For Quick Alerts
ALLOW NOTIFICATIONS  
For Daily Alerts

ಈ ಟ್ರಿಕ್ಸ್ ಬಳಸಿದರೆ ಮೈ ತೂಕ ಹೆಚ್ಚುವುದಿಲ್ಲ!

|

ತುಂಬಾ ಹೊತ್ತು ಹೊಟ್ಟೆ ತುಂಬಿದಂತೆ ಅನಿಸಲು ಕೆಲವು ಟಿಪ್ಸ್ ಮತ್ತು ಟ್ರಿಕ್ಸ್

ಕೆಲವೊಮ್ಮೆ ನಮಗೆ ನಾವು ಎಷ್ಟು ತಿಂದಿದ್ದೇವೆ ಎಂದು ಗೊತ್ತಾಗುವುದಿಲ್ಲ, ಅಡುಗೆ ರುಚಿಯಾಗಿದ್ದರೆ ಅಥವಾ ನಮಗೆ ಇಷ್ಟದ ಪದಾರ್ಥವಾದರೆ ಸ್ವಲ್ಪ ಹೆಚ್ಚಿಗೆ ತಿನ್ನುತ್ತೇವೆ. ಮಿತಿ ಮೀರಿ ತಿನ್ನುವ ಅಬ್ಯಾಸದಿಂದ ಮೈ ತೂಕವೂ ಹೆಚ್ಚಾಗುವುದು. ಇನ್ನು ತೂಕ ಹೆಚ್ಚಾಗುತ್ತದೆ ಎಂದು ಸ್ವಲ್ಪ ತಿಂದರೆ ಸ್ವಲ್ಪ ಹೊತ್ತಿನಲ್ಲಿ ಹೊಟ್ಟೆ ಹಸಿವು ಪ್ರಾರಂಭವಾಗುತ್ತದೆ. ಒಂದು ಗಂಟೆ ನಂತರ ಸ್ನಾಕ್ಸ್ ತಿನ್ನಬೇಕೆಂದು ಅನಿಸುತ್ತದೆ, ಇದು ಕೂಡ ತೂಕ ಹೆಚ್ಚಿಸುತ್ತದೆ. ಆದ್ದರಿಂದ ನಾವಿಲ್ಲಿ ಕಡಿಮೆ ತಿಂದು ಹೊಟ್ಟೆ ಬೇಗನೆ ಹಸಿವು ಆಗದಿರಲು ಕೆಲವು ಟಿಪ್ಸ್ ಕೊಡುತ್ತಿದ್ದೇವೆ. ಕೆಲವೊಂದು ಆಹಾರಗಳಿವೆ ಅವು ನಿಮಗೆ ಹೊಟ್ಟೆ ತುಂಬಿದಂತೆ ಇರಿಸುತ್ತದೆ. ಆದರೆ ಹೇಗೆ ಎಲ್ಲಿ ಯಾವಾಗ ಆಹಾರವನ್ನು ತಿನ್ನಬೇಕು ಅನ್ನುವುದು ಕೂಡ ಇದಕ್ಕೆ ಮುಖ್ಯವಾಗುತ್ತದೆ.

ಇಲ್ಲಿ ನಿಮಗೆ ತೃಪ್ತಿ ಎನಿಸುವಂತೆ ಭಾಸವಾಗುವ 10 ಟಿಪ್ಸ್ ಗಳನ್ನು ನೀಡಲಾಗಿದೆ, ಈ ಟಿಪ್ಸ್ ನಿಮ್ಮನ್ನು ಕಮ್ಮಿ ತಿನ್ನುವಂತೆ ಮಾಡುತ್ತದೆ, ಬೇಗನೆ ಹಸಿವು ಉಂಟು ಮಾಡುವಂತೆ ಮಾಡುವುದಿಲ್ಲ, ಮೈ ತೂಕ ಹೆಚ್ಚಿವುದಿಲ್ಲ, ಬನ್ನಿ ಆ ಸೂಪರ್ ಟಿಪ್ಸ್ ಯಾವುವು ಎಂದು ನೋಡೋಣ:

