ್ಬಿನಂಶವಿರುವ ಮಾಂಸಾಹಾರ ಕೂಡ ಥೈರಾಯ್ಡ್ ಇರುವವರು ಸೇವಿಸುವುದು ಒಳ್ಳೆಯದು.

 ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲ ಐಯೋಡಿನ್ ಕೂಡ ಇರುವುದರಿಂದ ಇದನ್ನು ತಿಂದರೆ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಯಾಗುವುದು.

 ಧಾನ್ಯಗಳು

ಧಾನ್ಯಗಳು

ಕೆಂಪಕ್ಕಿ ಅನ್ನ, ಬಾರ್ಲೆ, ಓಟ್ಸ್ ಇವುಗಳಲ್ಲಿ ವಿಟಮಿನ್ ಬಿ ಅಧಿಕವಿರುತ್ತದೆ. ಇವನ್ನು ತಿಂದರೆ ಥೈರಾಯ್ಡ್ ನಿಂದ ಕುತ್ತಿಗೆ ದಪ್ಪವಾಗುವುದನ್ನು ತಡೆಗಟ್ಟುತ್ತದೆ.

ಬ್ರೊಕೋಲಿ

ಬ್ರೊಕೋಲಿ

ಬ್ರೊಕೋಲಿ ತಿಂದರೆ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಕೆ ಅಡಚಣೆ ತರುವ ರಾಸಾಯನಿಕಗಳನ್ನು ಕಡಿಮೆ ಮಾಡುತ್ತದೆ.

ಮೀನು

ಮೀನು

ಮೀನಿನಲ್ಲಿ ಐಯೋಡಿನ್ ಅಂಶವಿರುವುದರಿಂದ ಮೀನು ತಿನ್ನುವುದು ತುಂಬಾ ಒಳ್ಳೆಯದು. ಪ್ರತೀದಿನ ಮೀನು ತಿಂದರೆ ಥೈರಾಯ್ಡ್ ಮಾತ್ರೆ ತೆಗೆದುಕೊಳ್ಳದಿದ್ದರೂ ಥೈರಾಯ್ಡ್ ಹಾರ್ಮೋನ್ ಗಳು ನಿಯಂತ್ರಣದಲ್ಲಿಡುತ್ತದೆ.

ಲಿವರ್ ಕೂಡ ಥೈರಾಯ್ಡ್ ಹಾರ್ಮೋನ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

ಟೊಮೆಟೊ

ಟೊಮೆಟೊ

ವಿಟಮಿನ್ ಸಿ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ವಿಟಮಿನ್ ಸಿ ಇರುವ ಆಹಾರಗಳು ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ತೆಂಗಿನೆಣ್ಣೆ ಕೂಡ ಥೈರಾಯ್ಡ್ ಹಾರ್ಮೋನ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

 ಮೃದ್ವಂಗಿಗಳು

ಮೃದ್ವಂಗಿಗಳು

ಇದರಲ್ಲಿ ತಾಮ್ರದಂಶ ಅಧಿಕವಿದ್ದು ಥೈರಾಯ್ಡ್ ಉತ್ಪತ್ತಿಯನ್ನು ಸಾಮಾನ್ಯ ಸ್ಥಿತಿಗೆ ತರುವಂತೆ ಮಾಡುತ್ತದೆ.

English summary

12 Healthy Foods For A Thyroid Diet | Tips For health | ಥೈರಾಯ್ಡ್ ಆಹಾರಕ್ರಮಕ್ಕೆ 12 ಸೂಪರ್ ಫುಡ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

The thyroid gland is located just below the voice box. The 2-inch long gland with two lobes regulates the balance of body's metabolism and calcium. you can also treat hyperthyroidism and hypothyroidism naturally by including some thyroid healthy foods in your diet.
X
Desktop Bottom Promotion