For Quick Alerts
ALLOW NOTIFICATIONS  
For Daily Alerts

ಸ್ಪ್ರಿಂಗ್ ಈರುಳ್ಳಿ ತಿನ್ನಿ, 12 ಆರೋಗ್ಯ ಲಾಭ ಪಡೆಯಿರಿ

By Super
|

ಸ್ಪ್ರಿಂಗ್ ಈರುಳ್ಳಿ ಅತ್ಯಂತ ಜನಪ್ರಿಯ ತರಕಾರಿ ಮತ್ತು ಅದು ಬಿಳಿ, ಹಳದಿ ಮತ್ತು ಕೆಂಪು ಸೇರಿದಂತೆ ಬೇರೆ ಬೇರೆ ವಿಧಗಳಲ್ಲಿ ದೊರಕುತ್ತವೆ. ಇದು ಮುಟ್ಟಲು ಮೃದುವಾಗಿರುತ್ತದೆ ಮತ್ತು ರುಚಿಯಲ್ಲಿ ಬಹಳ ಉತ್ತಮವಾಗಿದ್ದು ಹೇರಳ ಪೋಷಕಾಂಶಗಳಿಂದ ಕೂಡಿವೆ. ಬಹಳ ವರ್ಷಗಳಿಂದ ಚೀನೀ ಸಾಂಪ್ರದಾಯಿಕ ಔಷಧಿಗಳಲ್ಲಿ ಇದನ್ನು ಬಳಸುತ್ತಿದ್ದಾರೆ. ಈರುಳ್ಳಿಯಲ್ಲಿರುವಂತೆಯೇ ಸ್ಪ್ರಿಂಗ್ ಈರುಳ್ಳಿಯಲ್ಲೂ ಸಹ ಗಂಧಕದ ಪ್ರಮಾಣ ಹೆಚ್ಚಾಗಿರುತ್ತದೆ. ಹೆಚ್ಚಿನ ಗಂಧಕವಿರುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿರುತ್ತದೆ. ಈ ಮೃದು ಈರುಳ್ಳಿಯಲ್ಲಿ ಕ್ಯಾಲೋರಿ ಅಂಶ ಕಡಿಮೆಯಿರುತ್ತದೆ. ಸ್ಪ್ರಿಂಗ್ ಈರುಳ್ಳಿ ಒಂದು ವೈವಿಧ್ಯಮಯ ಗೊಂಡೆ ಈರುಳ್ಳಿ ಜಾತಿ ಮತ್ತು ಹಸಿರು ಈರುಳ್ಳಿ ಎಂದೂ ಕರೆಯುತ್ತಾರೆ.

ಸ್ಪ್ರಿಂಗ್ ಈರುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ2 ಮತ್ತು ತಿಯಾಮೈನ್ ಅಂಶಗಳು ಹೇರಳವಾಗಿವೆ. ಅವುಗಳ ಜೊತೆಗೆ ವಿಟಮಿನ್ ಎ ಮತ್ತು ವಿಟಮಿನ್ ಕೆ ಸಹ ಇರುತ್ತವೆ. ಇವುಗಳಲ್ಲದೆ ಸ್ಪ್ರಿಂಗ್ ಈರುಳ್ಳಿಯು ತಾಮ್ರ, ಫಾಸ್ಫರಸ್, ಮೆಗ್ನೀಸಿಯುಮ್, ಪೊಟ್ಯಾಷಿಯಂ, ಕ್ರೋಮಿಯುಮ್, ಮ್ಯಾಂಗನೀಸ್ ಮತ್ತು ನಾರಿನಾಂಶಗಳ ಮೂಲವಾಗಿದೆ. ಸ್ಪ್ರಿಂಗ್ ಈರುಳ್ಳಿಯು ಕ್ವೆರ್ಸೆಟಿನ್(Quercetin) ಎಂಬುದಕ್ಕೆ ಫ್ಲೇವೋನಾಯ್ಡ್ (Flavonoids) ಪ್ರಬಲ ಮೂಲವಾಗಿದೆ. ಈ ರಾಸಾಯನವನ್ನು ಕ್ಯಾನ್ಸರ್ ಮತ್ತು ಆರ್ಟರಿ ಸಂಬಂಧಪಟ್ಟ ಖಾಯಿಲೆಗಳಿಗೆ ಬಳಸಲ್ಪಡುತ್ತದೆ.