ಸರಳವಾಗಿ ತಿನ್ನುತ್ತಿರಿ

ಸರಳವಾಗಿ ತಿನ್ನುತ್ತಿರಿ

ಸಾಮಾನ್ಯವಾಗಿ ನಾವು ಟಿವಿ ನೋಡುತ್ತಿದ್ದಾಗ ಮತ್ತು ಹೆಚ್ಚು ಜನರೊಂದಿಗೆ ಕುಳಿತು ಮಾತನಾಡುತ್ತಿದ್ದಾಗ ಹೆಚ್ಚು ತಿನ್ನುತ್ತೇವೆ ಏಕೆಂದರೆ ನಮ್ಮ ಗಮನ ಬೇರೆಡೆ ಇರುವುದರಿಂದ ಎಷ್ಟು ತಿನ್ನುತ್ತಿದ್ದೇವೆ ಎಂದು ಗೊತ್ತೇ ಆಗುವುದಿಲ್ಲ.ಊಟದ ಸಮಯವನ್ನು ಅದಕ್ಕೋಸ್ಕರವೇ ಮೀಸಲಿಡಿ, ಸಂಪೂರ್ಣ ಗಮನವಿಟ್ಟು ತಿನ್ನಿ ಆಗ ಬೇಗ ಹೊಟ್ಟೆ ತುಂಬಿದಂತೆ ಅನಿಸುತ್ತದೆ.ಫಾಸ್ಟ್ ಮ್ಯೂಸಿಕ್ ಕೇಳುತ್ತ ತಿನ್ನಬಾರದು. ಇದು ನಮಗೆ ಹೆಚ್ಚುಹೆಚ್ಚು ತಿನ್ನುವಂತೆ ಮಾಡುತ್ತದೆ ಮತ್ತು ನಿಮ್ಮ ಹೊಟ್ಟೆ ತುಂಬಿತು ಅನ್ನಿಸುವುದರ ಮೊದಲೇ ಖಾಲಿಯಾದಂತೆ ಅನಿಸುತ್ತದೆ.

ಪರಿಮಳ ಮತ್ತು ಜಗಿದು ತಿನ್ನುವುದು

ಪರಿಮಳ ಮತ್ತು ಜಗಿದು ತಿನ್ನುವುದು

ಊಟ ಮಾಡುತ್ತಿರುವಾಗ ಅದರ ಪರಿಮಳದ ಬಗ್ಗೆ ಗಮನ ಹರಿಸಿ ಇದರಿಂದ ನಮಗೆ ತೃಪ್ತಿ ಸಿಗುತ್ತದೆ. ಎರಡನೆಯದು ಜಗಿದು ತಿನ್ನಿ, ನೀವು ಹೆಚ್ಚು ಹೆಚ್ಚು ಜಗಿದು ಸರಿಯಾಗಿ ತಿನ್ನುವುದರಿಂದ ಹಾರ್ಮೋನ್ ನಿಮಗೆ ತೃಪ್ತಿ ಆಯಿತು ಎನ್ನುವಂತೆ ಮಾಡುತ್ತವೆ.

ನೀರಿನಂಶ ಅಧಿಕವಿರುವ ಆಹಾರ

ನೀರಿನಂಶ ಅಧಿಕವಿರುವ ಆಹಾರ

ಇದರ ಪರಿಣಾಮ ನೇರ , ನಮ್ಮ ಆಹಾರದಲ್ಲಿ ಹೆಚ್ಚು ಗಾಳಿ ಮತ್ತು ನೀರಿನಂಶವಿದ್ದರೆ ಅದು ನಮಗೆ ಬಹುಬೇಗ ಹೊಟ್ಟೆ ತುಂಬಿದಂತೆ ಅನಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಆಹಾರ ತೆಗೆದುಕೊಳ್ಳುವ ವಿಷಯದಲ್ಲಿ ಪೇಸ್ಟ್ರೀಯನ್ನು ತಿನ್ನುವ ಬದಲು ತರಕಾರಿ ಸೂಪ್ ಕುಡಿಯಿರಿ, ಚಿಪ್ಸ್ ಇನ್ನಿತರ ಕುರುಕಲು ತಿಂಡಿ ತಿನ್ನುವ ಬದಲು ಜೋಳ ತಿನ್ನಿ. ಒಣ ದ್ರಾಕ್ಷಿ ಬದಲು ಹಸಿ ದ್ರಾಕ್ಷಿ ತಿನ್ನಿ.

