For Quick Alerts
ALLOW NOTIFICATIONS  
For Daily Alerts

12 ಪ್ರಮುಖ ಆರೋಗ್ಯಕರ ಗುಣ ಕೆಂಪಕ್ಕಿಯಲ್ಲಿದೆ

By Super
|

'ಸುಲಿದ ಅಕ್ಕಿ' ಎಂದು ಕೂಡ ಕರೆಯುವ ಕೆಂಪಕ್ಕಿ ಸಂಸ್ಕರಿಸಿದ ರೂಪವಾಗಿದೆ. ಕೆಂಪು ಬಣ್ಣದ ಸುವಾಸನ ಭರಿತವಾದ ಈ ಅಕ್ಕಿ ಆರೋಗ್ಯದ ದೃಷ್ಟಿಯಿಂದ ಎಷ್ಟು ಫಲಕಾರಿಯೆಂಬುದು ನಿಮಗೆ ಗೊತ್ತೇ?

ಕೆಂಪಕ್ಕಿ ಸಾಧಾರಣವಾಗಿ ಉಪಯೋಗಿಸುವ ಉಳಿದ ಎಲ್ಲಾ ಅಕ್ಕಿಗಳಿಗಿಂತ ಬೇಯಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಇದು ಉಳಿದ ಅಕ್ಕಿಗಳಿಂತ ರುಚಿ ಹೆಚ್ಚು. ಕೆಂಪಕ್ಕಿಯಲ್ಲಿ ಬಿ- ಜೀವಸತ್ವಗಳು, ರಂಜಕ, ಸೆಲೆನಿಯಂ, ಮ್ಯಾಂಗನೀಸ್, ಪೊಟ್ಯಾಶಿಯಂ, ಮತ್ತು ಮ್ಯಾಗ್ನಿಷಿಯಂ ಮೊದಲಾದ ಅನೇಕ ಅತ್ಯಾವಶ್ಯಕ ಪೋಷಕಾಂಶಗಳನ್ನು ಒದಗಿಸುವ ಒಂದು ಸಂಪೂರ್ಣ ಧಾನ್ಯ ಆಹಾರ. ಆರೋಗ್ಯವಂತ ವ್ಯಕ್ತಿಯನ್ನು ರೂಪಿಸುವಲ್ಲಿ ಸಹಕಾರಿಯಾಗಿರುವ ಕೆಂಪಕ್ಕಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.

ಕೆಂಪಕ್ಕಿಯ ಉಪಯೋಗಗಳು

1. ಕರುಳಿನ ಕ್ಯಾನ್ಸರ್ ವಿದುದ್ಧ ಹೋರಾಡುತ್ತದೆ

1. ಕರುಳಿನ ಕ್ಯಾನ್ಸರ್ ವಿದುದ್ಧ ಹೋರಾಡುತ್ತದೆ

ಕೆಂಪಕ್ಕಿ ಕರುಳಿನ ಕ್ಯಾನ್ಸರ್ ಸಾಧ್ಯತೆಯನ್ನು ತಗ್ಗಿಸುವ ಸೆಲೀನಿಯಂ ಹೊಂದಿದೆ. ಈ ಅಕ್ಕಿ ಅಧಿಕ ಪ್ರಮಾಣದ ನಾರಿನಂಶ ಜೀರ್ಣಾಂಗವ್ಯೂಹದ ಕ್ರಿಯೆಯಲ್ಲಿ ಸಹಕರಿಸುತ್ತದೆ.

2. ಸ್ತನ ಕ್ಯಾನ್ಸರನ್ನು ನಿಯಂತ್ರಿಸುತ್ತದೆ

2. ಸ್ತನ ಕ್ಯಾನ್ಸರನ್ನು ನಿಯಂತ್ರಿಸುತ್ತದೆ

ಕೆಂಪಕ್ಕಿಯನ್ನು ಸೇವಿಸುವುದರಿಂದ, ಸ್ತನ ಕ್ಯಾನ್ಸರನ್ನು ಮಾತ್ರವಲ್ಲದೇ, ಹೃದಯ ರೋಗ ಬರದಂತೆ ತಡೆಯುತ್ತದೆ. ಹಿರಿಯ ಮಹಿಳೆಯರಿಗೆ ಕೆಂಪಕ್ಕಿಯನ್ನು ತಿನ್ನಲು ನೀಡಿ ಅವರ ಮೇಲೆ ಅಧ್ಯಯನವನ್ನು ನಡೆಸಿದಾಗ ಈ ಅಕ್ಕಿಯ ಉಪಯೋಗವನ್ನು ತಿಳಿಯಲಾಯಿತು.

3. ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.

3. ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.

ಕೆಂಪಕ್ಕಿಯಲ್ಲಿರುವ ನಾರಿನಂಶ ಅಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಬೇಡ ಅನ್ನುವವರು ಈ ಕೆಂಪಕ್ಕಿ ಅನ್ನ ತಿನ್ನುವುದು ಒಳ್ಳೆಯದು.

4. ಹೃದಯ ಸಂಬಂಧಿ ರೋಗಗಳನ್ನು ತಡೆಯುತ್ತದೆ

4. ಹೃದಯ ಸಂಬಂಧಿ ರೋಗಗಳನ್ನು ತಡೆಯುತ್ತದೆ

ಅತಿಯಾದ ಫೈಬರ್ ಪ್ರಮಾಣವಿರುವುದರಿಂದ ಕೆಂಪಕ್ಕಿಯು ಹೃದಯ ಸಂಬಂಧಿ ರೋಗಗಳನ್ನು ಭಾಗಶಃ ಕಡಿಮೆಗೊಳಿಸುತ್ತದೆ. ಅಲ್ಲದೇ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

5. ಸಮತೂಕ

5. ಸಮತೂಕ

ಕೆಂಪಕ್ಕಿಯಲ್ಲಿ ಅಧಿಕವಾಗಿ ನಾರಿನಂಶವಿರುವುದರಿಂದ ದೇಹದ ತೂಕ ಮತ್ತು ಕೊಲೆಸ್ಟ್ರಾಲ್ ಹೆಚ್ಚದಂತೆ ಸೌಂದರ್ಯ ಹಾಗೂ ಆರೋಗ್ಯ ರಕ್ಷಣೆ ಮಾಡುತ್ತದೆ.

6. ಮಲಬದ್ಧತೆಯನ್ನು ತಡೆಯುತ್ತದೆ

6. ಮಲಬದ್ಧತೆಯನ್ನು ತಡೆಯುತ್ತದೆ

ಕೆಂಪಕ್ಕಿಯಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಗೆ ಅತ್ಯಂತ ಸಹಾಯಕಾರಿಯಾಗಿದೆ. ಆರೋಗ್ಯಕರ ಕರುಳಿನ ಚಲನೆಗೆ ನೆರವಾಗುತ್ತದೆ ಕೆಂಪಕ್ಕಿ.

7. ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ

7. ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ

ಕೆಂಪಕ್ಕಿಯಲ್ಲಿರುವ ನಾರಿನ ಅಂಶದಿಂದಾಗಿ, ಮಧುಮೇಹವನ್ನು, ರಕ್ತದೊತ್ತಡವನ್ನು ತಡೆಯುತ್ತದೆ.

8. ಮೂಳೆಗಳ ಆರೋಗ್ಯ

8. ಮೂಳೆಗಳ ಆರೋಗ್ಯ

ಕೆಂಪಕ್ಕಿ, ಮ್ಯಾಗ್ನೀಶಿಯಂನ ದೊಡ್ಡ ಭಂಡಾರವಾಗಿದ್ದು ಮೂಳೆಗಳ ಆರೋಗ್ಯಕ್ಕೆ ಅನುಕೂಲಕರವಾಗಿದೆ. ದಿನವೂ ತಿನ್ನುವ ಒಂದು ಕಪ್ ಅಕ್ಕಿ ಶೇ.21 ರಷ್ಟು ಮ್ಯಾಗ್ನೀಶಿಯಂ ಪ್ರಮಾಣವನ್ನು ಒದಗಿಸುತ್ತದೆ.