ಸ್ಪ್ರಿಂಗ್ ಈರುಳ್ಳಿಯಲ್ಲಿಯ ಆರೋಗ್ಯದ ಲಾಭಗಳು:

1. ಹೃದಯದ ಆರೋಗ್ಯಕ್ಕೆ ಒಳ್ಳೆಯದು

1. ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಸ್ಪ್ರಿಂಗ್ ಈರುಳ್ಳಿಯು ಹೃದಯದ ರಕ್ತನಾಳದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಕೊಲೆಸ್ಟರಾಲಿನ ಉತ್ಕರ್ಷಣ (ಆಕ್ಸಿಡೇಶನ್)ವನ್ನು ಕಡಿಮೆಮಾಡಿ, ಕೊರೋನರಿ ಹೃದಯರೋಗದ ಅಪಾಯವನ್ನು ಕಡಿಮೆಮಾಡುತ್ತದೆ.

2. ರಕ್ತದೊತ್ತಡದ ಸುಧಾರಣೆ

2. ರಕ್ತದೊತ್ತಡದ ಸುಧಾರಣೆ

ಈ ಸಸ್ಯದಲ್ಲಿರುವ ಸಲ್ಫರ್ ಸಂಯುಕ್ತಗಳಿಂದ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಿ ನಿಯಂತ್ರಿಸುವಲ್ಲಿ ಸಹಾಯಮಾಡುತ್ತದೆ.

3. ಕೊಲೆಸ್ಟರಾಲ್ ಮಟ್ಟಡ ನಿಯಂತ್ರಣ

3. ಕೊಲೆಸ್ಟರಾಲ್ ಮಟ್ಟಡ ನಿಯಂತ್ರಣ

ಸ್ಪ್ರಿಂಗ್ ಈರುಳ್ಳಿಯು ಕೊಲೆಸ್ಟರಾಲ್ ಮಟ್ಟವನ್ನೂ ಸಹ ಕಡಿಮೆಮಾಡಲು ಸಹಾಯಮಾಡುತ್ತದೆ.

4. ಮಧುಮೇಹದ ನಿಯಂತ್ರಣ

4. ಮಧುಮೇಹದ ನಿಯಂತ್ರಣ

ಈ ಸಸ್ಯದಲ್ಲಿರುವ ಕ್ರೋಮಿಯುಮ್ ಅಂಶವು ಮಧುಮೇಹಿಗಳ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಅಲ್ಲಿಲ್ ಪ್ರೊಪಿಲ್ ಡೈಸಲ್ಫೈಡ್(Allyl propyl disulphide) ಕೂಡ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಕಡಿಮೆಯಾಗಲು ಸಹಕಾರಿಯಾಗುತ್ತದೆ.

5. ಶೀತ ಮತ್ತು ಪ್ಲೂ

5. ಶೀತ ಮತ್ತು ಪ್ಲೂ

ಇದರಲ್ಲಿರುವ ಬ್ಯಾಕ್ಟೀರಿಯಾ-ವಿರೋಧಿ ಗುಣಗಳಿಂದ ಶೀತ ಮತ್ತು ಫ್ಲೂ ರೋಗಗಳ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ.

6. ಜೀರ್ಣಕ್ರಿಯೆ ಉತ್ತಮಗೊಳ್ಳುವುದು

6. ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ಬ್ಯಾಕ್ಟೀರಿಯಾ-ವಿರೋಧಿ ಗುಣಗಳಿಂದ ಅಜೀರ್ಣಕ್ಕೆ ಸಂಭಂದಪಟ್ಟ ಪರಿಸ್ಥಿತಿಯನ್ನು ಸುಧಾರಿಸುತ್ತದೆ.