ಕೊಬ್ಬಿನ ಪದಾರ್ಥ ತಿಂದ ನಂತರ ಸ್ವಲ್ಪ ಕಾಯಿರಿ

ಕೊಬ್ಬಿನ ಪದಾರ್ಥ ತಿಂದ ನಂತರ ಸ್ವಲ್ಪ ಕಾಯಿರಿ

ಅಧಿಕ ಕೊಬ್ಬು ಇರುವ ಪದಾರ್ಥ ತಿಂದರೆ ಅದು ನಿಮಗೆ ಫುಲ್ ಎನಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಉದಾಹರಣೆಗೆ ಪ್ರೊಟೀನ್ ಹೆಚ್ಚಿರುವ ಆಹಾರವನ್ನು ತಿಂದರೆ ಸ್ವಲ್ಪ ಸಮಯದ ನಂತರ ಮಾತ್ರ ನಮಗೆ ತೃಪ್ತಿ ಎನಿಸಬಹುದು. ಆದ್ದರಿಂದ ತಿಂದ ನಂತರ ಸ್ವಲ್ಪ ಹೊತ್ತು ಸಮಯ ನೀಡಿ.

ನೀರು ಹೆಚ್ಚು ಕುಡಿಯಿರಿ

ನೀರು ಹೆಚ್ಚು ಕುಡಿಯಿರಿ

ಪ್ರತಿದಿನ 8 ಲೋಟ ನೀರನ್ನು ಕುಡಿಯಬೇಕು,ಆದರೆ ನಮ್ಮಲ್ಲಿ ಸಾಕಷ್ಟು ಜನ ನೀರನ್ನು ಹೆಚ್ಚು ಕುಡಿಯುವುದಿಲ್ಲ ಪರಿಣಾಮವಾಗಿ ಬೇಗ ಹಸಿವಾಗುತ್ತದೆ,ಆದರೆ ಇಲ್ಲಿ ನಿಜವಾಗಿಯೂ ನಮಗೆ ಬಾಯಾರಿಕೆಯಾಗಿರುತ್ತದೆ. ಊಟ ಮಾಡುವ ಮೊದಲು ಒಂದು ಅಥವಾ ಎರಡು ಲೋಟ ನೀರು ಕುಡಿಯಿರಿ ಇದರಿಂದ ನೀವು ಊಟ ಮಾಡಿದಾಗ ಬೇಗ ಹೊಟ್ಟೆ ತುಂಬುತ್ತದೆ.

ಸಣ್ಣ ಪ್ಲೇಟ್ ಉಪಯೋಗಿಸಿ

ಸಣ್ಣ ಪ್ಲೇಟ್ ಉಪಯೋಗಿಸಿ

ದೊಡ್ಡ ತಟ್ಟೆ ತೆಗೆದುಕೊಂಡರೆ ಅದರ ತುಂಬಾ ಊಟ ಮಾಡುತ್ತೇವೆ ಮತ್ತು ತಟ್ಟೆಯನ್ನು ಸಂಪೂರ್ಣ ಖಾಲಿ ಮಾಡಬೇಕು ಎಂಬುದು ನಿಮ್ಮ ಉದ್ದೇಶವಾಗಿರುತ್ತದೆ.ಆದ್ದರಿಂದ ಸಣ್ಣ ಪ್ಲೇಟ್ ತೆಗೆದುಕೊಳ್ಳಿ ಮತ್ತು ನೀವು ಬೇಗ ಹೊಟ್ಟೆ ತುಂಬಿದಂತೆ ತಿಳಿಯುತ್ತೀರಿ.