9. ಅಸ್ತಮಾ ಲಕ್ಷಣಗಳನ್ನು ಕಡಿಮೆಗೊಳಿಸುತ್ತದೆ

9. ಅಸ್ತಮಾ ಲಕ್ಷಣಗಳನ್ನು ಕಡಿಮೆಗೊಳಿಸುತ್ತದೆ

ಅಧಿಕ ಮ್ಯಾಗ್ನೀಶಿಯಂ ಅಂಶವನ್ನು ಹೊಂದಿರುವ ಕೆಂಪಕ್ಕಿ ಅಸ್ತಮಾ ಲಕ್ಷಣವನ್ನು ನಿಯಂತ್ರಿಸುತ್ತದೆ. ಅಲ್ಲದೇ ಇದರಲ್ಲಿರುವ ಸೆಲೆನಿಯಂ ಪ್ರಮಾಣವೂ ಅಸ್ತಮಾದಿಂದ ನಿಮ್ಮನ್ನು ದೂರವಿರಿಸುತ್ತದೆ.

10. ಪಿತ್ತದ ಅಪಾಯವನ್ನು ಕಡಿಮೆ ಮಾಡುತ್ತದೆ.

10. ಪಿತ್ತದ ಅಪಾಯವನ್ನು ಕಡಿಮೆ ಮಾಡುತ್ತದೆ.

Gastroenterology ಎಂಬ ಅಮೆರಿಕದ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೆಂಪಕ್ಕಿಯಲ್ಲಿ ಫೈಬರ್ ಹೆಚ್ಚಿರುವ ಕಾರಣ ಇದರಿಂದ ತಯಾರಾದ ಆಹಾರವನ್ನು ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ.

11. ನರಗಳ ಸಮಸ್ಯೆಗಳನ್ನು ನಿವಾರಿಸುತ್ತದೆ

11. ನರಗಳ ಸಮಸ್ಯೆಗಳನ್ನು ನಿವಾರಿಸುತ್ತದೆ

ನರಮಂಡಲಗಳ ಆರೋಗ್ಯ ಕಾಯ್ದುಕೊಳ್ಳುವುದಕ್ಕೆ ಬೇಕಾದ ಮ್ಯಾಗ್ನೀಶಿಯಂ ಅಂಶ ಕೆಂಪಕ್ಕಿಯಲ್ಲಿದೆ. ಅಲ್ಲದೇ ಲೈಂಗಿಕ ಹಾರ್ಮೋನ್ ಗಳನ್ನು ಬಲಪಡಿಸುವಲ್ಲಿಯೂ ಕೆಂಪಕ್ಕಿ ಸಹಾಯಕಾರಿ

12. ಅಗತ್ಯವಿರುವ ಆಹಾರಕ್ರಮ

12. ಅಗತ್ಯವಿರುವ ಆಹಾರಕ್ರಮ

ಪ್ರತಿದಿನ ಮೂರು ಬಾರಿ ಸೇವಿಸುವ ಇತರ ಧಾನ್ಯಗಳಿಗಿಂದ ಕೇವಲ ಅರ್ಧ ಲೋಟ ಕೆಂಪಕ್ಕಿಯನ್ನು ಸೇವಿಸಿದರೆ ಸಕಲ ಪೋಷ್ಟಿಕಾಂಶಗಳೂ ದೊರೆಯುತ್ತವೆ.

ಹೀಗೆ ದಿನವೂ ತಿನ್ನುವ ಆಹಾರದಲ್ಲಿಯೇ ಸರಿಯಾದ ಧಾನ್ಯಗಳನ್ನು ಹಾಗೂ ಆಹಾರ ಕ್ರಮಗಳನ್ನು ಅನುಸರಿಸಿದರೆ ಅನಾರೋಗ್ಯಕ್ಕೆ ನೆಲೆಯಲ್ಲಿ ?

English summary

12 Health Benefits of Brown Rice | Tips For Health | ಕೆಂಪಕ್ಕಿ ತಿಂದರೆ ಆರೋಗ್ಯಕ್ಕೆ 12 ಲಾಭ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Brown rice is a whole grain food that provides many essential nutrients, including B vitamins, phosphorus, selenium, manganese, potassium, and magnesium. It is an excellent source of dietary fiber and phytonutrients that provide protective health benefits, including weight maintenance.
X
Desktop Bottom Promotion