7. ಪ್ರತಿರಕ್ಷಣೆಯ (ಇಮ್ಮ್ಯೂನಿಟಿ) ಗುಣ

7. ಪ್ರತಿರಕ್ಷಣೆಯ (ಇಮ್ಮ್ಯೂನಿಟಿ) ಗುಣ

ಇದರಲ್ಲಿರುವ ವಿಟಮಿನ್ ಸಿ ಪ್ರತಿರಕ್ಷಣೆಯನ್ನು ಅಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

8. ದೊಡ್ಡಕರುಳಿನ ಕ್ಯಾನ್ಸರ್

8. ದೊಡ್ಡಕರುಳಿನ ಕ್ಯಾನ್ಸರ್

ಸ್ಪ್ರಿಂಗ್ ಈರುಳ್ಳಿಯಲ್ಲಿರುವ ಪೆಕ್ಟಿನ್ (ನೀರಿನಲ್ಲಿ ಕರಗುವ ಕೊಲ್ಲೈ‍ಡಾಲ್ ಕಾರ್ಬೊಹೈ‍ಡ್ರೇಟ್ - ಶರ್ಕರಪಿಷ್ಟ) ಕ್ಯಾನ್ಸರ್ ರೋಗದ ವೃದ್ಧಿಯನ್ನು ತಡೆಯುವುದಲ್ಲದೆ ವಿಶೇಷವಾಗಿ ಕೊಲೋನ್ ಕ್ಯಾನ್ಸರಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

9. ಸಂಧಿವಾತ ಮತ್ತು ಆಸ್ತಮಾ

9. ಸಂಧಿವಾತ ಮತ್ತು ಆಸ್ತಮಾ

ಸ್ಪ್ರಿಂಗ್ ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್(Quercetin) ಉರಿಯೂತದ ವಿರುದ್ಧ ಮತ್ತು ಅಲರ್ಜಿ ವಿರುದ್ಧದ ಹೋರಾಡುವ ಗುಣಗಳನ್ನು ಹೊಂದಿದೆ. ಇದು ಸಂಧಿವಾತ ಮತ್ತು ಅಸ್ತಮಾ ಚಿಕಿತ್ಸೆಗಳಿಗೆ ಒಳ್ಳೆಯ ತರಕಾರಿಯಾಗಿದೆ.

10. ಚಯಾಪಚಯ(ಮೆಟಬಾಲಿಸಮ್) ಕ್ರಿಯೆ

10. ಚಯಾಪಚಯ(ಮೆಟಬಾಲಿಸಮ್) ಕ್ರಿಯೆ

ಇದು ಚಯಾಪಚಯ ಕ್ರಿಯೆಯನ್ನು ನಿಯಂತ್ರಣಮಾಡುವುದಕ್ಕೆ ಮತ್ತು ಪೌಷಿಕಾಂಶಗಳನ್ನು ಇರಿಸಿಕೊಳ್ಳುವುದಕ್ಕೆ ಒಳ್ಳೆಯ ಆಹಾರ.

11. ಕಣ್ಣುಗಳು

11. ಕಣ್ಣುಗಳು

ಸ್ಪ್ರಿಂಗ್ ಈರುಳ್ಳಿ ಕಣ್ಣಿನ ಕಾಯಿಲೆ ಮತ್ತು ಕಣ್ಣಿನ ಸಮಸ್ಯೆಗಳ ವಿರುದ್ಧ ಒಳ್ಳೆಯ ಆಹಾರವಾಗಿದೆ.

12. ಸುಕ್ಕು ತಡೆಯಲು ಸಹಾಯಕಾರಿ

12. ಸುಕ್ಕು ತಡೆಯಲು ಸಹಾಯಕಾರಿ

ಇದರಲ್ಲಿರುವ ಅಲ್ಲಿಸಿನ್ ಅಂಶವು ತ್ವಚೆಯಲ್ಲಿ ಸುಕ್ಕು ಬರುವುದನ್ನು ತಡೆದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

English summary

12 Benefits of Green Onions

Spring onions are a very popular vegetable and they come in different varieties including white, yellow and red. These tender onion bulbs are great in taste and also rich in nutrients.Spring onions are a variety of scallion and also called green onions.
X
Desktop Bottom Promotion