ಮೊದಲು ಲೈಟ್ ಫುಡ್ ತಿನ್ನಿ

ಮೊದಲು ಲೈಟ್ ಫುಡ್ ತಿನ್ನಿ

ಹೆಚ್ಚು ಪರಿಣಾಮಕಾರಿಯಾದ ಆಹಾರಗಳು ಉದಾಹರಣೆಗೆ ಸಲಾಡ್,ಕಾರ್ನ್,ಮೀನಿನ ಮೂಳೆ ಇವುಗಳು ಲೈಟ್ ಫುಡ್. ಇವುಗಳನ್ನು ತಿನ್ನುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಬೇಗ ಹೊಟ್ಟೆ ತುಂಬುತ್ತದೆ.

ಊಟಕ್ಕೆ ಮೊದಲು ಒಂದು ಸೇಬು ತಿನ್ನಿ

ಊಟಕ್ಕೆ ಮೊದಲು ಒಂದು ಸೇಬು ತಿನ್ನಿ

ಸೇಬು ನಮಗೆ ಹಸಿವಾಗುವುದನ್ನು ತಡೆಯುತ್ತದೆ,ಸಂಶೋಧನೆಯ ಪ್ರಕಾರ ಊಟಕ್ಕೆ 20 ನಿಮಿಷ ಮೊದಲು ಸೇಬು ತಿನ್ನುವುದರಿಂದ ನಿಮ್ಮ ಊಟದಲ್ಲಿ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಹೆಚ್ಚು ತಿನ್ನುವುದನ್ನು ತಡೆಯುತ್ತದೆ.ಆದ್ದರಿಂದ ಪ್ರತಿದಿನ ಊಟಕ್ಕೆ ಮೊದಲು ಒಂದು ಸೇಬು ತಿಂದರೆ ಅದರಲ್ಲಿರುವ ನಾರಿನಂಶ ನಮ್ಮ ವಿಪರೀತ ಹಸಿವನ್ನು ಕಡಿತಗೊಳಿಸುತ್ತದೆ.

ಸ್ವಾಭಾವಿಕವಾಗಿರಿ

ಸ್ವಾಭಾವಿಕವಾಗಿರಿ

ಕೃತಕ ಆಹಾರಗಳಲ್ಲಿ ಕ್ಯಾಲೋರಿ ಹೆಚ್ಚಿರುತ್ತದೆ ಆದ್ದರಿಂದ ನ್ಯಾಚುರಲ್ ಆಹಾರವನ್ನು ಹೆಚ್ಚು ತಿನ್ನಿ. ಹಸಿ ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವುದರಿಂದ ಬೇಗ ಹೊಟ್ಟೆ ತುಂಬಿದಂತೆ ಅನಿಸುತ್ತದೆ ಆದ್ದರಿಂದ ಅವುಗಳನ್ನು ತಿನ್ನಿ.

ಬೇಕಾದಷ್ಟು ನಿದ್ದೆ ಮಾಡಿ

ಬೇಕಾದಷ್ಟು ನಿದ್ದೆ ಮಾಡಿ

ನಿಮ್ಮ ದೇಹ ನಿದ್ದೆ ಮಾಡುತ್ತಿರುವಾಗ ಹೆಚ್ಚು ಗ್ರೇಲಿನ್ ಮತ್ತು ಕಡಿಮೆ ಲೆಪ್ಟಿನ್ ಅನ್ನು ಉತ್ಪಾದಿಸುತ್ತದೆ.ಇವು ಹಸಿವು ನಿಯಂತ್ರಿಸುವ ಹಾರ್ಮೋನ್ ಗಳು.ಗ್ರೇಲಿನ್ ನಿಮ್ಮ ಹಸಿವಿನ ವೇಗವನ್ನು ಹೆಚ್ಚಿಸಿದರೆ,ಲೆಪ್ಟನ್ ನಿಮ್ಮ ದೇಹಕ್ಕೆ ಹಸಿವನ್ನು ಕಡಿಮೆ ಮಾಡುವ ಹಾರ್ಮೋನ್ ಗಳಾಗಿವೆ.

English summary

10 ways to feel full, not fat

Do you find that you never feel satisfied after a meal or just an hour or so later you are reaching for a snack to pick you up? Well, we're here to help with some feel-full strategies. 
X
Desktop Bottom Promotion